ಕನ್ನಡದಲ್ಲಿ ಒಂದು ಸಂಗೀತಮಯ (Sandhya Raga Movie) ಸಿನಿಮಾ ಬಂದಿತ್ತು. ಅದು ಸಂಧ್ಯಾರಾಗ ಅನ್ನೋದು ಬಹುತೇಕರಿಗೆ ಗೊತ್ತೇ ಇದೆ. ರಾಜಕುಮಾರ್ ಸಿನಿಮಾ ಜೀವನದ ಈ ಚಿತ್ರ ತುಂಬಾ ಸ್ಪೆಷಲ್ ಆಗಿತ್ತು. ಡಿಸೆಂಬರ್ 22, 1966 ರಂದು ಈ ಚಿತ್ರ ರಿಲೀಸ್ ಆಗಿತ್ತು. ಆಗಲೇ ಈ ಸಿನಿಮಾದಲ್ಲಿ ಒಂದೇ ಹಾಡನ್ನ ಮೂವರು (Rajkumar Special Movie) ದಿಗ್ಗಜ ಗಾಯಕರು ಹಾಡಿದ್ದರು. ಆ ಗಾಯಕರಲ್ಲಿ ಒಬ್ಬರು ಗಾಯಕಿನೂ ಇದ್ದರು. ಸಂಗೀತಮಯ ಸಿನಿಮಾನೇ ಆಗಿದ್ದ ಈ ಚಿತ್ರದಲ್ಲಿ ರಾಜಕುಮಾರ್ ಅವರು ಗಾಯಕರಾಗಿಯೇ (Rajkumar Cinema) ಅಭಿನಯಿಸಿದ್ದರು. ಹಾಗೇ ಈ ಸಿನಿಮಾ ಅರವತ್ತರ ದಶಕದಲ್ಲಿಯೇ ಬಂದಿದ್ದರೂ ಈಗಲೂ ಈ ಸಿನಿಮಾ ತನ್ನ ಟೈಟಲ್ ಮತ್ತು ಸಂಗೀತದಿಂದಲೇ ವಿಶೇಷವಾಗಿಯೇ (Sandhya Raga Film) ಸೆಳೆಯುತ್ತದೆ. ಅಂತಹ ಈ ಚಿತ್ರದ ಒಂದಷ್ಟು ವಿಷಯ ಇಲ್ಲಿವೆ.
ಸಂಧ್ಯಾ ರಾಗ ಸಿನಿಮಾದ ಹಿಂದಿನ ಸ್ಪೆಷಲ್ ಕಥೆ ಏನು ಗೊತ್ತೇ?
ರಾಜಕುಮಾರ್ ಅಭಿನಯದ ಸಂಧ್ಯಾರಾಗ ಸಿನಿಮಾ ಅಂದಿನ ದಿನಗಳಲ್ಲಿ ವಿಶೇಷ ಪ್ರಯೋಗದ ಸಿನಿಮಾನೇ ಆಗಿತ್ತು. ದಿಗ್ಗಜ ಗಾಯಕರಾದ ಬಾಲಮುರಳಿ ಕೃಷ್ಣ, ಭೀಮಸೇನ್ ಜೋಶಿ ಅವರು ಈ ಚಿತ್ರಕ್ಕೆ ಹಾಡಿದ್ದರು. ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಈ ಸಿನಿಮಾದ ಎಲ್ಲ ಹಾಡುಗಳನ್ನೂ ಕಂಪೋಜ್ ಮಾಡಿದ್ದರು.
"ನಂಬಿದೆ ನಿನ್ನ ನಾದ ದೇವತೆ" ಹಾಡಿಗೆ ಮೂವರ ಗಾಯನ
ಆದರೆ ಚಿತ್ರದಲ್ಲಿ ಬರುವ ಒಂದು ಹಾಡನ್ನ ಮೂವರು ಗಾಯಕರಿಂದ ಹಾಡಿಸಿದ್ದರು. ಸಂಧ್ಯಾ ರಾಗದ ವಿವಿಧ ತಿರುವುಗಳಲ್ಲಿ ಈ ಒಂದು ಹಾಡು ಬರುತ್ತದೆ. ಹಾಗೇ ಬರುವ ಆ ಗೀತೆ ಬೇರೆ ಯಾವುದೋ ಅಲ್ಲ, "ನಂಬಿದೆ ನಿನ್ನ ನಾದ ದೇವತೆ" ಅನ್ನುವ ಈ ಗೀತೆಯನ್ನ ಜಿ.ವಿ. ಅಯ್ಯರ್ ಅವರು ಬರೆದಿದ್ದರು.
ಸಂಗೀತಲೋಕದ ಸಂಗೀತಮಯ ಅನುಭವ ಕಟ್ಟಿಕೊಡುವ ಈ ಚಿತ್ರದಲ್ಲಿ ರಾಜಕುಮಾರ್ ಎಲ್ಲರ ಮನಸ್ಸನ್ನು ಗೆದ್ದರು. ತಂಬುರಿ ಹಿಡಿದು ನಂಬಿದೆ ನಿನ್ನ ನಾದ ದೇವತೆ ಅಂತ ಹಾಡಲು ಕುಳಿತ್ರೆ ಅಲ್ಲಿ ಆ ನಾದ ದೇವತೆನೆ ಬಂದು ಕುಳಿತಂತಹ ಭಾವನೆ ಮೂಡುತ್ತಿತ್ತು.
"ನಂಬಿದೆ ನಿನ್ನ ನಾದ ದೇವತೆ" ಚಿತ್ರದ ಸ್ಪೆಷಲ್ ಸಾಂಗ್
ಹಾಗೆ ಇಡೀ ಸಿನಿಮಾದಲ್ಲಿ ಮೂರ್ನಾಲ್ಕು ಕಡೆಗೆ ಬರುವ ಈ ಗೀತೆಯನ್ನ ಒಮ್ಮೆ ಭೀಮಸೇನ್ ಜೋಶಿ ಹಾಡಿದ್ದಾರೆ. ಮತ್ತೊಮ್ಮೆ ಇದೇ ಗೀತೆಯನ್ನ ಎಂ. ಬಾಲಮುರಳಿ ಕೃಷ್ಣ ಹಾಡಿದ್ದಾರೆ. ಇವರ ಈ ಹಾಡಿನ ಒಟ್ಟು ಸೆಳೆತದಲ್ಲಿ ಚಿತ್ರ ಸಾಗುತ್ತದೆ.
ಆದರೆ ಇವರನ್ನೂ ಮೀರಿಸೋ ಇನ್ನೂ ಒಬ್ಬ ಗಾಯಕಿ ಇಲ್ಲಿ ವಿಶೇಷವಾಗಿಯೇ ಕಂಡು ಬರುತ್ತಾರೆ. ಹೌದು, ಅವರು ಗಾಯಕಿ ಎಸ್. ಜಾನಕಿ ಅಂತ ಹೇಳಬೇಕು. ಇದೇ "ನಂಬಿದೆ ನಿನ್ನ ನಾದ ದೇವತೆ" ಹಾಡನ್ನ ಈ ಚಿತ್ರದಲ್ಲಿ ಎಸ್. ಜಾನಕಿ ಹಾಡಿ ತಮ್ಮದೇ ಛಾಪು ಮೂಡಿಸಿದ್ದರು.
ಸಂಧ್ಯಾ ರಾಗ ಚಿತ್ರಕ್ಕೆ ಭಗವಾನ್ ಅವರೂ ಡೈರೆಕ್ಟರ್
ಸಿನಿಮಾದ ಹಿಂದೆ ಎಸ್.ಕೆ. ಭಗವಾನ್ ಕೂಡ ಇದ್ದರು. ಸಿನಿಮಾವನ್ನ ಇವರೂ ಡೈರೆಕ್ಟ್ ಮಾಡಿದ್ದಾರೆ. ಆದರೆ ತಮಗೆ ಎಲ್ಲೂ ಕ್ರೆಡಿಟ್ ಕೊಡಲಿಲ್ಲ ಅಂತಲೂ ಅದೆಲ್ಲೋ ಹೇಳಿದ್ದರು ಅನ್ನೊ ಮಾತು ಇದೆ. ಆದರೆ ವಿಕಿಪಿಡಿಯಾದಲ್ಲಿ ನೋಡಿದ್ರೆ, ಚಿತ್ರದ ನಿರ್ದೇಶಕ ಎ.ಸಿ. ನರಸಿಂಹ ಮೂರ್ತಿ ಅವರ ಹೆಸರಿನ ಕೆಳಗೆ ಎಸ್.ಕೆ. ಭಗವಾನ್ ಅವರ ಹೆಸರೂ ನಿಮಗೆ ಸಿಗುತ್ತದೆ.
ಇರಲಿ ಬಿಡಿ, ಈ ಚಿತ್ರಕ್ಕೆ ಭಗವಾನ್ ಜೊತೆಗೆ ಹಾಸ್ಯ ಸಾಹಿತಿ ಬೀಚಿ ಕೂಡ ಕೆಲಸ ಮಾಡಿದ್ದಾರೆ. ಸಂಧ್ಯಾ ರಾಗ ಸಿನಿಮಾಕ್ಕೆ ಡೈಲಾಗ್ ಕೂಡ ಬರೆದುಕೊಟ್ಟಿದ್ದಾರೆ. ಸಂಧ್ಯಾ ರಾಗ ಕಾದಂಬರಿ ಬರೆದ ಎ.ಎನ್. ಕೃಷ್ಣ ರಾವ್ ಕೂಡ ಚಿತ್ರಕ್ಕೆ ಕೋ ರೈಟರ್ ಆಗಿ ಕೆಲಸ ಮಾಡಿದ್ದಾರೆ ಅನ್ನೊದು ವಿಶೇಷವಾಗಿ ಇದೆ.
ಸಂಧ್ಯಾ ರಾಗ ಅಣ್ಣಾವ್ರ ಸ್ಪೆಷಲ್ ಸಿನಿಮಾ
ಡಿಸೆಂಬರ್ 22, 1966 ರಂದು ರಾಜ್ ಅಭಿನಯದ ಸಂಧ್ಯಾ ರಾಗ ರಿಲೀಸ್ ಆಗಿತ್ತು. ರಾಜ್ ಜೊತೆಗೆ ಭಾರತಿ, ಉದಯ್ ಕುಮಾರ್, ನರಸಿಂಹ ರಾಜು, ಕೆ.ಎಸ್. ಅಶ್ವಥ್ ಅಭಿನಯಿಸಿದ್ದರು. ಬಿ. ದೊರೈರಾಜ್ ಕ್ಯಾಮೆರಾವರ್ಕ್ ಮಾಡಿದ್ದರು.
ಇದನ್ನೂ ಓದಿ: Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್
ಸಂಧ್ಯಾ ರಾಗ ಸಿನಿಮಾದಲ್ಲಿ ಒಟ್ಟು ಎಂಟು ಹಾಡುಗಳಿದ್ದವು. ಅವುಗಳನ್ನ ಕೇಳಿದ್ದ ಜನ ತುಂಬಾನೇ ಇಷ್ಟಪಟ್ಟಿದ್ದರು. ಜಿ.ಕೆ. ವೆಂಕಟೇಶ್ ಅವರ ಅದ್ಭುತ ಸಂಗೀತದ ಹಾಡುಗಳು ಈಗಲೂ ಕೇಳಿದ್ರೆ ವಿಶೇಷ ಫೀಲ್ ಕೊಡುತ್ತವೆ. ಹಾಗೇ ರಾಜ್ ಸಿನಿಮಾ ಜೀವನದ ಸಂಧ್ಯಾ ರಾಗ ಸ್ಪೆಷಲ್ ಚಿತ್ರದ ಪಟ್ಟಿಯಲ್ಲಿ ವಿಶೇಷವಾಗಿಯೇ ನಿಲ್ಲುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ