• Home
  • »
  • News
  • »
  • entertainment
  • »
  • Sapthami Gowda: ಪರಿಷೆಯಲ್ಲಿ ಸಪ್ತಮಿ ಸುತ್ತಾಟ! ಕಾಂತಾರ ಚೆಲುವೆಯ ಜಾತ್ರೆ ಸಂಭ್ರಮ ಹೀಗಿತ್ತು

Sapthami Gowda: ಪರಿಷೆಯಲ್ಲಿ ಸಪ್ತಮಿ ಸುತ್ತಾಟ! ಕಾಂತಾರ ಚೆಲುವೆಯ ಜಾತ್ರೆ ಸಂಭ್ರಮ ಹೀಗಿತ್ತು

ಪರಿಷೆಯಲ್ಲಿ ಸಪ್ತಮಿ ಗೌಡ

ಪರಿಷೆಯಲ್ಲಿ ಸಪ್ತಮಿ ಗೌಡ

ನಟಿ ಸಪ್ತಮಿ ಗೌಡ ಅವರು ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದಾರೆ. ವೀಡಿಯೋ ಕೂಡಾ ಶೇರ್ ಮಾಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಬೆಂಗಳೂರಿನ ಬಸವನಗುಡಿಯಲ್ಲಿ (Basavanagudi) ಕಡಲೆಕಾಯಿ ಪರಿಷೆ (Kadalekai Parishe) ಅದ್ಧೂರಿಯಾಗಿ ನಡೆದಿದೆ. ದೇವರ ದರ್ಶನ, ವಿವಿಧ ತಿನಿಸು, ಆಟದ ಮೈದಾನ, ಪುಟ್ಟ ಪುಟ್ಟ ಅಂಗಡಿಗಳು ಅಂತೂ ಜಾತ್ರೆ ಭಾರೀ ಗಮ್ಮತ್ತಾಗಿ ನಡೆದಿದೆ. ಬೆಂಗಳೂರಿನದಾದ್ಯಂತ ಜನರು ಬಸವನಗುಡಿಗೆ (Basavanagudi) ಬಂದು ಜಾತ್ರೆಯನ್ನು ಎಂಜಾಯ್ ಮಾಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ಬಸವನಗುಡಿ ಪೂರಾ ಟ್ರಾಫಿಕ್ (Tarffic) ಕೂಡಾ ಜಾಮ್ ಆಗಿತ್ತು. ಆದರೆ ಜಾತ್ರೆ ಸಂಭ್ರಮಕ್ಕೇನೂ ಕೊರತೆ ಇರಲಿಲ್ಲ.ಇದೀಗ ನಟಿ ಸಪ್ತಮಿ ಗೌಡ (Sapthami Gowda) ಅವರು ತಾವೂ ಕೂಡಾ ಕಡಲೆಕಾಯಿ ಪರಿಷೆಗೆ ಹೋಗಿ ಎಂಜಾಯ್ ಮಾಡಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.


ಪರಿಷೆಯಲ್ಲಿ ಕಾಂತಾರ ಚೆಲುವೆ


ನಟಿ ಸಪ್ತಮಿ ಗೌಡ ಅವರು ಪರಿಷೆಯಲ್ಲಿ ಸುತ್ತಾಡಿದ್ದಾರೆ. ಅದರ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಸ್ಟೋರಿ ಕೂಡಾ ಹಾಕಿದ್ದಾರೆ. ನಟಿ ಹೂಡಿ ಧರಿಸಿಕೊಂಡು ಕ್ಯಾಪ್ ಹಾಕಿ ಮಾಸ್ಕ್ ಧರಿಸಿ ಜಾತ್ರೆಯಲ್ಲಿ ಸುತ್ತಾಡಿದ್ದಾರೆ.
ಸ್ನೇಹಿತರ ಜೊತೆ ಸಪ್ತಮಿ ಸುತ್ತಾಟ


ನಟಿ ಸಪ್ತಮಿ ಗೌಡ ಅವರು ಸ್ನೇಹಿತರ ಜೊತೆ ಸುತ್ತಾಡಿದ್ದಾರೆ. ದೇವಸ್ಥಾನಕ್ಕೂ ಹೋಗಿದ್ದು ಅಲ್ಲಿ ಆರಾಮವಾಗಿ ಕುಳಿತುಕೊಂಡು ಸಮಯ ಕಳೆದಿದ್ದಾರೆ. ಪರಿಷೆಯಲ್ಲಿ ಮೆಲ್ಲನೆ ಮಾಸ್ಕ್ ಜಾರಿಸಿ ಕಡಲೆ ಕಾಯಿ ತಿಂದಿದ್ದು ನಂತರ ಶೂಟಿಂಗ್ ಕೂಡಾ ಎಂಜಾಯ್ ಮಾಡಿದ್ದಾರೆ. ಜಾತ್ರೆ ಜನರ ಮಧ್ಯೆ ಕೆಲವೊಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಎಲ್ಲವನ್ನೂ ಸೇರಿಸಿಕೊಂಡು ವಿಡಿಯೋ ಶೇರ್ ಮಾಡಿದ್ದಾರೆ.
ಕಡಲೆಕಾಯಿ ಪರಿಷೆ 2022


ವಿಡಿಯೋ ಶೇರ್ ಮಾಡಿ ಕಡಲೆಕಾಯಿ ಪರಿಷೆ 2022 ಎಂದು ಕ್ಯಾಪ್ಶನ್ ಕೊಟ್ಟಿರುವ ಸಪ್ತಮಿ ಗೌಡ ಜಾತ್ರೆ ಎಂಜಾಯ್ ಮಾಡಿದ್ದಾರೆನ್ನುವುಕ್ಕೆ ವಿಡಿಯೋ ಸಾಕ್ಷಿ. ವಿಡಿಯೋ ಈಗಾಗಲೇ 78 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. 269ಕ್ಕೂ ಹೆಚ್ಚು ಜನರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ಮಾಸ್ಕ್ ಹಾಕಿದ್ದು ಯಾಕೆ?


ವಿಡಿಯೋಗೆ ಕಾಮೆಂಟ್ ಮಾಡಿದ ಅಭಿಮಾನಿಗಳು ಮಾಸ್ಕ್ ಯಾಕೆ ಹಾಕಿದ್ದು? ಫ್ಯಾನ್ಸ್ ಸೆಲ್ಫಿ ಕೇಳ್ತಾರೆ ಅಂತಾನಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ನೋಡಿ ಎಲ್ರೂ  ಫೀಲ್ ಮಾಡ್ಕೊಂಡಿರ್ತಾರೆ, ಪಕ್ಕದಲ್ಲೇ ಇದ್ರು ನೋಡೋಕಾಗಿಲ್ಲ ಅಂತ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಖಂಡಿತಾ ರಿಸ್ಕ್ ತಗೊಳ್ಳೋಕಾಗಲ್ಲ ಎಂದು ಇನ್ನೊಬ್ಬರು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಅಯ್ಯೋ ನಾನು ನಿಮ್ಮನ್ನು ನೋಡಿದ್ದೆ, ಆದರೆ ನೀವೆ ಅಂತ ಗೊತ್ತಾಗಿಲ್ಲ ಎಂದಿದ್ದಾರೆ ಮತ್ತೊಬ್ಬ ಅಭಿಮಾನಿ.


ಇದನ್ನೂ ಓದಿ: Kantara Song: ಜರ್ಮನ್ ಅಂಧ ಗಾಯಕಿಯ ಧ್ವನಿಯಲ್ಲಿ ವರಾಹ ರೂಪಂ! ಸಖತ್ ವೈರಲ್


ಇತ್ತೀಚೆಗೆ ಕಟೀಲಿಗೆ ಭೇಟಿ ಕೊಟ್ಟ ನಟಿ


ಇತ್ತೀಚೆಗೆ ಸಪ್ತಮಿ ಗೌಡ ಕಟೀಲು ದೇವಸ್ಥಾನಕ್ಕೂ ಭೇಟಿಕೊಟ್ಟಿದ್ದರು. ತಮ್ಮ ತಾಯಿಯ ಜೊತೆ ಕಟೀಲಿನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದರು. ಆ ಸುದ್ದಿ ವೈರಲ್ ಆಗಿತ್ತು.
ಅಲ್ಲಿ ನಟಿ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಕೂಡಾ ಪೋಸ್ ಕೊಟ್ಟಿದ್ದರು. ಅದೇ ರೀತಿ ಕನ್ನಡದಲ್ಲಿಯೇ ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು.
ತುಳು ಸಿನಿಮಾ ಮಾಡ್ತಾರಾ?


ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದರೆ ಭಾಷೆ ಒಂದು ಅಡ್ಡಿಯಲ್ಲ. ಅವಕಾಶ ಸಿಕ್ಕಿದರೆ ನಟಿಸಬಹುದು ಎಂದಿದ್ದಾರೆ ನಟಿ. ಅದೇ ರೀತಿ ಬೇರೆ ಭಾಷೆಗಳಲ್ಲಿ ನಟಿಸಿದರೂ ಸ್ಯಾಂಡಲ್​​ವುಡ್​ನಲ್ಲಿ ಹೆಚ್ಚು ಸಿನಿಮಾ ಮಾಡಬೇಕು ಎಂದೂ ಅವರು ಹೇಳಿದ್ದರು. ಅಂತೂ ನಟಿ ಫುಲ್ ಜಾತ್ರೆ ಸುತ್ತಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.

Published by:Divya D
First published: