She is ಔಟ್ ಆಫ್ ಡೇಂಜರ್ ಅಂದ್ರು ಡಾಕ್ಟರ್, ಭುವಿಯನ್ನು ಕೊಲ್ಲದೆ ಬಿಡಲ್ಲ ಅಂತಿದ್ದಾನೆ ಸುಪಾರಿ ಕಿಲ್ಲರ್

ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡ್ತಿದ್ದ ಭುವಿಗೆ ಇದೀಗ ಪ್ರಜ್ಞೆ ಬಂದಿದ್ದು, ಡಾಕ್ಟರ್​ ಕೂಡ ಭುವಿ ಜೀವಕ್ಕೆ ಅಪಾಯವಿಲ್ಲ ಎಂದಿದ್ದಾರೆ. ಭುವಿ ಕಣ್ಣು ಬಿಡ್ತಿದ್ದಂತೆ ಹರ್ಷನನ್ನು ನೋಡಿ ಹೇಗಿದ್ದೀರಾ ಎಂದು ಮಾತಾಡಿದ್ದಾಳೆ.

ಕನ್ನಡತಿ ಸೀರಿಯಲ್​ ನಟಿಯರು

ಕನ್ನಡತಿ ಸೀರಿಯಲ್​ ನಟಿಯರು

  • Share this:
ಕಲರ್ಸ್​ ಕನ್ನಡದಲ್ಲಿ ಬರೋ ಕನ್ನಡತಿ ಧಾರಾವಾಹಿ (Kannadathi Serial) ಜನಮೆಚ್ಚಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ನಾನಾ ಕಾರಣಗಳಿಂದ ಈ ಧಾರವಾಹಿ ಜನ ಮೆಚ್ಚುಗೆ ಗಳಿಸಿದೆ. ಹಲವು ಕುತೂಹಲ ಘಟ್ಟಗಳನ್ನು ದಾಟಿ  ಬಂದಿರೋ ಸೀರಿಯಲ್​ನಲ್ಲಿ ಭುವಿ (Bhuvi) ಅಪಾಯಕ್ಕೆ (Danger) ಸಿಲುಕಿದ್ದಾರೆ. ಆಸ್ಪತ್ರೆಯಲ್ಲಿ (Hospital) ಸಾವು-ಬದುಕಿನ ನಡುವೆ ಭುವಿ ಹೋರಾಡ್ತಿದ್ದಾರೆ. ಸುಪಾರಿ ಕಿಲ್ಲರ್ (Supari killer)​ ಭುವಿಯನ್ನು ಬೆಟ್ಟದ ಮೇಲಿಂದ ತಳ್ಳಿದ್ದರಿಂದ ಭುವಿ ಆಸ್ಪತ್ರೆ ಸೇರುವಂತಾಗಿದೆ. ಸಾನಿಯಾಳಿಂದ ಸುಪಾರಿ ಪಡೆದಿದ್ದ ಸುಪಾರಿ ಕಿಲ್ಲರ್​ ಭುವಿಯ ಉಸಿರನ್ನು ನಿಲ್ಲಿಸಲು ಮತ್ತೆ ಬಂದಿದ್ದಾನೆ. ಬೆಟ್ಟದಿಂದ (Hill) ತಳ್ಳಿದ್ರು ಬದುಕುಳಿದ ಭುವಿಯನ್ನು ಕೊಲ್ಲೋದಕ್ಕೆ ಆಸ್ಪತ್ರೆಗೆ ಬಂದಿದ್ದಾನೆ ಸುಪಾರಿ ಕಿಲ್ಲರ್​

ಆಸ್ಪತ್ರೆಯಲ್ಲಿ ಭುವಿ ಟೀಚರ್​

ಹರ್ಷ-ಭುವಿ ಮದುವೆ ತಡೆಯಲು ನಾನಾ ಕುತಂತ್ರ ಮಾಡ್ತಿರೋ ಸಾನಿಯಾ, ಭುವಿಯನ್ನೇ ಕೊಲ್ಲೋದಕ್ಕೆ ಸುಪಾರಿ ಕೊಟ್ಟಿದ್ದಾಳೆ. ಈ ಬಾರಿ ಚಾನ್ಸ್​ ಮಿಸ್​ ಆಗ್ಲೆ ಬಾರದು ಎಂದು ವಾರ್ನಿಂಗ್​ ಕೂಡ ಮಾಡಿದ್ದಳು. ಎಲ್ಲಾ ಸಾನಿಯಾ ಪ್ಲಾನ್​ ಮಾಡಿದ್ದಂತೆ ನಡೆದಿತ್ತು. ಸುಪಾರಿ ಕಿಲ್ಲರ್​ ಬೆಟ್ಟ ಮೇಲಿಂದ ಭುವಿಯನ್ನು ಕೆಳಗೆ ತಳ್ಳಿದ್ದ. ಈ ಬಾರಿ ಭುವಿ ಬದುಕೋದೆ ಇಲ್ಲ ಎಂದು ಕೊಂಡಿದ್ದ ಸಾನಿಯಾಗೂ ಶಾಕ್​ ಆಗಿದೆ. ಬೆಟ್ಟದ ಮೇಲಿಂದ ಬಿದ್ದ ಭುವಿಯನ್ನು ರಕ್ಷಿಸಿ ವರುಧಿನಿ ಹಾಗೂ ಹರ್ಷ ಇಬ್ಬರು ಆಸ್ಪತ್ರೆಗೆ ಸೇರಿಸಿದ್ದಾರೆ.

ಔಟ್​ ಆಫ್​ ಡೇಂಜರ್ ಎಂದ್ರು ಡಾಕ್ಟರ್

ಭುವಿಗೆ ಏನ್​ ಆಗುತ್ತೋ ಅನ್ನೋ ಭಯದಲ್ಲಿದ್ದ ಹರ್ಷ, ಅಮ್ಮಮ್ಮ ಮುಖದಲ್ಲಿ ಈಗ ನಗು ಕಾಣ್ತಿದೆ. ಭುವಿಗಾಗಿರೋ ಪೆಟ್ಟಿನಿಂದ ಹರ್ಷ ನೊಂದು ಹೋಗಿದ್ದ. ಇದಕ್ಕೆಲ್ಲಾ ಕಾರಣ ವರುಧಿನಿಯೇ ಎಂದು ಅವಳ ಮೇಲೂ ಕೋಪಕೊಂಡಿದ್ದ ಹರ್ಷ, ಭುವಿಗೆ ಏನಾದ್ರೂ ಆದ್ರೆ ನಾನು ಸುಮ್ಮನಿರೋದಿಲ್ಲ ಎಂದಿದ್ದ, ಅಲ್ಲದೇ ಇದಕ್ಕೆಲ್ಲಾ ನೀವೆ ಕಾರಣ ಎಂದು ವರುಧುನಿ ಮೇಲೆ ರೇಗಾಡಿದ್ದ ಹರ್ಷ, ಇದೀಗ ಡಾಕ್ಟರ್​ ಭುವಿ ಜೀವಕ್ಕೆ ಅಪಾಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Kannadathi Serial: ಹರಿದ ಬಟ್ಟೆ, ಹಣೆಯಲ್ಲಿ ರಕ್ತ, ಭುವಿ ಅವತಾರ ನೋಡಿ ಗಾಬರಿಯಾಗ್ಬೇಡಿ; ಅಸಲಿ ಕಥೆ ತಿಳಿಯಿರಿ

ಭುವಿಗೆ ಪ್ರಜ್ಞೆ ಬಂದಿದ್ದು, ಹರ್ಷ ದಿಲ್​ ಖುಷ್​

ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡ್ತಿದ್ದ ಭುವಿಗೆ ಇದೀಗ ಪ್ರಜ್ಞೆ ಬಂದಿದ್ದು, ಡಾಕ್ಟರ್​ ಕೂಡ ಭುವಿ ಜೀವಕ್ಕೆ ಅಪಾಯವಿಲ್ಲ ಎಂದಿದ್ದಾರೆ. ಭುವಿ ಕಣ್ಣು ಬಿಡ್ತಿದ್ದಂತೆ ಹರ್ಷನನ್ನು ನೋಡಿ ಹೇಗಿದ್ದೀರಾ ಎಂದು ಮಾತಾಡಿದ್ದಾಳೆ. ಇದಕ್ಕೆ ಉತ್ತರಿಸಿದ ಹರ್ಷ ಏನ್ರೀ ನನ್ನ ಕೇಳ್ತಿದ್ದಿರಾ ನೀವ್​ ಹೇಗಿದ್ದೀರಾ ಎಂದು ನಗುತ್ತಲೇ ಕೇಳಿದ್ದಾನೆ. ಬೇಗ ಹುಷಾರಾಗಿ ನಿಮ್ಮ ಮಾತುಗಳನ್ನ ಕೇಳ್ಬೇಕು ಎಂದು ಹರ್ಷ ಹುಸಿ ನಕ್ಕ. ಅಬ್ಬಾ ಭುವಿ ಕಣ್ಣು ಬಿಟ್ಳು ಅಂತ ಪ್ರೇಕ್ಷಕರು ಸಹ ಖುಷ್​ ಆಗಿದ್ದಾರೆ.

ಭುವಿ ಪ್ರಾಣ ತೆಗೆಯಲು ಬಂದವರನ್ನು ಕಂಡು ಹಿಡೀತಾಳಾ ವರುಧಿನಿ

ಭುವಿಯನ್ನು ಬೆಟ್ಟದಿಂದ ತಳ್ಳಿದ್ದಾರೆ ಅನ್ನೋ ಸತ್ಯವನ್ನು ಹರ್ಷನ ಮುಂದೆ ವರುಧಿನಿ ಬಾಯ್ಬಿಟ್ಟಿದ್ದಾಳೆ. ಇದಕ್ಕೆಲ್ಲಾ ನಾನು ಕಾರಣ ಅಲ್ಲ ಎಂದು ವರು ಹರ್ಷನ ಎದುರು ಜೋರಾಗಿ ಹೇಳಿದ್ದು, ಇದರ ಹಿಂದೆ ಸಾನಿಯಾ ಕೈವಾಡವಿದೆ ಅನ್ನೋ ಅನುಮಾನ ವರುಧಿನಿಗಿದ. ಹೀಗಾಗಿ ಸುಪಾರಿ ಕಿಲ್ಲರ್​ ಹಾಗೂ ಸುಪಾರಿ ಕೊಟ್ಟ ಸಾನಿಯಾಳನ್ನು ವರುಧಿನಿ ಸಾಕ್ಷಿ ಸಮೇತ ಹಿಡಿಯಲು ಕಾಯ್ತಿದ್ದಾಳೆ.

Kannadathi Serial: ಕನ್ನಡತಿ ಸೀರಿಯಲ್​ಗೆ ಮತ್ತೊಂದು ಕಿರೀಟ, ಹಿಂದಿಗೆ ಡಬ್ ಆಗುತ್ತಿದೆ ಕನ್ನಡ ಧಾರಾವಾಹಿ

ಭುವಿಯನ್ನು ಬೆಟ್ಟದಿಂದ ತಳ್ಳಿದವರನ್ನು ಕಂಡು ಹಿಡಿದು ಹರ್ಷನ ಮುಂದೆ ನಿಲ್ಲಿಸೋದಕ್ಕೆ ವರುಧಿನಿ ಸುಪಾರಿ ಕಿಲ್ಲರ್​ನನ್ನು ಹುಡುಕುತ್ತಿದ್ದಾಳೆ. ಇತ್ತ ಸುಪಾರಿ ಕಿಲ್ಲರ್ ಆಸ್ಪತ್ರೆಗೆ ಬಂದು ಭುವಿಯ ಉಸಿರು ನಿಲ್ಲಿಸಲು ಮುಂದಾಗಿದ್ದು, ಭುವಿಯನ್ನು ಯಾರು ಕಾಪಾಡ್ತಾರೆ ಅನ್ನೋದನ್ನು ಕಾದು ನೋಡ್ಬೇಕಿದೆ.
Published by:Pavana HS
First published: