• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Vedha Pre-Release Event: ವೇದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್! ಬಾಲಯ್ಯಗಾರು ಎಂದಿದ್ದಕ್ಕೆ ಫ್ಯಾನ್ಸ್ ಗರಂ

Vedha Pre-Release Event: ವೇದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್! ಬಾಲಯ್ಯಗಾರು ಎಂದಿದ್ದಕ್ಕೆ ಫ್ಯಾನ್ಸ್ ಗರಂ

ಬಾಲಯ್ಯ "ಗಾರು" ಅನ್ನೋದು ಸರೀನಾ? ತಪ್ಪಾ?

ಬಾಲಯ್ಯ "ಗಾರು" ಅನ್ನೋದು ಸರೀನಾ? ತಪ್ಪಾ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫ್ಯಾನ್ ಮತ್ತು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮೇಲೆ ನೆಟ್ಟಿಗರು ಸಿಟ್ಟಾಗಿದ್ದೇಕೆ? ಬಾಲಯ್ಯಗಾರು ಅಂತ ಗೌರವ ಸೂಚಿಸಿರೋದು ನೆಟ್ಟಿಗರ ಕಣ್ಣಲ್ಲಿ ತಪ್ಪಾಗಿ ಕಾಣ್ತಿರೋದೇಕೆ? ಇಲ್ಲಿದೆ ನೋಡಿ ಫುಲ್ ಡೀಟೆಲ್ಸ್.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ (Shiva Rajkumar) ಅಭಿನಯದ ವೇದ (Vedha Cinema) ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು 07.02.2023 ರಂದು ಸಂಜೆ 6 ಕ್ಕೆ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಆಗಿದೆ. ಈ ಒಂದು ಅದ್ದೂರಿ ಇವೆಂಟ್​ಗೆ ಗೆಸ್ಟ್ ಆಗಿ ನಟ ಬಾಲಯ್ಯ (Nandamuri Balakrishna) ಬರ್ತಿದ್ದಾರೆ. ಇದೇನೋ ಸರಿ, ಆದರೆ ಈ ವಿಷಯ ಹೇಳಲಿಕ್ಕೆ ಒಂದು ಪೋಸ್ಟರ್ ಕೂಡ ಮಾಡಲಾಗಿದೆ. ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಶಿವಣ್ಣ ಅಪ್ಪಟ ಅಭಿಮಾನಿ ಮತ್ತು (K P Shrikanth) ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಬಾಲಯ್ಯ "ಗಾರು" ಅಂತ ಹೇಳಿದ್ದಾರೆ. ಇದೇ ನೋಡಿ ಈಗ ನೆಟ್ಟಿಗರ ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ನೋಡಿ.


ಬಾಲಯ್ಯ "ಗಾರು" ಅನ್ನೋದು ಸರೀನಾ? ತಪ್ಪಾ?
ಟಾಲಿವುಡ್​ನಲ್ಲಿ ಕನ್ನಡದ ಚಿತ್ರಗಳು ಡಬ್ ಆಗುತ್ತಿವೆ. ಈ ಮೂಲಕ ದೊಡ್ಡ ಇವೆಂಟ್ ಕೂಡ ಇಲ್ಲಿ ಆಗುತ್ತಿವೆ. ಮೊನ್ನೆ ಮೊನ್ನೆ ಕಬ್ಜ ಚಿತ್ರದ ದೊಡ್ಡ ಇವೆಂಟ್ ಆಗಿದೆ. ಅಲ್ಲಿ ಉಪೇಂದ್ರ ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡಿಗರ ಹೃದಯ ಕದ್ದಿದ್ದಾರೆ.


Kannada Vedha Movie Pre-Release Event at Hyderabad
ಶಿವ ವೇದ ಚಿತ್ರದ ಪ್ರೀ ರಿಲೀಸ್ ಇವೆಂಟ್​ಗೆ ಬಾಲಯ್ಯ ಗೆಸ್ಟ್


ಈಗ ಇದೇ ನೆಲದಲ್ಲಿಯೇ ಕನ್ನಡದ ವೇದ ಸಿನಿಮಾ ರಿಲೀಸ್ ಆಗುತ್ತಿದೆ. ಶಿವ ವೇದ ಹೆಸರಿನಲ್ಲಿ ಚಿತ್ರ ಇದೇ 09 ರಂದು ರಿಲೀಸ್ ಆಗುತ್ತಿದೆ. ಇದರ ಪ್ರೀ ರಿಲೀಸ್ ಇವೆಂಟ್ ಕೂಡ ಪ್ಲಾನ್ ಆಗಿದೆ. ಫೆಬ್ರವರಿ-07 ರಂದು ಇಂದು ಸಂಜೆ 6 ಕ್ಕೆ ಇವೆಂಟ್ ನಡೆಯುತ್ತಿದೆ.
ಶಿವ ವೇದ ಚಿತ್ರದ ಪ್ರೀ ರಿಲೀಸ್ ಇವೆಂಟ್​ಗೆ ಬಾಲಯ್ಯ ಗೆಸ್ಟ್
ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರ ಇಲ್ಲಿ ಶಿವ ವೇದ ಆಗಿ ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಈ ಒಂದು ಚಿತ್ರದ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಆಗಿದೆ. ಟಾಲಿವುಡ್ ಸ್ಟಾರ್ ಬಾಲಯ್ಯ ಈ ಒಂದು ಇವೆಂಟ್​ಗೆ ಗೆಸ್ಟ್ ಆಗಿ ಬರ್ತಿದ್ದಾರೆ.


ಇದೇ ವಿಷಯವನ್ನ ತಿಳಿಸೋ ಒಂದು ಪೋಸ್ಟರ್ ರೆಡಿ ಆಗಿದೆ. ಅದನ್ನ ಶಿವಣ್ಣ ಅಭಿಮಾನಿ ಹಾಗೂ ನಿರ್ಮಾಪಕರೂ ಆಗಿರೋ ಕೆ.ಪಿ.ಶ್ರೀಕಾಂತ್ ತಮ್ಮ ಟ್ವಿಟರ್ ಅಕೌಂಟ್​ ನಲ್ಲಿ ಶೇರ್ ಮಾಡಿ ಎಲ್ಲರಿಗೂ ವಿಷಯ ತಿಳಿಸಿದ್ದಾರೆ. ಇದರ ಜೊತೆಗೆ ಬಾಲಯ್ಯ ಗಾರು ಗೆಸ್ಟ್ ಆಗಿ ಬರ್ತಿದ್ದಾರೆ ಅಂತಲೂ ಗೌರವ ಕೊಟ್ಟಿದ್ದಾರೆ.


ಬಾಲಯ್ಯ "ಗಾರು" ಎಂದಿದ್ದಕ್ಕೆ ಸಿಟ್ಟಾದ ಫ್ಯಾನ್ಸ್!
ಹೌದು, ಈ ಒಂದು ವಿಷಯಕ್ಕೆ ನೆಟ್ಟಿಗರು ಕಣ್ಣು ಕೆಂಪಾಗಿವೆ. ಇವರ ಆ ಸಿಟ್ಟಿನ ಮಾತು ಭಯಂಕರವಾಗಿಯೇ ಇವೆ. ಅದರಲ್ಲಿ ಒಂದಷ್ಟು ಓದಲು ಯೋಗ್ಯವಾದ ಎಕ್ಸಾಂಪಲ್ ಇಲ್ಲಿದೆ ನೋಡಿ.


- ಗಾರು ಅನ್ನೊದು ಬಿಟ್ಟು ಅವರು ಅನ್ನೊದು ಬಳಸಿ ಸ್ವಾಭಿಮಾನ ಅನ್ನೋದೆ ಇಲ್ವಾ ನಿಮಗೆಲ್ಲ.


- ಗುರು ಈ ಗಾರು , ಜಿ ಇವೆಲ್ಲ ಬೇಡ ಕನ್ನಡದಲ್ಲಿ ಅವರೇ ಅನ್ನಿ.


- ಸರ್ ಗಾರು ಅಂತ ಯಾಕೆ ಉಪಯೋಗಿಸುತ್ತೀರಾ? ಅವರೇನು ನಿಮ್ಮನ್ನ ಅವರೇ ಅಂತ ಕರೀತಾರ? ಇಲ್ಲ ತಾನೇ ಸ್ವಲ್ಪನಾದ್ರು ಸ್ವಾಭಿಮಾನ ಇರಲಿ, ಇನ್ನೊಬ್ಬನರ ಮುಂದೆ ಬಗ್ಗಿ ನಡೆಯೋದನ್ನ ಬಿಡಿ.


ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರು ತೆಲುಗು ಭಾಷೆ ಬಲ್ಲವರು. ಇವರಿಗೆ ಗಾರು ಪದದ ಅರ್ಥ ಗೊತ್ತಿದೆ. ಗೌರವ ಸೂಚಕ ಪದವೇ ಇದಾಗಿದೆ. ಹಾಗಾಗಿಯೇ ಈ ಒಂದು ಇವೆಂಟ್​ಗೆ ಬರ್ತಿರೊ ಬಾಲಯ್ಯ ಅವರನ್ನ ತೆಲುಗು ಭಾಷೆಯಲ್ಲಿ ಗಾರು ಅಂತಲೇ ಹೇಳಿದ್ದಾರೆ.


ಕನ್ನಡದ ನಟರಿಗೆ ಗಾರು ಅಂತಾರೆ ಬಾಲಯ್ಯ!
ಟಾಲಿವುಡ್​ನ ಸೂಪರ್ ಸ್ಟಾರ್ ಬಾಲಯ್ಯ ಅವರಿಗೆ ಕನ್ನಡದ ನಂಟು ತುಂಬಾ ಚೆನ್ನಾಗಿದೆ. ಶಿವರಾಜ್​ ಕುಮಾರ್ ಅವರು ಬಾಲಯ್ಯ ನಟನೆಯ ಚಿತ್ರದಲ್ಲಿ ಅಭಿನಯಿಸಿದ್ದರು. ಅದಕ್ಕೂ ಮೊದಲು ಕೂಡ ಒಳ್ಳೆ ಬಾಂಧವ್ಯ ಇಟ್ಟುಕೊಂಡಿರೋದು ಗೊತ್ತೆ ಇದೆ.

Kannada Vedha Movie Pre-Release Event at Hyderabad
ಬಾಲಯ್ಯ "ಗಾರು" ಎಂದಿದ್ದಕ್ಕೆ ಸಿಟ್ಟಾದ ಫ್ಯಾನ್ಸ್!


ಅದೇ ಪ್ರೀತಿ ಅದೇ ಗೌರವದೊಂದಿಗೆ ಶಿವಣ್ಣನನ್ನ ಗಾರು ಅಂತಲೇ ಕರೆದಿದ್ದು ಇದೆ. ಸಾಮಾನ್ಯವಾಗಿ ತೆಲುಗು ನಟರು ಬೇರೆ ಭಾಷೆಯ ನಟರನ್ನ ಗಾರು ಅಂತಲೇ ಹೇಳಿ ಗೌರವ ಕೊಡುತ್ತಾರೆ.


ಇದನ್ನೂ ಓದಿ: PVR Cinema: ಸಿನಿಮಾ ಪ್ರಿಯರಿಗೆ ಗುಡ್​ ನ್ಯೂಸ್​! ಮತ್ತೆ 4 ಸ್ಥಳಗಳಲ್ಲಿ ಥಿಯೇಟರ್ ಸ್ಥಾಪಿಸಿದ ಪಿವಿಆರ್​ ಸಂಸ್ಥೆ


ಕನ್ನಡ ಪದವನ್ನ ಬಳಸಲಿಲ್ಲ ಅಂತ ನೆಟ್ಟಿಗರ ಸಿಟ್ಟು!
ಕನ್ನಡ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಗಾರು ಅಂತ ಪದ ಬಳಿಸಿದ್ದಕ್ಕೆ ನೆಟ್ಟಿಗರ ಸಿಟ್ಟಿಗೆ ಕಾರಣ ಆಗಿದ್ದಾರೆ. ಕನ್ನಡದವರು ಕನ್ನಡ ಭಾಷೆಯಲ್ಲಿ ಅವರು ಇವರು ಅಂತಲೇ ಹೇಳಬೇಕಿತ್ತು. ಗಾರು ಅಂತ ಹೇಳೋದು ಬೇಕಿರಲಿಲ್ಲ ಅನ್ನೋದೇ ಒಟ್ಟು ನೆಟ್ಟಿಗರ ಮಾತಿನ ತಾತ್ಪರ್ಯ ಆಗಿದೆ.

First published: