ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇನ್ನು ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಮ್ಮಮ್ಮ ಆಗಿ ಕಾಣಿಸಿಕೊಂಡ ಚಿತ್ಕಾಲಾ ಬಿರಾದಾರ್ ಸಖತ್ ಫೇಮಸ್ ಆದ್ರು, ಆದ್ರೆ ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಇದೀಗ ಅಮ್ಮಮ್ಮ ಇಲ್ಲದ ಸೀರಿಯಲ್ ಸಪ್ಪೆ ಅಂತಿದ್ದಾರೆ ಅಭಿಮಾನಿಗಳು ಇತ್ತ, ಅಮ್ಮಮ್ಮ ಪಾತ್ರಧಾರಿ ಚಿತ್ಕಲಾ ಬಿರಾದಾರ್ ಸನ್ಯಾಸಿ ಆಗಲು ಹೊರಟಿದ್ದಾರೆ.
ರತ್ನಮಾಲಾ ಪಾತ್ರದಲ್ಲಿ ಮಿಂಚಿದ ಚಿತ್ಕಲಾ
ಕನ್ನಡತಿ ಸೀರಿಯಲ್ ಮೂಲಕ ಚಿತ್ಕಲಾ ಅವರು ರತ್ನಮಾಲಾ ಹಾಗೂ ಅಮ್ಮಮ್ಮ ಎಂದೇ ಫೇಮಸ್ ಆಗಿದ್ದರು. ಕನ್ನಡತಿ ಸೀರಿಯಲ್ ನಲ್ಲಿ ಅಮ್ಮಮ್ಮ ಅನಾರೋಗ್ಯದಿಂದ ಬಳಲಿದಾಗ ಅಭಿಮಾನಿಗಳು ಅಮ್ಮಮ್ಮಳನ್ನು ಸಾಯಿಸಬೇಡಿ, ಅಮ್ಮಮ್ಮ ಧಾರಾವಾಹಿಯಲ್ಲಿ ಇಲ್ಲದಿದ್ರೆ ನಾವು ಸೀರಿಯಲ್ ನೋಡೋದೆ ಇಲ್ಲ ಎಂದು ಅನೇಕ ಅಭಿಮಾನಿಗಳು ಕಮೆಂಟ್ ಮಾಡುವ ಮಟ್ಟಿಗೆ ಚಿತ್ಕಲಾ ಅವರ ಅಭಿನಯ ಪ್ರಭಾವ ಬೀರಿತ್ತು.
ಅಮ್ಮಮ್ಮ ಸೀರಿಯಲ್ ಬಿಟ್ಟು ಹೋಗುವ ಎಲ್ಲರ ಕಣ್ಣೀರು
ಭುವಿಯ ಹೆಸರಿಗೆ ಎಲ್ಲಾ ಆಸ್ತಿ ಬರೆದು ರತ್ನಮಾಲಾ ಮೃತಪಟ್ಟಿದ್ದು, ಅಮ್ಮಮ್ಮನ ಪಾತ್ರ ಅಂದೇ ಕೊನೆ ಆಗಿದೆ. ಭುವಿ, ಹರ್ಷನ ಪಾತ್ರದಷ್ಟೆ, ಅಮ್ಮಮ್ಮನ ಪಾತ್ರವನ್ನು ಜನ ಸ್ವೀಕರಿಸಿದ್ರು. ತಂಡವನ್ನು ಚಿತ್ಕಲಾ ಬಿಟ್ಟು ಹರ್ಷ, ಭುವಿ ಪಾತ್ರಧಾರಿಗಳು ಸೇರಿದಂತೆ ಎಲ್ಲರೂ ಕಣ್ಣೀರು ಹಾಕಿದ್ದರು. ಈಗ ಅವರು ಹೊಸ ಧಾರಾವಾಹಿ ತಂಡ ಸೇರಿಕೊಂಡಿದ್ದಾರೆ.
ಹೊಸ ಸೀರಿಯಲ್ನಲ್ಲಿ ಸನ್ಯಾಸಿಯಾದ ಚಿತ್ಕಲಾ
ಇನ್ಟಾ ಗ್ರಾಮ್ ನಲ್ಲಿ ರತ್ನಮಾಲಾ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅವರು ಸನ್ಯಾಸಿನಿ ರೀತಿಯಲ್ಲಿ ಬಟ್ಟೆ ಹಾಕಿದ್ದಾರೆ. ಇದು ಯಾವ ಧಾರಾವಾಹಿ ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಈ ಧಾರಾವಾಹಿಗಾಗಿ ಅಭಿಮಾನಿಗಳು ಕಾದಿದ್ದಾರೆ.
View this post on Instagram
ಚಿತ್ಕಲಾ ಅವರು ಕಿರುತೆರೆ ಜತೆಗೆ ಹಿರಿತೆರೆಯಲ್ಲೂ ಬ್ಯುಸಿ ಇದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರ ಮಾಡಿದ್ದಾರೆ. ‘ಕನ್ನಡತಿ’ ಧಾರಾವಾಹಿಯಿಂದ ಅವರ ಜನಪ್ರಿಯತೆ ಹೆಚ್ಚಿದೆ. ಕನ್ನಡತಿ’ ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಸಾಯುವ ಪಾತ್ರ ಗೊತ್ತಾದಾಗ ಬೇಸರ
ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮ ಅಂದ್ರೆ, ರತ್ನಮಾಲಾ ಅವರ ಪಾತ್ರವು ಚೆನ್ನಾಗಿ ಮೂಡಿ ಬಂದಿತ್ತು. ಆ ಪಾತ್ರಕ್ಕೆ ಜೀವ ತುಂಬಿದ್ದರು ಚಿತ್ಕಳಾ ಬಿರಾದರ್. ಅವರಿಗೆ ತಮ್ಮ ಸಾವಿನ ಪಾತ್ರ ಬರುವು ಒಂದು ವಾರದ ಮುಂಚೆ ಮಾತ್ರ ಗೊತ್ತಾಗಿತ್ತಂತೆ. ನಾನು ಬೇಸರ ಆಗಿದ್ದೆ. ಎಲ್ಲರೂ ಸಹ ಅದನ್ನು ಕೇಳಿ, ನಿಜವಾಗ್ಲೂ ಶಾಕ್ ಆಗಿದ್ದರಂತೆ.
ಇದನ್ನೂ ಓದಿ: Actress Manasa Joshi: ಮಹಾಲಕ್ಷ್ಮಿ ಮನೆಗೆ ಬಂದ ಖುಷಿಯಲ್ಲಿ ಮಂಗಳಗೌರಿ ನಟಿ! ಹೆಮ್ಮೆ ಪಟ್ಟ ಪೋಷಕರು
ಜನಕ್ಕೆ ಧನ್ಯವಾದ
ಭುವಿ, ಹರ್ಷನ ಪಾತ್ರದಷ್ಟೆ, ಅಮ್ಮಮ್ಮನ ಪಾತ್ರವನ್ನು ಜನ ಸ್ವೀಕರಿಸಿದ್ರು. ನನ್ನನ್ನು ಒಂದು ಪಾತ್ರದಂತೆ ನೋಡದೇ, ತಮ್ಮ ಮನೆಯ ಒಬ್ಬ ಸದಸ್ಯೆಯಾಗಿ ನೋಡ್ತಾ ಇದ್ರು. ತುಂಬಾ ಪ್ರೀತಿ ತೋರಿಸಿದ್ದಾರೆ. ಎಲ್ಲಾರಿಗೂ ಧನ್ಯವಾದ ಎಂದು ಚಿತ್ಕಳಾ ಬಿರಾದರ್ ಹೇಳಿದ್ದಾರೆ. ಧಾರಾವಾಹಿ ಮಿಸ್ ಮಾಡ್ದೇ ನೋಡಿ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ