Thurthu Nirgamana: 'ತುರ್ತು ನಿರ್ಗಮನ' ಚಿತ್ರತಂಡದಿಂದ ಪುನೀತ್​ ರಾಜ್​ಕುಮಾರ್​ಗೆ ಗಾನ ನಮನ, ಜೀವ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ

ತುರ್ತು ನಿರ್ಗಮನ (Thurthu Nirgamana) ಸಿನಿಮಾ ತಂಡ ಅಪ್ಪುಗೆ ಗಾನ ನಮನ ಸಲ್ಲಿಸಿದೆ. ಅಪ್ಪು (Appu) ಗುಣಗಾನ ಮಾಡುವ ಜೀವ ಎಂಬ ಹಾಡನ್ನು ಬಿಡುಗಡೆ ಮಾಡಿದೆ.

ಅಪ್ಪುಗೆ ಗಾನ ನಮನ

ಅಪ್ಪುಗೆ ಗಾನ ನಮನ

  • Share this:
ಕನ್ನಡದ ನಟ ಡಾ. ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮನ್ನು ದೈಹಿಕವಾಗಿ ಅಗಲಿದರೂ ಇನ್ನೂ ನಮ್ಮಲ್ಲಿ ಉಳಿದಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಅದೆಷ್ಟೋ ಜನರಿಗೆ ಆದರ್ಶಪ್ರಾಯವಾಗಿದೆ. ಅದರಲ್ಲಿಯೂ ಸಿನಿರಂಗವು ಅವರನ್ನು ಒಂದಲ್ಲಾ ಇಂದು ರೀತಿಯಲ್ಲಿ ಆಗ್ಗಾಗ್ಗೆ ನೆನಪಿಕೊಳ್ಳುತ್ತಲೇ ಇರುತ್ತದೆ. ಇದಿಗ ಅದೇ ರೀತಿ ಕನ್ನಡದ (Kannada) ಹೊಸಬರ ಚಿತ್ರತಂಡವೊಂದು ಅವರಿಗೆ ಗಾನ ನಮನ ಮಾಡುವ ಮೂಲಕ ಅವರನ್ನು ಮತ್ತೊಮ್ಮೆ ನೆನಪಿಸಿಕೊಂಡಿದೆ. ಹೌದು, ತುರ್ತು ನಿರ್ಗಮನ (Thurthu Nirgamana) ಸಿನಿಮಾ ತಂಡ ಅಪ್ಪುಗೆ ಗಾನ ನಮನ ಸಲ್ಲಿಸಿದೆ. ಅಪ್ಪು (Appu) ಗುಣಗಾನ ಮಾಡುವ ಜೀವ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಇದು ಸಂಪೂರ್ಣವಾಗಿ ಸ್ವರಮೇಳವಾಗಿದೆ. ಚಿತ್ರತಂಡದ ಪ್ರಕಾರ, ಈ ಹಾಡು 'ಕೋಟ್ಯಂತರ ಅಪ್ಪು ಅಭಿಮಾನಿಗಳ ಧ್ವನಿಯನ್ನು ಪ್ರತಿನಿಧಿಸುತ್ತದೆ ಮತ್ತು ದೇವತೆಗಳು ಅವರನ್ನು ಸ್ವರ್ಗದಲ್ಲಿ ಸ್ವಾಗತಿಸುವ ಒಂದು ಗಾನ ನಮನವಾಗಿದೆ ಎಂದು ಹೇಳಿದ್ದಾರೆ.

ಅಪ್ಪುಗೆ ಗಾನ ನಮನ:

ತುರ್ತು ನಿರ್ಗಮನ ಎಂಬ ಚಿತ್ರವು ಇದೀಗ ಕನ್ನಡದ ಪವರ್ ಸ್ಟಾರ್, ಅಭಿಮಾನಿಗಳ ಮೆಚ್ಚಿನ ಅಪ್ಪುವಿಗೆ ಗಾನ ನಮನ ಸಲ್ಲಿಸಿದ್ದಾರೆ. ಶರತ್ ಭಗವಾನ್ ಸಾಹಿತ್ಯಕ್ಕೆ, ಡಾಸ್ ಮೂಡ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವಾಗಿ 16 ಜನ ಖ್ಯಾತ ಹಿನ್ನೆಲೆ ಗಾಯಕರು ದ್ವನಿಯಲ್ಲಿ ಅಪ್ಪುವಿಗೆ ಗಾನ ನಮನ ಸಲ್ಲಿಸಿದ್ದಾರೆ. ಅದರ್ಲಲಿಐಉ ಹೆಚ್ಚು ಆಕರ್ಷಕವಾಗಿ ಈ ಹಾಡಿನಲ್ಲಿ ಅಪ್ಪು ಫೋಟೋ ಬದಲು ಚೇತನ್ ಎಸ್ ಮೂರ್ತಿ, ರಕ್ಷಿತ್ ಬಿ ಕೈಚಳಕದಿಂದ ಸೃಷ್ಟಿಸಿರುವ ಸ್ಕೆಚ್ ಗಳನ್ನು ಬಳಸಿಕೊಂಡಿದ್ದಾರೆ.16 ಜನರಿಂದ ಏಕಕಾಲದಲ್ಲಿ ಪುನೀತ್​ಗೆ ಗಾನ ನಮನ:

ಇನ್ನು, ಪುನೀತ್ ರಾಜ್​ ಕುಮಾರ್ ಅವರಿಗೆ ಗಾನ ನಮನ ಸಲ್ಲಿಸಿರು ಚಿತ್ರತಂಡ ವಿಶೇಷವಾಗಿ 16 ಜನರಿಂದ ಹಾಡನ್ನು ಹಾಡಿಸಲಾಗಿದೆ. ನಿಖಿಲ್ ಪಾರ್ಥಸಾರಥಿ, ಪೂಜಾ ರಾವ್, ಮನೋಜ್ ಶರ್ಮಾ, ಅರುಂಧತಿ ಹೆಗ್ಡೆ, ಪ್ರತಿಮಾ ಭಟ್, ಚಿನ್ಮಯಿ ಚಂದ್ರಶೇಖರ್, ಅನುರಾಧ ವಿ ಭಟ್, ಸುಪ್ರೀತ್ ಫಲ್ಗುಣ , ಗಣೇಶ್ ಕಾರಂತ್, ನಿಹಾಲ್ ವಿಜೇತ್, ಮೇಘನಾ ಅಶ್ವಿನ್, ಮೇಘನಾ, ಕುಲಕರ್ಣಿ, ಡಾಸ್ಮೋಡ್ ಅವರು ಈ ಹಾಡಿಗೆ ಕಂಠದಾನ ಮಾಡಿದ್ದರೆ.

ಇದನ್ನೂ ಓದಿ: 5 ವಾರಗಳಲ್ಲಿ KGF 2 ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಬಾಲಿವುಡ್​ನಲ್ಲಿ ಅಬ್ಬರಿಸಿದ ಸೌತ್ ಸಿನಿಮಾಗಳಿವು

ನಟ ಸುನಿಲ್ ರಾವ್ ಕಂಬ್ಯಾಕ್:

ಇನ್ನು, ತುಂಬಾ ದಿನಗಳ ಬಳಿಕ ನಟ ಸುನಿಲ್ ರಾವ್ ತುರ್ತು ನಿರ್ಗಮನ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಇದೊಂದು ಫ್ಯಾಂಟಸಿ ಸಿನಿಮಾವಾಗಿದೆ. ಕುಮಾರ್‌ ಆ್ಯಂಡ್‌ ಕುಮಾರ್‌ ಫಿಲ್ಮ್ಸ್ ಸಂಸ್ಥೆಯಡಿ ಭರತ್‌ಕುಮಾರ್‌ ಮತ್ತು ಹೇಮಂತ್‌ ಕುಮಾರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೈಲಜಾ ಪಿಕ್ಚರ್ಸ್ ನ ಸಹ ನಿರ್ಮಾಪಕ ಶರತ್‌ ಭಗವಾನ್‌ ಸಹಯೋಗವಿದೆ. ಹೇಮಂತ್‌ ಕುಮಾರ್‌ ನಿರ್ಮಾಣದ ಜೊತೆಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತಿದ್ದಾರೆ. ಇವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾಗೆ ಸಹ ನಿರ್ದೇಶಕರಾಗಿದ್ದರು.

ಇದನ್ನೂ ಓದಿ: Malaika Arora - Arjun Kapoor: ಮಲೈಕಾ ಅರೋರಾ- ಅರ್ಜುನ್ ಕಪೂರ್ ಮದುವೆ ಡೇಟ್​ ಫಿಕ್ಸ್? ಗಾಸಿಪ್​ಗಳಿಗೆ ಉತ್ತರಿಸಿದ ನಟ

ದೊಡ್ಡ ತಾರಾಬಳಗದ ಸಿನಿಮಾ:

ತುರ್ತು ನಿರ್ಗಮನ ಚಿತ್ರದಲ್ಲಿ ನಟನಾಗಿ ಸುನೀಲ್ ರಾವ್, ಅಚ್ಯುತ ಕುಮಾರ್‌, ಸುಧಾರಾಣಿ, ಸಂಯುಕ್ತಾ ಹೆಗಡೆ, ಹಿತಾ ಚಂದ್ರ ಶೇಖರ್‌, ನಾಗೇಂದ್ರ ಶಾ, ಅರುಣಾ ಬಾಲರಾಜ್‌ ಅಭಿನಯಿಸಿದ್ದಾರೆ.

ಪುನೀತ್​ ರೇಖಾಚಿತ್ರ


ಪುನೀತ್ ಹೊಸ ಯುಗದ ಕನ್ನಡ ಚಿತ್ರರಂಗಕ್ಕೆ ದಾರಿದೀಪವಾಗಿದ್ದರು:

ನಮ್ಮ ಸಿನಿಮಾ ಮಾಡುವ ಪ್ರಕ್ರಿಯೆಯ ಉದ್ದಕ್ಕೂ ಅಪ್ಪು ಸರ್ ಅವರೊಂದಿಗೆ ಒಡನಾಡುವ ಆಲೋಚನೆ ಯಾವಾಗಲೂ ನನ್ನ ಮನಸ್ಸಿನಲ್ಲಿತ್ತು, ಏಕೆಂದರೆ ಪುನೀತ್ ಸರ್ ಹೊಸ ನಿರೂಪಣೆಗಳು, ರೂಪಗಳು ಮತ್ತು ವಿಷಯವನ್ನು ತರಲು ಬಯಸಿದ ದಾರ್ಶನಿಕ ಎಂದು ನಾನು ನಂಬುತ್ತೇನೆ. ಅವರು ಹೊಸ ಯುಗದ ಕನ್ನಡ ಚಿತ್ರರಂಗಕ್ಕೆ ಹೊಸ ಸಾಧ್ಯತೆಗಳ ದಾರಿದೀಪವಾಗಿದ್ದರು ಎಂದು ತುರ್ತು ನಿರ್ಗಮನದ ನಿರ್ದೇಶಕ ಹೇಮಂತ್ ಕುಮಾರ್ ಎಲ್ ಹೇಳಿದ್ದಾರೆ.
Published by:shrikrishna bhat
First published: