HOME » NEWS » Entertainment » KANNADA SUPERSTAR SHIVARAJKUMAR TO ACT IN A TELUGU KANNADA BILINGUAL RMD

ತೆಲುಗು​ ಆ್ಯಕ್ಷನ್​ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಶಿವರಾಜ್​ಕುಮಾರ್​

ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಶಿವರಾಜ್​​ಕುಮಾರ್​ ಸದ್ಯ ಎ ಹರ್ಷ ನಿರ್ದೇಶನದ ಭಜರಂಗಿ 2, ಆರ್​ಡಿಎಕ್ಸ್​, ಭೈರತಿ ರಣಗಲ್ಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ಅವರು ಸೈಲೆಂಟ್​ ಆಗಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

news18-kannada
Updated:August 27, 2020, 2:04 PM IST
ತೆಲುಗು​ ಆ್ಯಕ್ಷನ್​ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಶಿವರಾಜ್​ಕುಮಾರ್​
ಶಿವರಾಜ್​ಕುಮಾರ್​
  • Share this:
ಶಿವರಾಜ್​ಕುಮಾರ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿ ವರ್ಷ ಅವರ ನಟನೆಯ  ಕನಿಷ್ಟ ಮೂರು ಚಿತ್ರಗಳು ತೆರೆಗೆ ಬರುತ್ತವೆ. ಚಿತ್ರದಿಂದ ಚಿತ್ರಕ್ಕೆ ಅವರ ಪಾತ್ರ ಕೂಡ ಭಿನ್ನವಾಗಿರುತ್ತದೆ. ಆರ್​​ಜಿವಿ ನಿರ್ದೇಶನದ ಕಿಲ್ಲಿಂಗ್​ ವೀರಪ್ಪನ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಬಣ್ಣ ಹಚ್ಚಿದ್ದರು. ಈ ಸಿನಿಮಾ ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿ ತೆರೆಗೆ ಬಂದಿತ್ತು. ನಂತರ ಬಾಲಕೃಷ್ಣ ನಟನೆಯ ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈಗ ಮತ್ತೆ ಟಾಲಿವುಡ್​​ನತ್ತ ಮುಖ ಮಾಡಲು ಶಿವರಾಜ್​ಕುಮಾರ್ ರೆಡಿ ಆಗಿದ್ದಾರಂತೆ.

ಶಿವರಾಜ್​​ಕುಮಾರ್​ ಸದ್ಯ ಎ ಹರ್ಷ ನಿರ್ದೇಶನದ ಭಜರಂಗಿ 2, ಆರ್​ಡಿಎಕ್ಸ್​, ಭೈರತಿ ರಣಗಲ್ಲು ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆ ಅವರು ಸೈಲೆಂಟ್​ ಆಗಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಗಣೇಶ ಚತುರ್ಥಿಯಂದು ವಿಶೇಷ ಕೆಲಸ ಮಾಡಿದ ಶಿವರಾಜ್​ಕುಮಾರ್​!; ಏನದು? ಇಲ್ಲಿದೆ ಮಾಹಿತಿ

ಹೌದು, ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಸಿದ್ಧಗೊಳ್ಳಲಿರುವ ಸಿನಿಮಾಗೆ ಶಿವರಾಜ್​ಕುಮಾರ್ ಹೀರೋ ಅಂತೆ. ಈ ಚಿತ್ರ ಸಂಪೂರ್ಣ ಆಕ್ಷನ್​ ಎಂಟರ್​ಟೇನರ್​ ಆಗಿರಲಿದೆ. ರಾಮ್​ ಧೂಳಿಪುಡಿ ಹೆಸರಿನವರು ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಶ್ರೀಕಾಂತ್​ ಧೂಳಿಪುಡಿ ಹೆಸರಿನ ಉದ್ಯಮಿ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ಕಲಾವಿದರು ಹಾಗೂ ತಂತ್ರಜ್ಞರು ಈ ಸಿನಿಮಾದಲ್ಲಿ ಇರಲಿದ್ದಾರಂತೆ.

ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಎ.ಹರ್ಷ ನಿರ್ದೇಶನದ ಭಜರಂಗಿ 2  ಶೂಟಿಂಗ್​ ಪೂರ್ಣಗೊಳಿಸಿ ಮೇ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊರೋನಾದಿಂದಾಗಿ ಸಿನಿಮಾ ಶೂಟಿಂಗ್​ ನಿಂತಿತ್ತು. ಈಗ ಮತ್ತೆ ಸಿನಿಮಾ ಶೂಟಿಂಗ್​ ಆರಂಭವಾಗಿದೆ. ಶಿವರಾಜ್​ಕುಮಾರ್​ ಅಭಿನಯಿಸುತ್ತಿರುವ ಉಳಿದೆರಡು ಚಿತ್ರಗಳ ಕೆಲಸಗಳೂ ನಡೆಯುತ್ತಿವೆ.
Published by: Rajesh Duggumane
First published: August 27, 2020, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories