Kannadathi Actress: ಇಂಟ್ರೆಸ್ಟಿಂಗ್ ಒಗಟು ಕೇಳ್ತಿದ್ದಾರೆ ಕನ್ನಡ ಟೀಚರ್, ನಿಮಗೆ ಗೊತ್ತಾ ಆನ್ಸರ್?

ಕನ್ನಡತಿ ಧಾರವಾಹಿಯ ನಟಿ ರಂಜನಿ ರಾಘವನ್ ಸೋಷಿಯಲ್ ಮೀಡಿಯಾದಲ್ಲಿ ಸರಳವಾಗಿರುವ ಚಂದದ ಒಗಟುಗಳನ್ನು ಹೇಳುತ್ತಿದ್ದಾರೆ. ಬಿಡಿಸೋಕಾಗುತ್ತಾ? ನೀವೂ ಟ್ರೈ ಮಾಡಿ

ಒಗಟು ಕೇಳುವ ಭುವಿ

ಒಗಟು ಕೇಳುವ ಭುವಿ

  • Share this:
ಕನ್ನಡ ಧಾರವಾಹಿ ಲೋಕದ ಫೇಮಸ್ ನಟಿ ಕನ್ನಡತಿ (Kannadathi) ಖ್ಯಾತಿಯ ರಂಜನಿ ರಾಘವನ್ (Ranjani Raghavan) ಅವರು ಸೀರಿಯಲ್ (Serial) ಮಾಡ್ತಾ ಜೊತೆ ಸಾಕಷ್ಟು ಎಂಜಾಯ್ (Enjoy) ಮಾಡುತ್ತಾರೆ. ಶೂಟಿಂಗ್ ಸೆಟ್​ನ ಫನ್ನಿ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈಗ ನಟಿ ಒಗಟು ಬಿಡಿಸೋ ಸ್ಪರ್ಧೆ ಮಾಡುತ್ತಿದ್ದಾರೆ. ಸಖತ್ ಇಂಟ್ರೆಸ್ಟಿಂಗ್ ಆಗಿರೋ ಒಗಟುಗಳನ್ನು  (Puzzle) ತಮ್ಮ ಸಹ ನಟಿಯರಲ್ಲಿ ಕೇಳಿ ಉತ್ತರ ಪಡೆಯುತ್ತಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral) ಆಗುತ್ತಿದೆ. ರಂಜನಿ ರಾಘವನ್ ಸೀರಿಯಲ್​ನಲ್ಲಿ ತನ್ನ ತಂಗಿಯಾಗಿ ನಟಿಸೋ ಮೋನಿಕಾ (Monika) ಜೊತೆಗೆ ಒಗಟು ಬಿಡಿಸಿದ್ದಾರೆ. ಮೋನಿಕಾ ಅವರಿಗೆ ಒಗಟೊಂದನ್ನು ಹೇಳಿ ತಲೆಗೆ ಹುಳ ಬಿಟ್ಟಿದ್ದಾರೆ. ಇದು ವೀಕ್ಷಕರಿಗೂ ಸಖತ್ ಎಂಜಾಯ್ ಕೊಟ್ಟಿದೆ. ನೆಟ್ಟಿಗರೂ ಸಹ ಈ ಒಗಟಿನ ವಿಡಿಯೋಗಳನ್ನು (Video) ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ.

ಗೂಡಲ್ಲಿರುವ ಪಕ್ಷಿ ಊರೆಲ್ಲಾ ನೋಡುತ್ತೆ!

ಒಗಟು ಬಿಡಿಸೋಣ ಬನ್ನೊ ಎಂದು ಅತಿಥಿಗಳ ಜೊತೆ ಒಗಟು ಬಿಡಿಸೋ ರಂಜನಿ ರಾಘವನ್ ಅವರ ಈ ವಿಡಿಯೋಗಳು ನೆಟ್ಟಿಗರಿಗೂ ಭಾರೀ ಇಷ್ಟವಾಗುತ್ತಿದೆ. ವಿಡಿಯೋದಲ್ಲಿ ನಟಿ ಮೋನಿಕಾ ಅವರನ್ನು ಗೂಡಲ್ಲಿರುವ ಪಕ್ಷಿ ಊರೆಲ್ಲಾ ನೋಡುತ್ತೆ ಏನದು ಎಂದು ರಂಜನಿ ರಾಘವನ್ ಅವರು ಮೋನಿಕಾ ಅವರನ್ನು ಪ್ರಶ್ನಿಸಿದ್ದಾರೆ.

ಬಿಂದು ಪಾತ್ರದಲ್ಲಿ ಕಾಣಿಸಿಕೊಳ್ಳೋ ಮೋನಿಕಾ ಅವರಲ್ಲಿ ಒಗಟು ಕೇಳಿದ್ದು ನಟಿಗೆ ಆರಂಭದಲ್ಲಿ ಉತ್ತರ ಏನೆಂಬುದೇ ಅರ್ಥವಾಗಿಲ್ಲ. ಆದರೆ ನಂತರದಲ್ಲಿ ನಟಿ ಸರಿಯಾಗಿ ಉತ್ತರವನ್ನು ಹೇಳಿದ್ದಾರೆ. ಈ ಒಗಟಿನ ಉತ್ತರ ಕಣ್ಣು.






ಹಸಿರು ಕೋಟೆ, ಕೆಂಪು ಅರಮನೆ, ಕಪ್ಪು ಸೈನಿಕರು, ಏನು ಹೇಳಿ ನೋಡೋಣ

ಇದರ ನಂತರ ಹರ್ಷನ ತಂಗಿಯ ಪಾತ್ರದಲ್ಲಿ ನಟಿಸೋ ಅಮೃತ ಮೂರ್ತಿ ಜೊತೆಗೂ ಒಗಟುಗಳನ್ನು ಕೇಳಿದ್ದಾರೆ. ಹಸಿರು ಕೋಟೆ, ಕೆಂಪು ಅರಮನೆ, ಕಪ್ಪು ಸೈನಿಕರು ಎನ್ನುವ ಒಗಟನ್ನು ರಂಜನಿ ರಾಘವನ್ ಕೇಳಿದ್ದು ಅಮೃತಾ ಮೂರ್ತಿ ಇದಕ್ಕೆ ಉತ್ತರ ಹೇಳಲು ಪರದಾಡಿದ್ದಾರೆ. ಆರಂಭದಲ್ಲಿ ಸಿಕ್ಕ ಸಿಕ್ಕ ತರಕಾರಿಗಳ ಹೆಸರನ್ನು ಹೇಳಿದ ಅಮೃತಾ ಅವರು ಕೊನೆಗೆ ರಂಜನಿ ಅವರಲ್ಲಿ ಕ್ಲೂ ಕೂಡಾ ಕೇಳಿದ್ದಾರೆ.

ಇದನ್ನೂ ಓದಿ: Kannadathi Serial: `ಕನ್ನಡತಿ’ ಧಾರಾವಾಹಿಯಿಂದ ಹೊರ ಬಂದ ನಟಿ ರಮೋಲಾ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಆದರೆ ರಂಜನಿ ಕ್ಲೂ ಕೊಡುವುದಕ್ಕೆ ನಿರಾಕರಿಸಿದ್ದಾರೆ. ನಂತರ ಅಮೃತಾ ಮೂರ್ತಿ ಅವರೇ ಚೆನ್ನಾಗಿ ಆಲೋಚಿಸಿ ಕಲ್ಲಂಗಡಿ ಎಂದು ಉತ್ತರ ಹೇಳಿದ್ದಾರೆ. ಹೊರಭಾಗದಿಂದ ಹಸಿರಾಗಿರುವ ಕಲ್ಲಂಗಡಿ ಒಳಗೆ ಕೆಂಬಣ್ಣ ತುಂಬಿರುತ್ತದೆ. ಅದರ ಮಧ್ಯೆ ಕಡುಕಪ್ಪು ಬೀಜಗಳು ಸೈನಿಕರಂತೆ ಸಾಲು ಸಾಲಾಗಿ ಇರುತ್ತದೆ.






ಇನ್ನು ಸಾನ್ಯಾ ಪಾತ್ರ ಮಾಡುವ ಆರೋಹಿ ಬಳಿಯೂ ಭುವಿ ಒಗಟು ಕೇಳಿದ್ದಾರೆ. ಕನ್ನಡತಿಯಲ್ಲಿ ವಿಲನ್ ಆಗಿ ಮಿಂಚುತ್ತಿರುವ ಸಾನ್ಯಾ ಅವರು ಒಗಟು ಬಿಡಿಸೋದ್ರಲ್ಲಿ ಎಷ್ಟು ಜಾಣೆ ಎಂದು ತೋರಿಸಿದೆ ಈ ವಿಡಿಯೋ.

ಇದನ್ನೂ ಓದಿ: Kannadathi Serial: ಕನ್ನಡತಿಯಲ್ಲಿ ಕೊನೆಯಾಗುತ್ತಾ ಅಮ್ಮಮ್ಮನ ಪಾತ್ರ? ವಾಹಿನಿಯವರಲ್ಲಿ ಅಭಿಮಾನಿಗಳ ಕೋರಿಕೆ ಏನು?






ಮೋಟು ಗೋಡೆಯ ಮೇಲೆ ದೀಪ ಉರಿಯುತ್ತಿದೆ ಎನ್ನುವ ಸಿಂಪಲ್ ಒಗಟನ್ನು ಸಾನ್ಯಾಗೆ ಕೇಳಿದ್ದಾರೆ. ಬಲ್ಬ್ ಎಂಬ ಉತ್ತರ ಕೊಟ್ಟ ನಟಿ ನಂತರ ಹಣೆ ಎಂದು ಹೇಳಿದ ಅವರು ನಂತರ ಮೂಗು ಎಂದು ಹೇಳಿದ್ದಾರೆ. ಮೋಟು ಗೋಡೆ ಎಂದರೆ ಮೂಗು ಹಾಗೂ ದೀಪ ಎಂದರೆ ಹೊಳೆಯುವ ಮೂಗುತಿ ಎಂದು ಅರ್ಥ. ಕೊನೆಗೂ ಉತ್ತರ ಕಂಡು ಹಿಡಿದು ಬಿಟ್ಟಿದ್ದಾರೆ ಆರೋಹಿ ನೈನಾ.
Published by:Divya D
First published: