ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ (Kabzaa Cinema) ಚಿತ್ರದ ತಾರಾ ಬಳಗದ ಪಟ್ಟಿ ದೊಡ್ಡದಿದೆ. ಅದರ ಆಳ ಮತ್ತು ಉದ್ದ ಈಗೀಗ ತಿಳಿಯುತ್ತಿದೆ. ಕನ್ನಡ ಕಲಾವಿದರೆಲ್ಲ (Kannada Artists) ಈ ಚಿತ್ರದಲ್ಲಿದ್ದಾರೆ ಅನ್ನುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಸ್ವತಃ ಚಿತ್ರ ತಂಡವೇ ಒಂದೊಂದಾಗಿ ಹೇಳಿಕೊಳ್ಳುತ್ತಿದೆ. ರಾಜಕಾರಣಿ ರೇವಣ್ಣ ಅವರ ಪುತ್ರ ಅನೂಪ್ (Anoop Revanna) ಕೂಡ ಕಬ್ಜ ಚಿತ್ರದಲ್ಲಿದ್ದಾರೆ. ಇವರ ಪಾತ್ರ ತುಂಬಾನೇ ವಿಶೇಷವಾಗಿದೆ. ಈ ಬಗ್ಗೆ ಎಲ್ಲೂ ಹೆಚ್ಚಿಗೆ ಹೇಳದೆ ಇರೋ ಅನೂಪ್, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಹಾಗಂತ ಎಲ್ಲವನ್ನೂ (Kabzaa Reveals) ರಿವೀಲ್ ಮಾಡ್ಬಿಟ್ರಾ ಅಂತ ಯಾರೂ ಅನ್ಕೋಬೇಡಿ. ಇವರ ಮನಸ್ಸಿನ ಮಾತಿನ ವಿಷಯ ಬೇರೆ ಇದೆ. ಅದೇನೂ ಇಲ್ಲಿ ಓದಿ.
ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ತುಂಬಾ ಕಲಿತಿದ್ದೇನೆ!
ರಿಯಲ್ ಸ್ಟಾರ್ ಉಪೇಂದ್ರ ಅವರು ತುಂಬಾ ತಿಳಿದುಕೊಂಡಿದ್ದಾರೆ. ಇವರ ಜೊತೆಗೆ ಮಾತನಾಡುತ್ತಾ ಕುಳಿತ್ರೆ ಸಾಕು, ಏನೆಲ್ಲ ವಿಷಯ ತಿಳಿದು ಬಿಡುತ್ತದೆ. ಉಪ್ಪಿ ಅವರು ಅಪ್ಡೇಟ್ ಆಗ್ತಾನೇ ಇರ್ತಾರೆ. ನಮಗೆ ಗೊತ್ತಿಲ್ಲದೇ ಇರೋ ವಿಷಯ ಕೂಡ ಅವರಿಗೆ ತಿಳಿದಿದೆ.
ಅನೂಪ್ ರೇವಣ್ಣ ಕೇಳುವ ಪ್ರಶ್ನೆಗೆ ಹೀಗೆ ಮಾತನಾಡುತ್ತಲೇ ಹೋದ್ರು. ಅನೂಪ್ ಕನ್ನಡ ಇಂಡಸ್ಟ್ರಿಗೆ ಹೊಸ ಹುಡುಗ ಅಂತ ಎಲ್ಲರಿಗೂ ಗೊತ್ತಿದೆ. ಆರ್. ಚಂದ್ರು ನಿರ್ದೇಶನದ ಲಕ್ಷ್ಮಣ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಬಂದ ಅನೂಪ್ ರೇವಣ್ಣ ಅಭಿನಯದ ಪಟ್ಟುಗಳನ್ನ ಕಲಿಯುತ್ತಿದ್ದಾರೆ.
ರಿಯಲ್ ಸ್ಟಾರ್ ಜತೆ ತೆರೆ ಹಂಚಿಕೊಂಡ ಅನೂಪ್ ರೇವಣ್ಣ
ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸುತ್ತ-ಮುತ್ತ ಹತ್ತು ಹಲವು ಪಾತ್ರಗಳು ಇವೆ. ಇದರ ಬಗ್ಗೆ ಈಗ ಒಂದೊಂದಾಗಿಯೇ ಎಲ್ಲವೂ ಹೊರ ಬೀಳುತ್ತಿವೆ. ಅದರಂತೆ ಸ್ವತಃ ಅನೂಪ್ ರೇವಣ್ಣ ಕೂಡ ಈ ಚಿತ್ರದಲ್ಲಿ ಇರೋದು ಗೊತ್ತಾಗಿದೆ.
ಇಡೀ ಕಬ್ಜ ಚಿತ್ರದಲ್ಲಿ ಅನೂಪ್ ರೇವಣ್ಣ ಇರುತ್ತಾರೆ. ವಿಶೇಷವಾಗಿ ಉಪ್ಪಿ ಜೊತೆಗೇನೆ ಅನೂಪ್ ಪಾತ್ರ ಹೋಗುತ್ತದೆ. ಈ ವಿಷಯವನ್ನ ಹಂಚಿಕೊಂಡಿರೊ ಅನೂಪ್ ರೇವಣ್ಣ ಒಳ್ಳೆ ಪಾತ್ರ ಮಾಡಿರೋ ಸಂತೋಷದಲ್ಲಿದ್ದಾರೆ.
ರಿಯಲ್ ಭಾಯ್ ಬಲಗೈ ಬಂಟ ಅನೂಪ್ ರೇವಣ್ಣ!
ಅನೂಪ್ ರೇವಣ್ಣ ಪಾತ್ರ ಕಬ್ಜ ಚಿತ್ರದಲ್ಲಿ ವಿಶೇಷವಾಗಿಯೇ ಇದೆ. ಈ ಚಿತ್ರದ ಉಪ್ಪಿ ಪಾತ್ರದ ಜೊತೆಗೆ ಅನೂಪ್ ಪಾತ್ರವೂ ಸಾಗುತ್ತದೆ. ಒಂದು ರೀತಿ ಬಲಗೈ ಬಂಟ ಅಂದ್ರೂ ತಪ್ಪಿಲ್ಲ. ಆ ರೀತಿಯ ಪಾತ್ರವೇ ಇದಾಗಿರುತ್ತದೆ ಅನ್ನೋದು ಅನೂಪ್ ಮಾತಿನ ಒಟ್ಟು ತಾತ್ಪರ್ಯ.
ಅನೂಪ್ ರೇವಣ್ಣ ತಮ್ಮ ಈ ಚಿತ್ರದ ಪಾತ್ರವನ್ನ ಜನ ಹೇಗೆ ಸ್ವೀಕರಿಸುತ್ತಾರೆ ಅನ್ನುವ ಕುತೂಹಲದಲ್ಲೂ ಇದ್ದಾರೆ. ಜನ ತಮ್ಮ ಪಾತ್ರವನ್ನ ತುಂಬಾ ಚೆನ್ನಾಗಿಯೇ ಸ್ವೀರಿಸುತ್ತಾರೆ ಅನ್ನುವ ಭರವಸೆ ಕೂಡ ಹೊಂದಿದ್ದಾರೆ.
ಡೈರೆಕ್ಟರ್ ಆರ್.ಚಂದ್ರು ಹೇಳಿದಾಗ ಒಲ್ಲೆ ಅನ್ನಲಿಲ್ಲ!
ಕಬ್ಜ ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಇವೆ. ಇವುಗಳಲ್ಲಿ ಅನೂಪ್ ರೇವಣ್ಣಗೆ ಸೂಟ್ ಆಗೋ ಪಾತ್ರವೂ ಇತ್ತು. ಇದನ್ನ ಅನೂಪ್ ಮಾಡಬೇಕು ಅಂತಲೇ ಡೈರೆಕ್ಟರ್ ಆರ್.ಚಂದ್ರು ಡಿಸೈಡ್ ಮಾಡಿದ್ದರು.
ಅದರಂತೆ ಅನೂಪ್ ರೇವಣ್ಣ ಈ ಕಬ್ಜ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅನೂಪ್ ಬರ್ತ್ಡೇ ದಿನವೇ ಈ ಒಂದು ಪಾತ್ರದ ವಿಷಯ ರಿವೀಲ್ ಆಗಿದೆ. ಇನ್ನು ಅನೂಪ್ ರೇವಣ್ಣ ಅಭಿನಯದ ಹೈಡ್ ಆ್ಯಂಡ್ ಸೀಕ್ ಚಿತ್ರವನ್ನ ಕೂಡ ಒಪ್ಪಿದ್ದಾರೆ.
ಇದನ್ನೂ ಓದಿ: Olavina Nildana: ತಾರಿಣಿ ಮೇಲೆ ಸೇಡು ತೀರಿಸಿಕೊಳ್ತೇನೆ ಎಂದ ಧೀರಜ್, ಸುಮತಿಗೆ ಉಮಾ ಕ್ಲಾಸ್!
ಅನೂಪ್ ಹುಟ್ಟುಹಬ್ಬದ ದಿನವೇ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಪುನೀತ್ ನಾಗರಾಜು ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಕಬ್ಜ ಚಿತ್ರದ ಅನೂಪ್ ಪಾತ್ರದ ಬಗ್ಗೆ ಒಂದು ಕುತೂಹಲ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ