ನಟ ರಾಕ್ಷಸ ಡಾಲಿ ಧನಂಜಯ್ (Daali Dhananjaya) ಸಾಕಷ್ಟು ಪ್ರಯತ್ನ ಮಾಡಿದ್ದರು. ದೇಹದ ತೂಕವನ್ನ ಇಳಿಸಿ ವರ್ಕೌಟ್ (Tagaru Movie) ಮಾಡಿ ಬಾಕ್ಸರ್ ಆಗಿದ್ದರು. ಅಲ್ಲಮ ಪ್ರಭುವಾಗಿಯು ನಾಗಾಭರಣ ಗರಡಿಯಲ್ಲಿ ಪಳಗಿ (Shiva Rajkumar Cinema) ಬಂದರು. ಶೃತಿ ಹರಿಹರನ್ ಜೊತೆಗೂಡಿ ಪ್ರಿತಿಯ ರಾಟೆಯನ್ನೂ ತಿರುಗಿಸಿದರು. ಜನಕ್ಕೆ ಅದ್ಯಾಕೋ ಧನಂಜಯ್ ಹಿಡಿಸಲೇ ಇಲ್ಲ. ಡೈರೆಕ್ಟರ್ ದುನಿಯಾ ಸೂರಿ ಮಾತ್ರ ಈ ನಟನ ಲಕ್ ಚೇಂಜ್ (Daali Dhananjaya Film) ಮಾಡಿದರು. ಧನಂಜಯ್ ಒಳಗಡೆ ಇದ್ದ ಆ ಡಾಲಿಯನ್ನ ಬೆಳ್ಳಿ ತೆರೆ ಮೇಲೆ ತಂದರು. ಈ ಒಂದು ಕಲ್ಪನೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಪೋರ್ಟ್ ಮಾಡಿದರು. ಆಗಲೇ ನೋಡಿ ಧನಂಜಯ್ ರಾತ್ರೋ ರಾತ್ರಿ ಡಾಲಿಯಾಗಿ ಕನ್ನಡ ನಾಡಿನ ಜನರ ಮನದಲ್ಲಿ ಹೊಸ ಜಾಗ ಮಾಡಿಕೊಂಡರು.
ನಿಜ, ಜನಕ್ಕೆ ಯಾವ ಸಮಯದಲ್ಲಿ ಏನು ಇಷ್ಟ ಆಗುತ್ತದೆ ಅನ್ನೋದು ಹೇಳೋಕೆ ಆಗೋದಿಲ್ಲ. ಅತ್ಯದ್ಭುತ ಅನಿಸೋ ಕಥೆಗಳಲ್ಲಿಯೇ ಡಾಲಿ ಧನಂಜಯ್ ಅಭಿನಯಿಸಿದ್ದಾರೆ. ಇವರ ಅಭಿನಯದಲ್ಲಿ ಏನೂ ಕೊರತೆ ಇರಲಿಲ್ಲ.
ಧನಂಜಯ್ ಲೈಫ್ ಬದಲಿಸಿದ ಟಗರು ಸಿನಿಮಾ
ಡೈರೆಕ್ಟರ್ ಸ್ಪೆಷಲ್ ಚಿತ್ರ ಏನೂ ಕಡಿಮೇ ಇತ್ತೇ? ಬಾಕ್ಸರ್ ಸಿನಿಮಾದಲ್ಲಿ ಎಲ್ಲವೂ ಇತ್ತಲ್ವೇ? ಜೆಸ್ಸಿ ಚಿತ್ರವೂ ಬೇರೆ ರೀತಿಯ ಸಿನಿಮಾ ಆಗಿತ್ತು ಅಲ್ವಾ? ನಾಗಾಭರಣರು ಮಾಡೋ ಕಥೆಗಳು ಅದ್ಭುತ ಅನ್ನುವುದು ಎಲ್ಲರಿಗೂ ತಿಳಿದಿರೋ ವಿಷಯವೇ ಆಗಿದೆ.
ಆದರೆ ಡೈರೆಕ್ಟರ್ ಸೂರಿ, ಧನಂಜಯ್ ಒಳಗಡೆ ಇದ್ದ ಆ ಡಾಲಿಯನ್ನ ಹೊರಗೆ ತೆಗೆದರು. ಜೊತೆಗೆ ನಟ ವಸಿಷ್ಠ ಸಿಂಹನಲ್ಲಿರೋ ಆ ಚಿಟ್ಟೆಯನ್ನೂ ಹಾರಿ ಬಿಟ್ಟರು. ಆಗ ನೋಡಿ, ಟಗರು ಚಿತ್ರದ ಶಿವನಿಗೆ ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ವಿಲನ್ಗಳು ಎದುರಾದರು.
ಎಸಿಪಿ ಶಿವಕುಮಾರ್ ಪಾತ್ರದಲ್ಲಿ ಶಿವಣ್ಣ ಅಬ್ಬರ
ಇವರನ್ನ ಮಟ್ಟ ಹಾಕೋ ಪೊಲೀಸ್ ಪಾತ್ರದಲ್ಲಿ ಶಿವರಾಜ್ ಕುಮಾರ್ ಎಲ್ಲರನ್ನೂ ಮೀರಿಸಿ ಬಿಟ್ಟರು. ಹೌದು, ಟಗರು ಚಿತ್ರದಲ್ಲಿ ಶಿವಣ್ಣ ಎಸಿಪಿ ಶಿವಕುಮಾರ್ ಆಗಿಯೇ ಕಂಗೊಳಿಸಿದರು.
ಶಿವಣ್ಣ ಖಡಕ್ ಅಭಿನಯದ ಮುಂದೆ ಡಾಲಿ ಧನಂಜಯ್ ಅಬ್ಬರಿಸಿದ್ದರು. ಚಿಟ್ಟೆಯಾಗಿ ವಸಿಷ್ಠ ಸಿಂಹ ಗದರಿದ್ದರು. ಇವರ ಈ ಚಿತ್ರ ಐದು ವರ್ಷದ ಹಿಂದೆ ಫೆಬ್ರವರಿ-23 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗಿತ್ತು.
ಊರ್ವಶಿ ಥಿಯೇಟರ್ನಲ್ಲಿ ಪತಿ ಜತೆ ಚಿತ್ರ ವೀಕ್ಷಿಸಿದ ಭಾವನಾ
ಅಂದು ಈ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಚಿತ್ರ ರಿಲೀಸ್ ಆಗೋ ಮುನ್ನವೇ, ಚರಣ್ರಾಜ್ ಸಂಗೀತ ಟಗರು ಬಂತು ಟಗರು ಹಾಡು ಹಿಟ್ ಆಗಿತ್ತು. ಸಿನಿಮಾ ಬಂದ್ಮೇಲೆ ಜನ ಚಿತ್ರವನ್ನ ಕೂಡ ಹೆಚ್ಚು ಇಷ್ಟಪಟ್ಟರು.
ಹಾಗೆ ತೆರೆ ಕಂಡ ಈ ಚಿತ್ರದಲ್ಲಿ ಜಾಕಿ ಚಿತ್ರ ಖ್ಯಾತಿಯ ನಟಿ ಭಾವನಾ ಅಭಿನಯಿಸಿದ್ದರು. ಬೆಂಗಳೂರಿನ ಊರ್ವಶಿ ಥಿಯೇಟರ್ನಲ್ಲಿ ಪತಿ ನವೀನ್ ಜೊತೆಗೆ ಬಂದು ತಮ್ಮ ಈ ಚಿತ್ರವನ್ನ ನೋಡಿ ಖುಷಿಪಟ್ಟಿದ್ದರು. ಜನರ ರೆಸ್ಪಾನ್ಸ್ ತಿಳಿದು ಉಲ್ಲಾಸಗೊಂಡಿದ್ದರು.
ಟಗರು ಚಿತ್ರದಲ್ಲಿ ಚಿತ್ರ-ವಿಚಿತ್ರ ಪಾತ್ರಗಳ ಅಬ್ಬರ
ಟಗರು ಚಿತ್ರದಲ್ಲಿ ನಟ ದೇವರಾಜ್ ಅಭಿನಯಿಸಿದ್ದರು. ಎಸಿಪಿ ರಾಮಚಂದ್ರ ರೋಲ್ಲ್ಲಿ ಶಿವಣ್ಣ ಪಾತ್ರಕ್ಕೆ ಮೆಂಟರ್ ಆಗಿ ಅಭಿನಯಿಸಿದ್ದರು.
ಕೆಂಡ ಸಂಪಿಗೆ ಖ್ಯಾತಿಯ ನಟಿ ಮಾನ್ವಿತಾ ಕಾಮತ್ ಈ ಚಿತ್ರದಿಂದ ಹೆಸರುವಾಸಿ ಆದರು. ನಟ ಸುಧಿ ಅಂತೂ ಕಾಕ್ರೋಚ್ ಪಾತ್ರದ ಮೂಲಕ ವಿಭಿನ್ನ ರೂಪದಲ್ಲಿಯೇ ಕಂಗೊಳಿಸಿದರು.
15 ಸೆಂಟರ್ ನಲ್ಲಿ 100 ದಿನ ಓಡಿದ ಟಗರು ಸಿನಿಮಾ
ದುನಿಯಾ ಸೂರಿ ಕಟ್ಟಿಕೊಟ್ಟ ಈ ಚಿತ್ರ ರಾಜ್ಯದ 15 ಸೆಂಟರ್ನಲ್ಲಿ 100 ದಿನ ಯಶಸ್ವಿಯಾಗಿಯೇ ಓಡಿದೆ. ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಈ ಮೂಲಕ ದೊಡ್ಡ ಸಕ್ಸಸ್ ಕಂಡರು.
ಇದನ್ನೂ ಓದಿ: RSS Movie: ರಾಜಮೌಳಿ ತಂದೆ RSS ಚಿತ್ರ ಹೈಜಾಕ್ ಮಾಡ್ತಿದ್ದಾರಾ?
ಕನ್ನಡ ನಾಡಿನ ಜನತೆಯ ಸಿನಿಮಾ ಅಭಿರುಚಿಗೆ ಬೇರೆ ಅನುಭವ ಕೊಟ್ಟ ಟಗರು ಸಿನಿಮಾ ಈಗಲೂ ಎಲ್ಲರ ಮನದಲ್ಲಿದೆ. ಟಗರು-2 ಸಿನಿಮಾ ಬರುತ್ತದೆ ಅನ್ನೋ ಸುದ್ದಿ ಆಗಲೇ ಇತ್ತು. ಅದು ಇನ್ನಷ್ಟೆ ಕಾರ್ಯರೂಪಕ್ಕೆ ಬರಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ