ಕಾಂತಾರದ (Kantara) ಕ್ಲೈಮ್ಯಾಕ್ಸ್ ಯಾರಿಗೆ ನೆನಪಿಲ್ಲ ಹೇಳಿ. ಎಲ್ಲರೂ ಮಾತನಾಡಿದ್ದು ಸಿನಿಮಾ ಕೊನೆಯ 20 ನಿಮಿಷಗಳ ಬಗ್ಗೆ. ಕೊನೆಯ 20 ನಿಮಿಷದಲ್ಲಿ ರಿಷಬ್ ಶೆಟ್ಟಿ (Rishab Shetty) ಹಾಗೂ ತಂಡದ ಸಂಪೂರ್ಣ ಅಭಿನಯ ಪ್ರೇಕ್ಷರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಅದ್ಭುತವಾಗಿ ಮೂಡಿಬಂದ ಈ ಕ್ಲೈಮ್ಯಾಕ್ಸ್ ಕೊರಿಯೋಗ್ರಫ್ ಮಾಡಿದ್ದು ಯಾರು? ಇದರ ಹಿಂದಿನ ಮ್ಯಾಜಿಕ್ ಯಾರದ್ದು? ಕೆಲವೇ ಕೆಲವು ಆ್ಯಕ್ಷನ್ ಮೂಲಕ ಕಣ್ಣು ಮಿಟುಕಿಸದೆ ಸಿನಿಮಾ ನೋಡುವಂತೆ ಮಾಡಿದ್ದು ಯಾರು ಗೊತ್ತೇ?
ಕಾಂತಾರದಲ್ಲಿ ಮೆಟ್ಟಿಲ ಮೇಲೆ ಕುಳಿತು ದೈವ ದೀವಟಿಕೆ ಬೀಸುವ ದೃಶ್ಯ ಎಷ್ಟೊಂದು ಅದ್ಭುತವಾಗಿದೆ ಅಲ್ವೇ? ರಿಷಬ್ ಶೆಟ್ಟಿ ದೈವದ ವೇಷ ಧರಿಸಿ ಇದನ್ನು ಕೊರಿಯೋಗ್ರಾಫ್ ಮಾಡಿದ್ರಾ? ಅಲ್ಲ, ಇದರ ಹಿಂದಿನ ಸಿನಿಮ್ಯಾಟಿಕ್ ಮ್ಯಾಜಿಕ್ ತಂದವರು ಅವರಲ್ಲ.
ಕಾಂತಾರದ ಕ್ಲೈಮ್ಯಾಕ್ಸ್ ಬಗ್ಗೆ ಎರಡು ಮಾತಿಲ್ಲ. ಅಬ್ಬಾ ದೈವ ನರ್ತನ, ಮೆಟ್ಟಿಲ ಮೇಲೆ ದೀವಟಿಕೆ ಬೀಸುವ ಪರಿ, ಗ್ರಾಮಸ್ಥರನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ರೀತಿಗೆ ಮರುಳಾಗದವರು ಯಾರು? ಆದರೆ ದೈವದ ವೇಷ ಧರಿಸಿದ್ದ ರಿಷಬ್ ಇದನ್ನು ಮಾಡಿಲ್ಲ. ಇದನ್ನು ನಟ ಸ್ವತಃ ರಿವೀಲ್ ಮಾಡಿದ್ದಾರೆ.
ದೈವದ ವೇಷ ಧರಿಸಿ ನಿರ್ದೇಶಿಸಲು ಸಾಧ್ಯವಾಗಲಿಲ್ಲ
ದೈವದ ವೇಷ ಅಂದರೆ ಅದು ಅತ್ಯಂತ ಭಾರ. ಸಂಪೂರ್ಣ ವೇಷ ಧರಿಸಿ ಅತ್ತಿದ್ದ ಓಡಾಡುವುದೇ ಕಷ್ಟ. ಹಾಗಿರುವಾಗ ಸಿನಿಮಾದ ಪ್ರಮುಖ ಭಾಗವಾಗಿರುವ ಕ್ಲೈಮ್ಯಾಕ್ಸ್ ದೃಶ್ಯ ಕೊರಿಯೋಗ್ರಫ್ ಮಾಡಲು ಸಾಧ್ಯವೇ? ಇಲ್ಲಿ ಬಂದಿದ್ದು ರಾಜ್ ಬಿ ಶೆಟ್ಟಿ.
ಅದೇ ನಿಮ್ಮೊಳಗೆ ಎಂಟ್ರಿಯಾಗುತ್ತೆ ಅಂದುಕೊಳ್ಳಿ. ಮೂವ್ಮೆಂಟ್ಗೆ ಆ್ಯಕ್ಷನ್ ಕೊಡಿ ಎಂದು ರಾಜ್ ಬಿ. ಶೆಟ್ಟಿ ಹೇಳುವುದನ್ನು ಕೇಳಬಹುದು.
ಇದನ್ನೂ ಓದಿ: Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ
ನನಗೆ ಕೋಲದ ಸೀಕ್ವೆನ್ಸ್ ಕೊರಿಯೋಗ್ರಫ್ ಮಾಡುವುದಕ್ಕೆ ರಾಜ್ ಬಿ ಶೆಟ್ಟಿ ಬಂದಿದ್ದರು. ಕೋಲ ಶೂಟ್ ಮಾಡಬೇಕಿತ್ತು. ದೈವದ ಅಲಂಕಾರದಲ್ಲಿರುವಾಗ ಎರಡೆರಡು ಕೆಲಸ ಮಾಡುವುದು ಕಷ್ಟ. ಹಾಗಾಗಿ ನಾನು ಶೆಟ್ರಿಗೆ ಕಾಲ್ ಮಾಡಿದೆ. ಕಾಲ್ ಮಾಡಿ ಕ್ಲೈಮ್ಯಾಕ್ಸ್ ಕೊರಿಯೋಗ್ರಫ್ ಮಾಡಲು ಬರಬಹುದೇ ಎಂದು ಕೇಳಿದೆ.
View this post on Instagram
ರಾಜ್ ಬಿ ಶೆಟ್ಟಿ ಕ್ಲೈಮ್ಯಾಕ್ಸ್ ಸೂಪರ್
ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇದರ ಹಿಂದೆ ರಾಜ್ ಬಿ. ಶೆಟ್ಟಿ ಕೈಚಳಕ ಇರುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಎಕ್ಸ್ಕ್ಲೂಸಿವ್ ಮೇಕಿಂಗ್ ವಿಡಿಯೋವನ್ನು ಬಿಟ್ಟಿರುವ ಕಾರಣ ಅಲ್ಲಿ ರಾಜ್. ಬಿ. ಶೆಟ್ಟಿ ಬಂದು ಕ್ಲೈಮ್ಯಾಕ್ಸ್ ಸೀನ್ ಮಕೊರಿಯೋಗ್ರಫ್ ಮಾಡಿದ್ದು ರಿವೀಲ್ ಆಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ಅವರು ಚಿಕ್ಕ ಚಿಕ್ಕ ಆ್ಯಕ್ಷನ್, ಮೂವ್ಮೆಂಟ್ಗಳನ್ನು ವಿವರವಾಗಿ ಹೇಳಿಕೊಡುವುದನ್ನು ಕಾಣಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ