ಕನ್ನಡತಿ (Kannadathi) ಧಾರಾವಾಹಿಯ (Serial) ಕೊನೆಯ ಸಂಚಿಕೆ ಫೆಬ್ರವರಿ 3ರಂದು ಪ್ರಸಾರವಾಗಿ ಧಾರಾವಾಹಿ ಮುಕ್ತಾಯವಾಗುತ್ತಿದೆ. ಸಿಟಿಯ ಹುಡುಗ ಹಾಗೂ ಹಳ್ಳಿಯಿಂದ ಬಂದ ಕನ್ನಡ ಟೀಚರ್ನ ಸುಂದರವಾದ ಪ್ರೇಮ ಕಥೆಯನ್ನು (Love Story) ಕನ್ನಡ ಸೀರಿಯಲ್ ಪ್ರೇಕ್ಷಕರು ಪ್ರೀತಿಯಿಂದ ನೋಡಿ ಆನಂದಿಸಿದ್ದಾರೆ. ಸಕ್ಸಸ್ಫುಲ್ ಆಗಿ ನಡೆದು ಬಂದ ಧಾರಾವಾಹಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಎಲ್ಲ ವರ್ಗದ ಜನರಿಗೂ ಮೆಚ್ಚುಗೆಯಾದ ಸೇರಿಯಲ್ ಇದು. ಅಗತ್ಯವಿದ್ದಷ್ಟೇ ಲವ್, ರೊಮ್ಯಾನ್ಸ್, ಡ್ರಾಮಾ ಸೇರಿಸಿದ್ದು ಕುಟುಂಬ (Family) ಸಮೇತ ನೋಡಿ ಆನಂದಿಸಬಹುದಾಗಿದ್ದ ಈ ಧಾರಾವಾಹಿಯನ್ನು ಗಂಡು ಮಕ್ಕಳೂ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು ಎನ್ನುವುದು ವಿಶೇಷ.
ಇದೀಗ ಧಾರವಾಹಿ ಕೊನೆಯ ಹಂತದಲ್ಲಿದೆ. ಕೊನೆಯ ಎಪಿಸೋಡ್ ಪ್ರಸಾರವಾಗುವ ಮೊದಲು ಸೀರಿಯಲ್ ಹೀರೋಯಿನ್ ರಂಜನಿ ರಾಘವನ್ ಅವರು ಭಾವುಕವಾದ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ.
ನಮ್ಮೆಲ್ಲರ ಹೆಮ್ಮಯ ಧಾರಾವಾಹಿ ‘ಕನ್ನಡತಿ’ಯ ಕಡೆಯ ಸಂಚಿಕೆ ಇಂದು ಪ್ರಸಾರವಾಗ್ತಿದೆ. “ಇನ್ನಷ್ಟು ಸಂಚಿಕೆ ಬರಬಹುದಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ತೀವಿ” ಅಂತ ಹೇಳುವಾಗಲೇ ಗೌರವದಿಂದ ಮುಕ್ತಾಯ ಕಾಣುತ್ತಿರೋದು ನಮಗೆಲ್ಲಾ ಹೆಮ್ಮೆಯ ವಿಚಾರ. ಮುಂದೆ ಅರ್ಥಪೂರ್ಣವಾದ ಪಾತ್ರಗಳ ಮೂಲಕ, ಒಳ್ಳೆಯ ಬರವಣಿಗೆ ಹೊಂದಿರೋ ಪ್ರಾಜೆಕ್ಟ್ ಗಳ ಮೂಲಕ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಿಮ್ಮ ನಿರಂತರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು. ಪ್ರೀತಿಯಿಂದ, ರಂಜನಿ ರಾಘವನ್ ಎಂದು ಬರೆದು ನಟಿ ಪೋಸ್ಟ್ ಶೇರ್ ಮಾಡಿದ್ದಾರೆ.
View this post on Instagram
ರಂಜನಿ ರಾಘವನ್ ಸುಂದರವಾದ ಸೀರೆ ಉಟ್ಟು ಟೆರೇಸ್ನಲ್ಲಿ ಸಂಜೆಯ ಹೊತ್ತಲ್ಲಿ ಕೈಯಿಂದ ಲವ್ ಸಿಂಬಲ್ ಮಾಡಿ ಬೆನ್ನು ಮಾಡಿ ನಿಂತಿರುವ ಫೋಟೋ ಶೇರ್ ಮಾಡಿದ್ದಾರೆ. ಅವರು ಬರೆದಂತಹ ಪೋಸ್ಟ್ಗೆ ಅವರು ಅಪ್ಲೋಡ್ ಮಾಡಿರುವ ಫೋಟೋ ಸಿಂಕ್ ಆಗಿದೆ.
ನೆಟ್ಟಿಗರೇನಂದ್ರು?
ನಟಿಯ ಪೋಸ್ಟ್ಗೆ 13 ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಕೊಟ್ಟಿದ್ದಾರೆ. 307 ಜನರು ಈ ಪೋಸ್ಟ್ಗೆ ಕಮೆಂಟ್ ಕೂಡಾ ಮಾಡಿದ್ದಾರೆ. ಇಲ್ಲಿಯ ವರೆಗೆ ಭುವಿ ಪಾತ್ರವನ್ನ ಜೀವಿಸಿದ್ದೀರಿ. ನಿಮ್ಮಿಂದ ಭುವಿ ನಮಗೆ ಇನ್ನಷ್ಟು ಹತ್ತಿರ. ನಿಮ್ಮೆಲ್ಲ ಮುಂದಿನ ಯೋಜನೆಗಳಿಗೆ ಶುಭವಾಗಲಿ. ನಿಮ್ಮನ್ನು ಇನ್ನಷ್ಟು ತೆರೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಹಿರಿತೆರೆಯಲ್ಲಿ ಯಶಸ್ಸು ನಿಮ್ಮದಾಗಲಿ. ಶುಭವಾಗಲಿ ಎಂದು ಅಭಿಮಾನಿಯೊಬ್ಬರು ಹಾರೈಸಿದ್ದಾರೆ.
ಇದನ್ನೂ ಓದಿ: Kannadathi serial: ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ? ಹಲವು ವಿಶೇಷತೆಗಳಿಂದ ಕೂಡಿದೆ!
ನನಗೆ ನೀವು ಕತೆ, ಚಿತ್ರ ಕತೆ ಬರೆಯೋ ಸೀರಿಯಲ್ ನೋಡೋ ಆಸೆ. ಅದು ಆದಷ್ಟು ಬೇಗ ಈಡೇರಲಿ ಎಂದು ಮತ್ತೊಬ್ಬ ಅಭಿಮಾನಿ ರಂಜನಿ ಅವರ ಸೀರಿಯಲ್ ಡೈರೆಕ್ಷನ್ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ನಿಮ್ಮನ್ನು ನಿಮ್ಮ ಪಾಠವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಟೀಚರ್. ದಾರಿ ಎಂದ ಮೇಲೆ ನಿಲ್ದಾಣ, ಕತೆ ಎಂದ ಮೇಲೆ ಅಂತ್ಯ, ಧಾರಾವಾಹಿ ಎಂದ ಮೇಲೆ ಕೊನೆ ಸಂಚಿಕೆ ಅನಿವಾರ್ಯ ಮತ್ತೆ ನಿಮ್ಮನ್ನ ತೆರೆ ಮೇಲೆ ನೋಡಲು ಕಾತುರರಾಗಿದ್ದೀವಿ. ಮುಂದಿನ ನಿಮ್ಮ ಎಲ್ಲ ಪ್ರಾಜೆಕ್ಟ್ಗಳಿಗೂ ಒಳ್ಳೆಯದಾಗಲಿ ಎಂದು ಮತ್ತೊಬ್ಬ ಅಭಿಮಾನಿ ಹಾರೈಸಿದ್ದಾರೆ.
ಅಮ್ಮಮ್ಮ, ಹರ್ಷ, ಭುವಿ, ಸಾನ್ಯಾ, ವರೂಧಿನಿ ಸೀರಿಯಲ್ನಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದರು. ಕುಟುಂಬ, ಬ್ಯುಸಿನೆಸ್, ಲವ್ಸ್ಟೋರಿ, ಆಸ್ತಿಗಾಗಿ ಸಂಚು ಇವೆಲ್ಲವೂ ಸೇರಿ ಸೀರಿಯಲ್ ಸುಂದರವಾಗಿ ಮೂಡಿ ಬಂದಿತ್ತು.
ಸೀರಿಯಲ್ ಕೊನೆಗೆ ಕನ್ನಡ ಪಾಠ
ರಂಜನಿ ರಾಘವನ್ ಅವರು ಪ್ರತಿ ಎಪಿಸೋಡ್ ಕೊನೆಯಲ್ಲಿ ಕನ್ನಡ ಪಾಠ ಮಾಡುತ್ತಿದ್ದರು. ಎಲ್ಲರೂ ಮಾಡುವ ಸಿಂಪಲ್ ತಪ್ಪುಗಳನ್ನು ಅವರು ತಿಳಿಸಿ ತಿದ್ದಿಕೊಡುತ್ತಿದ್ದರು. ಈ ಕಾನ್ಸೆಪ್ಟ್ ಕೂಡಾ ಸೀರಿಯಲ್ ಪ್ರಿಯರಿಗೆ ಇಷ್ಟವಾಗಿತ್ತು. ಹೊಸ ಪದಗಳು, ಪರ್ಯಾಯ ಪದಗಳು, ಅಕ್ಷರ ತಪ್ಪುಗಳಾಗುವಂತಹ ಕನ್ಫ್ಯೂಸಿಂಗ್ ಪದಗಳು ಎಲ್ಲವನ್ನೂ ಈ ಸೀರಿಯಲ್ ಕೊನೆಯಲ್ಲಿ ತೋರಿಸಿಕೊಡುಲಾಗುತ್ತಿತ್ತು. ಕನ್ನಡದ ಧಾರಾವಾಹಿ ಮಟ್ಟಿಗೆ ಹೊಸ ಪ್ರಯೋಗವಾಗಿದ್ದ ಈ ಒಂದು ವಿಚಾರ ವ್ಯಾಪಕ ಮೆಚ್ಚುಗೆಯನ್ನೂ ಗಳಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ