ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ (Super Star Sudeepa) ಸುದೀಪ್ ಈಗೊಂದು ಸಲಹೆ ಕೊಟ್ಟಿದ್ದಾರೆ. ಈ ಸಲಹೆಯ ಹಿಂದೆ ಒಂದು ಕಿಚ್ಚನ ಸಹನೆ ಕೂಡ ಇದೆ. ಪತ್ರಕರ್ತರ ಪ್ರಶ್ನೆಗೆ ಕಿಚ್ಚ ಈಗ ಅಷ್ಟೇ ಸಾಫ್ಟ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ತಾಳಿ ನೋಡೋಣ. ಕನ್ನಡದ (Kannada Film Industry) ಚಿತ್ರರಂಗದಲ್ಲಿ ಒಳ್ಳೆ ಸಿನಿಮಾ ಬರುತ್ತಿವೆ. ಇವುಗಳ ಪ್ರದರ್ಶನಕ್ಕೆ ಒಳ್ಳೆ ಥಿಯೇಟರ್ (Theater) ಕೂಡ ರೆಡಿ ಆಗಿದೆ. ಸುಸಜ್ಜಿತ ಥಿಯೇಟರ್ ಬೆಂಗಳೂರಿಗೆ (Bengaluru) ಬಂದಿದೆ. ಖುಷಿ ಪಡೋಣ. ಕನ್ನಡ ಸಿನಿಮಾಗಳೂ ಇಲ್ಲಿ ಪ್ರದರ್ಶನ ಆಗುತ್ತವೆ. ಆ ಭರವಸೆ ಇದೆ. ಯಾಕೆ ಆತರ ಪಡೋಣ. ಕಾಯೋಣ ಹೀಗೆ ತುಂಬಾ ಕೂಲ್ ಆಗಿಯೇ ಕಿಚ್ಚ ಸುದೀಪ್ ರಿಯಾಕ್ಟ್ ಮಾಡಿದರು.
ಕೇಳಿದ ಪ್ರಶ್ನೆಯಲ್ಲಿ ಅರ್ಥ ಇದೆ. ಆದರೆ ಕಿಚ್ಚನ ಉತ್ತರ ಇಲ್ಲಿ ಅಷ್ಟೇ ಕೂಲ್ ಆಗಿಯೇ ಇತ್ತು. ಪಾಸಿಟಿವ್ ಆಗಿಯೂ ಕಾಣಿಸಿತು. ಅಸಲಿಗೆ ಏನ್ ಇದರ ಒಟ್ಟು ಮ್ಯಾಟರ್ ಅನ್ನೋದು ಇಲ್ಲಿದೆ ಓದಿ.
ಕಿಚ್ಚ ಸಿಟ್ಟಾಗಲಿಲ್ಲ ಕೂಲ್ ಆಗಿಯೇ ಉತ್ತರ ಕೊಟ್ರು!
ಕಿಚ್ಚ ಸುದೀಪ್ ಯಾವಾಗಲೂ ಒಂದು ಥಿಯರಿ ಮೆಂಟೇನ್ ಮಾಡುತ್ತಾರೆ. ಯಾವುದೇ ಉದ್ಘಾಟನೆಗೆ ಹೋದ್ರೂ ಅಷ್ಟೆ. ಅಲ್ಲಿ ಆ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರಶ್ನೆ ಕೇಳಬೇಕು. ಬೇರೆ ಏನು ಕೇಳೋ ಹಾಗಿಲ್ಲ. ಹಾಗೇನಾದ್ರೂ ಕೇಳೋ ಪ್ರಶ್ನೆಗೆ ಕಿಚ್ಚ ತುಂಬಾ ಜಾಣ್ಮೆಯಿಂದಲೇ ಉತ್ತರ ಕೊಡ್ತಾರೆ. ಇಲ್ಲವೇ ಅಷ್ಟೇ ಕೂಲ್ ಆಗಿಯೇ ತಳ್ಳಿ ಹಾಕ್ತಾರೆ.
ಆದರೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ರೆಕ್ಸ್ ಪಿವಿಆರ್ ಥಿಯೇಟರ್ ಉದ್ಘಾಟನೆಯಲ್ಲಿ ಹಾಗೆ ಆಗಲಿಲ್ಲ. ಕಿಚ್ಚ ಸುದೀಪ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ರು. ತಾಳಿದವನು ಬಾಳಿಯಾನು ಅನ್ನೋ ಹಾಗೆ ತಾಳಿ ನೋಡೋಣ ಅನ್ನೋ ಭಾವನೆಯನ್ನು ವ್ಯಕ್ತಪಡಿಸಿದರು.
ಕೇಳಿದ ಪ್ರಶ್ನೆ ಏನೂ? ಕಿಚ್ಚನ ಉತ್ತರ ಏನ್ ಆಗಿತ್ತು?
ಬೆಂಗಳೂರು ಎಲ್ಲ ಭಾಷೆಯ ತವರೂರು ಆಗಿ ಬಿಟ್ಟಿದೆ. ಕನ್ನಡ ಇರಬೇಕಿರೋ ಜಾಗದಲ್ಲಿ ಇಂಗ್ಲೀಷ್ ರಾರಾಜಿಸುತ್ತಲೇ ಇರುತ್ತದೆ. ಬ್ರಿಗೇಡ್ ರೋಡ್ ನಲ್ಲಿ ಈ ಹಿಂದೆ ರೆಕ್ಸ್ ಥಿಯೇಟರ್ ಇತ್ತು. ಆ ಜಾಗದಲ್ಲಿಯೇ ಈಗ ರೆಕ್ಸ್ ಪಿವಿಆರ್ ಬಂದಿದೆ. ಅದರ ಉದ್ಘಾಟನೆಗೆ ಬಂದಿದ್ದ ಕಿಚ್ಚ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದರು.
ಕನ್ನಡ ನಾಡಲ್ಲಿ ಥಿಯೇಟರ್ ಇದೆ. ಇದೇನೋ ಸರಿ. ಸುಸಜ್ಜಿತ ಥಿಯೇಟರ್ ಅನ್ನೋದು ಖುಷಿನೇ ಬಿಡಿ. ಆದರೆ ಬಾಲಿವುಡ್, ಹಾಲಿವುಡ್ ನಟರ-ನಿರ್ದೇಶಕರ ಫೋಟೋಗಳು ಈ ಥಿಯೇಟರ್ನಲ್ಲಿ ರಾರಾಜಿಸುತ್ತಿವೆ. ಕನ್ನಡ ನಟ-ನಿರ್ದೇಶಕರ ಫೋಟೋ ಯಾಕಿಲ್ಲ? ಇದೇ ಇಲ್ಲಿ ಅತಿ ಹೆಚ್ಚು ಮುಖ್ಯವಾದ ಪ್ರಶ್ನೆ ಕೂಡ ಆಗಿತ್ತು.
ಕನ್ನಡದ ಕಡಗಣೆನೆಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರ ಹಿಂಗಿತ್ತು!
ನಾವು ಎಲ್ಲದರಲ್ಲೂ ತಪ್ಪು ಹುಡುಕೋಕೆ ಹೋಗಬಾರದು. ಸುಸಜ್ಜಿತ ಥಿಯೇಟರ್ ಬಂದಿದೆ. ಕನ್ನಡ ಚಿತ್ರಗಳನ್ನ ಪ್ರದರ್ಶನ ಮಾಡ್ತೀನಿ ಅಂತ ಹೇಳಿದ್ದಾರೆ. ಟಿಕೆಟ್ ದರ ಕೂಡ ಎಲ್ಲರ ಕೈಗೆಟುಕುವ ಹಾಗೆ ಇರುತ್ತದೆ ಅಂತ ಹೇಳಿದ್ದಾರೆ.
ಇಲ್ಲಿ ಇನ್ನು ಕೆಲಸ ನಡೀತಾ ಇದೆ. ಮುಂದಿನ ದಿನಗಳಲ್ಲಿ ಎಲ್ಲವೂ ಹಾಗಬಹುದು. ನೋಡೋಣ, ಕಾಯೋಣ ಅಂತಲೇ ಕಿಚ್ಚ ಸುದೀಪ್ ರೆಕ್ಸ್ ಪಿವಿಆರ್ ಉದ್ಘಾಟಿಸಿದ ಬಳಿಕ ಕಿಚ್ಚ ಸುದೀಪ್ ಹೀಗೆ ಉತ್ತರ ಕೊಟ್ಟಿದ್ದಾರೆ.
ನಾನು ಲಯನ್ ಕಿಂಗ್ ಚಿತ್ರ ಇಲ್ಲಿಯೇ ನೋಡಿದ್ದೇನೆ!
ರೆಕ್ಸ್ ಥಿಯೇಟರ್ನಲ್ಲಿ ಲಯನ್ ಕಿಂಗ್ಸ್ ಸಿನಿಮಾ ಬಂದಿತ್ತು. ಆಗ ಅದನ್ನ ನಾನು ಸಾಕಷ್ಟು ಸಲ ಇಲ್ಲಿಯೇ ನೋಡಿದ್ದೇನೆ. ಕಾಲೇಜು ದಿನಗಳಲ್ಲೂ ಇದೇ ಥಿಯೇಟರ್ಗೆ ಬಂದು ಸಿನಿಮಾ ನೋಡಿದ್ದೇನೆ. ಆದರೆ ಈಗ ಸಿನಿಮಾ ನೋಡೋದಕ್ಕಿಂತಲೂ ಅದನ್ನ ಮಾಡೋದ್ರಲ್ಲಿಯೇ ಹೆಚ್ಚಿಗೆ ಖುಷಿ ಇದೆ ಅಂತಲೂ ಕಿಚ್ಚ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Vasishta Simha-Haripriya: ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು! 'ಸಿಂಹ'ದ ಪ್ರೀತಿ ಬಗ್ಗೆ ಮೌನ ಮುರಿದ 'ಹರಿಪ್ರಿಯೆ'!
ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರ್ತಾಯಿವೆ. ಇದರಿಂದ ಕಿಚ್ಚನಿಗೆ ತುಂಬಾ ಖುಷಿ ಇದೆ. ಕೊರೊನಾ ಬಳಿಕ ಅನೇಕ ಸಿನಿಮಾ ಬಂದಿವೆ. ಚೆನ್ನಾಗಿಯೇ ಹೋಗಿವೆ. ಹಾಗಾಗಿ ಕೊರೊನಾ ಇಂಡಸ್ಟ್ರಿಗೆ ಎಫೆಕ್ಟ್ ಮಾಡಿಲ್ಲ ಅಂತಲೇ ತಮ್ಮ ಅಭಿಪ್ರಾಯವನ್ನೂ ಇಲ್ಲಿ ಉತ್ತರ ರೂಪದಲ್ಲಿಯೇ ಕಿಚ್ಚ ಸುದೀಪ್ ಕೊಟ್ಟಿದ್ದಾರೆ.
ಕನ್ನಡ ನಾಡಿಗೆ ಸುಸಜ್ಜಿತ ರೆಕ್ಸ್ ಪಿವಿಆರ್ ಬಂದಿದೆ. ಅದರಿಂದ ಕನ್ನಡ ಸಿನಿಮಾಗಳಿಗೆ ಒಳ್ಳೆದಾಗುತ್ತದೆ ಅನ್ನೋ ನಂಬಿಕೆ ಕಿಚ್ಚನಿಗೆ ಮೂಡಿದೆ. ಕನ್ನಡ ಸಿನಿಮಾಗಳನ್ನ ರೆಕ್ಸ್ ಪಿವಿಆರ್ನಲ್ಲೂ ಪ್ರದರ್ಶನ ಮಾಡುತ್ತಾರೆ ಅನ್ನೋ ನಂಬಿಕೆ ಕೂಡ ಇದೆ. ಉಳಿದಂತೆ ಸದ್ಯ ರೆಕ್ಸ್ ಪಿವಿಆರ್ನಲ್ಲಿ ಕನ್ನಡದ ಕಡಗಣನೆ ಮತ್ತು ಕಿಚ್ಚನ ಉತ್ತರವೇ ಅತಿ ಹೆಚ್ಚು ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ