ಕನ್ನಡದ ಡೈರೆಕ್ಟರ್ ಎ.ಹರ್ಷ (Vedha Film Mohan Kumar) ತಮ್ಮ ಚಿತ್ರಕ್ಕೆ ಜಾನಪದ ಗೀತೆಗಳನ್ನ ಹುಡುಕ್ತಾ ಇದ್ದರು. ಆಗ ಜಾನಪದ ಸಿಂಗರ್ ಮೋಹನ್ ಕುಮಾರ್ ಹೆಸರು ಇವರ ಗಮನಕ್ಕೆ ಬಂತು. ಆಗ ಕೂಡಲೇ ಹರ್ಷ ಗಾಯಕ ಮೋಹನ್ ಕುಮಾರ್ ಅವರನ್ನ ಅರ್ಜುನ್ (Vedha Film Music Director Arjun Janya) ಜನ್ಯ ಸ್ಟುಡಿಯೋಗೆ ಕರೆದರು. ಆ ಒಂದು ಕರೆ ಗಾಯಕ ಮೋಹನ್ ಕುಮಾರ್ ಅವರಿಗೆ ಹೊಸ ಉತ್ಸಾಹವನ್ನೆ ತುಂಬಿತ್ತು. ಇದು ನಿಜವೇ ಅನ್ನೋ ಕುತೂಹಲವೂ ಇತ್ತು. ಮಿಶ್ರ ಫೀಲಿಂಗ್ಸ್ ನಲ್ಲಿಯೇ ಜಾನಪದ ಗಾಯಕ ಮೋಹನ್ (Vedha Film Singer Mohan Kumar) ಕುಮಾರ್, ಹೆಬ್ಬಾಳದ ಅರ್ಜುನ್ ಜನ್ಯ ಸ್ಟುಡಿಯೋಕ್ಕೆ ಹೋದ್ರು.
ಅಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದ್ದರು. ಡೈರೆಕ್ಟರ್ ಎ.ಹರ್ಷ (Vedha Film Director A Harsha) ಕೂಡ ಜೊತೆಗೇನೆ ಕುಳಿತಿದ್ದರು. ಮುಂದೆ ಆಗಿದ್ದೇನೂ? ಇಲ್ಲಿದೆ ಓದಿ.
ಜಾನಪದ ಗಾಯಕನಿಗೆ ತೆರೆದ ಮೊದಲ ಅದೃಷ್ಟದ ಬಾಗಿಲು
ಜಾನಪದ ಗಾಯಕ ಮೋಹನ್ ಕನ್ನಡ ಚಿತ್ರರಂಗದ ಹೆಸರಾಂತ ಡೈರೆಕ್ಟರ್ ಎ.ಹರ್ಷ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂದೆ ಕುಳಿತರು. ತಮ್ಮ ಮನದಲ್ಲಿದ್ದ ಜಾನಪದ ಗೀತೆಗಳ ಸಂಗ್ರಹದಲ್ಲಿಯ ಒಂದೊಂದೇ ಹಾಡನ್ನ ಹಾಡ್ತ ಹೋದ್ರು.
ಜಾನಪದ ಹಾಡುಗಳಲ್ಲಿ ಜೀವಂತಿಕೆ ಇರುತ್ತದೆ. ನೆಲದ ಸೊಗಡಿನ ಅಸಲಿ ಮ್ಯಾಜಿಕ್ ಇರುತ್ತದೆ. ಜಾನಪದ ಗಾಯಕ ಮೋಹನ್ ಹಾಡ್ತಾ ಹೋದ್ರು, ಅರ್ಜುನ್ ಜನ್ಯ ಕೇಳ್ತಾ ಹೋದ್ರು. ಸುಮಾರು ಹಾಡುಗಳು ಕೇಳಿದ ಬಳಿಕ ಆ ಒಂದು ಹಾಡಿಗೆ ಲಾಕ್ ಆದ್ರು ಡೈರೆಕ್ಟರ್ ಅರ್ಜುನ್ ಜನ್ಯ. ಎ.ಹರ್ಷ ಅವರಿಗೂ ಆ ಒಂದು ಗೀತೆ ಇಷ್ಟ ಆಯಿತು.
ಜುಂಜಪ್ಪ ಹಾಡು ಫೈನಲ್-ಶಿವಣ್ಣ ಕೇಳಿ ಫುಲ್ ಥ್ರಿಲ್
ಹೌದು, ಇಲ್ಲಿವರೆಗೂ ನೀವು ಓದಿರೋದು ವೇದ ಚಿತ್ರದ ಜುಂಜಪ್ಪ ಹಾಡಿನ ಗಾಯಕನ ಮೊದಲ ಅನುಭವ ಕಥೆಯನ್ನೆ, ಈ ಹಾಡು ಗಾಯಕ ಮೋಹನ್ ಅವಿರಿಗೆ ಸಿಕ್ಕಿರೋದು ಇದೇ ರೀತಿನೇ, ಮೋಹನ್ ಕುಮಾರ್ ತಮ್ಮ ಜಾನಪದ ಹಾಡನ್ನ ಹಾಡಿ ಆದ್ಮೇಲೆ ಅದನ್ನ ಅರ್ಜುನ್ ಜನ್ಯ ರೆಕಾರ್ಡ್ ಮಾಡಿಕೊಂಡ್ರು.
ಆದರೆ ಮೋಹನ್ ಕುಮಾರ್ ಅವರಿಗೆ ಹೇಳಿ ಕಳಿಸಿದ್ರು. ನಾವು ಫೋನ್ ಮಾಡುತ್ತೇವೆ. ಆಗ ಮತ್ತೊಮ್ಮೆ ಬನ್ನಿ ಅಂತಲೇ ಹೇಳಿ ಬಿಟ್ಟರು. ಅಲ್ಲಿಂದ ಸಿನಿಮಾದವರ ಜೊತೆಗೆ ಫೋಟೋ ತೆಗೆಸಿಕೊಂಡ ಖುಷಿಯಲ್ಲಿ ಗಾಯಕ ಮೋಹನ್ ಕುಮಾರ್ ಊರಿಗೆ ಹೋದ್ರು.
ನನ್ನ ಮಾತು ಯಾರೂ ನಂಬಲೇ ಇಲ್ಲ-ಮೋಹನ್ ಕುಮಾರ್
ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಹಾಡಿದ್ಮೇಲೆ ನಾನು ಊರಿಗೆ ಹೋದೆ. ಮನೆಗೆ ಹೋಗಿ ಹಾಡಿರುವ ಖುಷಿಯನ್ನ ಹಂಚಿಕೊಂಡೆ. ಆದರೆ ನಮ್ಮ ಅಣ್ಣ ಕೂಡ ನನ್ನ ಮಾತು ನಂಬಲೇ ಇಲ್ಲ. ಅರ್ಜುನ್ ಜನ್ಯ ಮತ್ತು ಎ.ಹರ್ಷ ಅವರ ಜೊತೆಗೆ ತೆಗೆಸಿಕೊಂಡ ಫೋಟೋ ತೋರಿಸಿದೆ. ಆಗಲೂ ನಂಬಲೇ ಇಲ್ಲ.
ಆದರೆ ಒಂದು ದಿನ ಮತ್ತೆ ಫೋನ್ ಬಂತು. ನಿಮ್ಮ ಹಾಡು ಸೆಲೆಕ್ಟ್ ಆಗಿದೆ. ಶಿವಣ್ಣ ಕೂಡ ಮೆಚ್ಚಿಕೊಂಡಿದ್ದಾರೆ. ನೀವು ನಾಲ್ಕು ದಿನ ನಮ್ಮ ಜೊತೆಗೇನೆ ಇರಬೇಕು ಅಂತಲೇ ಹೇಳಿದ್ರು. ಆ ಪ್ರಕಾರ ಗಾಯಕ ಮೋಹನ್ ಕುಮಾರ್ ನಾಲ್ಕು ದಿನ ಶಿವರಾಜ್ಕುಮಾರ್ ಅವರ ಜೊತೆಗೇನೆ ಇದ್ದರು.
ನಾಲ್ಕು ದಿನಗಳಲ್ಲಿ ಜುಂಜಪ್ಪ ಹಾಡಿನ ಚಿತ್ರೀಕರಣ ಪೂರ್ಣ
ಕನ್ನಡದ ವೇದ ಸಿನಿಮಾದ ಜುಂಜಪ್ಪ ಹಾಡು ಈಗ ಫೇಮಸ್ ಆಗಿದೆ. ಜನರ ಹೃದಯವನ್ನು ಕದಿಯುತ್ತಿದೆ. ಅಂತಹ ಈ ಹಾಡಿನ ಚಿತ್ರೀಕರಣ ಬೆಂಗಳೂರಿನ ಮಿನರ್ವ ಮಿಲ್ಸ್ ಮತ್ತು ರಾಮನಗರ ಜಿಲ್ಲೆಯ ಬೆಟ್ಟವೊಂದರಲ್ಲಿ ಚಿತ್ರೀಕರಣ ಮಾಡಲಾಗಿದೆ.
ನಾಲ್ಕು ದಿನ ಶಿವಣ್ಣ ಜೊತೇಗೇನೆ ಇದ್ದ ಗಾಯಕ ಮೋಹನ್ ಕುಮಾರ್, ಜಾನಪದ ಹಾಡನ್ನ ಹೇಗೆ ಉಚ್ಛರಿಸಬೇಕು ಅನ್ನೋದನ್ನ ಹೇಳಿಕೊಟ್ಟಿದ್ದಾರೆ. ಹಾಡಿರೋ ಹಾಡಿಗೆ ಲಿಪ್ ಸಿಂಕ್ ಮಾಡೋಕೆ ಅನುಕೂಲವಾಗಲೆಂದೇ ಈ ಒಂದು ವ್ಯವಸ್ಥೆಯನ್ನ ಎ.ಹರ್ಷ ಮಾಡಿಕೊಂಡಿದ್ದರು.
ಇದನ್ನೂ ಓದಿ: Puneeth Rajkumar-Rashmika: ಅಪ್ಪು ಸರ್ ಮಾತುಗಳು ನೆನಪಾಗ್ತಿದೆ; ಪುನೀತ್ ರಾಜ್ಕುಮಾರ್ ಬಗ್ಗೆ ರಶ್ಮಿಕಾ ಮಾತು!
ವೇದ ಸಿನಿಮಾದ ಜುಂಜಪ್ಪ ಹಾಡು ಹೀಗೆ ರೆಡಿ ಆಗಿದೆ. ರಿಲೀಸ್ ಆದ ಕೆಲವೇ ಗಂಟೆಯಲ್ಲಿಯೇ ಸಂಗೀತ ಪ್ರೇಮಿಗಳ ಹೃದಯ ಕದ್ದುಬಿಟ್ಟಿದೆ. ಅಷ್ಟೇ ಅಲ್ಲ, ಎಲ್ಲರ ಫೇವರಿಟ್ ಹಾಡು ಕೂಡ ಆಗಿದೆ. ದಿನೇ ದಿನೇ ವೈರಲ್ ಕೂಡ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ