ಇತ್ತೀಚಿನ ದಿನಗಳಲ್ಲಿ ಬಾಯ್ಕಾಟ್ (Boycott) ಟ್ರೆಂಡ್ ಜೋರಾಗಿದೆ. ವಿಶೇಷವಾಗಿ ಬಾಲಿವುಡ್ (Bollywood) ಸಿನಿಮಾಗಳ ಬಗ್ಗೆ ಮಾತನಾಡುವುದಾರೆ ರಿಲೀಸ್ (Release) ಆಗುವ ಬಹುತೇಕ ಎಲ್ಲ ಸಿನಿಮಾಗಳಿಗೂ ಬಾಯ್ಕಾಟ್ ಬಿಸಿ ತಟ್ಟುತ್ತಿದೆ. ಸ್ಟಾರ್ ಹೀರೋಗಳ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ (Release) ಆಗುತ್ತವೆ ಎನ್ನುವಾಗ ನೆಟ್ಟಿಗರು ಈ ಟ್ರೆಂಡ್ (Trend) ಶುರು ಮಾಡುತ್ತಾರೆ. ಇದೇ ಅಭಿಯಾನ ಬಹಳಷ್ಟು ಸಿನಿಮಾಗಳನ್ನು (Cinema) ಬಾಧಿಸಿವೆ. 400 ಕೋಟಿ ಬಜೆಟ್ನ (Budget) ಬ್ರಹ್ಮಾಸ್ತ್ರದಿಂದ ಶುರುವಾಗಿ ಈಗ ಪಠಾನ್ (Pathaan) ತನಕ ಬಾಯ್ಕಾಟ್ ಬಿಸಿ ತಟ್ಟಿದೆ. ಈ ಸಂಬಂಧ ಈಗ ಕಾಂತಾರ (Kantara) ನಟ ಕಿಶೋರ್ (Actor Kishore) ಅವರು ಮಾತನಾಡಿದ್ದಾರೆ.
ಕಿಶೋರ್ ಹೇಳಿದ್ದೇನು?
ಬಾಲಿವುಡ್ ಸಿನಿಮಾಗಳನ್ನು ಬಾಯ್ಕಾಟ್ ಮಾಡುವ ಟ್ರೆಂಡ್ಗಳನ್ನು ವಿರೋಧಿಸಿ ಇಡೀ ದೇಶ ಬಾಲಿವುಡ್ ಪರ ನಿಲ್ಲುವ ಸಮಯ ಬಂದಿದೆ. ಇಡೀ ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್ ನ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು , ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ನ ಪರವಾಗಿ ನಿಲ್ಲುವ ಸಮಯ ಬಂದಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದು ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ. ಇಷ್ಟಾದರೂ ಚಿತ್ರರಂಗದವರು ಮಾತನಾಡದೇ ಕೂತಿರುವ, ಭಯದ ವಾತಾವರಣ ಸೃಷ್ಟಿಯಾಗಿರುವುದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
View this post on Instagram
ಕೆಜಿಎಫ್ ಸಿನಿಮಾ ಮೈಂಡ್ಲೆಸ್ ಎಂದ ನಟ
ನಟ ಕಿಶೋರ್ ಅವರು ನೇರ ನುಡಿಯ ಸ್ವಭಾವದವರು. ಎಲ್ಲವನ್ನೂ ನೆರವಾಗಿ ಹೇಳುವ, ಸ್ಪಷ್ಟ ಮಾತಿನ ನಟ. ಈಗ ಅವರು ಕೆಜಿಎಫ್ ಸಿನಿಮಾ ಬಗ್ಗೆ ನೀಡಿರುವ ಹೇಳಿಕೆಯೊಂದು ಸುದ್ದಿಯಾಗಿದೆ. ಕೆಜಿಎಫ್2 ಸಿನಿಮಾ ನೋಡದವರಿದ್ದಾರಾ? ಎಲ್ಲರೂ ಹಲವು ಬಾರಿ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ. ಆದರೆ ಕಿಶೋರ್ ಇದುವೆಗೂ ಕೆಜಿಎಫ್ ಸಿನಿಮಾ ನೋಡಿಯೇ ಇಲ್ಲವಂತೆ.
ಇದೇ ವಿಚಾರವನ್ನು ಸ್ವತಃ ರಿವೀಲ್ ಮಾಡಿರುವ ಬಹುಭಾಷಾ ನಟ ಕಿಶೋರ್ ಅವರು ಖಾಸಗಿ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಅಲ್ಲಿ ಕೆಜಿಎಫ್ ಬಗ್ಗೆಯೂ ಮಾತನಾಡಿದ್ದಾರೆ. ಇದು ಸರಿಯೋ ತಪ್ಪೋ ಗೊತ್ತಿಲ್ಲ. ನಾನು ಕೆಜಿಎಫ್ 2 ಸಿನಿಮಾ ನೋಡಿಲ್ಲ. ನಾನು ಇಷ್ಟಪಡೋ ರೀತಿಯ ಸಿನಿಮಾ ಅಲ್ಲ ಇದು. ಇದು ನನ್ನ ವೈಯಕ್ತಿಕ ಆಯ್ಕೆ ವಿಚಾರ ಎಂದಿದ್ದಾರೆ.
ಇದನ್ನೂ ಓದಿ: Nysa Devgan-Ajay Devgan: ವಿಮಲ್ನಿಂದ ಟೈಂ ಸಿಕ್ಕಿದರೆ ಸ್ವಲ್ಪ ಮಗಳನ್ನೂ ನೋಡ್ಕೊಳ್ಳಿ! ನೈಸಾ ಫೋಟೋ ವೈರಲ್
ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ. ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ