Raghavendra Stores: ರಾಘವೇಂದ್ರ ಸ್ಟೋರ್ಸ್​ನ ಅಡುಗೆ ಸವಿಯಲು ಸಿದ್ಧರಾಗಿ, ಚಿತ್ರದ ರಿಲೀಸ್​ ಡೇಟ್​ ಅನೌನ್ಸ್

ಸ್ಯಾಂಡಲ್​​ವುಡ್​​ನ ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ಬಹುನಿರೀಕ್ಷಿತ ರಾಘವೇಂದ್ರ ಸ್ಟೋರ್ (Raghavendra Stores)ಚಿತ್ರದ ಕುರಿತು ಬಿಗ್​ ಅಫ್​ಡೇಟ್​ ಒಂದು ಹೊರಬಿದ್ದಿದೆ.

ರಾಘವೇಂದ್ರ ಸ್ಟೋರ್ಸ್ ಪೋಸ್ಟರ್

ರಾಘವೇಂದ್ರ ಸ್ಟೋರ್ಸ್ ಪೋಸ್ಟರ್

  • Share this:
ಸ್ಯಾಂಡಲ್​​ವುಡ್​​ನ (Sandalwood) ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ಬಹುನಿರೀಕ್ಷಿತ ರಾಘವೇಂದ್ರ ಸ್ಟೋರ್ (Raghavendra Stores)ಚಿತ್ರದ ಕುರಿತು ಬಿಗ್​ ಅಫ್​ಡೇಟ್​ ಒಂದು ಹೊರಬಿದ್ದಿದೆ. ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್​ (Hombale Films) ಟ್ವಿಟರ್​ ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೂಲಕ ಜಗ್ಗೇಶ್ ಅಭೊಮಾನಿಗಳಿಗೆ ಸಂತಸವಾಗಿದ್ದು, ಅನೇಕ ದಿನಗಳ ನಂತರ ಜಗ್ಗೇಶ್​ ಅವರನ್ನು ಬೆಳ್ಳಿತೆರೆ ಮೇಲೆ ನೋಡಲು ಸಿನಿಪ್ರೇಮಿಗಳು ಕಾತುರರಾಗಿದ್ದಾರೆ. ಇನ್ನು, ಸದ್ಯ ತೋತಾಪುರಿ (Thotapuri) ಸಿನಿಮಾದಲ್ಲಿ ಬ್ಯೂಸಿಯಾಗಿರುವ ಜಗ್ಗೇಶ್, ಅದರ ನಡುವೆಯೇ ರಾಘವೇಂದ್ರ ಸ್ಟೋರ್ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. ಚಿತ್ರ್ಕಕೆ ಸಂತೋಷ್ ಆನಂದ್​ರಾಮ್ ಆ್ಯಕ್ಷನ್ ಕಟ್​ ಹೇಳಿದ್ದು, ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆ:

ಇನ್ನು, ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ ಚಿತ್ರವು ಇದೇ ವರ್ಷ ಆಗಷ್ಟ್ 5ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ. ಈ ಕುರಿತು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಟ್ವೀಟ್​ ಮಾಡಿದ್ದು, ‘ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ!‘ ಎಂದು ಬರೆದುಕೊಂಡಿದೆ.

ಇನ್ನು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್​ ನಲ್ಲಿ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ಪಾತ್ರದ ಚಿಕ್ಕ ಪರಿಚಯವನ್ನು ಮಾಡಲಾಗಿದ್ದು, ಚಿತ್ರ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೇ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ 40 ವರ್ಷ ದಾಟಿದರೂ ಮದುವೆಯಾಗದ ಅಡುಗೆ ಭಟ್ಟರ ಪಾತ್ರದಲ್ಲಿ ಜಗ್ಗೇಶ್ ಕಚಗುಳಿ ಇಟ್ಟಿದ್ದಾರೆ.





ಜಗ್ಗೇಶ್​ಗೆ ಧನ್ಯವಾದ ತಿಳಿಸಿದ ನಿರ್ದೇಶಕ ಸಂತೋಷ್​:

ಇನ್ನು, ಚಿತ್ರದ ನಿರ್ದೇಶಕರಾದ ಸಂತೋಷಚ್​ ಆನಂದ್​ರಾಮ್ ಅವರು ಚಿತ್ರದ ಬಿಡುಗಡೆ ದಿನಾಂಕವನ್ನು ಟ್ವಿಟರ್​ ನಲ್ಲಿ ಹಂಚಿಕೊಂಡು ಜಗ್ಗೇಶ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ಅಣ್ಣ ನಿಮ್ಮಂತ ಅಪ್ರತಿಮ ಕಲಾವಿದರ ಜೊತೆ ಸಿನಿಮಾ ಮಾಡುವುದು ನಮ್ಮಂತ ನಿರ್ದೇಶಕರಿಗೆ ಬರಹಗಾರರಿಗೆ ಒಂದು ಅನುಭವ ಹಾಗು ಕಲಿಕೆ. ನಿಮ್ಮ 40 ವರ್ಷದ ಅನುಭವ,ಕನ್ನಡ ಭಾಷೆ ಮೇಲಿರುವ ಅಭಿಮಾನ ಹಾಗು ಪಾಂಡಿತ್ಯ ಅದ್ಭುತ.ಈ ಸಿನಿಮಾದಲ್ಲಿ ನೀವು ನಗಿಸಿದ್ದೀರ ,ಅಳಿಸಿದ್ದಿರ ,ಜೀವಿಸಿದ್ದೀರ. love you ಅಣ್ಣ, ಧನ್ಯವಾದ ಗುರು ರಾಯರಿಗೆ‘ ಎಂದು ಬರೆದುಕೊಂಡಿದ್ದಾರೆ.





ರಾಘವೇಂದ್ರ ಸ್ಟೋರ್ಸ್ ಅಡುಗೆ ಸವಿಯಲು ಸಮಯ ಬಂದಿದೆ ಎಂದ ಜಗ್ಗಣ್ಣ:

ನಟ ಜಗ್ಗೇಶ್ ಈ ಹಿಂದೆ ಚಿತ್ರದ ಟೀಸರ್ ಬಿಡುಗಡೆ ವೇಳೆ ಚಿತ್ರದ ಕುರಿತು ಮಾತನಾಡಿದ್ದರು. ಅದರಂತೆ ‘ಈ ಚಿತ್ರದಲ್ಲಿ ಉತ್ತಮ ಸಾಮಾಜಿಕ ಸಂದೇಶ ಇದೆ. ಹಾಗಾಗಿ ಸದ್ಯ ಟೀಸರ್‌ನಲ್ಲಿ ಇರುವುದನ್ನು ಬಿಟ್ಟು ಚಿತ್ರದಲ್ಲಿ ಇನ್ನೇನೋ ಇದೆ ಎನ್ನುವುದು ಗೊತ್ತಾಗುತ್ತದೆ‘ ಎಂದು ಹೇಳಿದ್ದರು.

ಇದನ್ನೂ ಓದಿ: KGF - 2 ಜೊತೆ ಬಿಡುಗಡೆ ಆಗುತ್ತಿದೆ ಕಾಂತಾರಾ, ರಾಘವೇಂದ್ರ ಸ್ಟೋರ್ಸ್ ಚಿತ್ರದ ಟೀಸರ್, ಏನಿದು ಹೊಂಬಾಳೆ ಫಿಲ್ಮಂ ಹೊಸ ಫ್ಲಾನ್?

ಅದೇ ರೀತಿ ಇದೀಗ ಚಿತ್ರ ಬಿಡುಗಡೆ ಸಮಯದಲ್ಲಿಯೂ ಟ್ವೀಟ್​ ಮಾಡಿದ್ದು, ‘ರಾಘವೇಂದ್ರ ಸ್ಟೋರ್ಸ್ ಅಡುಗೆ ಸವಿಯಲು ಸಮಯ ಬಂದಿದೆ. ವರಮಹಾಲಕ್ಷ್ಮಿಯ ಹಬ್ಬದಂದು ಸಿಹಿ ಸವಿಯಲು ತಯಾರಾಗಿರಿ. ಇದು ಚಿತ್ರವಲ್ಲಾ ಒಂದು ಅದ್ಭುತ ಕಾದಂಬರಿ. ಇಂಥ ಅವಕಾಶ ನೀಡಿದ, ಹೊಂಬಾಳೆ ಫಿಲ್ಮ್ಸ್, ಸಂತೋಷ್ ಆನಂದ್ ರಾಮ್, ಕಾರ್ತಿಕ್, ಯೋಗಿ ಅವರಿಗೆ ಧನ್ಯವಾದ. ಸಂತೋಷ ಆನಂದ ರಾಮ್ ನನ್ನನ್ನು ಬಹಳ ಅದ್ಭುತವಾಗಿ ಬಳಸಿಕೊಂಡಿದ್ದಾನೆ ಧನ್ಯವಾದ ಚಿನ್ನ‘ ಎಂದು ಚಿತ್ರ್ಕಕಾಗಿ ದುಡಿದವರಿಗೆಲ್ಲರಿಗೂ ಧನ್ಯವಾದ ತಿಳಸಿದ್ದಾರೆ.
Published by:shrikrishna bhat
First published: