Kannadathi Serial: ರಂಜನಿ ರಾಘವನ್ ಬಾವಿಗೆ ದೂಕಿದ ಸಹನಟಿ.. ಜೆಸಿಬಿ-ಹಗ್ಗದ ಸಹಾಯದಿಂದ ಮೇಲೆತ್ತಿದ ಸಿಬ್ಬಂದಿ!

ನಟಿ ಭುವಿ(Bhuvi) ಪಾತ್ರಧಾರಿ ರಂಜನಿ ರಾಘವನ್(Ranjani Ragahvan) ಬಾವಿ(Well)ಗೆ ಬಿದ್ದಿದ್ದು, ಜೆಸಿಬಿ ಮೂಲಕ ಅವರನ್ನು ಮೇಲೆತ್ತಲಾಗಿದ್ದು ತಮಗಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಇದೆನಪ್ಪಾ ಅಂತ ಶಾಕ್ ಆಗಬೇಡಿ. ಇದು ಕೇವಲ ಶೂಟಿಂಗ್(Shooting)​ ಅಷ್ಟೆ

ನಟಿ ರಂಜನಿ ರಾಘವನ್​

ನಟಿ ರಂಜನಿ ರಾಘವನ್​

  • Share this:
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ(Serial) ಕನ್ನಡತಿ(Kannadathi) ಧಾರಾವಾಹಿ ಎಲ್ಲರ ಮೆಚ್ಚುಗೆ ಗಳಿಸಿದೆ. ಈ ಸೀರಿಯಲ್​ನ ಪ್ರತಿಯೊಂದು ಎಪಿಸೋಡ್(Episode)​ ಬಗ್ಗೆ ಜನ ಮಾತನಾಡಿಕೊಳ್ಳುತ್ತಾರೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಜನರ ಮನಸ್ಸಿನಲ್ಲಿ ಇದೆ. ಇದೀಗ ಈ ಎಲ್ಲಿ ನೋಡಿದರೂ, ಕನ್ನಡತಿ ಬಗ್ಗೆಯೇ ಸುದ್ದಿ ಅದೇನು ಅಂತೀರಾ? ಮುಂದೆ ನೀವೇ ನೋಡಿ.. ನಟಿ ಭುವಿ(Bhuvi) ಪಾತ್ರಧಾರಿ ರಂಜನಿ ರಾಘವನ್(Ranjani Ragahvan) ಬಾವಿ(Well)ಗೆ ಬಿದ್ದಿದ್ದು, ಜೆಸಿಬಿ ಮೂಲಕ ಅವರನ್ನು ಮೇಲೆತ್ತಲಾಗಿದ್ದು ತಮಗಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಇದೆನಪ್ಪಾ ಅಂತ ಶಾಕ್ ಆಗಬೇಡಿ. ಇದು ಕೇವಲ ಶೂಟಿಂಗ್(Shooting)​ ಅಷ್ಟೆ. ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಅವರು ರೋಪ್ ಕಟ್ಟಿಕೊಂಡು ಬಾವಿಗೆ ಹಾರುವ ದೃಶ್ಯವು ಇದಾಗಿದ್ದು ಯಾವುದೇ ನೈಜ ಘಟನೆ ಆಗಿರುವುದಿಲ್ಲ, ಇದು ಕೇವಲ ಚಿತ್ರೀ ಕರಣ ಮಾತ್ರ ಮತ್ತು ಈ ವಿಡಿಯೋವನ್ನು ರಂಜನಿ ರಾಘವನ್ ಅವರು ಸ್ವತಃ ತಮ್ಮ ಇನ್​ಸ್ಟಾಗ್ರಾಂ(Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

60 ಅಡಿ ಆಳದ ಬಾವಿಗೆ ಬಿದ್ದ ರಂಜನಿ ರಾಘವನ್​!‘

ಸುಮಾರು ಅರವತ್ತು ಅಡಿ ಆಳದ ಬಾವಿಗೆ ಭುವಿ ಬಿದ್ದಿದ್ದಾರೆ. ಧಾರಾವಾಹಿಯ ಕತೆಯಲ್ಲಿ ಸದ್ಯ ಹರ್ಷ ಹಾಗೂ ಭುವಿ ನಡಿವಿನ ಪ್ರೀತಿಯ ವಿಚಾರ ವರೂಧಿನಿಗೆ ತಿಳಿದಿದೆ. ವರೂ ತನ್ನ ಸ್ನೇಹಿತೆಯಿಂದಲೇ ಹರ್ಷನನ್ನು ಕಿತ್ತುಕೊಳ್ಳುವ ಸಲುವಾಗಿ ಹಸಿರುಪೇಟೆಯ ಭುವಿ ಮನೆಗೆ ಆಗಮಿಸಿದ್ದು ಸಂಚಿಕೆಗಳು ಕುತೂಹಲ ಮೂಡಿಸಿದೆ.. ಅಂತಹುದೇ ಒಂದು ಸಂದರ್ಭದಲ್ಲಿ ವರೂ ಭುವಿಯನ್ನು ಬಾವಿಗೆ ತಳ್ಳುವ ದೃಶ್ಯವಿದ್ದು ಆ ದೃಶ್ಯಕ್ಕಾಗಿ ಭುವಿ ಬಾವಿಗೆ ಬೀಳುವ ಸಾಹಸ ದೃಶ್ಯದ ಚಿತ್ರೀಕರಣದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.



ಡೂಪ್​ ಬಳಸದೇ ರಿಯಲ್​ ಸ್ಟಂಟ್ ಮಾಡಿದ ಕನ್ನಡತಿ!

ಯಾವುದೇ ಡೂಪ್ ಆಗಲಿ ಅಥವಾ ಬೊಂಬೆಯನ್ನಾಗಲಿ ಬಳಸದೇ ರಂಜನಿ ಈ ಆ್ಯಕ್ಷನ್​ ಸೀನ್​ ಮಾಡಿದ್ದಾರೆ. ಇದು ಅವರಿಗೆ ತಮ್ಮ ಕೆಲಸದ ಮೇಲಿನ ಶ್ರದ್ಧೆಯನ್ನು ತೋರುತ್ತದೆ.‌. ಇನ್ನು ಸಧ್ಯ ಬಾವಿಗೆ ಬಿದ್ದ ಭುವಿಯನ್ನು ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಮೇಲೆತ್ತಲಾಗಿದ್ದು ವೀಡಿಯೋ ಹಂಚಿಕೊಂಡಿರುವ ಭುವಿ ತೆರೆ ಹಿಂದಿನ ಶ್ರಮ ತೆರೆ ಮೇಲೆ ಬರಲಿದೆ ಎಂದು ಬರೆದು ಪೋಸ್ಟ್ ಮಾಡಿದ್ದು ವೀಡಿಯೋ ನೋಡಿದ ಅಭಿಮಾನಿಗಳು ಭುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೊತೆ ಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ನಿಜ ಜೀವನ ಸಖತ್ ಕಲರ್​ಫುಲ್..!

ಸಿಕ್ಕಾಪಟ್ಟೆ ಫೇಮಸ್​ ಕನ್ನಡತಿ ಧಾರಾವಾಹಿ!

ಕನ್ನಡತಿ ಧಾರಾವಾಹಿ ಕಳೆದ ಎರಡು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಕಿರುತೆರೆ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿದೆ.. ಅದರಲ್ಲೂ ಡಿಜಿಟಲ್ ನಲ್ಲಿ ಟಾಪ್ ನಲ್ಲಿರುವ‌ ಕನ್ನಡತಿ ಧಾರಾವಾಹಿ ಕನ್ನಡ ಕಿರುತೆರೆಯ ಟಾಪ್ ಹತ್ತು ಧಾರಾವಾಹಿಗಳ ಪಟ್ಟಿಯಲ್ಲಿಯೂ ಸಹ ಒಂದಾಗಿದ್ದು ತನ್ನ ವಿಭಿನ್ನ ಕಥಾ ನಿರೂಪಣಾ ಶೈಲಿ ಹಾಗೂ ಸಂಭಾಷಣೆ ಹಾಗೂ ಧಾರಾವಾಹಿಯಲ್ಲಿ ಭುವಿ ಹಾಗೂ ಹರ್ಷ ನಡುವಿನ ಪ್ರಬುದ್ಧ ಪ್ರೀತಿಯಿಂದಾಗಿ ಜನರ ಮನಗೆದ್ದಿರೋದು ನಿಜ.

ಇದನ್ನೂ ಓದಿ: ತೆಲುಗು ಸೀರಿಯಲ್​ನತ್ತ ಮುಖ ಮಾಡಿದ ಕಮಲಿ, ಅಮೂಲ್ಯ ಗೌಡ ನಿಜ ಜೀವನದಲ್ಲಿ ಹೇಗಿರ್ತಾರೆ ಗೊತ್ತಾ?

ಸೀರಿಯಲ್​ ಮೂಲಕವೇ ಖ್ಯಾತಿ ಪಡೆದ ಕಲಾವಿದರು!

ಕನ್ನಡತಿ ಮೂಲಕ ಈ ಧಾರಾವಾಹಿಯ ಎಲ್ಲಾ ಕಲಾವಿದರೂ ಸಹ ಖ್ಯಾತಿಯನ್ನು ಗಳಿಸಿದ್ದು ಕನ್ನಡತಿ ಧಾರಾವಾಹಿಯ ಪಾತ್ರದ ಮೂಲಕವೇ ಗುರುತಿಸಿಕೊಳ್ಳುವಂತಾಗಿದ್ದು ಯಶಸ್ಸನ್ನು ಪಡೆದಿದ್ದಾರೆ.. ಇನ್ನು ಇತ್ತ ಪುಟ್ಟ ಗೌರಿ ಮದುವೆಯಲ್ಲಿ ಗೌರಿಯಾಗಿದ್ದ ರಂಜನಿ ರಾಘವನ್ ಕೆಲ ವರ್ಷಗಳ ಬ್ರೇಕ್ ನ ನಂತರ ಕನ್ನಡತಿ ಭುವಿಯಾಗಿ ಎಂಟ್ರಿ ಕೊಟ್ಟು ಮತ್ತೊಮ್ಮೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದರು, ಈ ಸೀರಿಯಲ್​ ಶುರುವಾಗುತ್ತಿದ್ದಂತೆ ಟಿವಿ ಮುಂದೆ ಬಂದು ಪ್ರೇಕ್ಷಕರು ಕೂರುತ್ತಾರೆ.
Published by:Vasudeva M
First published: