ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಸತ್ಯ‘ (Sathya) ಸೀರಿಯಲ್ ನಲ್ಲಿ (Serial) ಬಿಗ್ ಟ್ವೀಸ್ಟ್ ಸಿಕ್ಕಿದೆ. ಹೌದು, ಮದುವೆಯ ಸಂಭ್ರಮದಲ್ಲಿರುವವರಿಗೆ ದೊಡ್ಡ ಆಘಾತ ಉಂಟಾಗಿದೆ.
ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಸತ್ಯ‘ (Sathya) ಸೀರಿಯಲ್ ನಲ್ಲಿ (Serial) ಬಿಗ್ ಟ್ವೀಸ್ಟ್ ಸಿಕ್ಕಿದೆ. ಹೌದು, ಮದುವೆಯ ಸಂಭ್ರಮದಲ್ಲಿರುವವರಿಗೆ ದೊಡ್ಡ ಆಘಾತ ಉಂಟಾಗಿದೆ. ಮದುವೆಯ ಮಂಟಪಕ್ಕೆ ಬರಬೇಕಿದ್ದ ಮಧುಮಗಳು ಕಾಣೆಯಾಗಿದ್ದಾರೆ. ಹೌದು, ಪುರೋಹಿತರು ಮದುವೆ ಮಂಟಪಕ್ಕೆ ಹುಡುಗಿಯನ್ನು ಕರೆದುಕೊಂಡು ಬನ್ನಿ ಎಂದಾಗ ಸತ್ಯ, ದಿವ್ಯಾ (Divya) ಸ್ನೇಹಿತೆ ರಮ್ಯಾಳನ್ನು (Ramya) ನೋಡಿ ಶಾಕ್ ಆಗಿದ್ದಾಳೆ. ದಿವ್ಯಾ ಬರದ್ದನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಆಗ ಸತ್ಯಾ ರಮ್ಯಾಳ ಬಳಿ ದಿವ್ಯಾ ಎಲ್ಲಿ ಎಂದಾಗ ರಮ್ಯಾ ಮುಹೂರ್ತಕ್ಕೆ ಟೈಂ ಆಯ್ತು ಅಂತ ಇಲ್ಲಿಗೆ ಬಂದೆ ಎನ್ನುವುದಕ್ಕೂ ಸತ್ಯ ದಿವ್ಯಾಳನ್ನು ಹುಡುಕಲು ಓಡುತ್ತಾಳೆ.
ಮದುಮಗಳೆ ಕಾಣೆ :
ಇತ್ತ ಮದೆವೆ ಸಂಭ್ರಮದಲ್ಲಿರುವ ಕುಟುಂಬದವರಿಗೆ ದೊಡ್ಡ ಆಘಾತವಾಗಿದೆ. ಮದುಮಗಳು ದಿವ್ಯಾ ಕಾಣೆಯಾಗಿದ್ದು, ಎಲ್ಲರಲ್ಲಿಯೂ ಆತಂಕ ಉಂಟಾಗಿದೆ. ಈ ನಡುವೆ ಕೀರ್ತನಾ ದೊಡ್ಡದಾಗಿ ಕೂಗಿಕೊಳ್ಳುತ್ತಾ ಬರುತ್ತಾಳೆ ಅಲ್ಲದೇ ಮದುಮಗಳು ದಿವ್ಯಾ ಎಲ್ಲಿಯೂ ಕಾಣುತ್ತಿಲ್ಲ ಅಮ್ಮಾ ಎಂದು ಎನ್ನುವುದಕ್ಕೆ ಎಲ್ಲರೂ ಒಮ್ಮೆ ಶಾಕ್ ಆಗುತ್ತಾರೆ. ಇದಲ್ಲದೇ ಸತ್ಯನಿಗೆ ನಿನ್ನ ಅಕ್ಕ ಎಲ್ಲೂ ಕಾಣುತ್ತಿಲ್ಲ ಎನ್ನುತ್ತಿದ್ದಂತೆ ಸತ್ಯನಿಗೆ ಶಾಕ್ ಆಗಿ ಎಲ್ಲಡೆ ಹುಡುಕಲು ಹೊರಡುತ್ತಾಳೆ. ಇದರ ನಡುವೆ ದಿವ್ಯ ಚಿಕ್ಕಪ್ಪ ದಿವ್ಯ ಓಡಿ ಹೋಗಿ ಬಿಟ್ಟಳಾ, ನನಗೆ ಮೊದಲೇ ಗೊತ್ತಿತ್ತು ಎಂದು ಹೇಳುತ್ತರೆ.
ಕಿಡ್ನಾಪ್ ಆದ್ಲಾ ದಿವ್ಯಾ?:
ಇತ್ತ ದಿವ್ಯಾ ಚಿಕ್ಕಪ್ಪ ಅವರು ಓಡಿ ಹೋಗಿ ಬಿಟ್ಟಳಾ, ನನಗೆ ಮೊದಲೇ ಗೊತ್ತಿತ್ತು ಎನ್ನುತ್ತಾ ಇದ್ದವರಿಗೆಲ್ಲಾ ಮತ್ತೊಂದು ಶಾಕ್ ನೀಡುತ್ತಾರೆ. ಲಾಸ್ಟ್ ಟೈಂ ಕಿಡ್ನಾಪ್ ಮಾಡೋದಕ್ಕೆ ಆಗಲಿಲ್ಲ ಎಂದು ಈ ಸಲ ಕಿಡ್ನಾಪ್ ಆಗೋದ್ಲಾ ಎಂದು ಎಲ್ಲರ ತಲೆಗೂ ಹುಳ ಬಿಟ್ಟದ್ದಾರೆ. ಇದರ ನಡುವೆ ಕಾರ್ತಿಕ್ ಸತ್ಯ ಮೇಲೆ ಅನುಮಾನ ಮಾಡಿದ್ದು, ಮೊದಲು ಆ ಸತ್ಯ ಎಲ್ಲಿ ಎಂದು ಹುಡುಕಿ ಎಂದು ಹೇಳಿದ್ದಾರೆ.
ಸತ್ಯ ಇಲ್ಲಿಗೆ ಬಂದಿರುವುದು ಮದುವೆ ನಡೆಸುವುದಕ್ಕೂ ಅಲ್ಲ. ಮದುವೆ ನೋಡುವುದಕ್ಕೂ ಅಲ್ಲ. ಈ ಮದುವೆ ಹಾಳು ಮಾಡಲು ಅವಳು ಇಲ್ಲಿಗೆ ಬಂದಿದ್ದಾಳೆ ಎಂದು ಕಾರ್ತಿಕ್ ಸಿಟ್ಟಾಗುತ್ತಾನೆ. ಅಲ್ಲದೇ ಯಾರೂ ಪೋಲಿಸ್ ಅವರಿಗೆ ಪೋನ್ ಮಾಡಬೇಡಿ, ಬದಲಿಗೆ ಸತ್ಯ ಎಲ್ಲಿದ್ದಾಳೆ ಎಂದು ನೋಡಿ ಎಂದು ಹೇಳುವುದಕ್ಕೂ ಸತ್ಯ ಅಲ್ಲಿಗೆ ಬರುತ್ತಾಳೆ. ಸೀತಾ ಬಳಿ ದಿವ್ಯಾ ಎಲ್ಲಿ ಎಂದು ಕೇಳುತ್ತಾರೆ.
ಅಷ್ಟರಲ್ಲಿಯೇ ಸೀತಾ, ಜಾನಕಿ, ಗಿರಿಜಮ್ಮ ಎಲ್ಲರೂ ಸತ್ಯಳನ್ನು ಪ್ರಶ್ನೆ ಮಾಡತೊಡಗುತ್ತಾರೆ. ಇದರ ನಡುವೆ ಕಾರ್ತಿಕ್ ನಿಮ್ಮಕ್ಕ ಕಾಣಿಸುತ್ತಿಲ್ಲ ಅಂತ ನಮ್ಮಕ್ಕನ ಕೇಳುತ್ತೀರಾ.? ಎಂದಾಗ ಸತ್ಯ ನಾನು ಮಾತನಾಡುತ್ತಿದ್ದೀನಿ ತಾನೇ. ನನಗೆ ಚೆನ್ನಾಗಿ ಗೊತ್ತು ನಿಮಗೆಲ್ಲಾ ಗೊತ್ತು ಅಂತ, ಯಾರು ಬಂದಿದ್ದರು ಇಲ್ಲಿಗೆ ಎಂದು ಕೀರ್ತನಾಳನ್ನು ಸತ್ಯ ಕೇಳುತ್ತಾಳೆ.
ಇತ್ತ, ದಿವ್ಯಾ ತನ್ನ ಪ್ರೇಯಸ ಬಾಲನ ಸುಲ್ಳಿನ ಮಾತುಗಳನ್ನು ನಂಬಿ ಅವನಲ್ಲಿಗೆ ಓದಿ ಹೋದಳಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಇದನ್ನು ತಿಳಿದುಕೊಳ್ಳು ಮುಂದಿನ ಎಪಿಸೋಡ್ ವರೆಗೂ ನೀವು ನೋಡಲೇ ಬೇಕು.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ