ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar Movie) ಅಭಿನಯದ ವೇದ ಸಿನಿಮಾ ಟಾಲಿವುಡ್ನಲ್ಲೂ (Tollywood Movie) ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗ್ತಿರೋ ಈ ಚಿತ್ರದ ಟೈಟಲ್ ಇಲ್ಲಿ ಬದಲಾಗಿದೆ. ಇದರೊಟ್ಟಿಗೆ ಚಿತ್ರದ ತೆಲುಗು ಟ್ರೈಲರ್ (Tollywood Trailer Release) ಕೂಡ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಡೇಟ್ ಕೂಡ ಅಧಿಕೃತವಾಗಿ ರಿವೀಲ್ ಆಗಿದ್ದು, ಟಾಲಿವುಡ್ನಲ್ಲಿ ಶಿವರಾಜ್ ಕುಮಾರ್ ಹವಾ ಸಣ್ಣಗೆ ಈಗಲೇ ಶುರು ಆಗಿದೆ. ತೆಲುಗು ಟ್ರೈಲರ್ ಕೂಡ ಭರ್ಜರಿಯಾಗಿಯೇ ರೆಡಿ ಆಗಿದೆ. ಕನ್ನಡದ ರೀತಿನೇ ( ShivaVeda Movie) ತೆಲುಗು ಭಾಷೆ ಟ್ರೈಲರ್ ಭರವಸೆ ಮೂಡಿಸುತ್ತಿದೆ. ಈ ಟ್ರೈಲರ್ನಲ್ಲೂ ಶಿವಣ್ಣನ ಖದರ್ ಬಲು ಜೋರಾಗಿಯೇ ಇದೆ.
ಕನ್ನಡದ ವೇದ ಚಿತ್ರದ ಟೈಟಲ್ ಟಾಲಿವುಡ್ನಲ್ಲಿ ಚೇಂಜ್!
ಕನ್ನಡದ ವೇದ ಸಿನಿಮಾ ಕನ್ನಡಿಗರ ಹೃದಯ ಗೆದ್ದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಮೂಲಕ ಪ್ರೇಕ್ಷಕರಿಗೆ ಹೊಸ ಕಥೆ ಹೇಳಿದ್ದಾರೆ. ಮಹಿಳೆಯರ ಬಗ್ಗೆ ಗೌರವ ಇರಲೇಬೇಕು ಅನ್ನೋದನ್ನ ತುಂಬಾ ಗಟ್ಟಿಯಾಗಿಯೇ ಇಲ್ಲಿ ಹೇಳಿದ್ದಾರೆ.
ಮಹಿಳೆಯರನ್ನ ಗೌರವಿಸಿ, ಅವಳ ಪರವಾನಗಿ ಇಲ್ಲದೇ ಅವಳನ್ನ ಮುಟ್ಟೋ ಹಾಗಿಲ್ಲ, ಅವಳಿಗೆ ಅಗೌರವ ತೋರೋ ಹಾಗಿಲ್ಲ, ಅದು ಚಿಕ್ಕ ಹುಡುಗಿ ಆದರೂ ಅಷ್ಟೇ ಅನ್ನೋದನ್ನ ಸಾರಿ ಸಾರಿ ಈ ಚಿತ್ರದಲ್ಲಿ ಡೈರೆಕ್ಟರ್ ಹರ್ಷ ಹಲವು ಮಹಿಳಾ ಪಾತ್ರಗಳ ಮೂಲಕ ತಿಳಿಸಿದ್ದಾರೆ.
ವೇದ ಚಿತ್ರಕ್ಕೆ ಟಾಲಿವುಡ್ನಲ್ಲಿ "ಶಿವವೇದ" ಟೈಟಲ್!
ವೇದ ಸಿನಿಮಾ ತೆಲುಗುದಲ್ಲಿ ರಿಲೀಸ್ ಆಗಲು ರೆಡಿ ಆಗಿದೆ. ಶಿವವೇದ ಅನ್ನೋ ಟೈಟಲ್ನ್ನ ಇದಕ್ಕೆ ಇಲ್ಲಿ ಇಡಲಾಗಿದೆ. ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಭಾರೀ ಭರವಸೆಯನ್ನ ಕೂಡ ಈಗಲೇ ಮೂಡಿಸಿದೆ.
ಶಿವವೇದ ಅನ್ನೋ ಟೈಟಲ್ನೊಂದಿಗೆ ಬರ್ತಿರೋ ಈ ಚಿತ್ರದಲ್ಲಿ ಟೈಟಲ್ ಹೊರತಾಗಿ ಬೇರೆ ಏನೂ ಬದಲಾವಣೆ ಇಲ್ವೇ ಇಲ್ಲ. ಕನ್ನಡದ ಟ್ರೈಲರ್ ಹೇಗಿತ್ತೋ ಅದೇ ರೀತಿನೇ ತೆಲುಗು ಭಾಷೆಯ ಟ್ರೈಲರ್ ಮಾಡಲಾಗಿದೆ. ತೆಲುಗು ಬಲ್ಲ ಯಾರೇ ಈ ಚಿತ್ರದ ಟ್ರೈಲರ್ ನೋಡಿದ್ರೆ, ರೋಮಾಂಚನಗೊಳ್ಳುವ ರೀತಿನೇ ಇದನ್ನ ರೆಡಿ ಮಾಡಲಾಗಿದೆ.
ಫೆಬ್ರವರಿ-09 ರಂದು ಟಾಲಿವುಡ್ನಲ್ಲಿ ಶಿವವೇದ ರಿಲೀಸ್
ಶಿವರಾಜ್ ಕುಮಾರ್ ಅಭಿನಯದ ಶಿವವೇದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ತಿಂಗಳ ಫೆಬ್ರವರಿ-09 ರಂದು ಚಿತ್ರವನ್ನ ತೆಲುಗು ಭಾಷೆಯಲ್ಲಿ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ.
ಅಧಿಕೃತವಾಗಿಯೇ ಈ ಚಿತ್ರದ ರಿಲೀಸ್ ಡೇಟ್ ಈಗ ಅನೌನ್ಸ್ ಆಗಿದೆ. ಟಾಲಿವುಡ್ನಲ್ಲಿ ಕನ್ನಡದ ವೇದ ಚಿತ್ರ ಶಿವವೇದ ಆಗಿ ರಿಲೀಸ್ ಆಗುತ್ತಿದೆ. ಈ ಮೂಲಕ ಕನ್ನಡದ ನಟಿಯರಾದ ಅದಿತಿ ಸಾಗರ್, ಗಾನವಿ ಲಕ್ಷ್ಮಣ, ಶ್ವೇತಾ ಚಂಗಪ್ಪ ಹೀಗೆ ಎಲ್ಲರೂ ಟಾಲಿವುಡ್ನಲ್ಲಿ ಈ ಚಿತ್ರದ ಮೂಲಕ ಹೊಸ ಅಲೆ ಎಬ್ಬಿಸಲಿದ್ದಾರೆ.
ಕನ್ನಡದ ಡೈರೆಕ್ಟರ್ ಎ.ಹರ್ಷ ತಮ್ಮ ಈ ಚಿತ್ರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನ ಹೇಳಿದ್ದಾರೆ. ಮಹಿಳೆಯರ ಬಗ್ಗೆ ಗೌರವ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನ ಹೇಳಿದ್ದಾರೆ.
ಇದನ್ನೂ ಓದಿ: Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ
ಇದನ್ನ ನೋಡಿರೋ ಕನ್ನಡಿಗರು ಈಗಾಗಲೇ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಬಾಕಿ ಇರೋದು ಟಾಲಿವುಡ್ನ ಪ್ರೇಕ್ಷಕರ ಸರದಿ. ಇವರೂ ಕೂಡ ಚಿತ್ರವನ್ನ ಚೆನ್ನಾಗಿಯೇ ರಿಸೀವ್ ಮಾಡಿಕೊಳ್ತಾರೆ ಅನ್ನೋ ನಂಬಿಕೆ ಈಗಲೇ ಮೂಡಿದೆ.
ಇನ್ನು ಶಿವರಾಜ್ ಕುಮಾರ್ ಅವರ ಗೀತಾ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರ ದೊಡ್ಡಮಟ್ಟದಲ್ಲಿಯೇ ಕನ್ನಡದಲ್ಲಿ ರಿಲೀಸ್ ಆಗಿತ್ತು. ತೆಲುಗು ಭಾಷೆಯಲ್ಲೂ ಅದೇ ರೀತಿಯ ಪ್ಲಾನ್ ಆಗಿದೆ ಅನ್ನೋದು ಈಗಿನ ಮಾಹಿತಿ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ