ಕಲರ್ಸ್ ಕನ್ನಡದಲ್ಲಿ ಬರೋ ಕನ್ನಡತಿ ಧಾರಾವಾಹಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸೀರಿಯನ್ ನಟಿ ರಂಜನಿ ರಾಘವನ್ (Ranjini Raghavan) ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರೋ ರಂಜನಿ ರಾಘವನ್ ಅವರು ತಮ್ಮ ದಿನಚರಿ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಇದೀಗ ಇನ್ಟಾಗ್ರಾಮ್ನಲ್ಲಿ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ತೊಟ್ಟಿರೋ ಕೈ ತೋಳು ಹರಿದಿದ್ದು, ಹಣೆಯಿಂದ ರಕ್ತ ಒಂದೇ ಸಮನೆ ಸುರಿಯುತ್ತಿದೆ. ಹಾಗಂತ ಈ ವಿಡಿಯೋ ನೋಡಿ ಗಾಬರಿಗೊಳ್ಳಬೇಡಿ. ನೀವಂದುಕೊಂಡ ಹಾಗೆ ರಂಜನಿ ರಾಘವನ್ ಅವರಿಗೆ ಏನೂ ಆಗಿಲ್ಲ. ‘ಕನ್ನಡತಿ’ ಧಾರಾವಾಹಿ (Kannadathi Serial) ಶೂಟಿಂಗ್ಗಾಗಿ ಅವರು ಈ ರೀತಿ ಅವತಾರಾ ತಾಳಿದ್ದಾರೆ. ಈ ವಿಡಿಯೋ ನೋಡಿದ ಕೆಲವರು ಆತಂಕ ಹೊರಹಾಕಿದ್ದಾರೆ. ಅಸಲಿ ವಿಚಾರ ಗೊತ್ತಿರುವವರು ವಿಡಿಯೋ ನೋಡಿ ನಕ್ಕಿದ್ದಾರೆ.
ಭುವಿಯನ್ನು ಬೆಟ್ಟದಿಂದ ತಳ್ಳಿದ ಸುಪಾರಿ ಕಿಲ್ಲರ್
‘ಕನ್ನಡತಿ’ ಧಾರಾವಾಹಿ ಮಹತ್ವದ ಘಟ್ಟ ತಲುಪಿದೆ. ವರುಧಿನಿ (ಸಾರಾ ಅಣ್ಣಯ್ಯ) ಹಾಗೂ ಭುವಿ (ರಂಜನಿ) ಗುಡ್ಡ ಏರಿದ್ದರು. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಸುಪಾರಿ ನೀಡಿದ್ದಳು. ಅಂತೆಯೇ ಸುಪಾರಿ ಕಿಲ್ಲರ್ ಭುವಿಯನ್ನು ಬೆಟ್ಟದಿಂದ ತಳ್ಳಿದ್ದಾನೆ. ಆಕೆಯನ್ನು ವರು ರಕ್ಷಣೆ ಮಾಡಿದ್ದಾಳೆ. ಕಲ್ಲು ಬಂಡೆಯ ಮೇಲೆ ಅಂಗಾತ ಮಲಗಿದ್ದಳು ಭುವಿ. ಆಗ ಅವಳ ಹಣೆಯಲ್ಲಿ ರಕ್ತ ಸುರಿಯುತ್ತಿತ್ತು. ರಂಜನಿ ಹಂಚಿಕೊಂಡಿರುವ ವಿಡಿಯೋ ಈ ದೃಶ್ಯದ ಶೂಟಿಂಗ್ ಸಂದರ್ಭದಲ್ಲಿ ಸೆರೆ ಹಿಡಿದಿದ್ದು.
ಅಮ್ಮಮ್ಮ- ನೋಡು ನಿನ್ ಅವತಾರ
ಈ ವಿಡಿಯೋಗೆ ಭುವಿ ಸಖತ್ ಫನ್ನಿಯಾಗಿ ಕ್ಯಾಪ್ಶನ್ ನೀಡಿದ್ದಾರೆ. ‘ಅಮ್ಮಮ್ಮ- ನೋಡು ನಿನ್ ಅವತಾರ. ನಾನು- ಎರಡು ಕಣ್ಣು ಸಾಲ್ತಿಲ್ಲ. ಬಿಂದು- ಇರಿ, ಇದನ್ನೆಲ್ಲಾ ವಿಡಿಯೋ ಮಾಡ್ತೀನಿ’ ಎಂದು ಬರೆದುಕೊಂಡಿದ್ದಾರೆ ಅವರು. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಇದಕ್ಕೆ ಅನೇಕರು ಫನ್ನಿಯಾಗಿಯೇ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ‘ಕನ್ನಡತಿ’ ತಂಡವನ್ನು ಹೊಗಳಿದ್ದಾರೆ.
Kannadathi Serial: ಕನ್ನಡತಿ ಸೀರಿಯಲ್ಗೆ ಮತ್ತೊಂದು ಕಿರೀಟ, ಹಿಂದಿಗೆ ಡಬ್ ಆಗುತ್ತಿದೆ ಕನ್ನಡ ಧಾರಾವಾಹಿ
ರಂಜನಿ ಪೋಸ್ಟ್ಗೆ ಅಭಿಮಾನಿಗಳ ಮೆಚ್ಚುಗೆ
‘ನಿಮಗೆ ಹಾಗೂ ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್. ಇಡೀ ‘ಕನ್ನಡತಿ’ ತಂಡಕ್ಕೆ ಬಿಗ್ ಸೆಲ್ಯೂಟ್. ಅಂತಹ ಜಾಗದಲ್ಲಿ ಶೂಟಿಂಗ್ ಮಾಡಿ ಒಳ್ಳೆಯ ಸಂಚಿಕೆ ಕೊಟ್ಟಿದ್ದೀರಿ’ ಎಂದು ಅಭಿಮಾನಿಯೋರ್ವ ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ. ಕಳೆದ ಕೆಲವು ಸಂಚಿಗಳನ್ನು ಅತಿ ಆಯಕಟ್ಟಿನ ಜಾಗದಲ್ಲಿ ಶೂಟಿಂಗ್ ಮಾಡಲಾಗಿತ್ತು. ಈ ಕಾರಣಕ್ಕೆ ಅಭಿಮಾನಿಗಳು ಈ ರೀತಿಯ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: Kannadathi Serial: ಕನ್ನಡತಿ ಸೀರಿಯಲ್ನಲ್ಲಿ ಬಿಗ್ ಟ್ವಿಸ್ಟ್, ಸುಪಾರಿ ಕಿಲ್ಲರ್ನಿಂದ ಬಚಾವ್ ಆಗ್ತಾಳಾ ಭುವಿ?
ವರೂ ಮೇಲೆ ಹರ್ಷನ ಸಿಟ್ಟು
‘ಕನ್ನಡತಿ’ ಧಾರಾವಾಹಿ ವಿಚಾರಕ್ಕೆ ಬರೋದಾದರೆ ಹರ್ಷ ಹಾಗೂ ಭುವಿಯ ನಿಶ್ಚಿತಾರ್ಥ ನೆರವೇರಿದೆ. ಇದಾದ ಬಳಿಕ ಹಲವು ಘಟನೆಗಳು ನಡೆದವು. ಭುವಿಯನ್ನು ಸುಪಾರಿ ಕಿಲ್ಲರ್ ತಳ್ಳಿದ್ದಾನೆ. ಭುವಿಯ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಆಕೆಯನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿದೆ. ಭುವಿ ಬೀಳುವ ಸಂದರ್ಭದಲ್ಲಿ ಆಕೆಯ ಜತೆ ಇದ್ದಿದ್ದು ವರುಧಿನಿ. ಈ ಕಾರಣಕ್ಕೆ ವರುಧಿನಿ ವಿರುದ್ಧ ಹರ್ಷ ಸಿಟ್ಟಾಗಿದ್ದಾನೆ.
ಎಲ್ಲದ್ದಕ್ಕೂ ವರುಧಿನಿಯೇ ಕಾರಣ
ಭುವಿಯನ್ನು ಬೆಟ್ಟದ ಮೇಲೆ ಕರೆದುಕೊಂಡು ಹೋಗಿದ್ದಕ್ಕೆ ಈ ಅನಾಹುತವಾಗಿದೆ ಎಂದು ವರುಧಿನಿ ಮೇಲೆ ಹರ್ಷ ಸಿಟ್ಟಾಗಿದ್ದಾನೆ. ಎಲ್ಲದಕ್ಕೂ ನೀವೇ ಹೊಣೆಯಾಗ್ಬೇಕು ಎಂದು ವರುಧಿನಿ ಮೇಲೆ ಹರ್ಷ ಕೂಗಾಡಿದ್ದು, ಹರ್ಷನ ಕಟು ಮಾತಿಗೆ ನೊಂದ ವರುಧುನಿ ಆಸ್ಪತ್ರೆಯಿಂದ ಹೊರಗೆ ಹೋಗಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ