Kannadati Serial: ವರುಧಿನಿಗೆ ಗೊತ್ತಾಗುತ್ತಾ ಹರ್ಷ-ಭುವಿ ಪ್ರೀತಿ ವಿಷ್ಯ? ಭುವಿ ಮೇಲೆ ವರೂ ಕೆಂಡಾಮಂಡಲ

ನೀನು ಯಾರನ್ನೋ ಪ್ರೀತಿಸ್ತಿದ್ದೀಯಾ ಅಂತ ನನಗೆ ಗೊತ್ತಾಗಿದೆ. ನನ್ನಿಂದ ಯಾಕ್ ಮುಚ್ಚಿಟ್ಟೆ. ಯಾರನ್ನು ಪ್ರೀತಿಸ್ತಿದ್ದೀಯಾ ಹೇಳು ಅಂತ ವರೂಧಿನಿ ಪಟ್ಟು ಹಿಡಿದಿದ್ದಾಳೆ.

ಕನ್ನಡತಿ ಸೀರಿಯಲ್

ಕನ್ನಡತಿ ಸೀರಿಯಲ್

 • Share this:
  ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ (Serial) ಕನ್ನಡತಿ (Kannadati) ಕುತೂಹಲ ಘಟ್ಟ ತಲುಪಿದೆ. ಹರ್ಷನ ಪ್ರೀತಿಗೆ ಹಸಿರುಪೇಟೆ ಟೀಚರ್ ಗ್ರೀನ್ ಸಿಗ್ನಲ್ (Green Signal) ಕೊಟ್ಟಾಯ್ತು ಜೊತೆಗೆ ರತ್ನಮಾಲಾ ಸೊಸೆಯಾಗೋದೆ ನನ್ನ ಭಾಗ್ಯ ಎಂದಿದ್ದಾರೆ ಭುವಿ. ಈ ಮಾತು ಕೇಳಿ ಅಮ್ಮಮ್ಮ ಫುಲ್ ಖುಷ್ ಆಗಿದ್ದಾರೆ. ಆದ್ರೆ ಭುವಿಗೆ ವರುಧಿನಿಯೇ ದೊಡ್ಡ ತಲೆನೋವಾಗಿದ್ದಾಳೆ. ಹೇಗೋ ಭುವಿಗೆ ಬಾಯ್ ಫ್ರೆಂಡ್ (Boy friend) ಇರೋ ವಿಚಾರ ವರುಗೆ ಗೊತ್ತಾಗಿ ಹೋಗಿದೆ. ಇತ್ತ ಭುವನೇಶ್ವರಿ-ಹರ್ಷನ ಪ್ರೀತಿ ಬಗ್ಗೆ ಸಾನಿಯಾಗೆ ಗೊತ್ತಾಗ್ತಿದ್ದಂತೆ ಹೊಸ ಗೇಮ್ ಸ್ಟಾರ್ಟ್ (Game start) ಮಾಡಿದ್ದಾಳೆ.

  ಭುವಿ ಮೇಲೆ ವರೂ ಕೆಂಡಾಮಂಡಲ

  ನಿಮ್ಮ ಗರ್ಲ್ ಫ್ರೆಂಡ್ (Girl friend) ತೋರಿಸಿ ಅಂತ ಹರ್ಷನ ಬೆನ್ನು ಬಿದ್ದಿರೋ ವರೂಗೆ ಇದೀಗ ಭುವಿಗೆ ಯಾರನ್ನೋ ಪ್ರೀತಿಸ್ತಿದ್ದಾಳೆ ಅನ್ನೋ ವಿಚಾರ ಗೊತ್ತಾಗಿ ಹೋಗಿದೆ. ನಿನ್ನ ಹೀರೋ ಮರೆತು ಬೇರೆ ಹುಡುಗನ ಮದುವೆಯಾಗು ಎಂದು ಭುವನೇಶ್ವರಿ ಗೆಳತಿಗೆ ಕಿವಿಮಾತು ಹೇಳ್ತಿದ್ದಂತೆ ರೊಚ್ಚಿಗೆದ್ದ ವರುಧಿನಿ ನಿನ್ನ ಲೈಫ್ ಸೆಟಲ್ ಮಾಡಿಕೊಳ್ಳೊಕ್ಕೆ ನನ್ನ ಮದುವೆ ಆಗು ಅಂತಿಯಾ ಎಂದು ಭುವಿ ವಿರುದ್ಧ ಕೆಂಡಕಾರಿದ್ದಾಳೆ. ನೀನು ಯಾರನ್ನೋ ಪ್ರೀತಿಸ್ತಿದ್ದೀಯಾ ಅಂತ ನನಗೆ ಗೊತ್ತಾಗಿದೆ. ನನ್ನಿಂದ ಯಾಕ್ ಮುಚ್ಚಿಟ್ಟೆ. ಯಾರನ್ನು ಪ್ರೀತಿಸ್ತಿದ್ದೀಯಾ ಹೇಳು ಅಂತ ವರೂಧಿನಿ ಪಟ್ಟು ಹಿಡಿದಿದ್ದಾಳೆ.

  ಏನೇ ಆಗ್ಲಿ ಹೀರೋ ಮದುವೆ ಆಗೋವರೆಗೆ ನನಗೂ ಅವಕಾಶವಿದೆ ಅಂತ ವರೂ ಕಾದುಕುಳಿತ್ತಿದ್ದಾಳೆ. ಆದ್ರೆ ತನ್ನ ಪ್ರೀತಿ ವಿಚಾರ ವರೂ ಬಾಳಲಿ ಬಿರುಗಾಳಿ ಎಬ್ಬಿಸುತ್ತೆ ಅನ್ನೋ ಆತಂಕ ಭುವನೇಶ್ವರಿಗೆ ಹೆಚ್ಚಾಗಿದೆ. ಹರ್ಷನ ಪ್ರೀತಿಗೆ ಮನಸೋತಿರೋ ಭುವಿ ಜೀವದ ಗೆಳತಿಯ ಫ್ರೆಂಡ್ ಶಿಫ್ (Friendship) ಕಳೆದುಕೊಂಡುಬಿಡ್ತಾಳಾ? ತನ್ನ ಸ್ನೇಹಿತೆಗಾಗಿ ಪ್ರೀತಿ ತ್ಯಾಗ ಮಾಡಲು ಹೊರಟ್ಟಿದ್ದ ಭುವಿ ಈಗ ವರುಧಿನಿಗೆ ತನ್ನ ಪ್ರೀತಿ ವಿಚಾರ ಹೇಗೆ ಹೇಳ್ತಾಳೆ. ಆಕೆಯನ್ನ ಹೇಗೇ ಸಮಾಧಾನ ಮಾಡ್ತಾಳೆ. ವರುಧಿನಿಗೆ ಭುವಿ-ಹರ್ಷನ ಪ್ರೀತಿ ವಿಚಾರ ತಿಳಿದ್ರೆ ಏನು ಮಾಡ್ತಾಳೆ ಅನ್ನೋದೆ ಸದ್ಯಕ್ಕಿರೋ ಕುತೂಹಲ.

  ‘ನಿಮ್ಮ ಗರ್ಲ್ ಫ್ರೆಂಡ್ ಮೀಟ್ ಮಾಡ್ಸಿ’

  ಹಸಿರು ಪೇಟೆ ಟೀಚರ್ ಪ್ರೀತಿ ಸಿಕ್ಕ ಖುಷಿಯಲ್ಲಿರೋ ಹರ್ಷನ ಬೆನ್ನತ್ತಿದ್ದಾಳೆ ವರೂಧಿನಿ. ನಿಮ್ಮ ಗರ್ಲ್ ಫ್ರೆಂಡ್ ಯಾರು, ಮೀಟ್ ಮಾಡ್ಸಿ ಅಂತ ಕೇಳಿದ್ದಾಳೆ. ಇದಕ್ಕೆ ಓಕೆ ಅಂದಿರೋ ಹರ್ಷ, ನೀವೆ ಡೇಟ್ ಫಿಕ್ಸ್ ಮಾಡಿ ಕರ್ಕೊಂಡು ಬರ್ತಿನಿ ಎಂದು ಬಿಟ್ಟಿದ್ದಾರೆ. ಆ ದಿನಕ್ಕಾಗಿ ಪ್ರೇಕ್ಷಕರು ಕಾದು ಕುಳಿತ್ತಿದ್ದಾರೆ. ವರುಧಿನಿಗೆ ತನ್ನ ಗರ್ಲ್ ಫ್ರೆಂಡ್ ನ ಹೇಗೆ ಪರಿಚಯ ಮಾಡಿಸ್ತಾನೆ ಅನ್ನೋದೆ ಕುತೂಹಲ.

  ಸಾನಿಯಾ ಆಟ ಶುರು!

  ಭುವಿನೇ ಸೌಪರ್ಣಿಕಾ ಅನ್ನೋ ವಿಚಾರ ಗೊತ್ತಾಗ್ತಿದ್ದಂತೆ ಸಾನಿಯಾ ಹೊಸ ಆಟ ಶುರು ಮಾಡಿದ್ದಾಳೆ. ಭುವನೇಶ್ವರಿ ಹಾಗೂ ವರೂಧಿನಿ ನಡುವೆ ವಿಕ್ರಾಂತ್ ಅನ್ನೋ ಹೊಸ ಹುಡುಗನನ್ನು ಬಿಟ್ಟು ತಮಾಷೆ ನೋಡ್ತಿದ್ದಾಳೆ. ಭುವಿ ಪ್ರೀತಿ ಹಾಗೂ ಸ್ನೇಹಕ್ಕೆ ಬೆಂಕಿ ಹಚ್ಚೋ ಕೆಲಸ ಮಾಡ್ತಿದ್ದಾಳೆ ಸಾನಿಯಾ. ಇನ್ನು ಸಾನಿಯಾ ಆಟಕ್ಕೆ ಯಾರು ಬಲಿಯಾಗ್ತಾರೋ ಗೊತ್ತಿಲ್ಲ.

  ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿರೋ ಕನ್ನಡತಿ ಸೀರಿಯಲ್ ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಲರ್ಸ್ ಕನ್ನಡದ ಟಾಪ್ ಸೀರಿಯಲ್ ಗಳಲ್ಲಿ ಕನ್ನಡತಿ ಕೂಡ ಒಂದಾಗಿದೆ.
  Published by:Latha CG
  First published: