ಸೋಷಿಯಲ್​​ ಮೀಡಿಯಾದಲ್ಲಿ ತೂತು ಮಡಿಕೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್​​​ ಸದ್ದು!

ಚಂದನವನದಲ್ಲಿ ಲವ್, ಆಕ್ಷನ್, ಹಾರರ್, ಸಸ್ಪೆನ್ಸ್ ಥ್ರಿಲ್ಲರ್, ಹೀಗೆ ಎಲ್ಲ ರೀತಿಯ ಚಿತ್ರಗಳು ತೆರೆಗೆ ಬರುತ್ತವೆ. ಅಂತೆಯೇ ಸದ್ಯ ಟ್ರೆಂಡ್​ ಆಗ್ತಾ ಇರೋ ಮತ್ತೊಂದು ಚಿತ್ರವೇ ತೂತು ಮಡಿಕೆ.

Ganesh Nachikethu | news18
Updated:June 24, 2019, 5:12 PM IST
ಸೋಷಿಯಲ್​​ ಮೀಡಿಯಾದಲ್ಲಿ ತೂತು ಮಡಿಕೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್​​​ ಸದ್ದು!
ತೂತು ಮಡಿಕೆ ನಿರ್ದೇಶಕ ಚಂದ್ರ ಕೀರ್ತಿ
  • News18
  • Last Updated: June 24, 2019, 5:12 PM IST
  • Share this:
ಸ್ಯಾಂಡಲ್​​ವುಡ್‌ನಲ್ಲಿ ಆಗಾಗ್ಗೆ ಹೊಸ ರೀತಿಯ ಸಿನಿಮಾಗಳು ಬರುತ್ತವೆ. ಅದರಲ್ಲೂ ಹೊಸಬರ ವಿಭಿನ್ನ ಪ್ರಯತ್ನದ ಸಿನಿಮಾಗಳಿಗೆ ಕನ್ನಡ ಸಿನಿರಸಿಕರು ಕೂಡ ಜೈ ಅಂತಿದ್ದಾರೆ. ಹೀಗಿರುವಾಗಲೇ ಇದೀಗ ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನವಾದ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ.

ಕನ್ನಡದಲ್ಲಿ ಲವ್, ಆಕ್ಷನ್, ಹಾರರ್, ಸಸ್ಪೆನ್ಸ್ ಥ್ರಿಲ್ಲರ್, ಹೀಗೆ ಎಲ್ಲ ರೀತಿಯ ಚಿತ್ರಗಳು ತೆರೆ ಮೇಲೆ ಅಪ್ಪಳಿಸುತ್ತಲೇ ಇರುತ್ತವೆ. ಅಂತೆಯೇ ಸದ್ಯ ಟ್ರೆಂಡ್​ ಆಗ್ತಾ ಇರೋ ಮತ್ತೊಂದು ಚಿತ್ರವೇ 'ತೂತು ಮಡಿಕೆ'. ತೂತು ಮಡಿಕೆ ಎಂಬ ವಿಭಿನ್ನವಾದ ಟೈಟಲ್​​ ಬಳಸಿ ಸಿನಿಮಾ ಮಾಡಲು ಮುಂದಾಗಿರುವ ಚಿತ್ರ ತಂಡಕ್ಕೆ, ಜನರಿಂದ ಒಳ್ಳೆ ರೆಸ್ಪಾನ್ಸ್​ ಸಿಗುತ್ತಿದೆ. ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.ಇದೊಂದು ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ. ಚಂದ್ರ ಕೀರ್ತಿ ಎಂಬುವರು ಈ ಚಿತ್ರ ನಿರ್ದೇಶನ ಮಾಡಲಿದ್ಧಾರೆ. ಮೊದಲ ಹಂತದಲ್ಲೇ ಜನರ ಗಮನ ಸೆಳೆದಿರುವ ತೂತು ಮಡಿಕೆ ಕಥೆ ಮತ್ತು ಚಿತ್ರಕಥೆಯನ್ನು ಚಂದ್ರ ಕೀರ್ತಿ, ಎ ಎಸ್ ಜಿ ಮತ್ತು ಡಾಲರ್ ಬರೆದಿದ್ದಾರೆ. ಈ ಹಿಂದೆ ಸಿಲಿಕಾನ್ ಸಿಟಿ, ಮೂಕವಿಸ್ಮಿತ, ನನ್ನ ಹಾಡು ನನ್ನದು, ಕಿಸ್ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಅನುಭವವನ್ನು ಚಂದ್ರ ಕೀರ್ತಿ ಅವರು ಹೊಂದಿದ್ದಾರೆ.

ಇದನ್ನೂ ಓದಿ: ನಟನೆಗೆ 'ಹ್ಯಾಟ್ರಿಕ್ ಹೀರೋ' ಬ್ರೇಕ್? ಸ್ಪಷ್ಟನೆ ನೀಡಿದ ಶಿವರಾಜ್ ಕುಮಾರ್

ಇನ್ನು ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ಧಾರೆ. ಹಾಗೆಯೇ ಸದ್ಯದಲ್ಲೇ ಸಿನಿಮಾ ಶೂಟಿಂಗ್ ಸೆಟ್ಟೇರಲಿದೆ. ಬೆಲ್​​ ಬಾಟಂ ಖ್ಯಾತಿಯ ರಘು ನಿಡುವಳ್ಳಿಯವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದರೆ, ಸ್ವಾಮಿನಾಥನ್ ಸಂಗೀತ ನೀಡಲಿದ್ದಾರೆ. ಅಭಿಲಾಷ್​​ ಪರಮಾತ್ಮ ಎಂಬುವರು ಬಟ್ಟೆ ಧರಿಸದೇ ತಮ್ಮ ಬೆನ್ನಿನ ಹಿಂದೆ ಮಡಿಕೆ ನೇತಾಕಿಕೊಂಡಿರುವ ಪೋಸ್ಟರ್​​ನಲ್ಲಿ ಏನೋ ಹೊಸತನವಿದೆ.
--------------
First published: June 24, 2019, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading