Kannadathi: ಸಾನಿಯಾ ಮೇಲುಗೈ, ಭುವಿ ಕಣ್ಣೀರು; ಹರ್ಷನ ಹೃದಯ ಛಿದ್ರ ಛಿದ್ರ; ಕನ್ನಡತಿಗೆ ಇದೆಂಥಾ ಕಷ್ಟ ದೇವರೇ?

ತನ್ನಿಂದಲೇ ಮಡದಿ ನೆಚ್ಚಿನ ಕೆಲಸಕ್ಕೆ ರಾಜೀನಾಮೆ ಕೊಡುವಂತಾಯ್ತು ಅಲ್ಲವಾ ಅನ್ನೋ ಪಾಪಪ್ರಜ್ಞೆಯಲ್ಲಿ ಹರ್ಷ ಸಿಲುಕಿದ್ದಾನೆ. ಇನ್ನೂ ಭುವಿ ಕಣ್ಣೀರು ಹಾಕುತ್ತಲೇ ಹೊರಡುವ ದೃಶ್ಯ ಕಲ್ಲು ಹೃದಯದಲ್ಲಿಯೂ ನೀರು ಜಿನುಗುವಂತೆ ಮಾಡಿದೆ.

ಸಾನಿಯಾ, ಹರ್ಷ್ ಮತ್ತು ಭುವಿ

ಸಾನಿಯಾ, ಹರ್ಷ್ ಮತ್ತು ಭುವಿ

  • Share this:
ಕಲರ್ಸ್ ಕನ್ನಡ (Colors Kannada) ಅಂದ್ರೆ ಕನ್ನಡತಿ. ತನ್ನದೇ ವಿಭಿನ್ನ ಕಥಾ ಹಂದರದ ಮೂಲಕ ಎಲ್ಲರ ಮನೆ ಮನೆ ತಲುಪಿರೋದು ಕನ್ನಡತಿ (Kannadathi Serial). ಈ ಧಾರಾವಾಹಿ ನೋಡುತ್ತಿದ್ರೆ, ಆ ಪಾತ್ರವೇ ನಾವೇ ಎಂಬಂತಹ ಅನುಭವ ನೀಡುತ್ತದೆ. ಆಡಂಬರವಿಲ್ಲದ, ನೈಜತೆಯನ್ನು ಕನ್ನಡತಿ ತನ್ನಲ್ಲಿ ಅಳವಡಿಸಿಕೊಂಡಿರುವ ಕಾರಣ, ಈ ಧಾರಾವಾಹಿ (Kannada Serial) ಬಹುತೇಕ ಎಲ್ಲಾ ವರ್ಗದ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಸಂಜೆ 7.30 ಆಗುತ್ತಿದ್ದಂತೆ ಜನ ಟಿವಿ ಮುಂದೆ ಕುಳಿತುಕೊಳ್ತಾರೆ. ಕೆಲ ವರದಿಗಳ ಪ್ರಕಾರ, ಆನ್ ಲೈನ್ ವೇದಿಕೆಯಲ್ಲಿ (Online Platform) ಅತಿ ಹೆಚ್ಚು ವೀಕ್ಷಣೆಗೆ (View) ಒಳಗಾಗುವ ಧಾರಾವಾಹಿಗಳಲ್ಲಿ ಕನ್ನಡತಿ ಸಹ ಒಂದಾಗಿದೆ. ಇನ್ನೂ ಕನ್ನಡತಿಯ ಸಂಭಾಷಣೆಗೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಡ್ತಾರೆ. ಈ ಧಾರಾವಾಹಿಯ ಪ್ರತಿ ಪಾತ್ರವೂ (Serial Plays) ಈ ಕಥೆಯಲ್ಲಿ ತನ್ನದೇ ಪ್ರಾಮುಖ್ಯತೆಯನ್ನು ಹೊಂದಿವೆ. ಇನ್ನೂ ಕಥಾ ನಾಯಕಿ ಭುವನೇಶ್ವರಿ \ ಸೌಪರ್ಣಿಕಾ (ರಂಜನಿ ರಾಘವನ್) (Kannadathi Bhuvaneshwari) ಮಾತುಗಳು ಎಲ್ಲಿಯೂ ಆಭಾಸದಂತೆ ಕೇಳಿಸಲ್ಲ. ಅಷ್ಟು ಅಚ್ಚು ಹಸಿರಾಗಿದೆ ಕನ್ನಡತಿ ಕನ್ನಡ (Kannada Language) ನುಡಿ. ಇಂದು ಪ್ರಸಾರವಾಗುವ ಸಂಚಿಕೆ ನೋಡುಗರ ಹೃದಯ ಭಾರವಾಗಿಸೋದು ಖಂಡಿತ. ನೀವು ಸೂಕ್ಷ್ಮ ಹೃದಯವರಾಗಿದ್ರೆ ಕಣ್ಣಂಚಲಿ ನೀರು ಸಹ ಬರಲಿದೆ. ಯಾಕೆಂದ್ರೆ ಕನ್ನಡತಿಯ ಕಷ್ಟ ನಿಮ್ಮನ್ನು ಸಹ ಆವರಿಸಲಿದೆ.

ಕನ್ನಡತಿ ಧಾರಾವಾಹಿ ಖಳನಾಯಕಿ ಸಾನಿಯಾ. ರತ್ನಮಾಲಾ ಮನೆಗೆ ಸೊಸೆಯಾಗಿ ಬಂದಾಗಿನಿಂದ ಇಡೀ ಆಸ್ತಿಯನ್ನು ಹೊಡೆಯಲು ಪ್ಲಾನ್ ಮಾಡಿ ಪದೇ ಪದೇ ವಿಫಲವಾಗ್ತಿದ್ದಾಳೆ. ಸಾನಿಯಾಳ ಈ ಎಲ್ಲ ಕುತಂತ್ರಗಳಿಗೆ ಮನೆಯ ಒಡತಿ ರತ್ನಮಾಲಾ ತಿರುಗೇಟು ನೀಡುತ್ತಾ ಕುಟುಂಬವನ್ನು ಕಾಪಾಡಿಕೊಂಡು ಬಂದಿದ್ದಾರೆ.

ವಿದೇಶದಲ್ಲಿ ಅಮ್ಮಮ್ಮ, ಇಲ್ಲಿ ಸಾನಿಯಾ ಕುತಂತ್ರ

ಹರ್ಷ ಮತ್ತು ಭುವನೇಶ್ವರಿ ಮದುವೆ ಬಳಿಕ ಅಮ್ಮಮ್ಮನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದುಕೊಂಡು ಹೋಗಲಾಗಿದೆ. ಅಮ್ಮಮ್ಮ ರತ್ನಮಾಲಾ ಜೊತೆ ಸಾನಿಯ ಪತಿ ಆದಿ ಸಹ ವಿದೇಶಕ್ಕೆ ತೆರಳಿದ್ದಾನೆ. ಹಾಗಾಗಿ ಇಲ್ಲಿ ಸಾನಿಯಾಳ ಕುತಂತ್ರ ಆಟಗಳು ನಡೆಯುತ್ತಿವೆ.

Kannadathi Serial Bhuvaneshwari sign resignation letter mrq
ಸಾನಿಯಾ, ಹರ್ಷ


ಇದನ್ನೂ ಓದಿ:  Kannadathi Serial: ಕನ್ನಡತಿಯಲ್ಲಿ ಕೊನೆಯಾಗುತ್ತಾ ಅಮ್ಮಮ್ಮನ ಪಾತ್ರ? ವಾಹಿನಿಯವರಲ್ಲಿ ಅಭಿಮಾನಿಗಳ ಕೋರಿಕೆ ಏನು?

ಹರ್ಷನ ಮದುವೆ ಬಳಿಕ ಸಾನಿಯಾ ನೇರವಾಗಿ ಭುವಿಯನ್ನು ಟಾರ್ಗೆಟ್ ಮಾಡ್ತಿದ್ದಾಳೆ. ಭುವಿಯ ಮೇಲೆ ತನ್ನ ದ್ವೇಷದ ಬಾಣಗಳನ್ನು ಪ್ರಯೋಗಿಸುತ್ತಿರುವ ಸಾನಿಯಾ ಯಶಸ್ವಿಯಾಗುತ್ತಿದ್ದಾಳೆ. ಈಗಾಗಲೇ ಭುವನೇಶವರಿ ಕಚೇರಿಯ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದಾಳೆ. ಈಗ ಭುವಿಯ ಅಚ್ಚುಮೆಚ್ಚಿನ ಉಪನ್ಯಾಸಕಿಯ ಕೆಲಸಕ್ಕೂ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾಳೆ ಸಾನಿಯಾ.

ಹೃದಯ ಸ್ಪರ್ಶಿ, ಕಣ್ಣಂಚಲಿ ನೀರು, ಭಾರವಾದ ಹೃದಯ

ಇಂದು ಸಂಜೆ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ಇಲ್ಲಿ ಭುವನೇಶ್ವರಿ ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ಪತ್ರಕ್ಕೆ ಸಹಿ ಹಾಕುತ್ತಿರೋದನ್ನು ನೋಡಬಹುದು. ತನ್ನಿಂದಲೇ ಮಡದಿ ನೆಚ್ಚಿನ ಕೆಲಸಕ್ಕೆ ರಾಜೀನಾಮೆ ಕೊಡುವಂತಾಯ್ತು ಅಲ್ಲವಾ ಅನ್ನೋ ಪಾಪಪ್ರಜ್ಞೆಯಲ್ಲಿ ಹರ್ಷ ಸಿಲುಕಿದ್ದಾನೆ. ಇನ್ನೂ ಭುವಿ ಕಣ್ಣೀರು ಹಾಕುತ್ತಲೇ ಹೊರಡುವ ದೃಶ್ಯ ಕಲ್ಲು ಹೃದಯದಲ್ಲಿಯೂ ನೀರು ಜಿನುಗುವಂತೆ ಮಾಡಿದೆ.

Kannadathi Serial Bhuvaneshwari sign resignation letter mrq
ಹರ್ಷ-ಭುವನೇಶ್ವರಿ


ತನ್ನ ವೃತ್ತಿಯ ಬಗ್ಗೆ ಭುವಿಯ ಭಾವನಾತ್ಮಕ ಮಾತು

ನಿಜ ಹೇಳಬೇಕೆಂದ್ರೆ ಕರೆದು ಕೆಲಸ ಕೊಟ್ಟಿರುವ ಸಂಸ್ಥೆ ಇದು. ಈ ಸಂಸ್ಥೆಯ ಋಣ ಯಾವಾಗಲೂ ನನ್ನ ಹೆಗಲ ಮೇಲಿರುತ್ತದೆ. ಈ ಜಗತ್ತಿನಲ್ಲಿ ಎಲ್ಲರಿಗೂ ಇದ್ದ ಹಣದ ಅವಶ್ಯಕತೆ ನನಗೂ ಇತ್ತು. ಆದರೂ ಕನ್ನಡ ಪಾಠವೇ ನನಗೆ ಪ್ರೀತಿ ಅನ್ನಿಸಿ, ಆ ಪ್ರೀತಿಯ ಹಿಂದೆ ಓಡಿ ಬಂದವಳು ನಾನು. ಆದ್ರೂ ನನ್ನ ಎಲ್ಲಾ ಅವಶ್ಯಕತೆಗಳನ್ನು ನೋಡ್ಕೊಂಡ ಸಂಸ್ಥೆ ಇದು. ಇವತ್ತಿನ ತನಕ ಕನ್ನಡ ಪ್ರೀತಿಯ ಬಗ್ಗೆ ಪಶ್ಚಾತ್ತಾಪವಾಗದಂತೆ ನೋಡಿಕೊಂಡ ದೇಗುಲ ಇದು.ಕನ್ನಡವನ್ನು ಪ್ರೀತಿಸುವಂತೆ ಇರೋ ನನ್ನ ಉಪನ್ಯಾಸಕರು ಇರೋ ಹಾಗೆ, ತನ್ನಂಥ ಉಪನ್ಯಾಸಕರನ್ನು ಪ್ರೀತಿಸುವಂತಹ ಸಂಸ್ಥೆ ಇದೆ ಅನ್ನೋದು ದೊಡ್ಡ ಹೆಮ್ಮೆಯ ವಿಷಯ. ಕೆಲಸ ಬಿಡೋ ಸಂದರ್ಭದಲ್ಲಿಯೂ ಸಂಸ್ಥೆಯ ಮೇಲೆ ಒಂಚೂರು ಬೇಸರ ಆಗೋದಿಲ್ಲ ಅಂದ್ರೆ ಅದಕ್ಕೆ ಕಾರಣ ಈ ಸಂಸ್ಥೆಯ ತಾಯಿಯಂತಹ ಪ್ರೀತಿ, ಅಮ್ಮನಂತಹ ಆಶ್ರಯ.

ಇದನ್ನೂ ಓದಿ:  Kannadathi Serial ಮೂಲಕ ಮನೆಮಾತಾಗಿದ್ದ ರಮೋಲಾ: ಸೀರಿಯಲ್​ ಬಿಟ್ಟು ಏನ್​ ಮಾಡ್ತಿದ್ದಾರೆ ನೋಡಿ..

ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಉಣಿಸುತ್ತಿರುವ ಈ ಸಂಸ್ಥೆ ಇನ್ನೂ ಲಕ್ಷ ವಿದ್ಯಾರ್ಥಿಗಳಿಗೆ ಅಕ್ಷರ ಉಣಿಸುವಂತಾಗಲಿ. ಅವರು ಬಿಡುವಾಗಲೂ ಕಣ್ಣೀರು ಹಾಕದೇ ಇರೋ ನಾನು, ಈ ದೇಗುಲವನ್ನು ಬಿಡುವಾಗ ಸಹಿ ಹಾಕೋದು ಕಾಣದ ಹಾಗೆ ಕಣ್ತುಂಬಿಕೊಂಡಿದ್ದೀನಿ. ಆ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ.

ಇಂತಿ ತಮ್ಮ ವಿಶ್ವಾಸಿ,
ಸೌಪರ್ಣಿಕಾ
Published by:Mahmadrafik K
First published: