ಕನ್ನಡ ಚಿತ್ರರಂಗದ ಮಿನುಗುತಾರೆ ಕಲ್ಪನಾ (Kalpana Untold Stories) ಎಂದೆಂದೂ ಮಿನುಗಿದವ್ರೇ. ಇಡೀ ಚಿತ್ರರಂಗ ಕಲ್ಪನಾ ಅವರನ್ನ ಬೇರೆ ಬೇರೆ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತದೆ. ಕಲ್ಪನಾ (Kannada Actress Kalpana) ಅವರನ್ನ ತುಂಬಾ ಹತ್ತಿರದಿಂದ ನೋಡುವವರು ಹೇಳೋದು ಬೇರೆ. ದೂರದಿಂದಲೇ ಕಲ್ಪನಾ ಅವರನ್ನ ಕಂಡೋರು ಹೇಳೋ ಕಥೆಗಳೇ ಬೇರೆ ಬೇರೆ. ಆದರೆ ನಿಜಕ್ಕೂ ಕಲ್ಪನಾ ಯಾರ (Veteran Actress Kalpana ) ಕಲ್ಪನೆಗೂ ಸಿಗದೆ ಇರೋ ಮಿನುಗುತಾರೆಯೇ ಆಗಿದ್ದರು. ಸಮಸ್ಯೆಗಳು ಸಾವಿರ ಇರಲಿ, ನೇಮ್ ಆ್ಯಂಡ್ ಫೇಮ್ ಎಷ್ಟೇ ಇರಲಿ, ಮಿನುಗು ತಾರೆ ಎಂದೂ ಸ್ವಾಭಿಮಾನ ಬಿಟ್ಟು (Kalpana Movies) ಬದುಕಿದವರಲ್ಲ. ಮನೆ ಬಾಡಿಗೆ ಕಟ್ಟಲು ದುಡ್ಡು ಇಲ್ಲದೇ ಇರುವಾಗಲೂ ಕಲ್ಪನಾ ಸ್ವಾಭಿಮಾನ ಬಿಡಲಿಲ್ಲ. ಯಾರ ಮುಂದೇನೂ ಕೈಯೊಡ್ಡಲಿಲ್ಲ. ಸಾಲ ಬೇಕು ಅಂತ ಎಂದೂ ಕೇಳಲಿಲ್ಲ.
ಸ್ವಾಭಿಮಾನದಿಂದಲೇ ಬದುಕಿದ ಕನ್ನಡದ ಮಿನುಗುತಾರೆ
ಅಕ್ಷರಶಃ ಮಿನುಗುತಾರೆ ಕಲ್ಪನಾ ಬದುಕಿದ್ದೇ ಹೀಗೆ. ಆದರೆ, ಜನ ಅದನ್ನ ಏನೇನೋ ಅಂದುಕೊಂಡರು. ಸೊಕ್ಕಿನ ಹೆಣ್ಣುಮಗಳು ಅಂತಲೇ ದೂರಿದರು. ಇನ್ನಾರೋ ಏನೇನೋ ಗಾಸಿಪ್ ಹರಡಿಸಿದರು.
ಮಿನುಗುತಾರೆ ಕಲ್ಪನಾ ಯಾರಿಗೂ ಅರ್ಥ ಆಗಲೇ ಇಲ್ವೇ
ಕಲ್ಪನಾ ಇದ್ದ ಪರಿನೇ ಬೇರೆ. ಅವರನ್ನ ಹತ್ತಿರದಿಂದ ಕಾಣದೇ ಇರೋರು ಹತ್ತು ಹಲವು ಕಥೆ ಕಟ್ಟಿದ್ದು ಇದೆ. ಅವುಗಳನ್ನ ಗಾಳಿಯಲ್ಲಿ ಹಾರಿ ಬಿಟ್ಟದ್ದು ಇದೆ. ಆದರೆ ಕಲ್ಪನಾ ಹೇಗೆ ಅನ್ನೊದು ಕೆಲವರಿಗೆ ಗೊತ್ತಿದೆ.
ಹೌದು, ಕಲ್ಪನಾ ಸ್ವಾಭಿಮಾನದಿಂದಲೇ ಬದುಕಿದ್ದವರು. ಇವರ ಜೀವನದಲ್ಲಿ ಏರಿಳಿತಗಳು ಸಾಕಷ್ಟು ಇದ್ದವು. ಅವುಗಳನ್ನ ಮೆಟ್ಟಿನಿಂತಿದ್ದ ದಿಟ್ಟ ಮಹಿಳೆ ಕಲ್ಪನಾ, ರಾಜಕುಮಾರ್ ಅಭಿನಯದ ಮಂತ್ರಾಲಯ ಮಹಿಮೆಯಲ್ಲೂ ಅಭಿನಯಿಸಿದ್ದಾರೆ.
ಮಿನುಗುತಾರೆಗೆ ಭಗವಾನ್ ದುಡ್ಡು ಕೊಡಲು ಹೋಗಿದ್ದೇಕೆ?
ಈ ಚಿತ್ರದಲ್ಲಿ ಅಭಿನಯಸಿದ ಬಳಿಕ ಒಂದು ಘಟನೆ ನಡೆಯುತ್ತದೆ. ಮೊದಲೇ ಹೇಳಿದಂತೆ ಡೈರೆಕ್ಟರ್ ಎಸ್.ಕೆ.ಭಗವಾನ್, ಚೆನ್ನೈನ ಕಲ್ಪನಾ ಅವರ ಮನೆಗೆ ಹೋಗ್ತಾರೆ. 2,500 ರೂಪಾಯಿಯ ಚೆಕ್ ಅನ್ನ ಕಲ್ಪನಾ ಅವರಿಗೆ ಕೊಡ್ತಾರೆ.
ಆಗ ಕಲ್ಪನಾ ನನಗೆ ಈ ಚೆಕ್ ಬೇಡ್ವೇ ಬೇಡ ಅಂತ ಹಠ ಮಾಡ್ತಾರೆ. ಭಗವಾನ್ ಯಾಕಮ್ಮ? ಏನಾಗಿದೆ? ದುಡ್ಡು ಜಾಸ್ತಿ ಬೇಕಿತ್ತೇ ಅಂತ ಕೇಳ್ತಾರೆ. ಬೇಕಾದ್ರೆ 500 ಸೇರಿ 3000 ಕೊಡ್ತಿನಿ ಅಂತಲೂ ಕನ್ವಿನ್ಸ್ ಮಾಡ್ತಾರೆ.
ಅಂದು ಕಲ್ಪನಾ ನನಗೆ ಚೆಕ್ ಬೇಡ-ದುಡ್ಡು ಬೇಡ ಅಂತ ಹೇಳಿದ್ಯಾಕೆ?
ಆದರೆ ಇದಕ್ಕೂ ಒಪ್ಪದ ಕಲ್ಪನಾ, ನನಗೆ ದುಡ್ಡು ಬೇಡ ಚೆಕ್ ಸಹ ಬೇಡ ಅಂತಲೇ ಹೇಳಿ ಬಿಡ್ತಾರೆ. ಆಗ ಭಗವಾನ್ ಅವರು ಯಾಕೆ ಅಂತ ಒತ್ತಾಯ ಮಾಡಿ ಕೇಳುತ್ತಾರೆ.
ರಾಘವೇಂದ್ರ ಸ್ವಾಮಿಗಳ ಮೇಲೆ ನೀವು ಸಿನಿಮಾ ಮಾಡಿದ್ದೀರಾ? ಇಂತಹ ಚಿತ್ರದಲ್ಲಿ ಅಭಿನಯಿಸೋದೇ ಪುಣ್ಯದ ಕೆಲಸ. ನಾನು ದುಡ್ಡು ಪಡೆಯೋದಿಲ್ಲ. ಇದನ್ನ ನಾನು ದೇವರಿಗೆ ಸಲ್ಲಿಸಿದ ಸೇವೆ ಅಂತ ಕಲ್ಪನಾ ಹೇಳಿ ಬಿಡ್ತಾರೆ.
ದುಡ್ಡು ಕೊಡಲು ಹೋದರೂ ದುಡ್ಡು ಪಡೆಯದ ಕಲ್ಪನಾ
ಇದನ್ನ ಕೇಳಿದ ಭಗವಾನ್ ಅವರು ಸರಿ ಬಿಡಮ್ಮ ಅಂತ ಎದ್ದು ಹೊರಟು ಕಾರ್ ಬಳಿ ಬರ್ತಾರೆ. ಆಗ ಕಲ್ಪನಾ ಭಗವಾನ್ ಅವರನ್ನು ಕೂಗ್ತಾರೆ. ಭಗವಾನ್ ಮತ್ತೆ ಮನೆಯೊಳಗೆ ಬರ್ತಾರೆ.
ಹಾಗೆ ಮನೆಗೆ ವಾಪಸ್ ಬಂದ ಭಗವಾನ್ ಅವರ ಕೈಯಲ್ಲಿ ತಮ್ಮ ಕತ್ತಲ್ಲಿದ್ದ ಚೈನ್ ತೆಗೆದುಕೊಡ್ತಾರೆ. ಮನೆ ಬಾಡಿಗೆ ಕಟ್ಟಿಲ್ಲ, ಈ ಚೈನ್ ಅಡ ಇಟ್ಟು ನನಗೆ 3000 ರೂಪಾಯಿ ತಂದು ಕೊಡಿ ಅಂತಾರೆ. ಆಗ ಭಗವಾನ್ ಹೇಳ್ತಾರೆ, ಅಲ್ಲಮ್ಮ ನಾನೇ ನಿನಗೆ 3000 ರೂಪಾಯಿ ಕೊಡ್ತೀನಿ, ನಿನಗೆ ಆದಾಗ ಕೊಡು ಅಂತಲೂ ಹೇಳ್ತಾರೆ.
ಮಿನುಗು ತಾರೆ ಕಲ್ಪನಾ ಬದುಕಿನಲ್ಲಿ ಏರಿಳಿತಗಳೆ ಜಾಸ್ತಿ
ಅದಕ್ಕೂ ಒಪ್ಪದ ಕಲ್ಪನಾ, ನನಗೆ ಸಾಲ ಬೇಡ ಏನೂ ಬೇಡ. ಈ ಚೈನ್ ಅಡ ಇಟ್ಟು ದುಡ್ಡು ತಂದು ಕೊಡಿ ಅಂತ ಹೇಳ್ತಾರೆ. ಹಾಗೇನೆ ಮತ್ತೆ ಭಗವಾನ್ ಅವರನ್ನ ವಾಪಸ್ ಕರೆದು, ಚೈನ್ ಅಡ ಇಟ್ಟ ಅಂಗಡಿಯ ಚೀಟಿಯನ್ನ ಕೂಡ ತಂದು ಕೊಡಿ ಅಂತ ಕಲ್ಪನಾ ಹೇಳ್ತಾರೆ.
ಇದಕ್ಕೆ ಒಪ್ಪಿದ ಭಗವಾನ್ ದುಡ್ಡು ತಂದು ಕೊಡ್ತಾರೆ. ಚೀಟಿಯನ್ನೂ ಕೊಡ್ತಾರೆ. ಹಾಗೆ ಇದೆಲ್ಲ ಆಗಿ ಒಂದು ವಾರ ಕಳೆದಿರಬೇಕು. ಅಷ್ಟರಲ್ಲಿಯೇ ಪಂತಲು ಅವರ ಚಿತ್ರದಿಂದ ಒಂದು ಆಫರ್ ಕಲ್ಪನಾ ಅವರನ್ನ ಹುಡುಕಿಕೊಂಡು ಬಂದಿರುತ್ತದೆ. ಜೊತೆಗೆ ಪಂತಲು ಅವರು 5000 ರೂಪಾಯಿ ಕೂಡ ಕೊಟ್ಟು ಕಳಿಸಿರುತ್ತಾರೆ.
ಸ್ವಾಭಿಮಾನದಿಂದ ಮಿನುಗಿ ಹೋದ ಕನ್ನಡದ ತಾರೆ
ಅದೇ ದುಡ್ಡಲ್ಲಿಯೇ ಮೂರು ಸಾವಿರ ರೂಪಾಯಿ ಕೊಟ್ಟು ಚೈನ್ ಬಿಡಿಸಿಕೊಳ್ತಾರೆ. ಮುಂದೆ ಅದ್ಯಾವಾಗಲೋ ಭಗವಾನ್ ಅವರು ಸಿಕ್ಕಾಗ ನಡೆದ ಘಟನೆಯನ್ನ ಕಲ್ಪನಾ ಅವರು ಭಗವಾನ್ ಅವರಿಗೆ ತಿಳಿಸುತ್ತಾರೆ.
ಇದನ್ನೂ ಓದಿ: Vijayanagara: ಏನಿದು ಅಪ್ಪು ದೇವರ ಮಾಲೆ ವೃತ? ಹೇಗೆ ಆಚರಿಸಬೇಕಂತೆ?
ಕಲ್ಪನಾ ನಿಜಕ್ಕೂ ಸ್ವಾಭಿಮಾನದಿಂದಲೇ ಬದುಕಿದ್ದವರು. ಎಂದೂ ಯಾರ ಮುಂದೇನೂ ಕೈಚಾಚಲೇ ಇಲ್ಲ. ಹಾಗೆ ಬದುಕಿದ್ದ ಕಲ್ಪನಾ ಮುಂದೆ ಪುಟ್ಟಣ್ಣವರ ಚಿತ್ರವನ್ನೂ ಅದೇ ಸ್ವಾಭಿಮಾನದಿಂದಲೇ ಬಿಟ್ಟು ಬದುಕಿದರು ಅನ್ನೋದು ಸಿನಿಮಾ ಮಂದಿಗೆ ಗೊತ್ತಿರೋ ಸತ್ಯವೇ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ