• Home
  • »
  • News
  • »
  • entertainment
  • »
  • Kantara- Sapthami Gowda: ಇವ್ರು ಕರೆದ್ರೆ ಮಹಾರಾಜನೇ ಬರ್ತಾನಂತೆ! ಸಪ್ತಮಿ ಹೊಸ ಅವತಾರ ಕಂಡು ಗಂಡ್​ ಹೈಕ್ಳು ಫ್ಲಾಟ್​!

Kantara- Sapthami Gowda: ಇವ್ರು ಕರೆದ್ರೆ ಮಹಾರಾಜನೇ ಬರ್ತಾನಂತೆ! ಸಪ್ತಮಿ ಹೊಸ ಅವತಾರ ಕಂಡು ಗಂಡ್​ ಹೈಕ್ಳು ಫ್ಲಾಟ್​!

ಸಪ್ತಮಿ ಗೌಡ

ಸಪ್ತಮಿ ಗೌಡ

ಈ ಹಿಂದೆ ಸಪ್ತಮಿ ಗೌಡ, ಪಾಪ್​ಕಾರ್ನ್​ ಮಂಕಿ ಟೈಗರ್​  (Popcorn Monkey Tiger) ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಆ ಸಿನಿಮಾ ಸಪ್ತಮಿ ಅವರಿಗೆ ಅಷ್ಟಾಗಿ ಹೆಸರು ತಂದು ಕೊಡಲಿಲ್ಲ. ಇದಾದ ಬಳಿಕ ಅವರು ಕಾಣಿಸಿಕೊಂಡಿದ್ದು ಕಾಂತಾರ ಸಿನಿಮಾದಲ್ಲಿ.

  • News18 Kannada
  • Last Updated :
  • Karnataka, India
  • Share this:

    ಸಿಂಗಾರ ಸಿರಿಯೇ, ಅಂಗಾಲಿನಲ್ಲಿ ಬಂಗಾರ ಅಗೆವ ಮಾಯೆ! ಈ ಹಾಡು ಕೇಳಿದ್ರೆ ಸಾಕು ಥಟ್​ ಅಂತ ಕಣ್ಣು ಮುಂದೆ ಕಾಂತಾರ (Kantara) ಸಿನಿಮಾ ಫಾರೆಸ್ಟ್​ ಗಾರ್ಡ್ ಲೀಲಾ (Forest Guard Leela) ಮುಖ ಬರುತ್ತೆ. ಆ ಮೂಗು ಬಟ್ಟೆ, ಎಣ್ಣೆ ಹಾಕಿ ಬೈ ತಲೆ ಬಾಚಿರುವ ಕೂದಲು, ಕೆಂಪು ಸೀರೆ, ಕೈಯಲ್ಲಿ ಮೀನು. ಒಟ್ನಲ್ಲಿ ಲೀಲಾ ಲುಕ್​ ಮಾತ್ರ ಹುಡುಗರೆ ನಿದ್ದೆ ಕೆಡಿಸಿದೆ. ಅದ್ರಲ್ಲೂ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ (Sapthami Gowda) ನಟಿಸಲ್ಲ, ಜೀವಿಸಿದ್ದಾರೆ. ಈ ಹಿಂದೆ ಸಪ್ತಮಿ ಗೌಡ, ಪಾಪ್​ಕಾರ್ನ್​ ಮಂಕಿ ಟೈಗರ್​  (Popcorn Monkey Tiger) ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಆ ಸಿನಿಮಾ ಸಪ್ತಮಿ ಅವರಿಗೆ ಅಷ್ಟಾಗಿ ಹೆಸರು ತಂದು ಕೊಡಲಿಲ್ಲ. ಇದಾದ ಬಳಿಕ ಅವರು ಕಾಣಿಸಿಕೊಂಡಿದ್ದು ಕಾಂತಾರ ಸಿನಿಮಾದಲ್ಲಿ.


    ಎಲ್ಲೆಲ್ಲೂ ಕಾಂತಾರ ಅಬ್ಬರ!


    ಈ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಿಗಿಂತ ಹೆಚ್ಚು ಕಳೆದಿದೆ. ಆದರೂ ಅದರ ಹವಾ ಮಾತ್ರ ಕಡಿಮೆಯಾಗಿಲ್ಲ. ಎಲ್ಲಿ ನೋಡಿದರೂ ಕಾಂತಾರಾ ಕಾಂತಾರಾ ಕಾಂತಾರ ಅನ್ನುವ ಜಪ ಕೇಳಿಸುತ್ತಿದೆ. ಇನ್ನೂ ಯಾರಾದರೂ ಸಿಕ್ಕಾಗ ಹೇಗಿದ್ದೀರಾ? ಅಂತ ಕೇಳುವುದನ್ನು ನಾವು ನೋಡಿದ್ದೇವೆ. ಆದರೆ ಈಗ ಯಾರೇ ಸಿಕ್ಕರೂ ಕಾಂತಾರ ಸಿನಿಮಾ ಹೇಗಿದೆ ಅಂತ ಕೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕಾಂತಾರ ಅಬ್ಬರ ಜೋರಾಗಿದೆ. ಜೊತೆಗೆ ಬಾಕ್ಸಾಫೀಸ್​ ಕೂಡ ಲೂಟಿ ಮಾಡುತ್ತಿದೆ.ರಿಷಬ್​ ಶೆಟ್ಟಿ ಅವರ ಖದರ್​ ಏನು ಅಂತ ಇಡೀ ದೇಶಕ್ಕೆ ಗೊತ್ತಾಗಿದೆ. ಈ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರನ್ನು ಜನ ಗುರುತಿಸಿದ್ದಾರೆ.


    ಸಪ್ತಮಿ ಗೌಡ ಮತ್ತೊಂದು ಅವತಾರ!


    ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ಅದ್ಭುತವಾಗಿ ನಟಿಸಿದ್ದಾರೆ.ಹುಡುಗರ ನಿದ್ದೆ ಕೆಡಿಸಿದ್ದಾರೆ. ಸಿನಿಮಾದಲ್ಲಿ ತುಂಬಾ ಪಾಪದ ಹುಡಗಿ ಪಾತ್ರದಲ್ಲಿ ನಟಿಸಿದ್ದಾರೆ. ಸಪ್ತಮಿ ಗೌಡ ಕೇವಲ ನಟಿ ಯಷ್ಟೇ ಅಲ್ಲ. ಅವರು ಇಂಟ್​​ನ್ಯಾಷನಲ್​ ಈಜು ಪಟು ಕೂಡ ಹೌದು. ಅವರ ತಂದೆ ಕೂಡ ಕರ್ನಾಟಕ ಪೊಲೀಸ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಸಪ್ತಮಿ ಗೌಡ ಅವರ ಮತ್ತೊಂದು ವಿಡಿಯೋ ಸಿಕ್ಕಾಪಟ್ಟೆ  ವೈರಲ್​ ಆಗುತ್ತಿದೆ. ಕನ್ನಡ ಹಾಡಿಗೆ ಸಿಕ್ಕಾಪಟ್ಟೆ ರಗಡ್​​ ಆಗಿ ಸ್ಟೆಪ್​ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


    ಇದನ್ನೂ ಓದಿ: ಬ್ಲ್ಯಾಕ್ ಸಾರಿಯಲ್ಲಿ ಕಾಂತಾರ ಚೆಲುವೆ! ಸಪ್ತಮಿ ಗೌಡ ಅವರ ವಯಸ್ಸೆಷ್ಟು ಗೊತ್ತಾ?


    ಸಪ್ತಮಿ ಗೌಡ ಸ್ಟೆಪ್ಸ್​​ ಕಂಡು ಫ್ಯಾನ್ಸ್​ ಶಾಕ್​!


    ಇನ್ನೂ ಈ ವಿಡಿಯೋ ಕಂಡು ಹುಡುಗರು ಶಾಕ್ ಆಗಿದ್ದಾರೆ. ಕಾಂತಾರ ಸಿನಿಮಾದಲ್ಲಿ ಸಾದಾ ಸೀದಾ ಆಗಿ ನಟಿಸಿದ್ದ ಸಪ್ತಮಿ ಗೌಡ, ಈ ಪಾಟಿ ಸ್ಟೆಪ್ಸ್ ಹಾಕಿರೋದು ಕಂಡು ವ್ಹಾವ್​ ಅನ್ನುತ್ತಿದ್ದಾರೆ. ಮೈಸೂರು ಮಹಾರಾಜ ಕೂಡ ಸಪ್ತಮಿ ಗೌಡ ಕರೆದ್ರೆ ಆನೆ ಮೇಲೆ ಬಂದು ಕರೆದುಕೊಂಡು ಹೋಗ್ತಾರಂತೆ. ಇದೇನಪ್ಪಾ ಅನ್ಕೋಬೇಡಿ. ಜೋಗಿ ಸಿನಿಮಾದ ನಿಂಗವ್ವ ಹಾಡಿಗೆ ಸಪ್ತಮಿ ಗೌಡ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.



    ಕಾಂತಾರದ ಶಿವ ಪಾತ್ರದಂತೆ ಲೀಲಾ ಪಾತ್ರವೂ ಹಿಟ್


    ಕಾಂತಾರ ಸಿನಿಮಾ ಶಿವ ಪಾತ್ರ ಸೂಪರ್ ಹಿಟ್ ಆಗಿದೆ. ಜನ ಸಿನಿಮಾ ನೋಡಿ ಬಂದು ಶಿವ ಪಾತ್ರದ ಬಗ್ಗೇನೆ ಮಾತನಾಡುತ್ತಿದ್ದಾರೆ. ಇದೇ ಪಾತ್ರದ ಜೊತೆಗೆ ಇರೋ ಲೀಲಾ ಪಾತ್ರವೂ ಇಲ್ಲಿ ಜನರ ಮನಸನ್ನ ಕದ್ದಿದೆ. ತೆರೆ ಮೇಲೆ ಬರುವ ಈ ಲೀಲಾ ಕನ್ನಡದ ಮಟ್ಟಿಗೆ ಭರವಸೆಯ ಬೆಡಗಿಯಾಗಿ ಕಂಗೊಳಿಸುತ್ತಿದ್ದಾರೆ.


    ಇದನ್ನೂ ಓದಿ: ನನಗಾಗಿ ಒಂದು ಲವ್ ಸ್ಟೋರಿ ಬರೆಯಿರಿ ಎಂದ ಕಾಂತಾರ ಚೆಲುವೆ! ಲೀಲಾ ಹೀಗ್ಯಾಕೆ ಹೇಳಿದ್ರು?


    ಸಪ್ತಮಿ ಗೌಡ ಕೈ ಹಿಡಿದ ತುಳುನಾಡ ದೈವ  


    ಸಪ್ತಮಿ ಗೌಡ ತಮ್ಮ ಚಿತ್ರ ಜೀವನದ ಈ ಮೊದಲ ಸಿನಿಮಾದ ಸೂಪರ್ ಹಿಟ್ ಸಂಭ್ರಮದಲ್ಲಿಯೇ ಇದ್ದಾರೆ. ಸಿನಿಮಾ ಜೀವನ ಆರಂಭದಲ್ಲಿಯೇ ಕಾಂತಾರ ಮೂಲಕ ಹಿಟ್ ಆಗಿರೋದು ಎಲ್ಲರಿಗೂ ಸಿಗೋ ಲಕ್ ಅಲ್ಲ ಬಿಡಿ.

    Published by:ವಾಸುದೇವ್ ಎಂ
    First published: