ಕನ್ನಡದ ಕಾಂತಾರ ಸಿನಿಮಾ ಈಗ ತುಳು (Tulu Language) ಭಾಷೆಯಲ್ಲೂ ಕಮಾಲ್ ಮಾಡೋಕೆ ಬರ್ತಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ಈ ಮೂಲಕ ತುಳು ಭಾಷೆಯಲ್ಲೂ (Tulu Kantara) ಸಿನಿಮಾ ಮಾಡಿದಂತೆ ಆಗಿದೆ. ಆ ಖುಷಿಯನ್ನ ಕೂಡ ಈಗ ರಿಷಬ್ ಶೆಟ್ಟಿ ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಭಾರೀ ಕಮಾಲ್ ಮಾಡಿದ ಕಾಂತಾರ (Kannada Kantara) ದೇಶ-ವಿದೇಶದಲ್ಲೂ ಸಂಚಲನ ಸೃಷ್ಟಿಸಿತ್ತು. ಪರ ಭಾಷೆಯಲ್ಲೂ ತನ್ನದೇ ಮೋಡಿ ಮಾಡಿತ್ತು. ಆದರೆ, ತುಳು ನಾಡಿನ ಕಾಂತಾರ ತುಳು ಭಾಷೆಯಲ್ಲಿಯೇ ಬಂದಿರಲಿಲ್ಲ. ಆ ಕೆಲಸ ಈಗ ಆಗಿದೆ. ಶುಕ್ರವಾರ ಇವತ್ತು (Today Film Release) ತುಳು ಭಾಷೆಯಲ್ಲೂ ಇಂದು ಕಾಂತಾರ ರಿಲೀಸ್ ಆಗುತ್ತಿದೆ.
ಕನ್ನಡದ ಕಾಂತಾರ ತುಳು ಭಾಷೆಯಲ್ಲಿ ಇಂದು ರಿಲೀಸ್
ಕನ್ನಡದ ಕಾಂತಾರ ಸಿನಿಮಾ ಇತಿಹಾಸ ಬರೆದಿದೆ. ಸದ್ಯಕ್ಕೆ ಯಾರೂ ಈಗ ಒಂದು ಇತಿಹಾಸದ ಹತ್ತಿರ ಹೋಗೋಕೆ ಆಗೋದಿಲ್ಲ. ಅಂತಹ ಒಂದು ಸಾಧನೆಯನ್ನೆ ಕಾಂತಾರ ಮಾಡಿದೆ. ಲೋಕಲ್ ಕಂಟೆಂಟ್ ಮೇಲೆ ಅನೇಕ ಸಿನಿಮಾ ಬಂದಿವೆ. ಆದರೆ ಗೆದ್ದಿರೋದು ಬಹಳ ಕಡಿಮೆ. ಆ ನಿಟ್ಟಿನಲ್ಲಿ ಕಾಂತಾರ ಒಂದು ದೊಡ್ಡ ಸ್ಪೂರ್ತಿನೂ ಆಗಿದೆ.
ಕಾಂತಾರ ಸಿನಿಮಾದ ಸಕ್ಸಸ್ ತುಳು ನಾಡಿನ ಎಲ್ಲಾ ಸಿನಿಮಾ ಮೇಕರ್ಸ್ಗೆ ಸ್ಪೂರ್ತಿ ನೀಡಿದೆ. ಸ್ಥಳೀಯ ಕಂಟೆಂಟ್ ಮೇಲೆ ಚಿತ್ರ ಮಾಡಿದ್ರೆ ಓಡುತ್ತೆ ಎನ್ನುವ ನಂಬಿಕೆ ಹುಟ್ಟಿಸಿದೆ. ಆ ಹಿನ್ನೆಲೆಯಲ್ಲಿ ಕೊರಗಜ್ಜನ ಮೇಲೆ ಚಿತ್ರ ನಿರ್ಮಾಣ ಆಗುತ್ತಿರೋದು ಕೂಡ ಒಂದು ತಾಜಾ ಉದಾಹರಣೆ ಎಂದೇ ಹೇಳಬಹುದು.
ತುಳು ಭಾಷೆಯ ಕಾಂತಾರ ನನ್ನ ಮೊದಲು ತುಳು ಚಿತ್ರ!
ತುಳು ನಾಡಿನ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇಲ್ಲಿವರೆಗೂ ಕನ್ನಡ ಸಿನಿಮಾಗಳನ್ನೆ ಮಾಡಿರೋದು. ಇಲ್ಲಿವರೆಗೂ ಒಂದೇ ಒಂದು ಪುಟ್ಟ ಚಿತ್ರವನ್ನೂ ತುಳು ಭಾಷೆಯಲ್ಲಿ ಮಾಡಿರೊದು ಇಲ್ವೇ ಇಲ್ಲ. ಆದರೆ, ಕಾಂತಾರ ಸಿನಿಮಾ ಆ ಒಂದು ಅವಕಾಶ ಮಾಡಿಕೊಟ್ಟಿದೆ.
ಹೌದು, ಕಾಂತಾರ ಸಿನಿಮಾ ತುಳು ಭಾಷೆಯಲ್ಲಿ ಡಬ್ ಆಗಿದೆ. ಇಲ್ಲಿವರೆಗೂ ತುಳು ಬಿಟ್ಟು ಬೇರೆ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಿತ್ತು. ಬಹು ಬೇಡಿಕೆ ಮೇರೆಗೆ ತುಳು ಭಾಷೆಯಲ್ಲೂ ಕಾಂತಾರ ಸಿನಿಮಾ ಡಬ್ ಮಾಡಲಾಗಿದೆ. ಅದೇ ಸಿನಿಮಾನೇ ತುಳು ಭಾಷೆಯಲ್ಲಿ ಡಿಸೆಂಬರ್-02 ರಂದು ಅಂದ್ರೆ ಇಂದು ರಿಲೀಸ್ ಆಗುತ್ತಿದೆ.
ಕನ್ನಡದ ಕಾಂತಾರ ದೈವದ ಶಕ್ತಿಯಿಂದಲೇ ಗೆದ್ದಿದೆ
ಕಾಂತಾರ ಸಿನಿಮಾ ದೈವದ ಶಕ್ತಿಯಿಂದಲೇ ಇಲ್ಲಿವರೆಗೂ ಹೋಗಿದೆ. ದೈವದ ಪ್ರೇರಣೆಯಿಂದಲೇ ಇಷ್ಟೆಲ್ಲ ಸಾಧ್ಯವಾಗಿದೆ. ದೈವವನ್ನ ನಂಬದೇ ಇರೋರು ಯಾರೂ ಪ್ರಶ್ನೆ ಮಾಡ್ಬೇಡಿ. ಅದು ತಪ್ಪಾಗುತ್ತದೆ. ಈ ಮೊದಲೇ ಹೇಳಿದಂತೆ ನಾನು ಈ ಚಿತ್ರದ ಸಕ್ಸಸ್ ಅನ್ನ ದೈವಕ್ಕೆ ದೈವ ನರ್ತಕರಿಗೆ ಹಾಗೂ ಅಪ್ಪು ಸರ್ಗೆ ಡೆಡಿಕೇಟ್ ಮಾಡುತ್ತೇನೆ ಅಂತಲೂ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.
ದೈವದ ನಂಬಿಕೆ ಪ್ರಶ್ನಿಸಬೇಡಿ-ರಿಷಬ್ ಶೆಟ್ಟಿ
ದೈವದ ಶಕ್ತಿಯಿಂದಲೇ ಕಾಂತಾರ ಈ ಮಟ್ಟಿಗೆ ಬಂದಿದೆ ಅನ್ನೋ ನಂಬಿಕೆ ನನ್ನದಾಗಿದೆ. ಆದರೆ ಈಗ ದೈವದ ನಂಬಿಕೆಯನ್ನೆ ಪ್ರಶ್ನಿಸೋ ಕೆಲಸ ಕೂಡ ಆಗುತ್ತಿದೆ. ಅದು ನಿಜಕ್ಕೂ ಒಳ್ಳೆಯದಲ್ವೇ ಅಲ್ಲ. ಅದನ್ನ ಮಾಡ್ಬೇಡಿ ಅಂತಲೂ ರಿಷಬ್ ಶೆಟ್ಟಿ ಕೇಳಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಜನರಿಂದಲೂ ಗೆದ್ದಿದೆ. ಅವರಿಗೆ ನನ್ನ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಸಮಾಜ ಮುಖಿ ಕೆಲಸ ಮಾಡಲು ನಾವು ಬದ್ದ ಅಂತಲೂ ರಿಷಬ್ ಶೆಟ್ಟಿ ಈಗ ಹೇಳಿಕೊಂಡಿದ್ದಾರೆ. ಒಟ್ಟಾರೆ, ದೈವದ ಶಕ್ತಿಯಿಂದಲೇ ಈ ಮಟ್ಟಕ್ಕೆ ಬಂದಿರೋ ಕಾಂತಾರ ತುಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ
ಇದನ್ನೂ ಓದಿ: Bigg Boss Kannada: ರೂಪೇಶ್ ರಾಜಣ್ಣನ ಗಡ್ಡ ತೆಗೆದಿದ್ದೇಕೆ ಸಂಬರ್ಗಿ? ರಾಜ್ಯಾದ್ಯಂತ ಈಗ ಇದೇ ಬ್ರೇಕಿಂಗ್ ನ್ಯೂಸ್!
ಈ ಹಿನ್ನೆಲೆಯಲ್ಲಿಯೇ ವೀಡಿಯೋ ಮೂಲಕ ರಿಷಬ್ ಶೆಟ್ಟಿ, ಗೆಲ್ಲಿಸಿದ್ದ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ತುಳು ಭಾಷೆಯಲ್ಲಿ ಕಾಂತಾರ ಬರುತ್ತಿದೆ. ಇದು ನನ್ನ ಮೊದಲ ತುಳು ಭಾಷೆಯ ಸಿನಿಮಾ ಅಂತಲೂ ಹೇಳಿಕೊಂಡಿದ್ದಾರೆ. ಇನ್ನು ಕಾಂತಾರ ಸಿನಮಾ ತುಳು ಭಾಷೆಯಲ್ಲೂ ಕಮಾಲ್ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ