ರಾಜ್ಯದಲ್ಲಿ ಕೊರೊನಾ 3ನೇ ಅಲೆ (Corona 3rd wave) ಅಬ್ಬರಿಸುತ್ತಿದೆ. ದಿನ ನಿತ್ಯ ಸಾವಿರಾರು ಕೇಸ್ಗಳು ದಾಖಲಾಗ್ತಿವೆ. ಚಿತ್ರರಂಗದಲ್ಲೂ ಅನೇಕ ಮಂದಿಯನ್ನು ಕೊರೊನಾ ಕಾಡ್ತಿದೆ. ಕಿರುತೆರೆಯಲ್ಲಿ ಧಾರಾವಾಹಿಗಳ ಶೂಟಿಂಗ್ ನಿರಂತರವಾಗಿ ನಡೀತಿದ್ದು, ಅನೇಕ ಸೆಲೆಬ್ರೆಟಿಗಳಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇದೀಗ ಕನ್ನಡತಿ (Kannadathi) ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ (Ranjani Raghavan) ಅವರಿಗೆ ಕೊರೊನಾ ಪಾಸಿಟಿವ್ (Corona positive) ಆಗಿದೆ. ರಂಜನಿ ಅವರು ಬೇಗ ಗುಣಮುಖರಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಯಾವುದೇ ಶೂಟಿಂಗ್ (Shooting) ವೇಳೆ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಹಲವು ಸ್ಥಳಗಳಿಗೆ ಓಡಾಡಬೇಕಾಗಿರುತ್ತೆ. ಹೀಗಾಗಿ ಸಿನಿ ಮಂದಿ ಕೊರೊನಾ ಅಂಟುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತೆ. ಈಗಾಗಲೇ ಕಿರುತೆರೆಯ ಹಲವು ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ರಂಜನಿ ಪೋಸ್ಟ್
ರಂಜನಿ ರಾಘವನ್ ತನಗೆ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಆಗಿದೆ. ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಚಿಂತಿಸುವ ಅಗತ್ಯವಿಲ್ಲ ಅಂತ ಅವರು ಬರೆದುಕೊಂಡಿದ್ದಾರೆ.
‘ಬೇಗ ಗುಣಮುಖರಾಗಿ ಚಾಂಪ್’
ರಂಜನಿಗೆ ಕೊರೊನಾ ಪಾಸಿಟಿವ್ ಆಗಿರೋ ಬಗ್ಗೆ ಕನ್ನಡತಿ ಧಾರವಾಹಿ ನಟ ಕಿರಣ್ ರಾಜ್ ಅವರು ಮಾಹಿತಿ ನೀಡಿದ್ದಾರೆ. ಬೇಗ ಗುಣಮುಖರಾಗಿ ಚಾಂಪ್ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, ರಂಜನಿ ರಾಘವನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ರಿ ಪೋಸ್ಟ್ ಮಾಡಿರೋ ರಂಜನಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಧನ್ಯವಾದಗಳು ನಾನು ನಿಮ್ಮ ಸಂದೇಶಗಳನ್ನು ನೋಡುತ್ತೇನೆ . ನಿಮ್ಮ ಪ್ರೀತಿಗೆ ಧನ್ಯವಾದ ಎಂದಿದ್ದಾರೆ.
ಇದನ್ನೂ ಓದಿ: Kannadati Serial: ವರುಧಿನಿಗೆ ಗೊತ್ತಾಗುತ್ತಾ ಹರ್ಷ-ಭುವಿ ಪ್ರೀತಿ ವಿಷ್ಯ? ಭುವಿ ಮೇಲೆ ವರೂ ಕೆಂಡಾಮಂಡಲ
‘ನಾನು ಚೇತರಿಸಿಕೊಳ್ಳುತ್ತಿದ್ದೇನೆ’
ನನಗೆ ಕೊರೊನಾ ಪಾಸಿಟಿವ್ ಆಗಿದೆ. ನಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ರಂಜನಿ ಪೋಸ್ಟ್ ಮಾಡ್ತಿದ್ದಂತೆ ಇನ್ಸ್ಟಾಗ್ರಾಮ್ನಲ್ಲಿದ್ದ ಅವರ ಅಭಿಮಾನಿಗಳು ಗಾಬರಿಗೊಂಡಿದ್ದಾರೆ. ಶೀಘ್ರವಾಗಿ ಗುಣಮುಖರಾಗಿ ಹಸಿರುಪೇಟೆ ಟೀಚರ್ ಅಂತ ಸಂದೇಶ ಕಳುಹಿಸುತ್ತಿದ್ದಾರೆ.
ಕುತೂಹಲ ಘಟ್ಟ ತಲುಪಿದ ‘ಕನ್ನಡತಿ‘
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ (Serial) ಕನ್ನಡತಿ (Kannadathi) ಕುತೂಹಲ ಘಟ್ಟ ತಲುಪಿದೆ. ಹರ್ಷನ ಪ್ರೀತಿಗೆ ಹಸಿರುಪೇಟೆ ಟೀಚರ್ ಗ್ರೀನ್ ಸಿಗ್ನಲ್ (Green Signal) ಕೊಟ್ಟಾಯ್ತು ಜೊತೆಗೆ ರತ್ನಮಾಲಾ ಸೊಸೆಯಾಗೋದೆ ನನ್ನ ಭಾಗ್ಯ ಎಂದಿದ್ದಾರೆ ಭುವಿ. ಈ ಮಾತು ಕೇಳಿ ಅಮ್ಮಮ್ಮ ಫುಲ್ ಖುಷ್ ಆಗಿದ್ದಾರೆ. ಆದ್ರೆ ಭುವಿಗೆ ವರುಧಿನಿಯೇ ದೊಡ್ಡ ತಲೆನೋವಾಗಿದ್ದಾಳೆ.
ಹೇಗೋ ಭುವಿಗೆ ಬಾಯ್ ಫ್ರೆಂಡ್ ಇರೋ ವಿಚಾರ ವರುಗೆ ಗೊತ್ತಾಗಿ ಹೋಗಿದೆ. ಇತ್ತ ಭುವನೇಶ್ವರಿ-ಹರ್ಷನ ಪ್ರೀತಿ ಬಗ್ಗೆ ಸಾನಿಯಾಗೆ ಗೊತ್ತಾಗ್ತಿದ್ದಂತೆ ಹೊಸ ಗೇಮ್ ಸ್ಟಾರ್ಟ್ ಮಾಡಿದ್ದಾಳೆ. ಇನ್ನು ಹರ್ಷ ಹಾಗೂ ಭುವಿ ಇಬ್ಬರು ವರೂಗೆ ತಮ್ಮ ಪ್ರೀತಿ ವಿಚಾರ ಹೇಳಲು ಮುಂದಾಗಿದ್ದಾರೆ. ವರುಧಿನಿಯ ಹುಚ್ಚು ಪ್ರೀತಿ ಕಂಡು ಬೆಚ್ಚಿಬಿದ್ದಿರೋ ಹರ್ಷ, ಭುವಿ ಬಳಿ ಅದಷ್ಟು ಬೇಗ ವರೂಗೆ ವಿಷಯ ತಿಳಿಸಿಬಿಡೋಣ ಅಂತ ನಿರ್ಧಾರ ಮಾಡಿದ್ದು ಮುಂದೆ ಏನಾಗುತ್ತೊ ಕಾದು ನೋಡಬೇಕು.
ಇದನ್ನೂ ಓದಿ:Kannadathi: ಕನ್ನಡತಿ ಧಾರಾವಾಹಿಯ ಹರ್ಷನ ತಂಗಿ ಸುಚಿ ಕ್ಯೂಟ್ ಅಷ್ಟೇ ಅಲ್ಲ ಬೋಲ್ಡ್ ಕೂಡ..!
ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿರೋ ಕನ್ನಡತಿ ಸೀರಿಯಲ್ ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಲರ್ಸ್ ಕನ್ನಡದ ಟಾಪ್ ಸೀರಿಯಲ್ ಗಳಲ್ಲಿ ಕನ್ನಡತಿ ಕೂಡ ಒಂದಾಗಿದೆ. ಇದೀಗ ಭುವಿ ಪಾತ್ರಧಾರಿಯಾಗಿರೋ ರಂಜಿನಿ ರಾಘವನ್ (Ranjani) ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಸ್ವಲ್ಪ ದಿನಗಳ ಮಟ್ಟಿಗೆ ಧಾರಾವಾಹಿಯಲ್ಲಿ ರಂಜನಿ ಕಾಣಿಸಿಕೊಳ್ಳಲ್ಲ. ಅಪಾರ ಅಭಿಮಾನಿ ಬಳಗ ಹೊಂದಿರೋ ರಂಜನಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಿಗೆ ಬೇಸರ ತರಿಸೋದು ಗ್ಯಾರೆಂಟಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ