Ranjani Raghavan: ಕನ್ನಡ ಅಕ್ಷರಮಾಲೆ ಬರೆದು ರೀಲ್ಸ್ ಮಾಡಿ; ಇದು ಕನ್ನಡತಿಯ ಕರೆ!

ಭುವಿ ಅವರು ಬರೆದು ಸುಮ್ಮನಾಗಿಲ್ಲ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮತ್ತು ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಇದೆ. ಅಕ್ಷರ ಕಲಿಸಿಕೊಟ್ಟ ಗುರುಗಳನ್ನು ನೆನೆದು ಅವರಿಗೆ ಗೌರವ ಸಲ್ಲಿಸೋಣ ಎಂದು ಪೋಸ್ಟ್ ಬರೆದುಕೊಂಡಿದ್ದಾರೆ.

ರಂಜನಿ ರಾಘವನ್

ರಂಜನಿ ರಾಘವನ್

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಅಲ್ಲದೇ ರಂಜನಿ ರಾಘವನ್ (Ranjani Raghavan) ಅರ್ಥಾತ್ ಭುವಿಯ ಸ್ಪಷ್ಟ ಕನ್ನಡವನ್ನು ಇಷ್ಟಪಟ್ಟಿದ್ದಾರೆ. ಕೊನೆಯಲ್ಲಿ ಹೇಳುವ ಕನ್ನಡ (Kannada) ಪದಗಳ ಅರ್ಥವನ್ನು ತಪ್ಪದೇ ವೀಕ್ಷಿಸುತ್ತಾರೆ. ಒಂದು ರೀತಿಯಲ್ಲಿ ಕನ್ನಡ ಅಂದ್ರೆ ಭುವಿ, ಭುವಿ ಅಂದ್ರೆ ಕನ್ನಡ ಅನ್ನುವಂತಾಗಿದೆ. ಆ ಕನ್ನಡದ ಅಭಿಮಾನವನ್ನು ಭುವಿ ಧಾರಾವಾಹಿಗೆ ಮೀಸಲಿಟ್ಟಿಲ್ಲ. ನಿಜ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ. ಅ ಯಿಂದ ಅಃ ತನಕ ಬರೆದು ಆ ಪೋಸ್ಟ್​ನ್ನು ಶೇರ್ (Share) ಮಾಡಿದ್ದಾರೆ.

    ಬರೆದು ತುಂಬ ದಿನ ಆಗಿತ್ತು ಎಂದ ರಂಜನಿ ರಾಘವನ್
    ರಂಜನಿ ರಾಘವನ್ ಅನ್ನೋದಕ್ಕಿಂತ ಅವರು ಭುವಿ ಅಂದ್ರೆನೇ ಜನಕ್ಕೆ ಬೇಗ ಅರ್ಥ ಆಗುತ್ತೆ. ಭುವಿ ಅವರು ಅಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದಾರೆ. ಅದಕ್ಕೆ ಭುವಿ ಅಂದ್ರೆನೇ ಗೊತ್ತಾಗೋದು. ಭುವಿ ಕನ್ನಡ ಅಕ್ಷರಗಳನ್ನು ಬರೆದು ತುಂಬಾ ದಿನಾ ಆಗಿತ್ತಂತೆ. ಈಗ ಅ ಯಿಂದ ಅಃ ತನಕ ಬರೆದಿದ್ದಾರೆ.

    ಅಕ್ಷರ ಕಲಿಸಿ ಕೊಟ್ಟ ಗುರುಗಳಿಗೆ ಗೌರವ ಸಲ್ಲಿಸೋಣ
    ಭುವಿ ಅವರು ಬರೆದು ಸುಮ್ಮನಾಗಿಲ್ಲ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮತ್ತು ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಇದೆ. ಅಕ್ಷರ ಕಲಿಸಿಕೊಟ್ಟ ಗುರುಗಳನ್ನು ನೆನೆದು ಅವರಿಗೆ ಗೌರವ ಸಲ್ಲಿಸೋಣ ಎಂದು ಪೋಸ್ಟ್ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: Kannadathi: ಹಬ್ಬದ ದಿನವೇ ಸಾನಿಯಾ ಪೊಲೀಸ್ ಠಾಣೆಯಲ್ಲಿ! ಎಲ್ಲ ಸತ್ಯ ಹೇಳ್ತಾರಾ ಅಮ್ಮಮ್ಮ?

    ರೀಲ್ ಮಾಡಿ ಟ್ಯಾಗ್ ಮಾಡಿ
    ಅಷ್ಟೇ ಅಲ್ಲದೇ ಭುವಿ ಅವರು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಅಕ್ಷರಮಾಲೆ ಬರೆದು ರೀಲ್ಸ್ ಮಾಡೋಣ ಬನ್ನಿ ಎಂದು ಹಾಕಿಕೊಂಡಿದ್ದಾರೆ. ರೀಲ್ ಮಾಡಿ ಟ್ಯಾಗ್ ಮಾಡಿ. ನಾನು ಸ್ಟೋರಿಯಲ್ಲಿ ಶೇರ್ ಮಾಡ್ತೇನೆ ಎಂದಿದ್ದಾರೆ. ನೀವು ರೀಲ್ಸ್ ಮಾಡಿ ರಂಜನಿ ರಾಘವನ್ ಅವರನ್ನು ಟ್ಯಾಗ್ ಮಾಡಿ. ಅವರು ನಿಮ್ಮ ರೀಲ್ಸ್​ನ್ನು ಸ್ಟೋರಿಯಲ್ಲಿ ಹಾಕಿಕೊಳ್ಳುತ್ತಾರೆ.


    ಸೆಪ್ಟೆಂಬರ್ 5ರಂದು ಶಿಕ್ಷಕರ ದಿನ
    ಆಚಾರ್ಯ ದೇವೋಭವ ಎಂಬ ನುಡಿಯಂತೆ ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಉನ್ನತ ಸ್ಥಾನ ನೀಡಲಾಗಿದೆ. ರಾಮಾಯಣ, ಮಹಾಭಾರತ ಕಾಲದಿಂದಲೂ ಗುರು-ಶಿಷ್ಯರ ಸಂಬಂಧಕ್ಕೆ ವಿಶೇಷ ಸ್ಥಾನವಿದೆ. ಮಕ್ಕಳನ್ನು ಆಯಾ ದೇಶದ ಭವಿಷ್ಯ ಎನ್ನಬಹುದು. ಆದರೆ, ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ದೇಶದ ನಿಜವಾದ ಶಿಲ್ಪಿಗಳು ಎನ್ನಬಹುದು. ಭಾರತದಲ್ಲಿ 1962 ರಿಂದ ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವಾಗಿ ಆಚರಿಸಲಾಗಿತ್ತಿದೆ.

    ಶಾಲಾ ಕಾಲೇಜುಗಳಲ್ಲಿ ಸೆಪ್ಟೆಂಬರ್ 5 ಬಂತೆಂದರೆ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಫೋಟೋಗೆ ಪುಷ್ಪನಮನ ಸಲ್ಲಿಸಿ ಶಿಕ್ಷಕರ ದಿನ ಆಚರಿಸುವುದು ಎಲ್ಲರಿಗೂ ಚಿರಪರಿಚಿತ. ಇದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವೂ ಹೌದು. ಇವರು ದೇಶದ ಮೊದಲ ಉಪ ರಾಷ್ಟ್ರಪತಿಗಳಾಗಿದ್ದವರು. ಇವರ ಜನ್ಮದಿನ ಕೂಡ ಸೆಪ್ಟೆಂಬರ್ 5 (1888). ಇವರು 21ನೇ ಶತಮಾನದ ಪ್ರಸಿದ್ದ ತತ್ವಜ್ಞಾನಿಗಳಲ್ಲಿ ಒಬ್ಬರು.

    ಇದನ್ನೂ ಓದಿ: Gattimela serial: ಕಳ್ಳ ಡಾಕ್ಟರ್ ತೇಜಸ್ ಬಗ್ಗೆ ಸತ್ಯ ಪತ್ತೆ ಹಚ್ಚಿದ ವಿಕ್ರಾಂತ್, ಅದಿತಿ ನಿಶ್ಚಿತಾರ್ಥ ನಿಲ್ಲಿಸುತ್ತಾನಾ?

    ಇವರ ತತ್ವ ಸಿದ್ಧಾಂತಗಳಳು ಅದ್ವೈತ ವೇದಾಂತವನ್ನು ಆಧರಿಸಿವೆ. ಅಲ್ಲದೆ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜು, ಮೈಸೂರು ವಿಶ್ವವಿದ್ಯಾಲಯ, ಕಲ್ಕತ್ತ ವಿಶ್ವವಿದ್ಯಾಲಯ, ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಮತ್ತು ಚಿಕಾಗೋ ವಿಶ್ವವಿದ್ಯಾಲಯದಲ್ಲಿ  ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ.
    Published by:Savitha Savitha
    First published: