ಯಾರ ಮನೆಗೆ ಹೋದರೂ ಅಲ್ಲಿ ಒಂದಲ್ಲ ಒಂದು ಸೀರಿಯಲ್(Serial) ಟಿವಿಯಲ್ಲಿ ಪ್ರಸಾರವಾಗತ್ತಲೇ ಇರುತ್ತವೆ. ಹೌದು. ನಮ್ಮ ಜನರಿಗೆ ಸಿನಿಮಾಗಿಂತ, ಸೀರಿಯಲ್ ಮೇಲೆ ಹೆಚ್ಚು ಪ್ರೀತಿ. ಯಾಕೆಂದರೆ ಸೀರಿಯಲ್ಗಳು ಜನರ ಜೀವನಕ್ಕೆ ಹತ್ತಿರುವಿರುತ್ತೆ. ಇನ್ನೂ ಕನ್ನಡಿಗರ ಮನೆ ಗೆದ್ದಿದ್ದ ‘ಕನ್ನಡತಿ’(Kannadathi) ಸೀರಿಯಲ್ ಕೂಡ ಅಚ್ಚುಮೆಚ್ಚು. ಪುಟ್ಟಗೌರಿ ಮದುವೆ ಬಳಿಕ ರಂಜನಿ ರಾಘವನ್(Ranjani Raghvan) ಈ ಸೀರಿಯಲ್ನಲ್ಲಿ ಬಣ್ಣ ಹಚ್ಚಿದ್ದರು. ಇದೆಲ್ಲರ ನಡುವೆ 'ಕನ್ನಡತಿ' ಧಾರಾವಾಹಿಯಲ್ಲಿ ಹರ್ಷ(Harsha), ಭುವನೇಶ್ವರಿಗೆ ಕೆಟ್ಟದು ಮಾಡುತ್ತ, ರತ್ನಮಾಲಾ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಸದಾ ಯೋಜನೆ ಹಾಕುವ ಪಾತ್ರದಲ್ಲಿ ನಟಿ ರಮೋಲಾ(Ramola) ಅಭಿನಯಿಸಿದ್ದರು. ಪಕ್ಕಾ ನೆಗೆಟಿವ್ ಶೇಡ್ ಆದ ಸಾನಿಯಾ ಪಾತ್ರವನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಆದರೆ ಈಗ ಈ ಪಾತ್ರದಿಂದ ನಟಿ ರಮೋಲಾ ಅವರು ಹೊರನಡೆದಿದ್ದಾರೆ. ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್(Character) ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು. ಈಗ ರಮೋಲಾ ಧಾರಾವಾಹಿ ತಂಡ ತೊರೆದಿದ್ದಾರೆ. ಏಕಾಏಕಿ ಈ ನಟಿ ಸೀರಿಯಲ್ ತೊರೆಯಲು ಕಾರಣವೇನು ಅಂತ ಸೀರಿಯಲ್ ಪ್ರಿಯರು ಕೇಳುತ್ತಿದ್ದಾರೆ. ತುಂಬ ಚೆನ್ನಾಗಿ ನಟಿಸುತ್ತಿದ್ದ ಈ ನಟಿ ಹೊರ ನಡೆಯಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ..
ರೆಮೋಲಾ ಔಟ್, ಆರೋಹಿ ನೈನಾ ಇನ್!
'ಕನ್ನಡತಿ' ಧಾರಾವಾಹಿಯಿಂದ ರಮೋಲಾಗೆ ಒಳ್ಳೆಯ ಖ್ಯಾತಿ ಸಿಕ್ಕಿತ್ತು. ವಿಲನ್ ಆದ್ರೂ ಸಾನಿಯಾರನ್ನು ಜನರು ಇಷ್ಟಪಟ್ಟಿದ್ದರು, ಅವರ ಹೆಸರಲ್ಲಿ ಫ್ಯಾನ್ ಪೇಜ್ಗಳು ಹುಟ್ಟಿಕೊಂಡಿದ್ದವು. ಈಗ ಸಾನಿಯಾ ಪಾತ್ರಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ. ಆರೋಹಿ ನೈನಾ ಎಂಬುವವರು ಸಾನಿಯಾ ಪಾತ್ರವನ್ನು ಮಾಡಲಿದ್ದಾರಂತೆ, ಈಗಾಗಲೇ ಅವರು ಧಾರಾವಾಹಿ ತಂಡ ಸೇರಿಕೊಂಡಿದ್ದು, ಶೂಟಿಂಗ್ ಕೂಡ ಆರಂಭಿಸಿದ್ದಾರೆ. ಶೀಘ್ರದಲ್ಲಿಯೇ ಆರೋಹಿ 'ಕನ್ನಡತಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಮೋಲಾ ‘ಕನ್ನಡತಿ’ಯಿಂದ ಹೊರ ನಡೆದಿರುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿದೆ.ಈಗ ಈ ಸ್ಥಾನವನ್ನು ‘ಹೂ ಮಳೆ’ ಖ್ಯಾತಿಯ ಆರೋಹಿ ನೈನಾ ತುಂಬಿದ್ದಾರೆ.
ಇದನ್ನು ಓದಿ: ಏನ್ ಲಕ್ ಗುರೂ.. ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ?
ಬೇರೆ ಭಾಷೆಯಿಂದ ಬಂತು ಆಫರ್!
ಬೇರೆ ಭಾಷೆಯಿಂದ ಆಫರ್ ಬಂದ ಕಾರಣ ಸಾನಿಯಾ ಈ ಧಾರಾವಾಹಿ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.‘ಬಿಗ್ ಬಾಸ್ ಸೀಸನ್ 8’ ಪೂರ್ಣಗೊಳ್ಳುತ್ತಿದ್ದಂತೆ ಮಿನಿ ಬಿಗ್ ಬಾಸ್ ಆರಂಭವಾಗಿತ್ತು. ಕಲರ್ಸ್ ಕನ್ನಡ ವಾಹಿನಿ ಸೀರಿಯಲ್ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಇದರಲ್ಲಿ ರಮೋಲಾ ಕೂಡ ಇದ್ದರು. ಇನ್ನೂ 'ಕನ್ನಡತಿ' ಧಾರಾವಾಹಿಯಲ್ಲಿ ನಟ ಕಿರಣ್ರಾಜ್, ರಂಜಿನಿ ರಾಘವನ್, ಚಿತ್ಕಲಾ ಬಿರಾದಾರ್ ಮುಂತಾದವರು ನಟಿಸುತ್ತಿದ್ದಾರೆ. ನಟ ಕಿರಣ್ ರಾಜ್ ಅವರು ಹರ್ಷ ಆಗಿ, ರಂಜನಿ ರಾಘವನ್ ಅವರು ಭುವನೇಶ್ವರಿ ಆಗಿ, ಚಿತ್ಕಲಾ ಬಿರಾದಾರ್ ಅವರು ರತ್ನಮಾಲಾ ಆಗಿ ನಟಿಸುತ್ತಿದ್ದಾರೆ. ಯಶ್ವಂತ್ ಪಾಂಡು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನು ಓದಿ : ನಟಿಸೋಕೆ ತುಂಬಾ ಇಷ್ಟ.. ಒಂದೇ ಒಂದು ಚಾನ್ಸ್ ಕೊಡಿ ಅಂದಿದ್ಯಾಕೆ ಜಗ್ಗೇಶ್: ಇಲ್ಲಿದೆ ವಿಡಿಯೋ..
500 ಎಪಿಸೋಡ್ ಪೂರೈಸಿದ ‘ಕನ್ನಡತಿ’
'ಕನ್ನಡತಿ' ಧಾರಾವಾಹಿ ಇತ್ತೀಚೆಗೆ 500 ಎಪಿಸೋಡ್ ಪೂರ್ಣಗೊಳಿಸಿದೆ. ಕನ್ನಡ, ಸಮಾಜದ ಕುರಿತು 'ಕನ್ನಡತಿ' ಧಾರಾವಾಹಿ ಸಾಮಾಜಿಕ ಸಂದೇಶ ಸಾರುತ್ತ, ಜಾಗೃತಿ ಮೂಡಿಸುತ್ತಿದೆ. ಕನ್ನಡ ಕಿರುತೆರೆಯಲ್ಲಿ 'ಕನ್ನಡತಿ' ನಿಜಕ್ಕೂ ವಿಭಿನ್ನವಾಗಿ ಮೂಡಿ ಬರುತ್ತಿದೆ. ಅದರಲ್ಲೂ ಸಂಭಾಷಣೆ, ಚಿತ್ರಕಥೆ ಜನರ ಮನಸ್ಸನ್ನು ತಲುಪಿದೆ. ಹೀಗಾಗಿ ಜನರು ಪ್ರತಿದಿನ ಈ ಕನ್ನಡತಿ ಧಾರವಾಹಿಯನ್ನು ಮಿಸ್ ಮಾಡದೇ ನೋಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ