• Home
  • »
  • News
  • »
  • entertainment
  • »
  • Shivaraj Kumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೇದ ಸಿನಿಮಾದ ಯಂಗ್ ಲುಕ್ ರಿವೀಲ್! ಡೈರೆಕ್ಟರ್ ಹರ್ಷ ಏನಂತಾರೆ?

Shivaraj Kumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೇದ ಸಿನಿಮಾದ ಯಂಗ್ ಲುಕ್ ರಿವೀಲ್! ಡೈರೆಕ್ಟರ್ ಹರ್ಷ ಏನಂತಾರೆ?

ಶಿವರಾಜ್ ಕುಮಾರ್ ವೇದ ಯಂಗ್ ಲುಕ್ ರಿವೀಲ್

ಶಿವರಾಜ್ ಕುಮಾರ್ ವೇದ ಯಂಗ್ ಲುಕ್ ರಿವೀಲ್

ಡೈರೆಕ್ಟರ್ ಎ. ಹರ್ಷ ತಮ್ಮ ಈ ಚಿತ್ರದ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಸಿನಿಮಾದಲ್ಲಿ ಸಾಕಷ್ಟು ಮಹಿಳಾ ಪಾತ್ರಗಳು ಬರುತ್ತವೆ. ಆದರೆ ಇದು ಮಹಿಳಾ ಪ್ರಧಾನ ಸಿನಿಮಾನಾ ಅನ್ನೋದನ್ನ ಈಗಲೇ ರಿವೀಲ್ ಮಾಡೋದಿಲ್ಲ" ಅಂತಲೇ ಹರ್ಷ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಇಂದು 67ನೇ ಕನ್ನಡ (Kannada Rajyotsava) ರಾಜ್ಯೋತ್ಸವದ ಸಂಭ್ರಮ ಆಚರಿಸುತ್ತಿದ್ದಾರೆ. ಸಿನಿಮಾದವರು ತಮ್ಮದೇ ರೀತಿಯಲ್ಲಿ ಕನ್ನಡದ ಹಬ್ಬವನ್ನ ಸೆಲೆಬ್ರೇಟ್ ಮಾಡುತ್ತಿದ್ದಾರೆ. ತಮ್ಮ ತಮ್ಮ ಸಿನಿಮಾಗಳ (Cinema Poster) ಪೋಸ್ಟರ್​ಗಳನ್ನ ಶೇರ್ ಮಾಡೋ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ. ಕನ್ನಡದ ಹ್ಯಾಟ್ರಿಕ್ (Hattrick Hero) ಹೀರೋ ಅಭಿನಯದ ವೇದ (Vedha) ಸಿನಿಮಾ ತಂಡ ಕೂಡ ಈ ಒಂದು ವಿಶೇಷ ಹಬ್ಬದ ದಿನ ತಮ್ಮ ಚಿತ್ರದ ವಿಶೇಷ ಪೋಟೋ ರಿವೀಲ್ ಮಾಡಿದೆ. ಈ ಒಂದು ಫೋಟೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ಅದರ ಸುತ್ತ ಇನ್ನಷ್ಟು ಮಾಹಿತಿ ಹಾಗೂ ಚಿತ್ರದ ಡೈರೆಕ್ಟರ್ ಎ.ಹರ್ಷ ಏನ್ ಹೇಳಿದ್ದಾರೆ. ಎಲ್ಲದರ ವಿವರ ಇಲ್ಲಿದೆ.


ಕನ್ನಡದ ಬಹು ನಿರೀಕ್ಷಿತ ವೇದ ಸಿನಿಮಾದ ಕ್ರೇಜ್
ಕನ್ನಡದ ವೇದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಶಿವರಾಜ್ ಕುಮಾರ್ ಚಿತ್ರ ಜೀವನದ 125 ನೇ ಸಿನಿಮಾ ಅನ್ನೋದೇ ವಿಶೇಷ. ಅದಕ್ಕೂ ಹೆಚ್ಚಾಗಿಯೇ ಇದು 1960 ಕಥೆಯನ್ನೆ ಆಧರಿಸಿದೆ.


ಸ್ವತಂತ್ರ ನಂತರದ ಕಾಲಘಟದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರ ಪೋಷಣೆ ಭಿನ್ನ-ವಿಭಿನ್ನವಾಗಿಯೇ ಇವೆ. ಪ್ರತಿ ಲುಕ್​ ನಲ್ಲೂ ಶಿವರಾಜ್ ಕುಮಾರ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ.


Kannada Vedha Film Shivaraj Kumar Young Look Revealed
ಕನ್ನಡದ ಬಹು ನಿರೀಕ್ಷಿತ ವೇದ ಸಿನಿಮಾದ ಕ್ರೇಜ್


ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ನಿರ್ದೇಶಕ ಎ.ಹರ್ಷ ಪ್ರತಿ ಸಂಭ್ರಮಕ್ಕೊಂದು ವಿಶೇಷ ಸುದ್ದಿ ಕೊಡ್ತಾನೇ ಇರುತ್ತಾರೆ. ಮೊನ್ನೆ ಮೊನ್ನೆ ವಿಶೇಷ ಪೋಸ್ಟರ್ ಮೂಲಕ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದರು.


ಇದೇ ವರ್ಷ ಡಿಸೆಂಬರ್-23 ಕ್ಕೆ ವೇದ ಸಿನಿಮಾ ರಿಲೀಸ್ ಆಗುತ್ತಿದೆ. ಕ್ರಿಸ್ಮಸ್ ಹಬ್ಬದ ಮುನ್ನಾ ದಿನಗಳಲ್ಲಿಯೇ ಕನ್ನಡದ ವೇದ ತೆರೆಗೆ ಬರುತ್ತದೆ. 2022 ರ ಕೊನೆ ತಿಂಗಳ ಕೊನೆಯಲ್ಲಿ ಧಮಾಕಾ ಮಾಡಲಿದೆ.


ಕನ್ನಡದ ವೇದ ಸಿನಿಮಾ ಮಹಿಳಾ ಪ್ರಧಾನ ಚಿತ್ರವೇ?
ಕನ್ನಡದ ವೇದ ಚಿತ್ರ ವಿಶೇಷವಾಗಿಯೇ ಇದೆ. ಇತ್ತೀಚಿಗೆ ಬಿಟ್ಟಿರೋ ಪೋಸ್ಟರ್ ನಲ್ಲಿ ಪ್ರಮುಖ ಮಹಿಳಾ ಪಾತ್ರಗಳು ರಿವೀಲ್ ಆಗಿದ್ದವು. ಆ ದಿನದಿಂದಲೇ ಸಿನಿಮಾ ಮಹಿಳಾ ಪ್ರಧಾನ ಚಿತ್ರವೇ ಅನ್ನೋ ಪ್ರಶ್ನೆನೂ ಹುಟ್ಟಿಕೊಂಡಿದೆ.


ಇದನ್ನೂ ಓದಿ: Rishab Shetty: ತನ್ನ ಪತ್ನಿಗೆ ಥ್ಯಾಂಕ್ಸ್ ಹೇಳಿದ ರಿಷಬ್ ಶೆಟ್ಟಿ,ಯಾಕ್ ಗೊತ್ತೇ? ಈ ಸ್ಟೋರಿ ನೋಡಿ


ಶಿವರಾಜ್ ಕುಮಾರ್ ಕೂಡ ಈ ಬಗ್ಗೆ ಮಾತನಾಡಿದ್ದರು. ವೇದ ಚಿತ್ರವನ್ನ ಹೆಣ್ಣುಮಕ್ಕಳು ತುಂಬಾ ಇಷ್ಟಪಡುತ್ತಾರೆ ಅಂತಲೂ ಶಿವರಾಜ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.


ಚಿತ್ರದ ಡೈರೆಕ್ಟರ್ ಎ.ಹರ್ಷ ತಮ್ಮ ಈ ಚಿತ್ರದ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ ಗೆ ರಿಯಾಕ್ಟ್ ಮಾಡಿದ್ದಾರೆ. ನಮ್ಮ ಸಿನಿಮಾದಲ್ಲಿ ಸಾಕಷ್ಟು ಮಹಿಳಾ ಪಾತ್ರಗಳು ಬರುತ್ತವೆ. ಆದರೆ ಇದು ಮಹಿಳಾ ಪ್ರಧಾನ ಸಿನಿಮಾನಾ ಅನ್ನೋದನ್ನ ಈಗಲೇ ರಿವೀಲ್ ಮಾಡೋದಿಲ್ಲ ಅಂತಲೇ ಹರ್ಷ ಹೇಳಿದ್ದಾರೆ.


Kannada Vedha Film Shivaraj Kumar Young Look Revealed
ವೇದ ಸಿನಿಮಾದ ಯಂಗ್ ಲುಕ್ ರಿವೀಲ್


ಶಿವರಾಜ್ ಕುಮಾರ್ ವೇದ ಯಂಗ್ ಲುಕ್ ರಿವೀಲ್
ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದಲ್ಲಿ ಶಿವಣ್ಣನ ಹಲವು ರೂಪಗಳು ಇವೆ. ಸಿನಿಮಾ ತಂಡ ಈಗಾಗಲೇ ಹಲವು ಲುಕ್​ ಗಳನ್ನ ಬಿಟ್ಟುಕೊಟ್ಟಿದೆ. ಕನ್ನಡದ ರಾಜ್ಯೋತ್ಸವದ ಪ್ರಯುಕ್ತ ಈಗ ಶಿವರಾಜ್ ಕುಮಾರ್ ಯಂಗ್ ಲುಕ್ ಹೊರ ಬಿದ್ದಿದೆ.


ಇದನ್ನೂ ಓದಿ: Kantara- Sapthami Gowda: ಇವ್ರು ಕರೆದ್ರೆ ಮಹಾರಾಜನೇ ಬರ್ತಾನಂತೆ! ಸಪ್ತಮಿ ಹೊಸ ಅವತಾರ ಕಂಡು ಗಂಡ್​ ಹೈಕ್ಳು ಫ್ಲಾಟ್​!


ವೇದ ಚಿತ್ರದ ಈ ಲುಕ್ ಸಖತ್ ಆಗಿಯೇ ಇದೆ. ಶಿವರಾಜ್ ಕುಮಾರ್ ಆರಂಭದ ದಿನಗಳಲ್ಲಿಯ ಸಿನಿಮಾದ ಲುಕ್ ಹೇಗಿತ್ತೋ ಹಾಗೇನೆ ಈ ವೇದ ರೂಪ ಕೂಡ ಇದೆ. ಇದು ಅಷ್ಟೇ ಗಮನ ಕೂಡ ಸೆಳೆಯುತ್ತಿದೆ.


ಫೇಸ್ ಬುಕ್ ಪೇಜ್ ನಲ್ಲಿ ವೇದ ಪೋಸ್ಟ್ ಹಂಚಿಕೊಂಡ ಶಿವಣ್ಣ
ಶಿವರಾಜ್ ಕುಮಾರ್ ತಮ್ಮ ಸಿನಿಮಾದ ಪೋಸ್ಟರ್ ಅನ್ನ ಫೇಸ್ ಬುಕ್ ನಲ್ಲೂ ಹಂಚಿಕೊಂಡಿದ್ದಾರೆ. ನಾಡಿನ ಸಮಸ್ತ ಜನತೆಗೂ ಈ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನ ಕೂಡ ಶಿವರಾಜ್ ಕುಮಾರ್ ಕೋರಿದ್ದಾರೆ.


ಇದರ ಹೊರತಾಗಿ ವೇದ ಸಿನಿಮಾ ತನ್ನ ವಿಶೇಷ ಕಂಟೆಂಟ್ ಮೂಲಕ ಜನರ ಮನಸ್ಸನ್ನ ಸೆಳೆಯುವಂತಿದೆ. ಈಗಲೇ ಒಂದು ದೊಡ್ಡ ನಿರೀಕ್ಷೆಯನ್ನೂ ಈ ಚಿತ್ರ ಹುಟ್ಟುಹಾಕಿದೆ.

First published: