Kannada Movies: ಶೇಕ್ಸ್​ಪಿಯರ್ ನಾಟಕಗಳಿಂದ ಸ್ಪೂರ್ತಿ ಪಡೆದ ಕನ್ನಡದ ಹಿಟ್ ಸಿನಿಮಾಗಳಿವು

ರಾಜ್ ಚಿತ್ರಗಳಿಗೆ ವಿಲಿಯಂ ಷೇಕ್ಸ್ ಪಿಯರ್ ನಾಟಕಗಳ ಸ್ಪೂರ್ತಿ

ರಾಜ್ ಚಿತ್ರಗಳಿಗೆ ವಿಲಿಯಂ ಷೇಕ್ಸ್ ಪಿಯರ್ ನಾಟಕಗಳ ಸ್ಪೂರ್ತಿ

ರಾಜ್‌ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಕಾದಂಬರಿ ಓದುವ ಹವ್ಯಾಸ ಇತ್ತು. ಹಾಗೆ ಒಳ್ಳೆ ಕಾದಂಬರಿ ಇದ್ದರೇ, ಅವುಗಳನ್ನ ಸಿನಿಮಾ ಮಾಡೋಕೆ ಪಾರ್ವತಮ್ಮ ರಾಜ್‌ಕುಮಾರ್ ಮನಸ್ಸು ಮಾಡುತ್ತಿದ್ದರು.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾ (Kannada Hit Movies) ಬಂದಿವೆ. ಎಲ್ಲ ಸಿನಿಮಾಗಳ ಕಥೆಗೂ ಒಂದೊಂದು ಸ್ಪೂರ್ತಿ ಇದ್ದೇ ಇರುತ್ತದೆ. ಆದರೆ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್‌ಕುಮಾರ್ (William Shakespeare Play) ಸಿನಿಮಾಗಳಿಗೆ ಬಹುತೇಕ ಕಾದಂಬರಿ ಆಧರವೇ ಇರುತ್ತಿತ್ತು. ರಾಜ್‌ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಕಾದಂಬರಿ ಓದುವ ಹವ್ಯಾಸ ಇತ್ತು. ಹಾಗೆ ಒಳ್ಳೆ ಕಾದಂಬರಿ ಇದ್ದರೇ, ಅವುಗಳನ್ನ (Kannada Hit Movies) ಸಿನಿಮಾ ಮಾಡೋಕೆ ಪಾರ್ವತಮ್ಮ ರಾಜ್‌ಕುಮಾರ್ ಮನಸ್ಸು ಮಾಡುತ್ತಿದ್ದರು. ಆಗ ರಾಜ್ ಸಹೋದರ ವರದಣ್ಣ ಹಾಗೂ ಚಿ. ಉದಯಶಂಕರ್ ಆ ಬಗ್ಗೆ ಚರ್ಚಿಸಿ ಸಿನಿಮಾ ಮಾಡಲು ಮುಂದಾಗುತ್ತಿದ್ದರು. ಕೆಲವೊಮ್ಮೆ ಹೀಗೂ ಆಗುತ್ತಿತ್ತು, ಒಳ್ಳೆ ಕಾದಂಬರಿ ಇದ್ದರೆ ಚಿ. ಉದಯಶಂಕರ್ ಅವರೇ ಇದನ್ನ ಓದಿ, ಇದು ಸಿನಿಮಾ ಆಗುತ್ತದೆ ಅಂತ ಹೇಳಿದ್ದು ಇದೆ.


ರಾಜ್ ಸಿನಿಮಾ ಜೀವನದಲ್ಲಿ ವಿಲಿಯಂ ಶೇಕ್ಸ್​ಪಿಯರ್!


ಹೀಗೆ ರಾಜ್‌ ಕುಮಾರ್ ಅಭಿನಯದ 200 ಸಿನಿಮಾಗಳಲ್ಲಿ ಬಹುತೇಕ ಚಿತ್ರಗಳು ಕಾದಂಬರಿ ಆಧರಿಸಿಯೇ ಇರುತ್ತಿದ್ದವು. ಬೇರೆ ಬೇರೆ ಬರಹಗಾರರ ಕಾದಂಬರಿಗಳನ್ನ ತಂದು ಪಾರ್ವತಮ್ಮ ರಾಜ್‌ಕುಮಾರ್ ಓದುತ್ತಲೇ ಇರ್ತಾ ಇದ್ದರು.


Kannada Super Hit Some Movies are Based on William Shakespeare Play

ಬಹದ್ದೂರ್ ಗಂಡು ಚಿತ್ರದ ಹಿಂದಿನ ಅಸಲಿ ಮ್ಯಾಟರ್


ಅವುಗಳನ್ನ ಸಿನಿಮಾ ಮಾಡುತ್ತಲೂ ಇದ್ದರು. ಹಾಗೆ ಅನೇಕ ಸಿನಿಮಾಗಳೂ ಬಂದಿವೆ. ಕಾದಂಬರಿ ಆಧರಿಸಿದ ಸಿನಿಮಾಗಳಲ್ಲಿ ಸಾಕಷ್ಟು ಸಿನಿಮಾಗಳು ಇವೆ. ಹಾಗೇನೆ ಆ ಸಾಲಿನಲ್ಲಿ ನಾಟಕಗಳು ಇರೋದು ಅಷ್ಟೇ ಸತ್ಯ ಅಂತ ಹೇಳಬಹುದು.
ರಾಜ್‌ ಚಿತ್ರಕ್ಕೆ ವಿಲಿಯಂ ಶೇಕ್ಸ್​ಪಿಯರ್ ನಾಟಕವೇ ಆಧಾರ


ರಾಜ್‌ಕುಮಾರ್ ಅಭಿನಯದ ಬಹದ್ದೂರ್ ಗಂಡು ಚಿತ್ರಕ್ಕೆ ಒಂದು ಇಂಗ್ಲೀಷ್ ನಾಟಕದ ಸ್ಪೂರ್ತಿ ಇದೆ. ಸ್ಪೂರ್ತಿ ಅನ್ನೋದಕ್ಕಿಂತಲೂ ಆಧಾರವೇ ಇದೆ ಅಂದ್ರೆ ತಪ್ಪಿಲ್ಲ ಬಿಡಿ.


ಹೌದು, ವಿಲಿಯಂ ಷೇಕ್ಸ್ ಪಿಯರ್ ಬರೆದ The Taming of the Shrew ನಾಟಕವನ್ನೆ ಕನ್ನಡದಲ್ಲಿ ಬಹದ್ದೂರ್ ಗಂಡು ಸಿನಿಮಾ ಮಾಡಲಾಗಿದೆ. ಈ ನಾಟಕವನ್ನ ಆಧರಿಸಿಯೇ ರೈಟರ್ ಎಚ್.ವಿ. ಸುಬ್ಬರಾವ್ ಕಥೆ ಬರೆದಿದ್ದರು. ಅದೇ ಕಥೆಯನ್ನ ಆಧರಿಸಿಯೇ ಚಿ. ಉದಯ್ ಶಂಕರ್, ಬಹದ್ದೂರ್ ಗಂಡು ಚಿತ್ರಕಥೆ ಬರೆದರು.
ಬಹದ್ದೂರ್ ಗಂಡು ಚಿತ್ರದ ಹಿಂದಿನ ಅಸಲಿ ಮ್ಯಾಟರ್


ಎ.ವಿ. ಶೇಷಗಿರಿ ರಾವ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. 1976 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. 19 ವಾರ ಈ ಚಿತ್ರ ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು.


ರಾಜ್‌ಕುಮಾರ್ ಅವರ ಸಿನಿಮಾ ಅಲ್ಲದೇ ರಾಘವೇಂದ್ರ ರಾಜ್‌ಕುಮಾರ್ ಅವರ ಸಿನಿಮಾಕ್ಕೂ ವಿಲಿಯಂ ಶೇಕ್ಸ್​ಪಿಯರ್ ನಾಟಕದ ಸ್ಪೂರ್ತಿ ಇದೆ. ಹಾಗೆ ಬಂದ ಆ ಚಿತ್ರದ ಹೆಸರು ನಂಜುಂಡಿ ಕಲ್ಯಾಣ ಅಂತ ಹೇಳಬಹುದಾಗಿದೆ.


Kannada Super Hit Some Movies are Based on William Shakespeare Play
ನಂಜುಂಡಿ ಕಲ್ಯಾಣ ಚಿತ್ರ ಯಾವ ನಾಟಕವನ್ನ ಆಧರಿಸಿದೆ ?


ನಂಜುಂಡಿ ಕಲ್ಯಾಣ ಚಿತ್ರ ಯಾವ ನಾಟಕವನ್ನ ಆಧರಿಸಿದೆ ?


ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಈ ಮೂಲಕ ಜೋಡಿ ಆಗಿದ್ದರು. ಗಿರಿಜಾ ಲೋಕೇಶ್ ಅವರೂ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಎಂ.ಎಸ್. ರಾಜಶೇಖರ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು.


1989 ರಲ್ಲಿ ತೆರೆಗೆ ಬಂದ ಈ ಚಿತ್ರ Blockbuster ಎನಿಸಿಕೊಂಡಿತ್ತು. ಥಿಯೇಟರ್‌ನಲ್ಲಿ 90 ವಾರಗಟ್ಟಲೆ ಸಿನಿಮಾ ಯಶಸ್ವಿಯಾಗಿಯೆ ಓಡಿತ್ತು. ಅಷ್ಟು ಸೂಪರ್ ಹಿಟ್ ಆಗಿರೋ ಈ ಚಿತ್ರಕ್ಕೆ ಪರ್ವತವಾಣಿ ಬರೆದ ನಾಟಕವನ್ನ ಆಧರಿಸಿದೆ.


ರಾಜ್ ಚಿತ್ರಗಳಿಗೆ ವಿಲಿಯಂ ಶೇಕ್ಸ್​ಪಿಯರ್ ನಾಟಕಗಳ ಸ್ಪೂರ್ತಿ


ಈ ಒಂದು ನಾಟಕಕ್ಕೆ ವಿಲಿಯಂ ಶೇಕ್ಸ್​ಪಿಯರ್ ಬರೆದ ನಾಟಕವೇ ಸ್ಪೂರ್ತಿ ಆಗಿದೆ. ಹೀಗೆ ರಾಜ್‌ಕುಮಾರ್ ಅವರ ಸಿನಿಮಾ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಚಿತ್ರಗಳಿಗೂ ವಿಲಿಯಂ ಷೇಕ್ಸ್ ಪಿಯರ್ ನಾಟಕಗಳ ಸ್ಪೂರ್ತಿ ಇದ್ದೆ ಇದೆ.


ಇದನ್ನೂ ಓದಿ: The Kerala Story: ಭಾರೀ ವಿರೋಧದ ಮಧ್ಯೆಯೇ ಹಲವು ರಾಜ್ಯಗಳಲ್ಲಿ ಕೇರಳ ಸ್ಟೋರಿ ಟ್ಯಾಕ್ಸ್ ಫ್ರೀ


ಇನ್ನುಳಿದಂತೆ ವಿಲಿಯಂ ಶೇಕ್ಸ್​ಪಿಯರ್ ನಾಟಕಗಳು ಕನ್ನಡದಲ್ಲಿ ಸಿನಿಮಾ ರೂಪದಲ್ಲಿ ಜನರಿಗೆ ತಲುಪಿವೆ. ಸೂಪರ್ ಹಿಟ್ ಕೂಡ ಆಗಿ ಇತಿಹಾಸ ಪುಟ ಸೇರಿವೆ. ರಾಜ್‌ ಸಿನಿಮಾ ಜೀವನದಲ್ಲಿ ಮತ್ತು ರಾಘವೇಂದ್ರ ರಾಜ್‌ಕುಮಾರ್ ಸಿನಿ ಜೀವನದಲ್ಲಿ ಅಷ್ಟೇ ಮಹತ್ವದ ಚಿತ್ರಗಳೂ ಎನಿಸಿಕೊಂಡಿವೆ ನೋಡಿ.

First published: