ಸ್ಯಾಂಡಲ್ವುಡ್ನಲ್ಲಿ ಪ್ರತಿ ವರ್ಷ (Kannada Top Star Movies) ನೂರಾರು ಸಿನಿಮಾಗಳು ರೆಡಿ ಆಗುತ್ತವೆ. ಇವುಗಳಲ್ಲಿ ಕೆಲವು ಜನರಿಗೆ ಇಷ್ಟ ಆಗುತ್ತವೆ. ಇನ್ನು ಕೆಲವು (Sandalwood Cinema) ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತವೆ. ಇದಲ್ಲದೆ ಕಂಟೆಂಟ್ ಬೇಸ್ ಚಿತ್ರಗಳು ಇಲ್ಲಿ ಬೇರೆ ರೀತಿಯ ಕ್ರೇಜ್ ಹುಟ್ಟಿಸುತ್ತಿವೆ. ಹಾಗೆ ಈ ಎಲ್ಲ (Kannada Top Movies) ಸಿನಿಮಾಗಳಲ್ಲಿ ಕನ್ನಡ ನಾಯಕ ನಟರ ಸಿನಿಮಾಗಳು ನಾಲ್ಕೈದು ಇರೋದಿಲ್ಲ. ಹಾಗೇನಾದ್ರೂ (Kannada Most Expected Films) ಇದ್ರೆ, ಶಿವರಾಜ್ಕುಮಾರ್ ಅವರ ಎರಡ್ಮೂರು ಚಿತ್ರಗಳು ಇದ್ದೇ ಇರುತ್ತವೆ. ಸದ್ಯದ ಲೆಕ್ಕದ ಪ್ರಕಾರ 2023 ರಲ್ಲಿ ಹೊರ ಭಾಷೆಯ ನಟನೆ ಸೇರಿ ಶಿವಣ್ಣನ ಮೂರು ಸಿನಿಮಾಗಳು ಇರೋದು ಲೆಕ್ಕ ಸಿಗುತ್ತದೆ.
ಈ ಲೆಕ್ಕದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಎರಡು ಸಿನಿಮಾಗಳು ಇವೆ. ರಿಷಬ್ ಶೆಟ್ಟಿ, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಧನಂಜಯ್, ಗೋಲ್ಡನ್ ಸ್ಟಾರ್ ಗಣೇಶ್, ರೋರಿಂಗ್ ಸ್ಟಾರ್ ಶ್ರೀಮುರಳಿ ಇವರ ಸಿನಿಮಾಗಳು 2023ರ ಕನ್ನಡದ ಟಾಪ್ ಸಿನಿಮಾಗಳ ಲಿಸ್ಟ್ಲ್ಲಿ ಇವೆ.
ಶ್ರೀಮುರಳಿ ಬಘೀರಾ ಸಿನಿಮಾ ಯಾವಾಗ ರಿಲೀಸ್
ಶ್ರೀಮುರಳಿ ಅಭಿನಯದ ಬಘೀರಾ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಚಿತ್ರೀಕರಣದ ಸಮಯದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡು ರೆಸ್ಟ್ ಮಾಡುತ್ತಿದ್ದಾರೆ. ಇವರ ಈ ಸಿನಿಮಾ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಇದೆ.
ಇನ್ನು ಇತರ ಸ್ಟಾರ್ಗಳ ಸಿನಿಮಾಗಳನ್ನ ನಾವು ಈ ರೀತಿ ಇಲ್ಲಿ ಪಟ್ಟಿ ಮಾಡಬಹುದು. ಆ ಪಟ್ಟಿಯಲ್ಲಿ ಹೆಚ್ಚು ಕಡಿಮೆ 9 ಸಿನಿಮಾಗಳು ಬರುತ್ತವೆ. ಆ 9 ಚಿತ್ರಗಳ ಹೆಸರು ಇಂತಿವೆ ಓದಿ.
ಉಪೇಂದ್ರ-ಕಬ್ಜ, ಯುಐ ಸಿನಿಮಾ
ಶಿವರಾಜ್ ಕುಮಾರ್-ಘೋಸ್ಟ್ ಸಿನಿಮಾ
ಶ್ರೀಮುರಳಿ-ಬಘೀರ ಸಿನಿಮಾ
ಗಣೇಶ್-ಬಾನದಾರಿಯಲಿ
ಡಾಲಿ ಧನಂಜಯ್- ಹೊಯ್ಸಳ
ರಕ್ಷಿತ್ ಶೆಟ್ಟಿ-ಸಪ್ತ ಸಾಗರದಾಚೆ ಎಲ್ಲೋ
ರಮೇಶ್ ಅರವಿಂದ್-ಶಿವಾಜಿ ಸುರತ್ಕಲ್-2
ಧ್ರುವ ಸರ್ಜಾ-ಮಾರ್ಟಿನ್
ರಿಷಬ್ ಶೆಟ್ಟಿ-ಕಾಂತಾರ-02 ಸಿನಿಮಾ
ಈ ಎಲ್ಲ ಚಿತ್ರಗಳ ಮೂಲಕ ಕನ್ನಡ ನಾಡಿನ ಸ್ಟಾರ್ ನಟರು ಜನರನ್ನ ರಂಜಿಸಲಿಕ್ಕೆ ಬರಲಿದ್ದಾರೆ. ಈ ಚಿತ್ರಗಳಲ್ಲಿ ಕೆಲವೊದು ಸಿನಿಮಾಗಳು ಆಲ್ ಮೋಸ್ಟ್ ರಿಲೀಸ್ ಆಗೋಕೆ ರೆಡಿ ಇವೆ. ಇನ್ನು ಕೆಲವು ಇನ್ನು ನಿರ್ಮಾಣ ಹಂತದಲ್ಲಿಯೇ ಇವೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರೀಕರಣದ ನಂತರದ ಕೆಲಸದಲ್ಲಿ ಡೈರೆಕ್ಟರ್ ಎ. ಪಿ. ಅರ್ಜುನ್ ಬ್ಯುಸಿ ಆಗಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಚಿತ್ರ ಯಾವಾಗ ರಿಲೀಸ್
ಮೊನ್ನೆ ಫೆಬ್ರವರಿ-23 ರಂದು ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ. ಇದನ್ನ ವೀಕ್ಷಿಸಿದ ಜನಕ್ಕೆ ಚಿತ್ರದ ಕುರಿತು ಭಾರೀ ನಿರೀಕ್ಷೆ ಕೂಡ ಮೂಡಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಡೈರೆಕ್ಟರ್ ಶ್ರೀನಿ ಮೂರನೇ ಹಂತದ ಚಿತ್ರೀಕರಣದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಗಣೇಶ್ ಬಾನದಾರಿಯಲ್ಲಿ ರೆಡಿ ಟು ರಿಲೀಸ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಸಿನಿಮಾ ಆಲ್ ಮೋಸ್ಟ್ ಪೂರ್ಣ ಆಗಿದೆ. ಮಾರ್ಚ್-17 ರಂದು ರಿಲೀಸ್ ಡೇಟ್ನ್ನು ಕೂಡ ಡೈರೆಕ್ಟರ್ ಪ್ರೀತಂ ಗುಬ್ಬಿ ಅನೌನ್ಸ್ ಮಾಡಿದ್ದರು. ಆದರೆ ಈಗ ಅದು ಮುಂದಕ್ಕೆ ಹೋಗೋ ಸಾಧ್ಯತೆ ಜಾಸ್ತಿ ಇದೆ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಯುಐ ಸಿನಿಮಾದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ರಿಲೀಸ್ ಬಗ್ಗೆ ಇನ್ನು ಯಾವುದೇ ಸುಳಿವು ಕೂಡ ಹೊರಬಿದ್ದಿಲ್ಲ.
ಅಪ್ಪು ಜನ್ಮ ದಿನ ಮಾರ್ಚ್-17 ರಂದು ಕಬ್ಜ ಚಿತ್ರ ರಿಲೀಸ್
ಇದೇ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ರಿಲೀಸ್ಗೆ ರೆಡಿ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜನ್ಮ ದಿನ ಮಾರ್ಚ್-17ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.
ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುತ್ತಾ ಬಂದಿದೆ. ರುಕ್ಮಿಣಿ ವಸಂತ್ ಈ ಚಿತ್ರದಲ್ಲಿ ರಕ್ಷಿತ್ಗೆ ಜೋಡಿ ಆಗಿದ್ದಾರೆ. ಡೈರೆಕ್ಟರ್ ಹೇಮಂತ್ರಾವ್ ರಿಲೀಸ್ ಡೇಟ್ನ್ನ ಇನ್ನೂ ಎಲ್ಲೂ ಅನೌನ್ಸ್ ಮಾಡಿಲ್ಲ ಅಂತಲೇ ಹೇಳಬಹುದು.
ಮಾರ್ಚ್-30 ರಂದು ಹೊಯ್ಸಳ ಸಿನಿಮಾ ರಿಲೀಸ್
ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರ ರೆಡಿ ಆಗಿದೆ. ಮಾರ್ಚ್-30ಕ್ಕೆ ರಿಲೀಸ್ ಆಗುತ್ತಿದೆ. ಪ್ರಚಾರ ಕೆಲಸ ಕೂಡ ಆರಂಭಗೊಂಡಿದೆ. ಇನ್ನೇನು ಈ ಚಿತ್ರ ತನ್ನದೇ ರೀತಿಯಲ್ಲಿ ಜನರನ್ನ ರಂಜಿಸಲು ಬರ್ತಿದೆ.
ರಮೇಶ್ ಅರವಿಂದ್ ಅವರ ಶಿವಾಜಿ ಸುರತ್ಕಲ್-2 ಚಿತ್ರವೂ ರೆಡಿ ಆಗಿದೆ. ಡೈರೆಕ್ಟರ್ ಆಕಾಶ್ ಶ್ರೀವತ್ಸ ತಮ್ಮ ಎಲ್ಲ ಕೆಲಸವನ್ನ ಮುಗಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಕೂಡ ನಿರೀಕ್ಷೆ ಜಾಸ್ತಿ ಇದೆ.
ಮಾರ್ಚ್ ತಿಂಗಳಲ್ಲಿ ಕಾಂತಾರ-2 ಚಿತ್ರದ ಕೆಲಸ ಶುರು
ಇನ್ನು ರಿಷಬ್ ಶೆಟ್ಟಿ ಅಭಿನಯದ ನಿರ್ದೇಶನದ ಕಾಂತಾರ-2 ಸಿನಿಮಾ ಕೂಡ ಇದೆ. ಆದರೆ ಈ ಚಿತ್ರದ ಕೆಲಸ ಇನ್ನೂ ಶುರು ಆಗಿಲ್ಲ. ಬರೋ ಮಾರ್ಚ್ ತಿಂಗಳಿನಿಂದಲೇ ರಿಷಬ್ ಈ ಚಿತ್ರದ ಚಿತ್ರೀಕರಣ ಮಾಡೋಕೆ ಆರಂಭಿಸಲಿದ್ದಾರೆ.
ಇದನ್ನೂ ಓದಿ: Prashanth Neel: KGF ಡೈರೆಕ್ಟರ್ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್
ಹೀಗೆ ಕನ್ನಡದ ಈ ಸ್ಟಾರ್ ನಟರ ಚಿತ್ರಗಳು ಕೆಲವು ರೆಡಿ ಇವೆ. ಇನ್ನು ಕೆಲವು ಚಿತ್ರೀಕರಣದ ಹಂತದಲ್ಲಿವೆ. ಯಶ್ ಸಿನಿಮಾ ಅನೌನ್ಸ್ ಆಗಬೇಕಿದೆ. ಕಬ್ಜ ಚಿತ್ರದಲ್ಲಿ ಸುದೀಪ್, ಉಪ್ಪಿ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಇವರ ಸಿನಿಮಾ ಕೂಡ ಅನೌನ್ಸ್ ಆಗಬೇಕಿದೆ. ಫ್ಯಾನ್ಸ್ ಅದೇ ನಿರೀಕ್ಷೆಯಲ್ಲಿಯೇ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ