Kannadathi Serial: ಕನ್ನಡತಿ ಸೀರಿಯಲ್​ನಲ್ಲಿ ಬಿಗ್ ಟ್ವಿಸ್ಟ್, ಅಜ್ಜಿ ವಿರುದ್ಧವೇ ತಿರುಗಿಬಿದ್ದ ಭುವಿ..!

‘ಕನ್ನಡತಿ‘ (Kannadathi) ಸೀರಿಯಲ್ (Serial) ಸದ್ಯ ಸಖತ್​ ಟ್ವಿಸ್ಟ್​ ಎಂಡ್ ಟರ್ನ್ ಪಡೆದುಕೊಳ್ಳುತ್ತಿದೆ. ಇದರ ನಡುವೆ ಧಾರಾವಾಹಿಯು ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಸೀರಿಯಲ್​ ನ ಎಲ್ಲಾ ಪಾತ್ರಗಳು ಇದೀಗ ಭುವಿಯ ಹುಟ್ಟೂರು ಹಸಿರುಪೇಟೆಗೆ (Hasirupete) ಬಂದು ತಲುಪಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ‘ (Kannadathi) ಸೀರಿಯಲ್ (Serial) ಸದ್ಯ ಸಖತ್​ ಟ್ವಿಸ್ಟ್​ ಎಂಡ್ ಟರ್ನ್ ಪಡೆದುಕೊಳ್ಳುತ್ತಿದೆ. ಇದರ ನಡುವೆ ಧಾರಾವಾಹಿಯು ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಸೀರಿಯಲ್​ ನ ಎಲ್ಲಾ ಪಾತ್ರಗಳು ಇದೀಗ ಭುವಿಯ ಹುಟ್ಟೂರು ಹಸಿರುಪೇಟೆಗೆ (Hasirupete) ಬಂದು ತಲುಪಿದ್ದಾರೆ. ಹೌದು, ಈಗಾಗಲೇ ಹೆಣ್ಣು ಕೇಳೋಕೆ ಹರ್ಷ (Harsha), ರತ್ನಮಾಲಾ ಹಾಗೂ ಹರ್ಷನ ತಂಗಿ ಸುಚಿ ಹಸಿರುಪೇಟೆಗೆ ಬಂದಿದ್ದು, ಇದೀಗ ಭುವಿಯನ್ನು ಹುಡುಕಿಕೊಂಡು ವರುಧಿನಿ ಸಹ ಹಸಿರುಪೇಟೆ ತಲುಪಿದ್ದಾಳೆ. ಇವರಷ್ಟೇ ಅಲ್ಲದೇ ಭುವಿ ಸಹೋದರಿ ಬಿಂದುಗೆ ಗಂಡು ನೋಡುವ ಕಾರ್ಯಕ್ರಮ ಇದ್ದುದ್ದರಿಂದ ಬಿಂದು ಹಾಗೂ ಭುವಿ ಹಸಿರುಪೇಟೆಗೆ ಬಂದಿದ್ದು, ಕಥೆಗೆ ಸಖತ್​ ಟ್ವಿಸ್ಟ್​ ಸಿಕ್ಕಂತಾಗಿದೆ. ಇದರ ನಡುವೆ ಮೊದಲ ಬಾರಿಗೆ ಭುವಿ ಅಜ್ಜಿ ಮಂಗಳಮ್ಮನ ವಿರುದ್ಧ ತಿರುಗಿಬೀಳುವ ಸೂಚನೆಯನ್ನು ನೀಡಿದ್ದಾಳೆ.

ಹೆಣ್ಣು ಕೇಳಲು ಮಂಗಳಮ್ಮನ ಮನೆಗೆ ಬಂದ ಹರ್ಷ:

ಹೆಣ್ಣು ಕೇಳವ ಸಲುವಾಗಿ ಹಾಗೂ ನಿಶ್ಚಿತಾರ್ಥಕ್ಕಾಗಿ ಹರ್ಷ ಹಾಗೂ ರತ್ನಮಾಲಾ ಮಂಗಳಮ್ಮನ ಮನೆಗೆ ಬಂದಿದ್ದಾರೆ. ಆದರೆ ಮಂಗಳಮ್ಮ ಬಂದ ಹರ್ಷ ಅವರನ್ನು ಸತ್ಕಾರ ಮಾಡುವ ಬದಲಿಗೆ ಅವಮಾನ ಮಾಡಿದ್ದಾಳೆ. ಇದರಿಂದ ಬೇಸರಗೊಂಡ ರತ್ನಮಾಲಾ ಮತ್ತು ಹರ್ಷ ಮಂಗಳಮ್ಮನ ಮನೆಯಿಂದ ಹೊರ ನಡೆದಿದ್ದಾರೆ. ಮಂಗಳಮ್ಮನ ಆಸೆಯಂತೆ ಭುವಿಯನ್ನು ಊರಿನ ಅಕ್ಕಿಮಂಡಿ ಸಾಹುಕಾರನ ಮಗನಿಗೆ ನೀಡಬೇಕು ಎಂದು ಅಂದುಕೊಂಡಿದ್ದಳು. ಹರ್ಷ ಮನೆಯಿಂದ ಹೊರ ನಡೆಯುತ್ತಿದ್ದಂತೆ ಭುವಿಯನ್ನು ನೋಡೋಕೆ ಅಕ್ಕಿಮಂಡಿ ಸಾಹುಕಾರನ ಮಗ ಕುಟುಂಬ ಸಮೇತ ಬಂದಿದ್ದಾರೆ. ಅವರನ್ನು ಮಂಗಳಮ್ಮ ಸಂತಸದಿಂದ ಸ್ವಾಗತಿಸಿದ್ದಾಳೆ.

ಅಜ್ಜಿಯ ವಿರುದ್ಧ ತಿರುಗಿಬಿದ್ದ ಭುವಿ:

ಮಂಗಳಮ್ಮ ರತ್ನಮಾಲಾ ಮತ್ತು ಹರ್ಷ ಅವರನ್ನು ಅವಮಾನಿಸಿದ್ದು ಭುವಿಗೆ ಗೊತ್ತಾಗಿದೆ. ಇದರಿಂದ ಭುವಿಗೂ ಬೇಸರವಾಗಿದ್ದು, ಹೊರನಡೆದಿದ್ದ ಹರ್ಷ ಮತ್ತು ರತ್ನಮಾಲಾ ಅವರನ್ನು ಮತ್ತೆ ವಾಪಸ್ಸ್ ಕರೆತಂದಿದ್ದಾಳೆ. ಅಲ್ಲದೇ ಮನೆಯೊಳಗೆ ಕುಳಿತುಕೊಳ್ಳುವಂತೆ ಹೇಳಿದ್ದಾಳೆ. ಅಷ್ಟರೊಳಗಾಗಿ ಅಜ್ಜಿ ಮಂಗಳಮ್ಮ ಅಕ್ಕಿಮಂಡಿ ಸಾಹುಕಾರನಿಗೆ ತನ್ನ 4 ಗುಂಟೆ ಜಮೀನನ್ನು ಅಡವಿಟ್ಟು 5 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ. ಈ ವಿಚಾರ ಕೇಳಿ ಭುವಿ ಸಹ ಅಜ್ಜಿಯ ಮೇಲೆ ಸಿಟ್ಟಾಗಿದ್ದು, ಅಜ್ಜಿ ವಿರುದ್ಧವಾಗಿ ನಡೆದುಕೊಂಡಿದ್ದಾಳೆ. ಅಲ್ಲದೇ ಅಜ್ಜಿ ಪಡೆದ ಹಣವನ್ನು ಅಕ್ಕಿಮಂಡಿ ಸಾಹುಕಾರನಿಗೆ ವಾಪಸ್ಸ್ ನೀಡಿದ್ದಾಳೆ. ಭುವಿಯ ಈ ನಿರ್ಧಾರದಿಂದ ಮಂಗಳಮ್ಮ ನಿಜಕ್ಕೂ ಶಾಕ್​ ಆಗಿದ್ದಾಳೆ.

ಇದನ್ನೂ ಓದಿ: Kannadathi Serial: ಹೆಣ್ಣು ಕೇಳಲು ಹಸಿರುಪೇಟೆಗೆ ಬಂದ ಹರ್ಷ, ನಡೆಯುತ್ತಾ ಭುವಿ ಜೊತೆಗಿನ ನಿಶ್ಚಿತಾರ್ಥ?

ಅಚ್ಚರಿ ಮೂಡಿಸಿದ ವರುಧಿನಿ ನಡೆ:

ಇಷ್ಟೆಲ್ಲಾ ರಂಪ ರಾಮಾಯಣ ನಡೆಯುತ್ತಿದ್ದ ನಡುವೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮನೆಗೆ ಬಂದ ಅಕ್ಕಿಮಂಡಿ ಸಾಹುಕಾರನ ಮನಗನಿಕಗೆ ಭುವಿ ಸ್ನೇಹಿತೆ ವರುಧಿನಿ ಪ್ರಶ್ನೆಯೊಂದನ್ನು ಕೇಳಿದ್ದಾಳೆ. ಹೌದು, ವರುಧಿಸಿ ಅಕ್ಕಿಮಂಡಿ ಸಾಹುಕಾರನ ಮಗನಿಗೆ, ‘ಮದುವೆ ಆದ ಬಳಿಕ ಭುವಿ ಕೆಲಸ ಮಾಡಬಹುದೋ ಅಥವಾ ಬೇಡವೋ’ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಅಕ್ಕಿಮಂಡಿ ಸಾಹುಕಾರನ ಮಗ ಇಲ್ಲ ಎಂದು ಉತ್ತರ ನೀಡಿದ್ದಾನೆ. ಹಾಗಾದರೆ, ನಾನು ನನ್ನ ಗೆಳೆತಿಯನ್ನು ಇಂತಹ ವ್ಯಕ್ತಿಗೆ ಕೊಡುವುದಿಲ್ಲ ಎಂದು ಹೇಳಿದ್ದಾಳೆ. ವರುಧಿನಿಯ ಈ ನಡೆ ಸದ್ಯ ಎಲ್ಲರಲ್ಲಿಯೂ ಅಚ್ಚರಿಯನ್ನು ಮೂಡಿಸಿದೆ.

ಇದನ್ನೂ ಓದಿ:  Kannadathi Serial: ರಂಜನಿ ರಾಘವನ್ ಬಾವಿಗೆ ದೂಕಿದ ಸಹನಟಿ.. ಜೆಸಿಬಿ-ಹಗ್ಗದ ಸಹಾಯದಿಂದ ಮೇಲೆತ್ತಿದ ಸಿಬ್ಬಂದಿ!

ಮರಾಠಿಗೆ ರೀಮೇಕ್​ ಆಗುತ್ತಿದೆ ‘ಕನ್ನಡತಿ‘:

ಹೌದು, ಕನ್ನಡತಿ ಸೀರಿಯಲ್ ಇದೀಗ ಮರಾಠಿ ಭಾಷೆಗೆ ರೀಮೇಕ್ ಆಗುತ್ತಿದೆ. ಮರಾಠಿಯಲ್ಲಿ‘ಭಾಗ್ಯ ದಿಲೆ ತು ಮಲಾ’ ಹೆಸರಿನಲ್ಲಿ ಪ್ರಸಾರಗೊಳ್ಳಲಿದೆ. ಈಗಾಗಲೇ ಇದರ ಪ್ರೋಮೋ ಪ್ರಸಾರವಾಗುತ್ತಿದ್ದು, ಮರಾಠಿಗರ ಮನ ಗೆದ್ದಿದೆ. ಕಲರ್ಸ್ ಮರಾಠಿಯಲ್ಲಿ ಏಪ್ರಿಲ್ 4 ರಿಂದ ರಾತ್ರಿ 9.30ಕ್ಕೆ ‘ಭಾಗ್ಯ ದಿಲೆ ತು ಮಲಾ’ ಧಾರಾವಾಹಿ ಪ್ರಸಾರವಾಗಲಿದೆ.
Published by:shrikrishna bhat
First published: