Kabzaa Movie: ಅಪ್ಪು ಜನ್ಮದಿನ ಕನ್ನಡಿಗರಿಗೆ ವಿಶೇಷ! ಸ್ಪೆಷಲ್ ಏನೇನಿದೆ?

ನರ್ತಕಿ ಥಿಯೇಟರ್ ಆವರಣದಲ್ಲಿ ಅಪ್ಪು ಬೃಹತ್‌ ಕಟೌಟ್

ನರ್ತಕಿ ಥಿಯೇಟರ್ ಆವರಣದಲ್ಲಿ ಅಪ್ಪು ಬೃಹತ್‌ ಕಟೌಟ್

ಅಪ್ಪು ಜನ್ಮ ದಿನಕ್ಕೆ ಪ್ಯಾನ್ ಇಂಡಿಯಾ ಕಬ್ಜ ಚಿತ್ರ ಅರ್ಪಣೆ ಆಗುತ್ತಿದೆ. ಓಟಿಟಿಯಲ್ಲಿ ಗಂಧದ ಗುಡಿ ಸಿನಿಮಾ ಬರ್ತಿದೆ. ಯುವರತ್ನ ಮತ್ತೆ ತೆರೆ ಕಾಣುತ್ತಿದೆ. ಅಪ್ಪುಗಾಗಿ ಸ್ಪೆಷಲ್ ಸಾಂಗ್‌ ಕೂಡ ರೆಡಿ ಇದೆ. ಇನ್ನು ಹಲವು ವಿಶೇಷತೆಗಳು ಇವೆ. ಅವುಗಳ ಸಣ್ಣ ಚಿತ್ರಣ ಇಲ್ಲಿದೆ ಓದಿ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Birthday Special) ಅವರ ಜನ್ಮ ದಿನದ ಅಂಗವಾಗಿ ಹಲವು ವಿಶೇಷತೆಗಳು ಪ್ಲಾನ್‌ ಆಗಿವೆ. ಅಪ್ಪು ಅಭಿಮಾನಿಗಳು ತಮ್ಮದೇ ರೀತಿ ಅದನ್ನ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಭಿಮಾನಿ ದೇವರುಗಳ ಈ ಒಂದು ಸ್ಪೆಷಲ್ ದಿನದಂದು ಸಿನಿಮಾರಂಗವು ವಿಶೇಷ ಗೌರವ (Pan India Kabzaa Movie Release) ಕೊಡುತ್ತಿದೆ. ಹೊಂಬಾಳೆ ನಿರ್ಮಾಣ ಸಂಸ್ಥೆಯ ಯುವರತ್ನ ಚಿತ್ರವೂ ಇದೇ ದಿನ ಮತ್ತೆ ರಿಲೀಸ್ ಆಗುತ್ತಿದೆ. ಅಪ್ಪು ಕೊನೆ ಚಿತ್ರ ಗಂಧದ ಗುಡಿ ಓಟಿಟಿಯಲ್ಲಿ (Appu Birthday Special Updates)ರಿಲೀಸ್ ಆಗುತ್ತಿದೆ. ಅಪ್ಪು ಅಭಿಮಾನಿ ಡೈರೆಕ್ಟರ್ ಆರ್‌. ಚಂದ್ರು ತಮ್ಮ ಕಬ್ಜ ಚಿತ್ರವನ್ನ ರಿಲೀಸ್ ಮಾಡುತಿದ್ದಾರೆ. ಹೀಗೆ ಹಲವು (Puneeth Movie Release) ವಿಶೇಷಗಳು ಈ ದಿನ ನಡೆಯುತ್ತಿವೆ. ಅದರ ಒಂದಷ್ಟು ಮಾಹಿತಿ ಇಲ್ಲಿದೆ. 


ಅಪ್ಪು ಜನ್ಮ ದಿನಕ್ಕೆ ಪ್ಯಾನ್ ಇಂಡಿಯಾ ಕಬ್ಜ ಅರ್ಪಣೆ


ಅಪ್ಪು ಜನ್ಮ ದಿನಕ್ಕೆ ಹಲವು ವಿಶೇಷಗಳು ಪ್ಲಾನ್ ಆಗಿವೆ. ಅಪ್ಪು ನೆನಪಿಗಾಗಿಯೇ ಕಳೆದ ಒಂದು ವರ್ಷದಿಂದಲೂ ಇಡೀ ಚಿತ್ರರಂಗ ತಮ್ಮ ತಮ್ಮ ಚಿತ್ರಗಳಲ್ಲಿ ಅಪ್ಪು ಭಾವ ಚಿತ್ರ ಹಾಕಿ ಗೌರವ ಸಲ್ಲಿಸಲುತ್ತಲೇ ಇವೆ. ಅದರ ಬೆನ್ನಲ್ಲಿಯೇ ಪುನೀತ್ ಅಭಿಮಾನಿಗಳು ಅಪ್ಪು ಅವರನ್ನ ಮರೆತೇ ಇಲ್ಲ. ಹಾಗಿರೋವಾಗ ಈ ವರ್ಷದ ಜನ್ಮ ದಿನವನ್ನ ಎಲ್ಲರೂ ವಿಶೇಷವಾಗಿಯೇ ಸೆಲೆಬ್ರೇಟ್ ಮಾಡುತ್ತಿದ್ದಾರೆ.


Kannada Super Star Puneeth Rajkumar Birthday Special Updates
ಅಪ್ಪು ಜನ್ಮ ದಿನದಂದು ಪ್ಯಾನ್ ಇಂಡಿಯಾ ಕಬ್ಜ ರಿಲೀಸ್


ಅಪ್ಪು ಜನ್ಮ ದಿನದಂದು ಪ್ಯಾನ್ ಇಂಡಿಯಾ ಕಬ್ಜ ರಿಲೀಸ್


ಪವರ್ ಸ್ಟಾರ್ ಪುನೀತ್ ಅಭಿಮಾನಿಯೂ ಆಗಿರೋ ಡೈರೆಕ್ಟರ್ ಆರ್‌. ಚಂದ್ರು ತಮ್ಮ ಪ್ಯಾನ್ ಇಂಡಿಯಾ ಚಿತ್ರವನ್ನ ಈ ದಿನವೇ ರಿಲೀಸ್ ಮಾಡುತ್ತಿದ್ದಾರೆ. ದೊಡ್ಡಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ನಾಲ್ಕು ಸಾವಿರ ಸ್ಕ್ರೀನ್‌ನಲ್ಲಿ ಮಾರ್ಚ್‌-17 ರಂದು ಕಬ್ಜ ರಿಲೀಸ್ ಆಗುತ್ತಿದೆ.




ಕರ್ನಾಟಕದಲ್ಲಿ 400 ಥಿಯೇಟರ್‌ನಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗುತ್ತಿದೆ. ವಿಶೇಷವಾಗಿಯೇ ರಿಲೀಸ್ ದಿನ ಬೆಂಗಳೂರಿನ ಪ್ರಸನ್ನ ಮತ್ತು ನರ್ತಕಿ ಥಿಯೇಟರ್‌ನಲ್ಲಿ ಕಟೌಟ್‌ಗಳ ಅಬ್ಬರವೂ ಜೋರಾಗಿದೆ. ಉಪ್ಪಿ, ಸುದೀಪ್, ಶಿವಣ್ಣ ಅವರ ಕಟೌಟ್‌ಗಳನ್ನ ಇಲ್ಲಿ ನಿಲ್ಲಿಸಲಾಗಿದೆ.


ನರ್ತಕಿ ಥಿಯೇಟರ್ ಆವರಣದಲ್ಲಿ ಅಪ್ಪು ಬೃಹತ ಕಟೌಟ್


ಇದರ ಜೊತೆಗೆ ಪುನೀತ್ ಜನ್ಮ ದಿನದ ಹಿನ್ನೆಲೆಯಲ್ಲಿ ನರ್ತಕಿ ಥಿಯೇಟರ್‌ ಆವರಣದಲ್ಲಿ ಅಪ್ಪು ಕಟೌಟ್‌ ರಾರಾಜಿಸಲಿದೆ. ಇದರ ಬೆನ್ನಲ್ಲಿಯೇ ಅಪ್ಪು ಜನ್ಮ ದಿನಕ್ಕೆ ಯುವರತ್ನ ಚಿತ್ರ ರಿಲೀಸ್ ಆಗುತ್ತಿದೆ. ಪುನೀತ್ ಅವರಿಗೆ ಈ ರೀತಿ ಯುವರತ್ನ ತಂಡ ಗೌರವ ಸಲ್ಲಿಸುತ್ತಿದೆ.


ಅಪ್ಪು ಜನ್ಮ ದಿನಕ್ಕೆ ಓಟಿಟಿಯಲ್ಲಿ ಗಂಧದ ಗುಡಿ ರಿಲೀಸ್


ಪುನೀತ್ ನೆನಪಿನಲ್ಲಿ ಮತ್ತು ಪುನೀತ್ ಜನ್ಮ ದಿನದ ಅಂಗವಾಗಿಯೇ ಮಾರ್ಚ್‌-17 ರಂದು ಗಂಧದ ಗುಡಿ ಚಿತ್ರವೂ ಓಟಿಟಿಗೆ ಬರ್ತಿದೆ. ಹೀಗೆ ಅಪ್ಪು ಜನ್ಮ ದಿನಕ್ಕೆ ಹತ್ತು ಹಲವು ವಿಶೇಷತೆಗಳು ಪ್ಲಾನ್ ಆಗಿವೆ. ಪುನೀತ್ ಅವರಿಗೆ ಇಡೀ ಇಂಡಸ್ಟ್ರಿ ತನ್ನದೇ ರೀತಿಯಲ್ಲಿ ಗೌರವ ಸಲ್ಲಿಸುತ್ತಿದೆ. ಅಪ್ಪು ಜನ್ಮ ದಿನವನ್ನ ಅತಿ ದೊಡ್ಡ ಹಬ್ಬದ ರೀತಿ ಸೆಲೆಬ್ರೇಟ್ ಮಾಡುತ್ತಿದೆ.


ಇದನ್ನೂ ಓದಿ: Yuvarathna Film: ಅಪ್ಪು ಫ್ಯಾನ್ಸ್​ಗೆ ಗುಡ್​ನ್ಯೂಸ್, ಯುವರತ್ನ ರಿ-ರಿಲೀಸ್!


ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಸಾಂಗ್


ಅಪ್ಪು ಜನ್ಮ ದಿನದ ಹಿನ್ನೆಲೆಯಲ್ಲಿ ಬಿ.ವಿ.ಎಂ ನಿರ್ಮಾಣ ಸಂಸ್ಥೆ ಸ್ಪೆಷಲ್ ಸಾಂಗ್ ಒಂದನ್ನ ಮಾಡಿದೆ. ಈ ಹಾಡು ಸ್ಪೆಷಲ್ ಆಗಿಯೇ ಇದ್ದು, ಅಪ್ಪು ಜನ್ಮ ದಿನದ ಒಂದು ದಿನದ ಮೊದಲು ಮಾರ್ಚ್‌-16 ರಂದು ರಿಲೀಸ್ ಆಗುತ್ತಿದೆ.


Kannada Super Star Puneeth Rajkumar Birthday Special Updates
ಅಪ್ಪು ಜನ್ಮ ದಿನಕ್ಕೆ ಓಟಿಟಿಯಲ್ಲಿ ಗಂಧದ ಗುಡಿ ರಿಲೀಸ್


ಅಭಿಮಾನಿ ದೇವರುಗಳ ಹಬ್ಬವೂ ಬಲು ಜೋರು


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಕೂಡ ತಮ್ಮದೇ ರೀತಿಯಲ್ಲಿ ಅಪ್ಪು ಜನ್ಮ ದಿನವನ್ನ ಸೆಲೆಬ್ರೇಟ್ ಮಾಡುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ಒಂದಷ್ಟು ಪ್ಲಾನ್ ಕೂಡ ಮಾಡುತ್ತಿದ್ದಾರೆ. ಒಟ್ಟಾರೆ ಅಪ್ಪು ಜನ್ಮ ದಿನ ಸ್ಪೆಷಲ್ ಆಗಿಯೇ ಇರುತ್ತದೆ.

First published: