• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Film Fight: ಅಪ್ಪು ಜನ್ಮ ದಿನ ರಿಲೀಸ್​​ಗೆ ರೆಡಿಯಾಗಿವೆ 2 ಕನ್ನಡ ಸಿನಿಮಾ! ಉಪ್ಪಿ-ಗಣಿ ಫಿಲ್ಮ್ ಪೈಪೋಟಿ

Film Fight: ಅಪ್ಪು ಜನ್ಮ ದಿನ ರಿಲೀಸ್​​ಗೆ ರೆಡಿಯಾಗಿವೆ 2 ಕನ್ನಡ ಸಿನಿಮಾ! ಉಪ್ಪಿ-ಗಣಿ ಫಿಲ್ಮ್ ಪೈಪೋಟಿ

ಬಾನದಾರಿಯಲ್ಲಿ-ಕಬ್ಜ ಸಿನಿಮಾ ಒಂದೇ ದಿನ ರಿಲೀಸ್ ?

ಬಾನದಾರಿಯಲ್ಲಿ-ಕಬ್ಜ ಸಿನಿಮಾ ಒಂದೇ ದಿನ ರಿಲೀಸ್ ?

ನಮ್ಮ ಸಿನಿಮಾ ಮಾರ್ಚ್​-17ಕ್ಕೆ ರಿಲೀಸ್ ಆಗುತ್ತದೆ. ಈ ಡೇಟ್​​ಗೆ ನಾವು ಫಿಕ್ಸ್ ಆಗಿದ್ದೇವೆ. ಇನ್ನು ಸೆನ್ಸಾರ್ ಆಗಬೇಕಿದ್ದು ನೋಡೋಣ ಏನಾಗುತ್ತೆ ಅಂತ ಪ್ರೀತಂ ಗುಬ್ಬಿ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ಅಗಲುವಿಕೆ ಇಡೀ ಇಂಡಸ್ಟ್ರಿಗೆ (Film Industry) ನೋವು ತಂದಿದೆ. ಅಪ್ಪು ಇಲ್ಲ ಅನ್ನೋ ನೋವಿನಲ್ಲಿಯೇ ಕನ್ನಡದ ನಿರ್ಮಾಪಕರು, ನಿರ್ದೇಶಕರ ತಮ್ಮ ಚಿತ್ರದಲ್ಲಿ ಪುನೀತ್ ಅವರಿಗೆ ಒಂದು ಗೌರವ ಸಲ್ಲಿಸುತ್ತಲೇ ಇದ್ದಾರೆ. ಚಿತ್ರದ ಹಾಡುಗಳು ಇರಬಹುದು, ಇಲ್ಲವೇ ಚಿತ್ರದ ಟ್ರೈಲರ್ ಟೀಸರೇ ಆಗಿರಬಹುದು, ಎಲ್ಲದರಲ್ಲೂ ಅಪ್ಪುಗೆ ಗೌರವ ಸಲ್ಲಿಸಲಾಗುತ್ತಿದೆ. ಆದರೆ ಕನ್ನಡದ ಎರಡು (Puneeth Birthday on March-17) ಸಿನಿಮಾಗಳು ಪುನೀತ್ ರಾಜ್​ಕುಮಾರ್ ಜನ್ಮ ದಿನದಂದು ಮಾರ್ಚ್​-17 ರಂದು ರಿಲೀಸ್ ಆಗುತ್ತಿವೆ. ಹೀಗಿರೋವಾಗ ಈ ಎರಡು ಚಿತ್ರಗಳು ಒಟ್ಟಿಗೆ ಬರೋದು ಪಕ್ಕಾನಾ? ಯಾರು (Kannada Two Film Release) ಮೊದಲು ಅನೌನ್ಸ್ ಮಾಡಿರೋದು? ಸೆಕೆಂಡ್ ಅನೌನ್ಸ್ ಮಾಡಿರೋದು? ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.


ಅಪ್ಪು ಜನ್ಮ ದಿನಕ್ಕೆ ಎರಡು ಕನ್ನಡ ಸಿನಿಮಾ ಅನೌನ್ಸ್


ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಜನ್ಮ ದಿನಕ್ಕೆ ಎರಡು ಸಿನಿಮಾ ಅನೌನ್ಸ್ ಆಗಿವೆ. ಎರಡೂ ಚಿತ್ರಗಳು ಬಿಗ್ ಚಿತ್ರಗಳೇ ಆಗಿವೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸೋಕೆ  ಚಿತ್ರಗಳನ್ನ ಅವರ ಜನ್ಮ ದಿನಕ್ಕೆ ರಿಲೀಸ್ ಮಾಡೋ ಪ್ಲಾನ್ ಮಾಡಿದ್ದಾರೆ.


Kannada two Movies are Release on Puneeth Rajkumar Birthday
ಕಬ್ಜ ಮತ್ತು ಬಾನದಾರಿಯಲ್ಲಿ ಒಂದೇ ದಿನ ಬರೋದು ಪಕ್ಕಾನಾ?


ಕನ್ನಡದ ಈ ಎರಡು ಸಿನಿಮಾಗಳು ಯಾವವು ಅನ್ನೋದು ಗೊತ್ತೇ ಇದೆ. ನಿಜ, ರಿಯಲ್ ಸ್ಟಾರ್ ಉಪೇಂದ್ರ-ಕಿಚ್ಚ ಸುದೀಪ್ ಅಭಿನಯದ ಕಬ್ಜ ಚಿತ್ರ ಮಾರ್ಚ್​-17 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.
ಬಾನದಾರಿಯಲ್ಲಿ-ಕಬ್ಜ ಸಿನಿಮಾ ಒಂದೇ ದಿನ ರಿಲೀಸ್
ಬಾನದಾರಿಯಲ್ಲಿ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಅಪ್ಪು ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರವನ್ನ ಆಫ್ರಿಕಾದಲ್ಲಿ ಚಿತ್ರೀಸಿಕೊಂಡು ಬಂದಿರೊದು ವಿಶೇಷ. ಈ ಚಿತ್ರ ಕೂಡ ರೆಡಿ ಆಗಿದ್ದು, ಮಾರ್ಚ್​-17 ರಂದು ರಿಲೀಸ್ ಮಾಡಲು ಪ್ಲಾನ್ ಆಗಿದೆ.


ಆದರೆ ಈಗ ಎರಡು ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತಿರೋದು ಸದ್ಯದ ವಿಷಯ. ಕನ್ನಡ ಸಿನಿಪ್ರೇಮಿಗಳಿಗೆ ಒಂದೇ ದಿನ ಎರಡು ದೊಡ್ಡ ಚಿತ್ರಗಳು ಬರ್ತಿರೋದು ಖುಷಿ ವಿಷಯವೇ ಆಗಿದೆ. ಆದರೆ ಎಲ್ಲೋ ಒಂದು ಕಡೆಗೆ ಟಕ್ಕರ್ ಆಗುತ್ತದೆ ಅನ್ನೋ ಅಂದಾಜು ಕೂಡ ಇದೆ.


Kannada two Movies are Release on Puneeth Rajkumar Birthday
ಅಪ್ಪು ಜನ್ಮ ದಿನಕ್ಕೆ ಎರಡು ಕನ್ನಡ ಸಿನಿಮಾ ಅನೌನ್ಸ್!


ಅಪ್ಪು ಜನ್ಮ ದಿನಕ್ಕೆ ನಮ್ಮ ಚಿತ್ರ ರಿಲೀಸ್ ಅಂತ ಮೊದಲು ಹೇಳಿದ್ಯಾರು?


ಪುನೀತ್ ರಾಜ್​ಕುಮಾರ್ ಜನ್ಮ ದಿನಕ್ಕೆ ಎರಡು ಸಿನಿಮಾ ಬರ್ತಿವೆ ಅನ್ನೋ ವಿಷಯ ಈಗ ಗೊತ್ತಾಗಿದೆ. ಬಾನದಾರಿಯಲ್ಲಿ ಮತ್ತು ಕಬ್ಜ ಚಿತ್ರ ಈ ವಿಷಯವನ್ನ ಘೋಷಿಸಿಯೂ ಆಗಿದೆ.


ಆದರೆ ಈ ಎರಡು ಚಿತ್ರಗಳಲ್ಲಿ ಮೊದಲು ರಿಲೀಸ್ ಡೇಟ್ ಅನೌನ್ಸ್ ಮಾಡಿರೋದು ಯಾರು? ಈ ಒಂದು ಪ್ರಶ್ನೆಗೆ ಬಾನದಾರಿಯಲ್ಲಿ ಚಿತ್ರದ ನಿರ್ದೇಶಕ ಪ್ರೀತಂ ಗುಬ್ಬಿ ಒಂದು ಕ್ಲಾರಿಟಿ ಕೊಟ್ಟಿದ್ದಾರೆ. ಕಬ್ಜ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೊದಲು ನಾವೇ ನಮ್ಮ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದೇವೆ ಎಂದು ಹೇಳುತ್ತಾರೆ.


ನಮ್ಮ ಸಿನಿಮಾ ಮಾರ್ಚ್​-17ಕ್ಕೆ ರಿಲೀಸ್ ಆಗುತ್ತದೆ. ಈ ಡೇಟ್​​ಗೆ ನಾವು ಫಿಕ್ಸ್ ಆಗಿದ್ದೇವೆ. ಇನ್ನು ಸೆನ್ಸಾರ್ ಆಗಬೇಕಿದ್ದು ನೋಡೋಣ ಏನಾಗುತ್ತೆ ಅಂತಲೇ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಪ್ರೀತಂ ಗುಬ್ಬಿ ತಿಳಿಸಿದ್ದಾರೆ.


ಇದನ್ನೂ ಓದಿ: Kichcha Sudeepa: ಸುದೀಪ್ ನೆಕ್ಸ್ಟ್​ ಮೂವಿ ಯಾವುದು? ಕಿಚ್ಚನ ತಮಿಳು ಸಿನಿಮಾ ಸೆಟ್ಟೇರುತ್ತಾ?


ಕಬ್ಜ ಮತ್ತು ಬಾನದಾರಿಯಲ್ಲಿ ಒಂದೇ ದಿನ ಬರೋದು ಪಕ್ಕಾನಾ?


ಒಂದೇ ದಿನ ಎರಡು ದೊಡ್ಡ ಸಿನಿಮಾ ಬಂದರೆ ಏಟು ಬೀಳೋದು ಗ್ಯಾರಂಟಿ ಅನ್ನೋದು ಒಟ್ಟು ಲೆಕ್ಕಾಚಾರವೇ ಆಗಿದೆ. ಎರಡೂ ಕನ್ನಡದ ಸಿನಿಮಾಗಳೇ ಆಗಿರೋದ್ರಿಂದ ಯಾವುದು ಹಿಂದಕ್ಕೆ ಸರಿಯುತ್ತದೆ? ಮತ್ಯಾವುದು ಮಾರ್ಚ್​-17ಕ್ಕೆ ರಿಲೀಸ್ ಆಗುತ್ತದೆ ಅನ್ನೋದು ಈಗೀನ ಕುತೂಹಲ. ಈ ಕುರಿತು ಕಬ್ಜ ಚಿತ್ರದ ನಿರ್ಮಾಪಕ-ನಿರ್ದೇಶಕ ಆರ್​.ಚಂದ್ರು ಇನ್ನೂ ಏನೂ ಪ್ರತಿಕ್ರಿಯೆ ಕೊಟ್ಟಿಲ್ಲ.

First published: