ನನ್ನ ಪ್ರಕಾರ ಇದು ಸೂಪರ್; ಸಸ್ಪೆನ್ಸ್​ ಸಿನಿಮಾ ಟ್ರೈಲರ್​ಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಮೆಚ್ಚುಗೆ

ನನ್ನ ಪ್ರಕಾರ ಸಿನಿಮಾದ ಟ್ರೈಲರ್ ಅನ್ನು ನಿನ್ನೆ ನಟ ದರ್ಶನ್​ ತೂಗುದೀಪ್ ಬಿಡುಗಡೆಗೊಳಿಸಿದ್ದಾರೆ. ಟ್ರೈಲರ್ ನೋಡಿರುವ ದರ್ಶನ್​ ನಿರ್ದೇಶಕರ ಕೆಲಸಕ್ಕೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

Sushma Chakre | news18
Updated:August 16, 2019, 3:49 PM IST
ನನ್ನ ಪ್ರಕಾರ ಇದು ಸೂಪರ್; ಸಸ್ಪೆನ್ಸ್​ ಸಿನಿಮಾ ಟ್ರೈಲರ್​ಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಮೆಚ್ಚುಗೆ
ನನ್ನ ಪ್ರಕಾರ ಸಿನಿಮಾದ ಪೋಸ್ಟರ್
  • News18
  • Last Updated: August 16, 2019, 3:49 PM IST
  • Share this:
ಕನ್ನಡದಲ್ಲಿ ಇತ್ತೀಚೆಗೆ ಸಸ್ಪೆನ್ಸ್​ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಹೊಸ ನಿರ್ದೇಶಕರ ಪ್ರಯೋಗಾತ್ಮಕ ಚಿತ್ರಗಳು ಯಶಸ್ಸನ್ನೂ ಕಾಣುತ್ತಿದೆ. 'ರಂಗಿತರಂಗ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಂಡು ಬಾಕ್ಸಾಫೀಸ್​ನಲ್ಲೂ ಸದ್ದು ಮಾಡಿದ ನಂತರ ಈ ಬಗೆಯ ಥ್ರಿಲ್ಲರ್​ ಕಥಾಹಂದರವನ್ನು ಹೊಂದಿರುವ ಸಿನಿಮಾಗಳಿಗೆ ಮರುಜೀವ ಬಂದಿತು ಎಂದೇ ಹೇಳಬಹುದು. 

2 ವಾರಗಳ ಹಿಂದೆ ತೆರೆಕಂಡಿದ್ದ 'ಮಹಿರ' ಸಿನಿಮಾ ಕೂಡ ಹೊಸಬರ ಸಿನಿಮಾವಾಗಿತ್ತು. ಸಸ್ಪೆನ್ಸ್​ ಕತೆಯನ್ನು ಹೊಂದಿದ್ದ ಆ ಸಿನಿಮಾ ಒಂದು ವರ್ಗದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ 'ನನ್ನ ಪ್ರಕಾರ' ಎಂಬ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ವಿಭಿನ್ನವಾದ ಮೇಕಿಂಗ್ ಮೂಲಕ ಗಮನ ಸೆಳೆಯುತ್ತಿದೆ. ನಟಿ ಪ್ರಿಯಾಮಣಿ 2 ವರ್ಷದ ಬಳಿಕ ಮತ್ತೆ ಕನ್ನಡ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಡಾ. ಅಮೃತಾ ಎಂಬ ವೈದ್ಯೆಯ ಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಬಹುಭಾಷಾ ನಟ ಕಿಶೋರ್ ತೆರೆ ಹಂಚಿಕೊಂಡಿದ್ದಾರೆ. ಪೊಲೀಸ್​ ಅಧಿಕಾರಿಯಾಗಿರುವ ಕಿಶೋರ್ ಒಂದು ಕೊಲೆಯ ತನಿಖೆ ನಡೆಸುವಾಗ ಯಾವೆಲ್ಲ ರೀತಿಯ ತಿರುವುಗಳು ಸಿಗುತ್ತವೆ, ಕೊನೆಗೆ ಸತ್ಯಾಂಶವನ್ನು ಪೊಲೀಸ್​ ಅಧಿಕಾರಿ ಬಯಲಿಗೆಳೆಯುತ್ತಾನಾ? ಎಂಬುದು 'ನನ್ನ ಪ್ರಕಾರ' ಸಿನಿಮಾದ ಕತೆ.ಇನ್ನು, 'ಕೃಷ್ಣಲೀಲಾ' ಖ್ಯಾತಿಯ ಮಯೂರಿ ಈ ಸಿನಿಮಾದ ಮುಖ್ಯ ಪಾತ್ರಧಾರಿ. ವಿಸ್ಮಯ ಎಂಬ ಹೆಸರಿನ ಹುಡುಗಿ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದು, ಕೊಲೆಯಾಗಿರುವ ಅವರ ಪಾತ್ರದ ಸುತ್ತವೇ ಇಡೀ ಕತೆ ಹೆಣೆದುಕೊಂಡಿದೆ. ಉಳಿದಂತೆ ನಿರಂಜನ್ ದೇಶಪಾಂಡೆ, ಅರ್ಜುನ್ ಯೋಗಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೂರು ವಿಭಿನ್ನ ಕತೆಗಳು ಹೇಗೆ ಒಂದು ಕೊಲೆಯಿಂದಾಗಿ ಕನೆಕ್ಟ್​ ಆಗುತ್ತವೆ ಎಂಬುದು 'ನನ್ನ ಪ್ರಕಾರ' ಸಿನಿಮಾದ ಕತೆ.SIIMA Awards: ಸೈಮಾದಲ್ಲಿ ಕೆಜಿಎಫ್​ ಸಿನಿಮಾಗೆ 4 ಪ್ರಶಸ್ತಿ, ರಾಕಿಂಗ್ ಸ್ಟಾರ್​ ಯಶ್​ ಅತ್ಯುತ್ತಮ ನಟ; ಇಲ್ಲಿದೆ ಪೂರ್ತಿ ವಿವರ...

'ನನ್ನ ಪ್ರಕಾರ' ಸಿನಿಮಾದ ಟ್ರೈಲರ್ ಅನ್ನು ನಿನ್ನೆ ನಟ ದರ್ಶನ್​ ತೂಗುದೀಪ್ ಬಿಡುಗಡೆಗೊಳಿಸಿದ್ದಾರೆ. ಟ್ರೈಲರ್ ನೋಡಿರುವ ದರ್ಶನ್​ ನಿರ್ದೇಶಕರ ಕೆಲಸಕ್ಕೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. ಈಗಾಗಲೇ ಈ ಟ್ರೈಲರ್​ಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ವಿನಯ್ ಬಾಲಾಜಿ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದ ಹಾಡುಗಳು ಕೂಡ ಯೂಟ್ಯೂಬ್​ನಲ್ಲಿ ಸದ್ದು ಮಾಡಿದ್ದವು. ಈ ಸಿನಿಮಾ ಇದೇ ತಿಂಗಳ 23ರಂದು ತೆರೆಗೆ ಬರಲಿದೆ.
First published:August 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ