Kiran Raj: ಬಡ್ಡೀಸ್ ನಂತರ 'ಶೇರ್' ಆಗಿ ಮಿಂಚಲಿದ್ದಾರೆ ಕನ್ನಡತಿಯ ಹೀರೋ!

Kiran Raj: ಕನ್ನಡತಿ ನಟ ಕಿರಣ್ ರಾಜ್ ಬಡ್ಡೀಸ್ ನಂತರ ಈಗ ಇನ್ನೊಂದು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಇಲ್ಲಿದೆ ಅವರ ಲೇಟೆಸ್ಟ್ ಪ್ರಾಜೆಕ್ಟ್ ಕುರಿತ ಫುಲ್ ಡೀಟೇಲ್ಸ್

ಕಿರಣ್ ರಾಜ್

ಕಿರಣ್ ರಾಜ್

  • Share this:
ಹಿಂದಿ ಕಿರುತೆರೆಯಲ್ಲಿ ಮಿಂಚಿದ್ದ ಕಿರಣ್ ರಾಜ್ (Kiran Raj) ಕನ್ನಡ ಕಿರುತೆರೆಯಲ್ಲಿ (Kannada Smallscreen) ಬೇಗನೆ ಪ್ರಸಿದ್ಧರಾದರು. ಕನ್ನಡತಿ ಧಾರವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಫೇವರೇಟ್ ನಾಯಕನಾಗಿ ಬದಲಾಗಿದ್ದಾರೆ ಕಿರಣ್. ಬಡ್ಡೀಸ್ ಸಿನಿಮಾ ಮಾಡಿ ಸಾಕಷ್ಟು ಜನಪ್ರಿಯತೆ ಗಳಿಸಿದ ನಂತರ ಈಗ ಕನ್ನಡತಿಯ ಹರ್ಷ ಮತ್ತೊಂದು ಪ್ರಾಜೆಕ್ಟ್ (Project) ಕೈಗೆತ್ತಿಕೊಂಡಿದ್ದಾರೆ. ಸೀರಿಯಲ್ ಜೊತೆ ಜೊತೆಗೆ ಸಿನಿಮಾಗಳನ್ನೂ ಮಾಡುತ್ತಿರುವ ಕಿರಣ್ ರಾಜ್ ಅವರ ಅಭಿಮಾನಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಡ್ಡೀಸ್ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರ ಇನ್ನೊಂದು ಸಿನಿಮಾ ಭರ್ಜರಿ ಗಂಡು ಚಿತ್ರ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಕಿರಣ್ ರಾಜ್ ನಾಯಕನಾಗಿ ನಟಿಸಿ, ಪ್ರಸಿದ್ಧ್ ನಿರ್ದೇಶಿಸುತ್ತಿರುವ 'ಶೇರ್' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಈ ಮೂಲಕ ಅವರ ಅಭಿಮಾನಿಗಳಿಗೆ ಮತ್ತೊಂದು ಸಿನಿಮಾದ ಭರವಸೆ ಕೊಟ್ಟಿದ್ದಾರೆ ನಟ. ನಿರ್ಮಾಪಕ ಡಾ.ಸುದರ್ಶನ್ ಸುಂದರರಾಜ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

'ಶೇರ್' ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಇದು ಕಿರಣ್ ರಾಜ್ ಅವರ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ. ಈ ಸಿನಿಮಾದ ಹೆಚ್ಚಿನ ಕಥಾ ಭಾಗವು ಅನಾಥಾಶ್ರಮದಲ್ಲಿ ನಡೆಯುತ್ತದೆ. ಅಲ್ಲೊಬ್ಬ ರಾಜಕಾರಣಿ ಇರುತ್ತಾನೆ. ಎರಡು ಗುಂಪುಗಳೂ ಇರುತ್ತದೆ.

ಇದನ್ನೂ ಓದಿ: Kiran Raj: ಕಿರುತೆರೆ ಸ್ಟಾರ್​ ಕಿರಣ್​ ರಾಜ್​ ಸಿನಿಮಾ ಟೀಸರ್​ ರಿಲೀಸ್​! ಸಖತ್​​ ಮಾಸ್​ ಆಗಿ ಬಂದ `ಭರ್ಜರಿ ಗಂಡು’

ಅನಾಥರ ಪಾತ್ರದಲ್ಲಿ ನಾಯಕ-ನಾಯಕಿ

ಒಂದು ಗುಂಪಿನವರು ಅನಾಥಾಶ್ರಮವನ್ನೇ ಅಡ್ಡ ಮಾಡಿಕೊಂಡಿರುತ್ತಾರೆ. ಅಲ್ಲಿ ಒಳ್ಳೆಯ ಗುಂಪು ಸಹ ಇರುತ್ತದೆ. ನಾಯಕ-ನಾಯಕಿ ಅನಾಥರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲೂ ಚಿತ್ರದ ಕಥೆ ಸಾಗುತ್ತದೆ.

ಸಾಫ್ಟ್​ಲುಕ್​ನ ಕಿರಣ್ ರಾಜ್​ಗೆ ರಗಡ್ ಪಾತ್ರ

ಸಾಫ್ಟ್​ ಲುಕ್​ನ ಕಿರಣ್ ಅವರು ಮಾಸ್ ಸಿನಿಮಾಗೆ ಹೊಂದಿಕೆಯಾಗುತ್ತಾರೋ ಎನ್ನುವ ಸಂದೇಹ ಬಹಳಷ್ಟು ಜನರಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿ, ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ಮುಂತಾದವುಗಳನ್ನು ಕಿರಣ್ ರಾಜ್ ಅಭ್ಯಾಸ ಮಾಡಿದ್ದಾರೆ. ನನ್ನ ಹಾಗೂ ಕಿರಣ್ ರಾಜ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ 'ಭರ್ಜರಿ ಗಂಡು' ಚಿತ್ರ ಸಹ ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ. ಆ ಚಿತ್ರದಲ್ಲಿ ಭಾಗಿಯಾಗಿರುವ ಬಹುತೇಕ ತಂಡವೇ ಈ ಚಿತ್ರದಲ್ಲಿ ಮುಂದುವರೆಯಲಿದೆ. ಬೀದರ್ ಸುದರ್ಶನ್ ಸುಂದರರಾಜ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದೇ 22 ರಿಂದ‌ ಚಿತ್ರೀಕರಣ ಆರಂಭವಾಗಲಿದೆ" ಎಂದು ನಿರ್ದೇಶಕ ಪ್ರಸಿದ್ಧ್ 'ಶೇರ್' ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kiran Raj: ಸೀರಿಯಲ್​ಗೂ ನಿಜ ಜೀವನಕ್ಕೂ ಕನೆಕ್ಟ್ ಮಾಡಬೇಡಿ, ಕನ್ನಡತಿ ನಟ ಕಿರಣ್ ರಾಜ್ ಮನವಿ

ಚಿತ್ರದ ನಾಯಕಿ ಸುರೇಖಾ ಹಾಗೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತರುವ ತನೀಶಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಿಟ್ಟಿ ಕೌಶಿಕ್ ಛಾಯಾಗ್ರಹಣದ ಬಗ್ಗೆ ಹಾಗೂ ಗುಮ್ಮಿನೇನಿ‌ ವಿಜಯ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

ಕನ್ನಡತಿಯ ಫೇಮಸ್ ಜೋಡಿ

ಕನ್ನಡತಿಯ ಧಾರವಾಹಿಯಲ್ಲಿ ನಟ ಕಿರಣ್ ರಾಜ್ ಹರ್ಷ ಆಗಿ ಕಾಣಿಸಿಕೊಂಡಿದ್ದರೆ, ಭುವಿ ಪಾತ್ರದಲ್ಲಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ತೆರೆಮೇಲೆ ಇವರಿಬ್ಬರ ಕೆಮೇಸ್ಟ್ರಿ ಚನ್ನಾಗಿದ್ದು, ಸೀರಿಯಲ್ ಸಹ ಉತ್ತಮ ಜನಮನ್ನಣೆ ಪಡೆದುಕೊಳ್ಳುತ್ತಿದೆ. ಇದರ ನಡುವೆ ಅನೇಕ ಅಭಿಮಾನಿಗಳು ನಿಜ ಜೀವನದಲ್ಲಿಯೂ ಕಿರಣ್​ ಹಾಗೂ ರಂಜನಿ ಅವರು ವಿವಾಹವಾಗಬೇಕು ಎಂದು ಬಯಸುತ್ತಿದ್ದಾರೆ. ಜೊತೆಗೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ. ಆದರೆ ಕೆಲವರು ಈ ವಿಚಾರದಲ್ಲಿ ಅನೇಕ ರೀತಿಯ ಸುಳ್ಳು ಸುದ್ದಿಗಳನ್ನೂ ಹಬ್ಬಿಸುತ್ತಿದ್ದಾರೆ. ಈ ವಿಚಾರವಾಗಿಯೇ ಇದೀಗ ಇಬ್ಬರೂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಿರಣ್ ರಾಜ್ ಅಸಮಾಧಾನ:

ಕಿರಣ್ ರಾಜ್​ ಹಾಗೂ ರಂಜನಿ ರಾಘವನ್ ಮಾಡುತ್ತಿರುವುದು ತೆರೆಯ ಮೇಲೆ ಕೇಔಲ ಪಾತ್ರವಾಗಿದೆ. ಆದರೆ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾಗಬೇಕು ಎಂದು ಹಲವರು ಬಯಸಿದರೆ, ಇನ್ನೂ ಕೆಲವರು ಇದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುಯದಕ್ಕೆ ನಟ ಕಿರಣ್ ರಾಜ್ ಅಸಮಾಧಾನಗೊಂಡಿದ್ದಾರೆ. ಈ ರೀತಿ ಮಾಡದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
Published by:Divya D
First published: