• Home
  • »
  • News
  • »
  • entertainment
  • »
  • Vikrant Rona Artist Vajradheer Jain: ಸೈನ್ಸ್ ಫಿಕ್ಷನ್ ಸಿನಿಮಾ ಮೂಲಕ ರಂಜಿಸಲು ಬರ್ತಿದ್ದಾರೆ 'ವಿಕ್ರಾಂತ್ ರೋಣ' ಪಿಟಿ ಮೇಷ್ಟ್ರು; ಬ್ಲಿಂಕ್ ಸಿನಿಮಾ ವಿಶೇಷತೆ ಏನು ಗೊತ್ತಾ?

Vikrant Rona Artist Vajradheer Jain: ಸೈನ್ಸ್ ಫಿಕ್ಷನ್ ಸಿನಿಮಾ ಮೂಲಕ ರಂಜಿಸಲು ಬರ್ತಿದ್ದಾರೆ 'ವಿಕ್ರಾಂತ್ ರೋಣ' ಪಿಟಿ ಮೇಷ್ಟ್ರು; ಬ್ಲಿಂಕ್ ಸಿನಿಮಾ ವಿಶೇಷತೆ ಏನು ಗೊತ್ತಾ?

ವಿಕ್ರಾಂತ್ ರೋಣ ಪಿಟಿ ಮಾಸ್ತರ್ ಹೊಸ ಸಿನಿಮಾ

ವಿಕ್ರಾಂತ್ ರೋಣ ಪಿಟಿ ಮಾಸ್ತರ್ ಹೊಸ ಸಿನಿಮಾ

ವಿಕ್ರಾಂತ್ ರೋಣ ಚಿತ್ರದಲ್ಲೂ ಅಭಿನಯಿಸಿದ್ದೇನೆ ಎಂದು ವಜ್ರಧೀರ್ ಜೈನ್ ಎಲ್ಲೂ ಹೇಳಿಕೊಂಡಿರಲಿಲ್ಲ. ಅದೇ ರೀತಿ ಬ್ಲಿಂಕ್ ಚಿತ್ರದ ಆಫರ್ ಬಂದಾಗಲೂ ವಜ್ರಧೀರ್ ಜೈನ್ ಅದನ್ನ ಹೇಳಿಕೊಂಡಿರಲಿಲ್ಲ ಎಂದು ಬ್ಲಿಂಕ್ ಚಿತ್ರದ ಡೈರೆಕ್ಟರ್ ಶ್ರೀನಿಧಿ ಬೆಂಗಳೂರು ಹೇಳಿಕೊಂಡಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗಕ್ಕೆ ರಂಗಭೂಮಿ (Vikrant Rona Artist Vajradheer Jain) ಕಲಾವಿದರ ಕೊಡುಗೆ ದೊಡ್ಡಮಟ್ಟದಲ್ಲಿಯೇ ಇದೆ. ಡಾಕ್ಟರ್ ರಾಜಕುಮಾರ್ ಅವರೂ ರಂಗಭೂಮಿಯಿಂದಲೇ ಬಂದವ್ರು. ಕನ್ನಡದ ಅದೆಷ್ಟೋ ಕಲಾವಿದರು ರಂಗಭೂಮಿಯಲ್ಲಿ (Vikrant Rona Movie) ಅಭಿನಯ ಕಲಿತು ಬೆಳ್ಳಿ ತೆರೆ ಮೇಲೆ ಮಿಂಚಿದ್ದಾರೆ. ರಂಭೂಮಿಯಿಂದ ಬೆಳ್ಳಿ ತೆರೆಗೆ ಕಲಾವಿದರ ಪಯಣ ಈಗಲೂ ಇದೆ. ವೃತ್ತಿ (Kannada Theater Artist Vajradheer Jain) ರಂಗ ಭೂಮಿ, ಹವ್ಯಾಸಿ ರಂಗಭೂಮಿಯಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸುತ್ತಲೇ, ಬೆಳ್ಳಿ ತೆರೆಗೆ ಬಂದವರ ಸಾಲಿಗೆ ಈಗ ಸೇರಿದವ್ರು ಯಾರು ಗೊತ್ತೇ? ಹೌದು, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲೂ ರಂಗ ಭೂಮಿಯ ಆ ಕಲಾವಿದ ಮಿಂಚಿದ್ದಾರೆ.


ಪಿಟಿ (Vikranth Rona PT Master) ಮೇಷ್ಟ್ರು ಪಾತ್ರವನ್ನೆ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಈಗ ಇವರು ಮತ್ತೊಂದು ಸಿನಿಮಾ ಮಾಡಿದ್ದಾರೆ. ಇದರ ಮಾಹಿತಿ ಇಲ್ಲಿದೆ ಓದಿ.


Kannada Theater Artist Vajradheer Jain New Film Blink Shooting Complete
ಸೈನ್ಸ್ ಫಿಕ್ಷನ್ ಬ್ಲಿಂಕ್ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ?


ವಿಕ್ರಾಂತ್ ರೋಣ ಚಿತ್ರದ ಪಿಟಿ ಮಾಸ್ತರ್ ವಜ್ರಧೀರ್ ಜೈನ್


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ಹಲವು ಪಾತ್ರಗಳೂ ಇವೆ. ಈ ಪಾತ್ರಗಳಲ್ಲಿ ಪಿಟಿ ಮಾಸ್ತರ್ ಲಾರೆನ್ಸ್ ಪಿಂಟೋ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಈಗಾಗಲೇ ಗುರುತಿಸಿಕೊಂಡಿದ್ದಾರೆ.




ಪಿಟಿ ಮಾಸ್ತರ್ ಪಿಂಟೋ ಪಾತ್ರ ಮಾಡಿರೋ ರಂಗಭೂಮಿ ಕಲಾವಿದ ವಜ್ರಧೀರ್ ಜೈನ್, ಈ ಮೊದಲೇ ಡೈರೆಕ್ಟರ್ ಅನೂಪ್ ಭಂಡಾರಿ ಅವರ ಜೊತೆಗೆ ಕೆಲಸ ಮಾಡಿದ್ದಾರೆ. ರಾಜರಥ ಹೆಸರಿನ ಸಿನಿಮಾದಲ್ಲೂ ವಜ್ರಧೀರ್ ಜೈನ್ ಒಳ್ಳೆ ಪಾತ್ರವನ್ನೇ ಮಾಡಿದ್ದಾರೆ.


ವಿಕ್ರಾಂತ್ ರೋಣ ಪಿಟಿ ಮಾಸ್ತರ್ ಹೊಸ ಸಿನಿಮಾ


ವಜ್ರಧೀರ್ ಜೈನ್ ವಿಕ್ರಾಂತ್ ರೋಣ ಚಿತ್ರದಲ್ಲಿ ಇದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ಹೌದು, ಈ ಒಂದು ಮಾತನ್ನೇ ಈಗ ಕನ್ನಡದ ಬ್ಲಿಂಕ್ ಚಿತ್ರ ನಿರ್ದೇಶಕಿ ಶ್ರೀನಿಧಿ ಬೆಂಗಳೂರು ಹೇಳಿಕೊಂಡಿದ್ದಾರೆ.


ನಾನು ವಿಕ್ರಾಂತ್ ರೋಣ ಚಿತ್ರದಲ್ಲೂ ಅಭಿನಯಿಸಿದ್ದೇನೆ ಎಂದು ವಜ್ರಧೀರ್ ಜೈನ್ ಎಲ್ಲೂ ಹೇಳಿಕೊಂಡಿರಲಿಲ್ಲ. ಅದೇ ರೀತಿ ಬ್ಲಿಂಕ್ ಚಿತ್ರದ ಆಫರ್ ಬಂದಾಗಲೂ ವಜ್ರಧೀರ್ ಜೈನ್ ಅದನ್ನ ಹೇಳಿಕೊಂಡಿರಲಿಲ್ಲ ಎಂದು ಬ್ಲಿಂಕ್ ಚಿತ್ರದ ಡೈರೆಕ್ಟರ್ ಶ್ರೀನಿಧಿ ಬೆಂಗಳೂರು ಹೇಳಿಕೊಂಡಿದ್ದಾರೆ.


ನೀನಾಸಂ ನಲ್ಲೂ ತರಬೇತಿ ಪಡೆದ ವಜ್ರಧೀರ್ ಜೈನ್


ರಂಗಭೂಮಿಯಿಂದಲೇ ಬೆಳ್ಳಿ ತೆರೆಗೆ ಬಂದ ನಟ ವಜ್ರಧೀರ್ ಜೈನ್, ನೀನಾಸಂ ನಲ್ಲೂ ತರಬೇತಿ ಪಡೆದುಕೊಂಡಿದ್ದಾರೆ. ರಂಗಭೂಮಿ ಮತ್ತು ನೀನಾಸಂ ಎರಡರ ಅನುಭವ ಇರೋ ಈ ವಿಶೇಷ ಕಲಾವಿದರು, ವಿಜಯ್ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ವಜ್ರಧೀರ್ ಜೈನ್ ಈಗ ತಮ್ಮ ಮುಂದಿನ ಚಿತ್ರದಲ್ಲಿ ವಿಶೇಷ ಪಾತ್ರವನ್ನೇ ಮಾಡಿದ್ದಾರೆ. ಅದು ಕನ್ನಡದ ಬ್ಲಿಂಕ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲೂ ವಜ್ರಧೀರ್ ಜೈನ್ ಗಮನ ಸೆಳೆಯುವ ಪಾತ್ರಕ್ಕೆ ಜೀವ ತುಂಬಿದ್ದಾರೆ.


Kannada Theater Artist Vajradheer Jain New Film Blink Shooting Complete
ಬ್ಲಿಂಕ್ ನಲ್ಲಿ ಬರೋಬ್ಬರಿ 6 ಪ್ರಮುಖ ಪಾತ್ರಗಳು!


ಸೈನ್ಸ್ ಫಿಕ್ಷನ್ ಬ್ಲಿಂಕ್ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ?


ಕನ್ನಡದ ಬ್ಲಿಂಕ್ ಸಿನಿಮಾ ವಿಶೇಷವಾಗಿಯೇ ಇದೆ. ಈ ಚಿತ್ರದಲ್ಲಿ ಸೈನ್ಸ್ ಫಿಕ್ಷನ್ ಕಥೆ ಇರೋದೇ ವಿಶೇಷ. ಶ್ರೀನಿಧಿ ಬೆಂಗಳೂರು ಈ ಚಿತ್ರಕ್ಕೆ ಕತೆ ಬರೆದು ಚಿತ್ರವನ್ನ ನಿರ್ದೇಶನದ ಮಾಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾ ತಂಡ ಸದ್ಯ ಪೊಸ್ಟ್​​ ಪ್ರೋಡಕ್ಷನ್ ಕೆಲಸದಲ್ಲಿಯೇ ಬ್ಯುಸಿ ಆಗಿದೆ.


ಬ್ಲಿಂಕ್ ನಲ್ಲಿ ಬರೋಬ್ಬರಿ 6 ಪ್ರಮುಖ ಪಾತ್ರಗಳು!


ಬ್ಲಿಂಕ್ ಚಿತ್ರದ ಹಲವು ವಿಶೇಷತೆಗಳಿವೆ. ಅವುಗಳಲ್ಲಿ ಚಿತ್ರದ ಪಾತ್ರವೇ ವಿಶೇಷವಾಗಿದೆ. ಒಟ್ಟು ಸಿನಿಮಾದಲ್ಲಿ 6 ಪ್ರಮುಖ ಪಾತ್ರಗಳು ಇವೆ. ವಜ್ರಧೀರ್ ಜೈನ್, ದಿಯಾ ಚಿತ್ರ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ, ಚೈತ್ರಾ ಜೆ. ಆಚಾರ್ಯ ಹೀಗೆ ಒಳ್ಳೆ ಕಲಾವಿದರೆಲ್ಲ ಈ ಆರು ಪಾತ್ರಗಳನ್ನ ನಿಭಾಯಿಸಿದ್ದಾರೆ.


ಇದನ್ನೂ ಓದಿ: Hostel Hudugaru Bekagiddare: ಹಾಸ್ಟೆಲ್ ಹುಡುಗರ ಜೊತೆ ಸೇರಿಕೊಂಡ ಶೆಟ್ರು! ರಿಷಬ್ ಜೊತೆ ಇವ್ರೂ ಬಂದ್ರು ನೋಡಿ


ಚಿತ್ರಕ್ಕೆ ಅವಿನಾಶ್ ಶಾಸ್ತ್ರಿ ಛಾಯಾಗ್ರಹಣ ಮಾಡಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ ಕೊಟ್ಟಿದ್ದಾರೆ. ಇನ್ನು ಸಂಜೀವ್ ಜಾಗೀರ್ದಾರ್ ಚಿತ್ರಕ್ಕೆ ಎಡಿಟಿಂಗ್ ಮಾಡಿದ್ದಾರೆ. ಒಟ್ಟಾರೆ, ವಜ್ರಧೀರ್ ಜೈನ್ ಕನ್ನಡದ ಈ ಬ್ಲಿಂಕ್ ಚಿತ್ರದಲ್ಲಿ ಹೊಸ ರೀತಿ ರೋಲ್ ಮೂಲಕವೇ ಗಮನ ಸೆಳೆಯಲಿದ್ದಾರೆ.

First published: