Komal Cinema: ಸ್ಯಾಂಡಲ್​ವುಡ್​ಗೆ ವಜ್ರಮುನಿ ಮೊಮ್ಮಗನ ಗ್ರ್ಯಾಂಡ್ ಎಂಟ್ರಿ!

ಕನ್ನಡ ಚಿತ್ರರಂಗಕ್ಕೆ ವಜ್ರಮುನಿ ಮೊಮ್ಮಗನ ಗ್ರ್ಯಾಂಡ್ ಎಂಟ್ರಿ

ಕನ್ನಡ ಚಿತ್ರರಂಗಕ್ಕೆ ವಜ್ರಮುನಿ ಮೊಮ್ಮಗನ ಗ್ರ್ಯಾಂಡ್ ಎಂಟ್ರಿ

ವಜ್ರಮುನಿ ಅವರ ಮೊಮ್ಮಗ ಬಾಲ ನಟನಾಗಿ ಫಿಲ್ಮ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ವಜ್ರಮುನಿ ಅವರ ಪುತ್ರ ಜಗದೀಶ್ ಅವರ ಮಗ ಆಕರ್ಶ್‌ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಹಾಸ್ಯ ನಾಯಕ ನಟ ಕೋಮಲ್ ಅಭಿನಯದ ಯಲಾಕುನ್ನಿ ಸಿನಿಮಾದಲ್ಲಿ ಆಕರ್ಶ್‌ ಅಭಿನಯಿಸುತ್ತಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:
  • published by :

ಕನ್ನಡ ಚಿತ್ರರಂಗದ ಮಹಾನ್ ನಟ (Komal New Movie Updates) ವಜ್ರಮುನಿ ಅವರು ತಮ್ಮದೇ ವಿಶೇಷ ಛಾಪು ಮೂಡಿಸಿ ಹೋಗಿದ್ದಾರೆ. ಖಳನಾಯಕರಾಗಿಯೇ ಹೆಚ್ಚು ಘರ್ಜಿಸಿದ್ದರು. ಅದೇ ಘರ್ಜನೆ ಮಧ್ಯೆ (Yala Kunni Movie Updates) ಯಲಾಕುನ್ನಿ ಅಂತಲೇ ಹೇಳ್ತಾನೇ ಇದ್ರು. ಇದು ಅವರ ಸಖತ್ ಡೈಲಾಗ್ ಆಗಿಯೇ ಹೋಯಿತು ನೋಡಿ. ಆದರೆ ಅದೇ ಡೈಲಾಗ್ ಈಗ ಸಿನಿಮಾ ಟೈಟಲ್ ಆಗಿದೆ. ಈ ಮೂಲಕ ವಜ್ರುಮುನಿ (Vajramuni Grandson) ಅವರ ಮೊಮ್ಮಗ ಕೂಡ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಹಾಸ್ಯ ನಾಯಕ ನಟ ಕೋಮಲ್ ಪುತ್ರನಾಗಿ ವಜ್ರಮುನಿ ಅವರ ಮೊಮ್ಮಗ ಆಕರ್ಶ್‌ ಅಭಿನಯಿಸುತ್ತಿದ್ದಾರೆ. ಈ ಮೂಲಕ (Akarsh Vajramuni Cini Entry) ವಜ್ರಮುನಿ ಫ್ಯಾಮಿಲಿಯ ಕುಡಿ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಂತಾಗಿದೆ.


ಕನ್ನಡ ಚಿತ್ರರಂಗಕ್ಕೆ ವಜ್ರಮುನಿ ಮೊಮ್ಮಗನ ಗ್ರ್ಯಾಂಡ್ ಎಂಟ್ರಿ


ಸಂಪತ್ತಿಗೆ ಸವಾಲ್ ಚಿತ್ರದ ಖಳನಾಯಕ ನಟ ವಜ್ರಮುನಿ ಅವರು ಕನ್ನಡ ಇಂಡಸ್ಟ್ರಿಯಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಇವರ ಅಭಿನಯದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಅವುಗಳಲ್ಲಿ ಕಂಠಸಿರಿ ತುಂಬಾ ಸ್ಪೆಷಲ್ ಆಗಿಯೇ ಇತ್ತು. ಅದೇ ಗಡಸು ಧ್ವನಿಯಿಂದಲೇ ವಜ್ರಮುನಿ ಅವರು ತಮ್ಮ ಪಾತ್ರಕ್ಕೆ ಜೀವ ತುಂಬುತ್ತಿದ್ದರು.


Kannada Veteran Actor Vajramuni Grandson Entered Sandalwood
ವಜ್ರಮುನಿ ಮೊಮ್ಮಗನ ಎಂಟ್ರಿಗೆ ಇಡೀ ಫ್ಯಾಮಿಲಿ ಸಾಕ್ಷಿ


ಅಷ್ಟು ವಿಶೇಷ ನಟರಾಗಿದ್ದ ವಜ್ರಮುನಿ ಅವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮದೇ ವಿಶೇಷ ಅಭಿನಯದ ಮೂಲಕ ಕನ್ನಡಿಗರ ಹೃದಯ ಕದ್ದಿದ್ದರು. ಹಾಗೇ ರಾಜಕುಮಾರ್ ಅವರ ಆಕಸ್ಮಿಕ ಸಿನಿಮಾದಲ್ಲೂ ವಜ್ರಮುನಿ ಅಭಿನಯಿಸಿದ್ದರು.




ವಜ್ರಮುನಿ ಮೊಮ್ಮಗನ ಎಂಟ್ರಿಗೆ ಇಡೀ ಫ್ಯಾಮಿಲಿ ಸಾಕ್ಷಿ


ಆದರೆ ಇವರು ಹೋದ್ಮೇಲೆ ಅಥವಾ ಇವರು ಇದ್ದಾಗ ವಜ್ರಮುನಿ ಫ್ಯಾಮಿಲಿಯಿಂದ ಯಾರೂ ಇಂಡಸ್ಟ್ರಿಗೆ ಬರಲೇ ಇಲ್ಲ. ಇಬ್ಬರು ಗಂಡು ಮಕ್ಕಳಿದ್ದರೂ ಯಾರೂ ಆಗ ಬಣ್ಣದ ಲೋಕಕ್ಕೆ ಕಾಲಿಟ್ಟಿರಲಿಲ್ಲ. ಇದೀಗ ಟೈಮ್ ಚೇಂಜ್ ಆಗಿದೆ.


ಹೌದು, ವಜ್ರಮುನಿ ಅವರ ಮೊಮ್ಮಗ ಬಾಲ ನಟನಾಗಿ ಫಿಲ್ಮ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ವಜ್ರಮುನಿ ಅವರ ಪುತ್ರ ಜಗದೀಶ್ ಅವರ ಮಗ ಆಕರ್ಶ್‌ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಹಾಸ್ಯ ನಾಯಕ ನಟ ಕೋಮಲ್ ಅಭಿನಯದ ಯಲಾಕುನ್ನಿ ಸಿನಿಮಾದಲ್ಲಿ ಆಕರ್ಶ್‌ ಅಭಿನಯಿಸುತ್ತಿದ್ದಾರೆ.


ವಜ್ರಮುನಿ ಅವರ ಮೊಮ್ಮಗ ಆಕರ್ಶ್‌ ಬಾಲನಟನಾಗಿ ಎಂಟ್ರಿ


ವಜ್ರಮುನಿ ಅವರ ಪಾತ್ರದಲ್ಲಿಯೇ ಕೋಮಲ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರ ಪುತ್ರನಾಗಿ ಆಕರ್ಶ್‌ ಇಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಮುಸುರಿ ಕೃಷ್ಣ ಮೂರ್ತಿ ಅವರ ಪುತ್ರ ಜಯಸಿಂಹ ಮುಸುರಿ ಕೂಡ ಅಭಿನಯಿಸುತ್ತಿದ್ದಾರೆ. ಕನೆಕ್ಷನ್ ಕಾಳಪ್ಪನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.


ಹಾಸ್ಯ ನಾಯಕ ನಟ ಕೋಮಲ್ ಅವರು ಈ ಚಿತ್ರದಲ್ಲಿ ಮೊದಲ ಬಾರಿಗೆ ಡಬಲ್ ರೋಲ್ ಮಾಡುತ್ತಿದ್ದಾರೆ. ನಿರ್ದೆಶಕ ಪ್ರದೀಪ್ ಈ ಮೂಲಕ ನಿರ್ದೇಶಕರಾಗುತ್ತಿದ್ದಾರೆ. 1981 ರ ಕಾಲಘಟದಲ್ಲಿಯೇ ಬಹುತೇಕ ಸಿನಿಮಾ ಕಥೆ ಸಾಗುತ್ತದೆ.


ಯಲಾಕುನ್ನಿ ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಾಣ


ಈ ಹಿನ್ನೆಲೆಯಲ್ಲಿ ಚಿತ್ರಕ್ಕಾಗಿಯೇ ಅದ್ಭುತ ಸೆಟ್ ಹಾಕೋ ಪ್ಲಾನ್ ಕೂಡ ಮಾಡಲಾಗಿದೆ. ಗಂಜಾಂ ಬಳಿ ಒಂದು ಪುರಾತನ ದೇವಾಲಯವೂ ಇದೆ. ಅಲ್ಲಿಯೇ ಹೆಚ್ಚಿನ ಭಾಗದ ಚಿತ್ರೀಕರಣ ಕೂಡ ನಡೆಯುತ್ತಿದೆ. ಇನ್ನುಳಿದಂತೆ ಧರ್ಮ ವಿಶ್ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ.


Kannada Veteran Actor Vajramuni Grandson Entered Sandalwood
ವಜ್ರಮುನಿ ಅವರ ಮೊಮ್ಮಗ ಆಕರ್ಶ್‌ ಬಾಲನಟನಾಗಿ ಎಂಟ್ರಿ


ಯಲಾಕುನ್ನಿ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದ ವಜ್ರಮುನಿ ಫ್ಯಾಮಿಲಿ


ಇನ್ನು ಚಿತ್ರದ ಮುಹೂರ್ತಕ್ಕೆ ವಜ್ರಮುನಿ ಫ್ಯಾಮಿಲಿಯ ಸದಸ್ಯರೆಲ್ಲ ಬಂದಿದ್ದರು. ವಜ್ರಮುನಿ ಅವರ ಪತ್ನಿ ಲಕ್ಷ್ಮೀ ವಜ್ರಮುನಿ ಅವರು ಇಲ್ಲಿಗೆ ಆಗಮಿಸಿದ್ರು. ವಜ್ರಮುನಿ ಅವರ ಪುತ್ರ ವಿಶ್ವನಾಥ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ಕಿರಿಯ ಪುತ್ರ ಜಗದೀಶ್ ಅತಿಥಿಯಾಗಿ ಆಗಮಿಸಿದ್ದರು.


ಇದನ್ನೂ ಓದಿ: Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

top videos


    ಯಲಾಕುನ್ನಿ ಮೇರಾ ನಾಮ್ ವಜ್ರಮುನಿ ಚಿತ್ರಕ್ಕೆ ಈಗ ಮುಹೂರ್ತ ಆಗಿದೆ. ಇದೇ ಏಪ್ರಿಲ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭ ಆಗುತ್ತದೆ. ಉದಯ್ ಲೀಲಾ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ಯತಿರಾಜ್, ಮಾಹಂತೇಶ್, ಅರವಿಂದ್ ರಾವ್, ಮಂಜು ಪಾವಗಡ, ನವ ನಟಿ ನಿಸರ್ಗ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    First published: