• Home
  • »
  • News
  • »
  • entertainment
  • »
  • Director Pannaga Bharana: ಚಿರುಗಾಗಿ ಮಾಡಿದ್ದ ಸಿನಿಮಾದಲ್ಲಿ ಮೇಘನಾ ಹೀರೋಯಿನ್!

Director Pannaga Bharana: ಚಿರುಗಾಗಿ ಮಾಡಿದ್ದ ಸಿನಿಮಾದಲ್ಲಿ ಮೇಘನಾ ಹೀರೋಯಿನ್!

ಗೆಳೆಯ ಚಿರುಗಾಗಿಯೇ  ಸಿನಿಮಾ

ಗೆಳೆಯ ಚಿರುಗಾಗಿಯೇ ಸಿನಿಮಾ

ಚಿರು ಮತ್ತು ಪ್ರಜ್ವಲ್ ನನ್ನ ಆಪ್ತ ಸ್ನೇಹಿತರು. ಇವರ ಮುಖ್ಯ ಭೂಮಿಕೆಯಲ್ಲಿ ನನ್ನ ನಿರ್ಮಾಣ ಸಂಸ್ಥೆ ಮೊದಲ ಸಿನಿಮಾ ಬರಬೇಕಿತ್ತು. ಅಷ್ಟರಲ್ಲಿಯೇ ಚಿರು ನಮ್ಮನ್ನ ಬಿಟ್ಟು ಹೋದ್ರು. ಆ ನೋವು ಇದ್ದೇ ಇದೆ.

  • Share this:

ಚಿರು (Chiru) ಮತ್ತು ಪ್ರಜ್ವಲ್ (Prajwal) ನನ್ನ ಆಪ್ತ ಸ್ನೇಹಿತರು. ಇವರ ಮುಖ್ಯ ಭೂಮಿಕೆಯಲ್ಲಿ ನನ್ನ ನಿರ್ಮಾಣ (Production House) ಸಂಸ್ಥೆ ಮೊದಲ ಸಿನಿಮಾ ಬರಬೇಕಿತ್ತು. ಅಷ್ಟರಲ್ಲಿಯೇ ಚಿರು ನಮ್ಮನ್ನ ಬಿಟ್ಟು ಹೋದ್ರು.
ಆ ನೋವು ಇದ್ದೇ ಇದೆ. ಮೊದಲ ಸಿನಿಮಾ ಚಿರುದೇ ಆಗಬೇಕು ಅನ್ನೋ ಕನಸು ಹಾಗೆ ಉಳಿದು ಬಿಡ್ತು. ಆ ಬೇಸರದಲ್ಲಿ ಇರೋವಾಗ್ಲೆ ಒಂದು ಕಥೆ ಬಂತು. ಅದನ್ನ ಕೇಳಿದಾಗ ಇದಕ್ಕೆ ಮೇಘನಾ ರಾಜ್ (Meghana Raj) ಸರಿಯಾಗುತ್ತಾರೆ ಅನಿಸಿತು. ಒಂದು ಒಳ್ಳೆ ಅವಕಾಶ ಅಲ್ವೇ? ಹೀಗೆ ಅಂದುಕೊಂಡೇ ಮೇಘನಾ ನಟನೆಯ ಸಿನಿಮಾ ಶುರು ಮಾಡಿದೇವು. ಆಗಲೇ ಈ ಚಿತ್ರಕ್ಕೆ ಇನ್ನೂ ಒಂದು ಪಾತ್ರದ ಅವಶ್ಯಕತೆ ಇತ್ತು. ಆಗಲೇ ಪ್ರಜ್ವಲ್ ದೇವರಾಜ್ ಕಥೆ ಕೇಳಿ, ಎರಡನೇ ಮಾತು ಆಡದೇ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟರು, ಹೀಗೆ ಚಿರು ಗೆಳೆಯ ಪನ್ನಗ ಭರಣ ತಮ್ಮ ಮೊದಲ ಹೆಜ್ಜೆಯ ಮಾತುಗಳನ್ನ ಹೇಳಿಕೊಂಡರು.

ಮೇಘನಾ ರಾಜ್ ಅಭಿನಯದ ಚಿತ್ರದ ಶೂಟಿಂಗ್ ಕಂಪ್ಲೀಟ್
ಕನ್ನಡದ ಯುವ ನಿರ್ದೇಶಕ ಪನ್ನಗ ಭರಣ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ತಮ್ಮ ನಿರ್ಮಾಣದ ಮೊದಲ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಈ ಮೂಲಕ ನಟಿ ಮೇಘನಾ ರಾಜ್ ಮತ್ತೆ ಅಭಿನಯಿಸೋಕೆ ಆರಂಭಿಸಿದ್ದಾರೆ.




ಮೇಘನಾ ರಾಜ್ ಅವರಿಗೆ ನಾನು ಕೇಳಿದ ಕಥೆ ಸೂಟೇಬಲ್ ಅನಿಸಿಬಿಡ್ತು. ಈ ಕಾರಣಕ್ಕೇನೆ ನನ್ನ ನಿರ್ಮಾಣದ ಮೊದಲ ಸಿನಿಮಾ ಮೇಘನಾ ಜೊತೆಗೆ ಶುರು ಆಗಿ ಬಿಡ್ತು.
ಮೇಘನಾ ಪಾತ್ರವೇನು ಅನ್ನೋದನ್ನ ತೆರೆ ಮೇಲೆನೇ ನೋಡಿ


Young Director Producer Pannga Bharana Talk About Meghana Raj New Movie
ಮೇಘನಾ ಅಭಿನಯ-ಪನ್ನಗ ನಿರ್ಮಾಣ


ಮೇಘನಾ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನೇ ಮಾಡುತ್ತಿದ್ದಾರೆ. ಮೇಘನಾ ಪಾತ್ರವೇನು ಅನ್ನೋದನ್ನ ಈಗಲೇ ರಿವೀಲ್ ಮಾಡೋಕೆ ಆಗೋದಿಲ್ಲ.


ಹಾಗೇನಾದ್ರೂ ಮಾಡಿದ್ರೇ ಇಡೀ ಕಥೆ ರಿವೀಲ್ ಆಗಿ ಬಿಡುತ್ತದೆ. ಹಾಗಾಗಿಯೇ ಅದನ್ನ ತೆರೆ ಮೇಲೆನೆ ನೋಡಿ ಬಿಡಿ ಅನ್ನೋ ಅರ್ಥದಲ್ಲಿ ಪನ್ನಗ ಭರಣ ರಿಯಾಕ್ಟ್ ಮಾಡುತ್ತಾರೆ.
ಮೇಘನಾ ಅಭಿನಯದ ಚಿತ್ರದಲ್ಲಿ ಥ್ರಿಲ್ಲರ್ ಕಂಟೆಂಟ್


ಇದನ್ನೂ ಓದಿ:Rashmika Mandanna: ರಶ್ಮಿಕಾ ಮಂದಣ್ಣ​ ಕ್ರೇಜ್​; ಎದೆ ಮೇಲೆ ಆಟೋಗ್ರಾಫ್ ಬೇಕೇ ಬೇಕು ಎಂದ ಫ್ಯಾನ್!


ಪನ್ನಗ ಹೇಳುವಂತೆ ಇದೊಂದು ಥ್ರಿಲ್ಲರ್ ಸಿನಿಮಾ. ಈ ಚಿತ್ರದಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್. ಈ ಪಾತ್ರಕ್ಕೆ ಪ್ರಜ್ವಲ್ ಸೂಟ್ ಆಗುತ್ತಾರೆ. ಒಮ್ಮೆ ಕೇಳಿ ನೋಡಿ ಅಂತಲೇ ಮೇಘನಾ ರಾಜ್ ಸಲಹೆ ಕೊಟ್ಟರು.


ಪೊಲೀಸ್ ಪಾತ್ರದ ಕಥೆ ಕೇಳಿ ಪ್ರಜ್ವಲ್ ಹೇಳಿದ್ದೇನು?
ಆ ಪ್ರಕಾರ ನಾನು ಪ್ರಜ್ವಲ್ ಗೆ ಕಥೆ ಹೇಳಿದೇವು. ಕಥೆ ಕೇಳಿದ ಬಳಿಕ ನೈಸ್ ಸ್ಟೋರಿ ಅಂತಲೂ ಪ್ರಜ್ವಲ್ ಹೇಳಿದರು. ಆಗಲೇ ಈ ಪಾತ್ರ ಮಾಡ್ತೀರಾ ಅಂತಲೂ ಕೇಳಿದೇವು. ಎರಡನೇ ಮಾತೂ ಆಡದೇ ಪ್ರಜ್ವಲ್ ಓಕೆ ಅದು ಬಿಟ್ಟರು.


ಚಿರುಗಾಗಿ, ಮೇಘನಾಗಾಗಿ ನೀನು ಸಿನಿಮಾ ಮಾಡ್ತಾ ಇದ್ದೀಯಾ, ನಾನು ಸಾಥ್ ಕೊಡ್ತಿನಿ ಅಂತ ಪ್ರಜ್ವಲ್ ಪೊಲೀಸ್ ಪಾತ್ರ ಮಾಡಲು ಒಪ್ಪಿಯೇ ಬಿಟ್ಟರು. ಈಗ ಆ ಪಾತ್ರದ ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದೇ ಅಂತಲೇ ಪನ್ನಗ ಭರಣ ಹೇಳ್ತಾರೆ.


ಪನ್ನಗ ಭರಣ ನಿರ್ಮಾಣದ ಚಿತ್ರಕ್ಕೆ ವಿಶಾಲ್ ಡೈರೆಕ್ಷನ್
ಪನ್ನಗ ಭರಣ ನಿರ್ಮಾಣದ ಈ ಮೊದಲ ಚಿತ್ರಕ್ಕೆ ವಿಶಾಲ್ ಆಥ್ರೇಯ ನಿರ್ದೇಶಕರು. ಇವರಿಗೂ ಇದು ಮೊದಲ ಸಿನಿಮಾನೇ ಆಗಿದೆ. ಹಾಗೇನೆ ಈಗೀನ ಟ್ರೆಂಡ್​ನಲ್ಲಿ ಕ್ರೈಮ್ ಥ್ರಿಲ್ಲರ್ ಸಿನಿಮಾನೇ ಓಡ್ತಿವೆ. ಆ ಹಿನ್ನೆಲೆಯಲ್ಲಿ ಈ ಒಂದು ಸಿನಿಮಾ ಮಾಡಿದ್ದೇವೆ ಅಂತಲೇ ಪನ್ನಗ ಭರಣ ತಿಳಿಸಿದ್ದಾರೆ.


Young Director Producer Pannga Bharana Talk About Meghana Raj New Movie
ಮೇಘನಾ ಅಭಿನಯದ ಚಿತ್ರಕ್ಕೆ ಡೈರೆಕ್ಟರ್ ಪನ್ನಗ ಬಂಡವಾಳ


ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಜ್ವಲ್ ರೀತಿನೇ ಇನ್ನೂ ಇಬ್ಬರು ಕಲಾವಿದರು ನಮ್ಮ ಚಿತ್ರದಲ್ಲಿ ಅಭಿಸಲಿದ್ದಾರೆ. ಆ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ.


ಮೇಘನಾ ರಾಜ್ ಸಿನಿಮಾ ಮುಂದಿನ ವರ್ಷ ರಿಲೀಸ್
ಸದ್ಯಕ್ಕೆ ಚಿತ್ರೀಕರಣದ ನಂತರದ ಕೆಲಸಗಳು ನಡೆಯುತ್ತಿವೆ. ಮುಂದಿನ ವರ್ಷದ ಆರಂಭದಲ್ಲಿಯೇ ಚಿತ್ರ ರಿಲೀಸ್ ಮಾಡುತ್ತೇವೆ. ಆ ಹಿನ್ನೆಲೆಯಲ್ಲಿ ಪ್ಲಾನಿಂಗ್ ನಡೆಯುತ್ತಿದೆ.



ಇದನ್ನೂ ಓದು: Dadasaheb Phalke Award: ಕನ್ನಡದ ಕಲಾವಿದರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಗದ ಅಸಲಿ ಸತ್ಯವಿದು!


ಅಕ್ಟೋಬರ್-17ಕ್ಕೆ ಚಿರು ಜನ್ಮ ದಿನ-ಈ ದಿನವೇ ಟೈಟಲ್ ರಿವೀಲ್
ಬರೋ ಅಕ್ಟೋಬರ್-17 ರಂದು ಚಿರು ಜನ್ಮ ದಿನ ಇದೆ. ಇದೇ ದಿನವೇ ನಾವು ನಮ್ಮ ಚಿತ್ರದ ಟೈಟಲ್ ಅನ್ನೂ ಕೂಡ ರಿವೀಲ್ ಮಾಡುತ್ತೇವೆ ಅಂತಲೇ ಪನ್ನಗ ಭರಣ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.

First published: