ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Rajkumar Movie) ಕುಮಾರ್ ಅಭಿನಯದ ವೇದ ಸಿನಿಮಾದ ಪ್ರಚಾರ ಜೋರಾಗಿಯೇ ಇದೆ. ಸಿನಿಮಾ ತಂಡ ಈ ಚಿತ್ರವನ್ನ ತಮ್ಮದೇ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಚಿತ್ರದ ವಿಶೇಷತೆಗಳನ್ನೂ ಎಲ್ಲೆಡೆ ಶಿವರಾಜ್ (Vedha Kannada Movie) ಕುಮಾರ್ ಹೇಳುತ್ತಿದ್ದಾರೆ. ಇದರ ಮಧ್ಯ ಸಿನಿಮಾ ಕಂಟೆಂಟ್ ಬಗ್ಗೆನೂ ಒಂದು ವಿಶೇಷ ಸೆಳೆತ ಇದೆ. ಈ ಚಿತ್ರದಲ್ಲಿ ಶಿವಣ್ಣನ ಪಾತ್ರ ಏನು? ಅನ್ನೋದು ಒಂದು ಕಡೆ ಇದೆ. ಇನ್ನೂ (Vedha Kannada Movie Cast) ಒಂದು ಕಡೆಗೆ ಇದು ಮಹಿಳಾ ಪ್ರಧಾನ ಸಿನಿಮಾನಾ ಅನ್ನೋ ಕುತೂಹಲ ಕೂಡ ಇದೆ. ಇದಕ್ಕೆ ಪೂರಕ ಅನ್ನೋ ಒಂದಷ್ಟು (Vedha Kannada Movie Story) ಮಾಹಿತಿ ಈಗ ಹೊರಬಿದ್ದಿದೆ.
ಇಡೀ ವೇದ ಸಿನಿಮಾಕ್ಕೆ ಆ ನಾಲ್ವರು ಮಹಿಳೆಯರು ಪಿಲ್ಲರ್ ಅನ್ನೋದೇ ಈ ಸತ್ಯವಾಗಿದೆ. ಇದರ ಸುತ್ತ ಇಲ್ಲೊಂದು ಸುದ್ದಿ ಇದೆ ಓದಿ.
ವೇದ ಸಿನಿಮಾ ಮಹಿಳಾ ಪ್ರಧಾನ ಸಿನಿಮಾನೇ?
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರದ ಗತ್ತು ಬೇರೆ ಇದೆ. ಸಿನಿಮಾದಲ್ಲಿ ಶಿವಣ್ಣ ರೊಚ್ಚಿಗೆದಿದ್ದಾರೆ. ಅನ್ಯಾಯದ ವಿರುದ್ಧ ಮಚ್ಚು ಎತ್ತಿದ್ದಾರೆ.
ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ. ಹಾಗಂತ ಸಿನಿಮಾ ತಂಡ ಹೇಳಿಕೊಂಡಿಲ್ಲ. ಚಿತ್ರದ ಟ್ರೈಲರ್ ನೋಡಿದ್ರೆ ಸಾಕು. ಇದೆಲ್ಲದರ ಮಾಹಿತಿ ಸಿಕ್ಕು ಬಿಡುತ್ತದೆ.
1960 ರ ಹಿನ್ನೆಲೆಯಲ್ಲಿಯೇ ಸಿನಿಮಾದ ಕಥೆ ಸಾಗುತ್ತದೆ. ಈ ಕಥೆಯಲ್ಲಿ ಮಹಿಳೆಯರ ದಂಡು ದೊಡ್ಡದಿದೆ. ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು ಅನ್ನೋ ಸತ್ಯವೂ ಇಲ್ಲೂ ಸಾಬೀತಾದಂತಿದೆ. ಇದನ್ನ ಮಹಿಳಾ ಪ್ರಧಾನ ಸಿನಿಮಾ ಅಂದ್ರೆ ತಪ್ಪೇ ಇಲ್ವೇನೋ ಅನ್ನೋ ಹಾಗೇನೆ ಟ್ರೈಲರ್ ಇದೆ.
ವೇದ ಸಿನಿಮಾದಲ್ಲಿ ಮಹಿಳಾ ಶಕ್ತಿಯ ಅನಾವರಣ
ವೇದ ಸಿನಿಮಾದಲ್ಲಿ ಮಹಿಳೆಯರ ಹೋರಾಟದ ಕಥೆ ಇದ್ದಂತಿದೆ. ಅವರ ಬೆನ್ನೆಲುಬಾಗಿಯೇ ಶಿವಣ್ಣ ಇಲ್ಲಿ ವೇದನಾಗಿಯೇ ಇದ್ದಂತಿದೆ. ಆದರೆ ಇದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ ನಾಲ್ವರು ಮಹಿಳೆಯರು ಇಡೀ ಚಿತ್ರಕ್ಕೆ ಪಿಲ್ಲರ್ ಆಗಿದ್ದಾರೆ. ಆ ನಾಲ್ವರು ಯಾರು? ಹೇಳ್ತಿವಿ ಓದಿ.
ವೇದ ಚಿತ್ರದಲ್ಲಿ ಅದ್ಭುತ ಪಾತ್ರಗಳೇ ಇವೆ. ಆ ಪಾತ್ರಗಳನ್ನ ಡೈರೆಕ್ಟರ್ ಎ.ಹರ್ಷ ಒಂದೊಂದಾಗಿಯೇ ಪರಿಚಯ ಮಾಡಿಸುತ್ತಿದ್ದಾರೆ. ಪ್ರತಿ ಪಾತ್ರದ ನೇಚರ್ ಏನೂ ಅನ್ನೋದನ್ನೂ ಕೂಡ ಪೋಸ್ಟರ್ ಸಮೇತ ರಿವೀಲ್ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಇಲ್ಲಿರೋ ಆ ನಾಲ್ಕು ಪಾತ್ರಗಳನ್ನ ಕನ್ನಡದ ನಟಿಯರೇ ನಿರ್ವಹಿಸಿದ್ದಾರೆ.
ಉಮಾಶ್ರೀ, ಅದಿತಿ ಸಾಗರ್, ಗಾನವಿ, ಶ್ವೇತಾ ಚಂಗಪ್ಪ
ಹೌದು, ಈ ನಾಲ್ವರು ಕಲಾವಿದರು ವೇದ ಸಿನಿಮಾದ ಪ್ರಮುಖ ಪಾತ್ರಧಾರಿಗಳೇ ಆಗಿದ್ದಾರೆ. ವೇದ ಚಿತ್ರದ ಇಡೀ ಕಥೆ ಇವರ ಮೇಲೇನೆ ಇದೆ ಅನ್ನೋದನ್ನ ಈಗ ನಾವು ಗೆಸ್ ಮಾಡಬಹುದು ಅನಿಸುತ್ತಿದೆ. ಚಿತ್ರದಲ್ಲಿ ನಿಜಕ್ಕೂ ಇವರ ಪಾತ್ರಗಳ ವೈಬ್ರೇಷನ್ ಬೇರೆ ಬೇರೆ ರೀತಿನೇ ಇವೆ.
ಮಗಳು ಜಾನಕಿ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ ಇಲ್ಲಿ ಪುಷ್ಪ ಪಾತ್ರದ ಮೂಲಕ ಈಗಲೇ ಗಮನ ಸೆಳೆದಿದ್ದಾರೆ. ಪುಷ್ಪಳ ವೇದನಾಗಿ ಶಿವಣ್ಣ ಅಬ್ಬರಿಸಿದ್ದಾರೆ. ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಇಲ್ಲಿ ಶಿವಣ್ಣನ ಮಗಳು ಕನಕಾ ಪಾತ್ರ ನಿರ್ವಹಿಸಿದ್ದಾರೆ ಅನ್ನೋದೇ ಸದ್ಯದ ಮಾಹಿತಿ. ಉಮಾಶ್ರೀ ಅವರು Shankri ಹೆಸರಿನ ಶಿವಣ್ಣನ ತಾಯಿ ರೋಲ್ ಮಾಡಿರಬಹುದು ಅನ್ನೋದು ಒಂದು ಅಂದಾಜು.
ಡಿಸೆಂಬರ್-23 ರಂದು ವೇದ ಸಿನಿಮಾ ರಿಲೀಸ್
ಇವರಲ್ಲದೇ ಶ್ವೇತಾ ಚಂಗಪ್ಪ ಕೂಡ ಇಲ್ಲಿ ಆಕ್ರೋಶ ಭರಿತ ಪಾರೋ ಹೆಸರಿನ ಪಾತ್ರವನ್ನೆ ನಿರ್ವಹಿಸಿದ್ದಾರೆ. ಚಿತ್ರದ ಈ ಪ್ರಮುಖ ಪಾತ್ರದ ಜೊತೆಗೆ ವೀಣಾ ಪೊನ್ನಪ್ಪ ರಮಾ ಹೆಸರಿನ ಪೊಲೀಸ್ ಪಾತ್ರದಲ್ಲಿಯೇ ಅಬ್ಬರಿಸಿದ್ದಾರೆ. ಹೀಗೆ ವೇದ ಸಿನಿಮಾ ಒಂದು ಹೋರಾಟದ ಕಥೆಯಂತೆ ಕಾಣುತ್ತಿದೆ.
ಇದನ್ನೂ ಓದಿ: Sandalwood Star Kids: 2022ರಲ್ಲಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಸ್ಟಾರ್ ಕಿಡ್ಸ್ ಇವರು
ಚಿತ್ರಕ್ಕೆ ಪೂರಕ ಅನ್ನೋ ಹಾಗೆ ಚಿತ್ರದ ಶಕ್ತಿಯನ್ನ ಇನ್ನಷ್ಟು ಹೆಚ್ಚಿಸೋ ಕೆಲಸವನ್ನ ಅರ್ಜುನ್ ಜನ್ಯ ಸಂಗೀತ ಇಲ್ಲಿ ಮಾಡಿದೆ. ಪ್ರತಿ ಪಾತ್ರದ ಶಕ್ತಿಯನ್ನ ಇಲ್ಲಿ ಅರ್ಜುನ್ ಜನ್ಯ ಸಂಗೀತ ವೈಬ್ರೇಷನ್ ಕ್ರಿಯೇಟ್ ಮಾಡಿದೆ. ಡೈರೆಕ್ಟರ್ ಎ.ಹರ್ಷಾ ಇಲ್ಲಿ ಒಂದ್ ಅದ್ಭುತ ಕಥೆಯನ್ನ ಅಷ್ಟೇ ಅದ್ಭುತವಾಗಿಯೇ ಕಟ್ಟಿಕೊಟ್ಟಿದ್ದಾರೆ. ಡಿಸೆಂಬರ್-23 ರಂದು ವೇದ ಸಿನಿಮಾ ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ