ಫಿಲಿಫೈನ್ಸ್​ನಲ್ಲಿ ಯೂ ಟರ್ನ್ ಹೊಡೆದ ಕನ್ನಡ ಚಿತ್ರ..!

uTurn

uTurn

ನಮ್ಮ ಭಾಷೆಯಲ್ಲಿ ಮೂಡಿಬಂದಂತಹ ಒಂದು ಚಿತ್ರವು ವಿದೇಶದಲ್ಲೂ ರಿಮೇಕ್ ಆಗುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಸಂತೋಷ ಬೇರೊಂದಿಲ್ಲ. ಒಬ್ಬ ನಿರ್ದೇಶಕನಿಗಿಂತ ಒಬ್ಬ ಬರಹಗಾರನಾಗಿ ಈ ವಿಷಯ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ.

  • Share this:

ಕನ್ನಡದ ಸೂಪರ್ ಡೂಪರ್ ಹಿಟ್ ಚಿತ್ರ ಯೂ ಟರ್ನ್ ಇದೀಗ ಫಿಲಿಫೈನ್ಸ್​ನಲ್ಲಿ ಟರ್ನ್ ಹೊಡೆಯಲು ಸಜ್ಜಾಗಿದೆ. ಅಂದರೆ ಪವನ್ ಕುಮಾರ್ ನಿರ್ದೇಶನದ ಈ ಸಿನಿಮಾ ಫಿಲಿಫೈನ್ಸ್​ನಲ್ಲಿ ರಿಮೇಕ್ ಆಗುತ್ತಿದೆ.


ಈಗಾಗಲೇ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ರಿಮೇಕ್ ಆಗಿರುವ ಈ ಚಿತ್ರವನ್ನು ಫಿಲಿಫೈನ್ಸ್​ನ ಎಬಿಎಸ್-ಸಿಬಿಎನ್ ನಿರ್ಮಾಣ ಸಂಸ್ಥೆ ರಿಮೇಕ್ ಮಾಡಲು ಮುಂದಾಗಿದೆ. ಅದಕ್ಕಾಗಿ ತಾರಾ ಬಳಗವನ್ನೂ ಸಹ ಚಿತ್ರತಂಡ ಪ್ರಕಟಿಸಿದ್ದು, ಕಿಂ ಚ್ಯು, ಡಿ ಗುಜ್‌ಮನ್, ಟೋನಿ ಲ್ಯಾಬ್ರುಸ್ಕಾ ಎಂಬ ನಟರುಗಳು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.


ಇನ್ನು ಈ ಚಿತ್ರವನ್ನು ಫಿಲಿಫೈನ್ಸ್​ನ ಖ್ಯಾತ ನಿರ್ದೇಶಕ ಡೆರಿಕ್ ಕ್ಯಾಬ್ರಿಡೊ ನಿರ್ದೇಶಿಸಲಿದ್ದಾರೆ. ಹಾಗೆಯೇ ಈ ಚಿತ್ರವು ಚೀನಾ ಹಾಗೂ ಥಾಯ್ ಭಾಷೆಗಳಲ್ಲಿ ಮೂಡಿಬರಲಿದೆ ಎಂದು ಹೇಳಲಾಗಿದೆ.


ಈಗಾಗಲೇ ಎಬಿಎಸ್ ಸಂಸ್ಥೆಯು ಕನ್ನಡ ನಿರ್ದೇಶಕ ಪವನ್ ಕುಮಾರ್ ಅವರೊಂದಿಗೆ ರಿಮೇಕ್ ರೈಟ್ಸ್​ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಈ ಸಂಬಂಧ ಚರ್ಚೆಗಳು ಮುಂದುವರೆದಿದೆ ಎಂದು ಯೂಟರ್ನ್ ನಿರ್ದೇಶಕರು ತಿಳಿಸಿದ್ದಾರೆ.


ನಮ್ಮ ಭಾಷೆಯಲ್ಲಿ ಮೂಡಿಬಂದಂತಹ ಒಂದು ಚಿತ್ರವು ವಿದೇಶದಲ್ಲೂ ರಿಮೇಕ್ ಆಗುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಸಂತೋಷ ಬೇರೊಂದಿಲ್ಲ. ಒಬ್ಬ ನಿರ್ದೇಶಕನಿಗಿಂತ ಒಬ್ಬ ಬರಹಗಾರನಾಗಿ ಈ ವಿಷಯ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಒಂದು ನೈಜಕಥೆಯನ್ನು ಆಧರಿಸಿ ಮಾಡಿದ ಚಿತ್ರಕಥೆ ಬೇರೊಂದು ದೇಶಕ್ಕೂ ಕನೆಕ್ಟ್ ಆಗುತ್ತೆ ಎಂದು ನಾನು ಯಾವತ್ತೂ ಭಾವಿಸಿಲ್ಲ. ಇದೆಲ್ಲವೂ ನನಗೆ ಸರ್​ಪ್ರೈಸ್ ಎಂದಿದ್ದಾರೆ ನಿರ್ದೇಶಕ ಪವನ್ ಕುಮಾರ್.

First published: