ಕನ್ನಡದಲ್ಲಿ ಈ ಮೂಲಕವಾದರೂ ಉತ್ತಮ ಚಿತ್ರಗಳ ಸಂಖ್ಯೆ ಹೆಚ್ಚಾಗಬಹುದೇ?


Updated:September 2, 2018, 3:11 PM IST
ಕನ್ನಡದಲ್ಲಿ ಈ ಮೂಲಕವಾದರೂ ಉತ್ತಮ ಚಿತ್ರಗಳ ಸಂಖ್ಯೆ ಹೆಚ್ಚಾಗಬಹುದೇ?

Updated: September 2, 2018, 3:11 PM IST
- ಶಿವಾಜಿ ರತ್ನ, ನ್ಯೂಸ್18 ಕನ್ನಡ

ಒಂದು ಸಿನಿಮಾ ರೂಪುಗೊಳ್ಳಲು ಆ ಸಿನಿಮಾದ ಆರಂಭದಿಂದ ಅಂತ್ಯದವರೆಗೂ ಸಹ-ಸಹಾಯಕ ನಿದೇಶಕರು ಪಡುವ ಪಾಡು ಹೇಳತೀರದು. ಸಿನಿಮಾ ಪೂರ್ವ ಕೆಲಸದಿಂದ ಹಿಡಿದು ಸಿನಿಮಾ ತೆರೆಕಂಡ ನಂತರದ ಪ್ರಚಾರ ಕೆಲಸದವರೆಗೂ ಸಹ-ಸಹಾಯಕ ನಿರ್ದೇಶಕರು ನಿರ್ದೇಶಕರೊಂದಿಗೆ ಪ್ರತೀ ಹೆಜ್ಜೆಯಲ್ಲೂ ಅವರ ಕಷ್ಟಗಳಲ್ಲಿ ಭಾಗಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ನಿರ್ದೇಶಕರ ತಂಡ ಒಂದು ಸಿನಿಮಾದ ಆಧಾರ ಸ್ತಂಭಗಳೆಂದರೆ ತಪ್ಪಾಗಲಾರದು. ಆದರೆ ಇಂತಹ ಶ್ರಮಜೀವಿಗಳಿಗೆ ಅದ್ಯಾಕೋ ನಮ್ಮ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಸಿಗಬೇಕಾದ ಗೌರವವಾಗಲೀ ಗೌರವ ಧನವಾಗಲೀ ದೊರಕಲೇ ಇಲ್ಲಾ.ಕಂಗಳಲ್ಲಿ ಸಾವಿರಾರು ಕನಸುಗಳ ಹೊತ್ತು ತನ್ನ ಕಲ್ಪನೆಗಳನ್ನು ಬೆಳ್ಳಿತೆರೆಯಲ್ಲಿ ಒಡಮೂಡಿಸಲು ಸಿನಿಮಾ ತಂಡ ಸೇರುವ ಸಹ-ಸಹಾಯಕ ನಿರ್ದೇಶಕರು ತಮ್ಮ ಕನಸಿನ ಸಾಕಾರಕ್ಕಾಗಿ ಪಡಬಾರದ ಪಾಡು ಪಡುತ್ತಾರೆ. ಬಸ್ಸಿಗೆ ಹಣವಿಲ್ಲದಿದ್ದರೂ, ಹೊಟ್ಟೆಗೆ ಸರಿಯಾಗಿ ಊಟವಿಲ್ಲದ್ದರೂ ಮರುಗದೇ ತನ್ನ ಪಯಣ ಮುಂದುವರೆಸುತ್ತಾರೆ. ಒಂದಲ್ಲಾ ಒಂದು ದಿನ ನಿರ್ದೇಶಕನಾಗೇ ತೀರುತ್ತೇನೆ ಎಂಬ ಛಲದಿಂದ ಬದುಕುವ ಇವರನ್ನು ನಮ್ಮ ಚಿತ್ರರಂಗವೂ ಇದುವರೆಗೂ ಸರಿಯಾಗಿ ನಡೆಸಿಕೊಂಡಿಲ್ಲಾ . ಇವತ್ತು ನಮ್ಮ ಕನ್ನಡ ಸಿನಿಮಾಗಳು ನೆಲಕಚ್ಚಲು ಉತ್ತಮ ಚಿತ್ರಗಳ ಸಂಖ್ಯೆ ಕ್ಷೀಣಿಸಲೂ ಇದೂ ಒಂದು ಕಾರಣ ಎಂದರೆ ತಪ್ಪಾಗಲಾರದು.  ಕಾರಣ ನಿರ್ದೇಶಕರ ತಂಡಕ್ಕೆ ಸಿಗಬೇಕಾದ ಸಂಭಾವನೆ, ಗೌರವ ಸಿಗದೇ ಹೋದಾಗ, ನಿರ್ದೇಶನ ತಂಡದ ಯಾವ ಸದಸ್ಯನೂ ಸಿನಿಮಾ ತಯಾರಿಯಲ್ಲಿ ತನ್ನನ್ನು ತಾನು ಮನಸ್ಫೂರ್ವಕವಾಗಿ ಸರಿಯಾಗಿ ತೊಡಗಿಸಿಕೊಳ್ಳುವುದಿಲ್ಲಾ ಕೇವಲ ತನಗೆ ಬೇಕಾದ ಸಿನಿಮಾ ಅನುಭವಕ್ಕಾಗಿ ನಾಟಕೀಯವಾಗಿ ತೊಡಗಿಕ್ಕೊಳ್ಳುತ್ತಾನೆ ಪರಿಣಾಮ ಸಿನಿಮಾ ಕೆಡುತ್ತದೆ.

ಒಂದು ಸಿನಿಮಾ ಕಥಾ ಎಳೆಯು ಒಬ್ಬ ನಿರ್ದೇಶಕನಲ್ಲಿ ಮೂಡಿದಾಗ ಮೊದಲು ಅವನು ಒಂದು ಸಮರ್ಥ ನಿರ್ದೇಶನ ತಂಡವನ್ನು ಕಟ್ಟಿಕೊಂಡು ಅವರೊಂದಿಗೆ ಆ ಎಳೆಯನ್ನು ಎಲ್ಲಾ ಆಯಾಮಗಳಲ್ಲೂ ಚರ್ಚಿಸಿ ಆ ಕಥಾ ಎಳೆಗೆ ಸಿನಿಮಾ ಕಥಾರೂಪ ಕೊಡಬೇಕಾಗುತ್ತದೆ. ನಂತರ ಅದೇ ತಂಡದೊಂದಿಗೆ ಚಿತ್ರಕತೆ, ಸಂಭಾಶಣೆ ಸಹ ಚರ್ಚೆ ನೆಡೆಸಿ ಉತ್ತಮ ಚಿತ್ರಕತೆ ಸಿದ್ದ ಪಡಿಸಿಕೊಳ್ಳಬೇಕು. ನಂತರ ಚಿತ್ರೀಕರಣದ ಸಮಯದಲ್ಲೂ ನಿರ್ದೇಶನ ತಂಡವನ್ನ ಸಮರ್ಥವಾಗಿ ಬಳಸಿಕೊಳ್ಳಬೇಕು.  ಆಗಾದಾಗಲೇ ಒಂದು ಉತ್ತಮ ಸಿನಿಮಾ ರೂಪಗೊಳ್ಳಲು ಸಾದ್ಯ. ಒಬ್ಬ ನಿರ್ದೇಶಕನಿಂದ ಎಲ್ಲವನ್ನೂ ಸಂಭಾಳಿಸಲಾಗದು. ಒಂದು ಸಿನಿಮಾ ಗೆದ್ದಿದೆಯೆಂದರೆ ಅಲ್ಲಿ ನಿರ್ದೇಶಕರ ತಂಡದ ಕೆಲಸ ಅಚ್ಚುಕಟ್ಟಾಗಿರುತ್ತದೆ. ಸಿನಿಮಾ ಒಂದು ಪ್ರತ್ಯೇಕ ಕಲೆ, ಪ್ರತ್ಯೇಕ ತಪಸ್ಸು. ಜ್ಞಾನಪೀಠ ಪಡೆದವರಿಂದಲೂ ಒಂದು ಯಶಸ್ವಿ ಚಿತ್ರ ತಯಾರಿಸಲು ಸಾದ್ಯವಿಲ್ಲಾ, ಸಿನಿಮಾಗೆ ಅದರದೇ ಪ್ರತ್ಯೇಕ ನ್ಯೆಪುಣ್ಯತೆ ಬೇಕಾಗುತ್ತದೆ. ಅದು ಸಿನಿಮಾವನ್ನು ತಪಸ್ಸಿನಂತೆ ಕಾಣುವರಿಂದ ಮಾತ್ರ ಸಾದ್ಯ. ಸಿನಿಮಾ ಸುಲಭ ಎಂದುಕೊಳ್ಳುವರಿಂದ ಅಸಾದ್ಯ. ಸಿನಿಮಾದಲ್ಲಿ ಕಲಿಕೆಗೆ ಕೊನೆಯಿಲ್ಲಾ, ಅದೆಷ್ಟೇ ಯಶಸ್ವಿ ನಿರ್ದೇಶಕರಾಗಿದ್ದರೂ ಕಲಿಕೆ ಪ್ರತೀದಿನ ಇದ್ದೇ ಇರುತ್ತದೆ. ಇಂತಹ ಸಿನಿಮಾವನ್ನು ತಪ್ಪಿಸ್ಸಿನಂತೆ ಅದ್ಯಯನ ಮಾಡಿ ಒಂದೊಳ್ಳೆ ಸಿನಿಮಾ ನಿರ್ದೇಶಿಸಬೇಕೆಂಬ ಕನಸಿನೊಂದಿಗೆ ಬದುಕುವ ನಿರ್ದೇಶನ ತಂಡದ ಪ್ರತೀಯೊಬ್ಬರನ್ನೂ ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಸರಿಯಾಗಿ ಬಳಸಿಕೊಳ್ಳಬೇಕಾಗಿದೆ, ಅವರಿಗೆ ಸಿಗಬೇಕಾದ ಗೌರವ, ಗೌರವ ಧನ ಸಿಗುವಂತೆ ಕೆಲವು ನಿರ್ಣಯಗಳನ್ನು ಕ್ಯೆಗೊಳ್ಳಬೇಕಾಗಿದೆ.ಸದ್ಯದ ವಿಷಯ ಏನೆಂದರೆ, ಇಂತಿಪ್ಪಾ ಸಹ-ಸಹಾಯಕ ನಿರ್ದೇಶಕರು ಎದುರಿಸುತ್ತಿರುವ ಸಮಸ್ಯೆಯನ್ನು ಆಲಿಸಲು ಕೆಲವು ನಿರ್ಣಯಗಳನ್ನು ಕ್ಯೆಗೊಳ್ಳಲು ಕೊನೆಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷರಾದ ವಿ.ನಾಗೇಂದ್ರಪ್ರಸಾದ್ ರವರು ಹಾಗು ಉಪಾಧ್ಯಕ್ಷರಾದ ಸಾದು ಕೋಕಿಲ ರವರು ಸೆಪ್ಟೆಂಬರ್ 9 ರಂದು , ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ಇರುವ ಕನ್ನಡ ಸಾಹಿತ್ಯ ಪರಿಶತ್ ಎದುರಿನಲ್ಲಿರುವ ಕಲಾವಿದರ ಭವನದ ಆವರಣದಲ್ಲಿ ಒಂದು ಸಭೆಯನ್ನ ಆಯೋಜಿಸಲಾಗಿದೆ. ಸಮಯ ಬೆಳಗ್ಗೆ 10 ರಿಂದ ಸಂಜೆ 6 ಘಂಟೆಯವೆರೆಗೆ ಎಲ್ಲಾ ಪದಾದಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಸಿನಿಮಾದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಹ-ಸಹಾಯಕ ನಿರ್ದೇಶಕರನ್ನು ಆಹ್ವಾನಿಸಲಾಗಿದೆ. ಸದಸ್ಯತ್ವ ಹೊಂದಿರುವವರು, ಹೊಂದಲು ಬಯಸುವವರು ಪ್ರತೀಯೊಬ್ಬರನ್ನೂ ಆಹ್ವಾನಿಸಲಾಗಿದೆ. ಅಂದು ಸಹ-ಸಹಾಯಕ ನಿರ್ದೇಶಕರುಗಳು ಅನುಭವಿಸುತ್ತಿರುವ ತೊಂದರೆ, ಸಮಸ್ಯೆಗಳನ್ನು ಆಲಿಸಿ ಎಲ್ಲಾ ಪದಾದಿಕಾರಿಗಳ ಸಮ್ಮುಖದಲ್ಲಿ ಸೂಕ್ತ ಪರಿಹಾರ ಹಾಗೂ ಅದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ನೂತನ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾಗಿರುವ ಸಿನಿಮಾ ಸಾಹಿತಿ, ನಿರ್ದೇಶಕರೂ ಆದ ವಿ.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
Loading...

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷರಾದ ವಿ.ನಾಗೇಂದ್ರಪ್ರಸಾದ್  ಹಾಗು ಉಪಾಧ್ಯಕ್ಷರಾದ ಸಾದು ಕೋಕಿಲ ರವರ ಈ ನಡೆಯನ್ನು ಅಭಿನಂದಿಸುತ್ತ, ಸಭೆ ಯಶಸ್ವಿಯಾಗಲು ಎಲ್ಲಾ ನಿರ್ದೇಶನ ತಂಡದ ಸದಸ್ಯರೂ ತಪ್ಪದೇ ಸಭೆಯಲ್ಲಿ ಭಾಗಿಯಾಗಲೇಬೇಕು. ಇನ್ನಾದರು ನಿರ್ದೇಶನ ತಂಡದ ಸಮಸ್ಯೆಗಳಿಗೆ ಒಂದು ಪರಿಹಾರ ಸಿಕ್ಕಿ ಕನ್ನಡದಲ್ಲೂ ಒಳ್ಳೆಯ ಸಿನಿಮಾಗಳು ಮೂಡುವಂತಾಗಲೀ ಎಂಬುದೇ ನಮ್ಮ ಆಶಯ.

First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ