ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeepa Movie Big Updates) ತಮ್ಮ ಸಿನಿಮಾಗಳ ಹೊಸ ಅಪ್ಡೇಟ್ಸ್ ಕೊಟ್ಟಿದ್ದಾರೆ. ಅಧಿಕೃತವಾಗಿಯೇ ಈ ಒಂದು ವಿಷಯವನ್ನ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಇಂಗ್ಲೀಷ್ (Sudeepa Kannada Movie) ನಲ್ಲಿಯೇ ಸುದೀರ್ಘವಾದ ಲೆಟರ್ ಬರೆದು ತಮ್ಮ ಮುಂದಿನ (Kichcha Sudeep Movie) ಚಿತ್ರಗಳ ಮಾಹಿತಿ ಕೊಟ್ಟಿದ್ದಾರೆ. ಕಿಚ್ಚನ ಈ ಲೆಟರ್‌ನಲ್ಲಿ ಇನ್ನೂ ಒಂದಷ್ಟು ವಿಷಯ ಇವೆ. ಇನ್ನು ಕನ್ನಡದ ಕಿಚ್ಚ ಸುದೀಪ್ ಅಭಿನಯದ ಸಿನಿಮಾಗಳು ಈ ವರ್ಷ ಇನ್ನೂ ಅನೌನ್ಸ್ ಆಗಿಯೇ ಇಲ್ಲ. ಇದರಿಂದ ಕಿಚ್ಚನ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದು ಇದೆ. ಮುಂದಿನ ಸಿನಿಮಾ ಯಾವಾಗ ಅನ್ನುವ ಪ್ರಶ್ನೆಯನ್ನ ಕೂಡ ಕೇಳುತ್ತಿದ್ದರು. ಈ ವಿಷಯದ ಸತ್ತ ಇಲ್ಲೊಂದು (Kannada Super Star Cinema) ಸ್ಟೋರಿ ಇದೆ ಓದಿ.
ಕಿಚ್ಚ ಸುದೀಪ್ ಕೊಟ್ಟೇ ಬಿಟ್ಟರು ಬಿಗ್ ನ್ಯೂಸ್
ಸ್ಯಾಂಡಲ್‌ವುಡ್‌ನ ಬಿಗ್ ಸ್ಟಾರ್‌ಗಳೆಲ್ಲ ಹೀಗೆ ಮಾಡಿದ್ರೇ ಹೇಗೆ ಅನ್ನೋ ಪ್ರಶ್ನೆ ಕೂಡ ಇದೆ. ಯಶ್ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲ. ಕಿಚ್ಚನ ಸಿನಿಮಾಗಳ ಸುದ್ದಿನೇ ಇಲ್ಲ. ಸುದೀಪ್ ಬಿಗ್ ಬಾಸ್ ಅಂತಲೇ ಇದ್ದರು. ಕ್ರಿಕೆಟ್ ಮ್ಯಾಚ್ ಅಂತಲೂ ಕಳೆದು ಹೋಗಿದ್ದರು.
ಈ ಎಲ್ಲದರ ನಡುವೆ ಸುದೀಪ್ ಮುಂದಿನ ಸಿನಿಮಾದ ವಿಷಯವೇ ಹೊರ ಬಂದಿರಲಿಲ್ಲ. ಆದರೆ ಕಿಚ್ಚ ಸುದೀಪ್ ತೆರೆ ಮರೆಯಲ್ಲಿ ಕಥೆಗಳನ್ನ ಕೇಳ್ತಾನೇ ಇದ್ದರು. ಒಳ್ಳೆ ಕಥೆಯೊಂದಿಗೆ ಬರಬೇಕು ಅಂತಲೇ ಇದ್ದಾರೆ. ಹಾಗಾಗಿಯೇ ಮೂರು ಮೂರು ಡೈರೆಕ್ಟರ್‌ಗಳು ಹೇಳುವ ಕಥೆಗಳನ್ನ ಕೇಳಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ಮೂರು ಮೂರು ಕಥೆ ಕೇಳಿದ್ದಾರೆ!
ಹೌದು, ಸುದೀಪ್ ಮೂರು ಜನ ಡೈರೆಕ್ಟರ್ ಹೇಳಿದ ಕಥೆಯನ್ನ ಕೇಳಿದ್ದಾರೆ. ಅವುಗಳನ್ನ ಫೈನಲ್ ಕೂಡ ಮಾಡಿದ್ದಾರೆ. ವರ್ಷಕ್ಕೆ ಮೂರು ಸಿನಿಮಾಗಳನ್ನ ಸುದೀಪ್ ಅವರು ಮಾಡ್ತಾರೆ ಅನ್ನೋ ಸುದ್ದಿ ಕೂಡ ಈ ಹಿಂದೇನೆ ಇತ್ತು. ನ್ಯೂಸ್-೧೮ ಕನ್ನಡ ಡಿಜಿಟಲ್ ಕೂಡ ಈ ಬಗ್ಗೆ ಒಂದು ಸುದ್ದಿ ಮಾಡಿತ್ತು.
About my Next
❤️🥂 pic.twitter.com/3vkCmS6FBF
— Kichcha Sudeepa (@KicchaSudeep) April 2, 2023
ಸುದೀಪ್ ಬಿಗ್ ಬ್ರೇಕ್ ತೆಗೆದುಕೊಂಡಿದ್ದು ಯಾಕೆ?
ಸುದೀಪ್ ಅವರು ಈ ಒಂದು ಲೆಟರ್‌ನಲ್ಲಿ ಇನ್ನೂ ಒಂದು ವಿಚಾರ ಕೂಡ ಇದೆ. ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾ ಆದ್ಮೇಲೆ ಬ್ರೇಕ್ ತೆಗೆದುಕೊಂಡಿರಲಿಲ್ಲ. ಓಟಿಟಿ ಬಿಗ್ ಬಾಸ್ ಮಾಡಿದರು. ಇದಾದ್ಮೇಲೆ ಬಿಗ್ ಬಾಸ್ ಶುರು ಆಯಿತು.
ಹೀಗೆ ಇದೆಲ್ಲ ಮುಗಿಸಿದ್ಮೆಲೆ ಕ್ರಿಕೆಟ್ ಪಂದ್ಯಗಳಲ್ಲಿಯೇ ಕಳೆದು ಹೋದ್ರು. ಈ ನಡುವೇನೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ಸ್ ಗಳೂ ಇದ್ದವು. ಇದೆಲ್ಲದಕ್ಕೂ ಉತ್ತರ ಅನ್ನೋ ಅರ್ಥದಲ್ಲೂ ಈ ಒಂದು ಲೆಟರ್ ಇದೆ.
ಸುದೀಪ್ ಮೂರು ಸಿನಿಮಾಗಳ ಡೈರೆಕ್ಟರ್ ಯಾರು?
ಇದರ ಬೆನ್ನಲ್ಲಿಯೇ ಸುದೀಪ್ ಅವರ ಸಿನಿಮಾ ಸುದ್ದಿ ಹೊರ ಬೀಳುತ್ತಿದಂತೇನೆ ಕಿಚ್ಚ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಕಿಚ್ಚನ 46 ನೇ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕರಾಗಿದ್ದಾರೆ. ಸುದೀಪ್ ಅವರ 47ನೇ ಚಿತ್ರ ಶಂಕರ್ ನಿರ್ದೇಶನದ ಸಿನಿಮಾ ಆಗಿದೆ.
ಮೂರನೇ ಸಿನಿಮಾ ಯಾವುದು ಅನ್ನೋ ಕುತೂಹಲವೂ ಈಗಲೇ ಮೂಡಿದೆ. ಆದರೆ ಈ ಮಾಹಿತಿ ಕಿಚ್ಚನ ಲೆಟರ್ ನಲ್ಲಿ ಇಲ್ಲ. ಬದಲಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿ ಇದೀಗ ಬಲವಾಗಿಯೇ ಹರಿದಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ