• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Eradu Kanasu: ಮಿನುಗು ತಾರೆ ಕಲ್ಪನಾ ಕಂಡು ಅಣ್ಣಾವ್ರು ಕೈ ಮುಗಿದಿದ್ದು ಏಕೆ? ಕಡೆಯ ಆ ದೃಶ್ಯದಲ್ಲಿ ಆಗಿದ್ದೇನು?

Eradu Kanasu: ಮಿನುಗು ತಾರೆ ಕಲ್ಪನಾ ಕಂಡು ಅಣ್ಣಾವ್ರು ಕೈ ಮುಗಿದಿದ್ದು ಏಕೆ? ಕಡೆಯ ಆ ದೃಶ್ಯದಲ್ಲಿ ಆಗಿದ್ದೇನು?

ಮಿನುಗು ತಾರೆ ಕಲ್ಪನಾ ಕಂಡು ರಾಜ್ ಕೈ ಮುಗಿದಿದ್ದ್ಯಾಕೆ?

ಮಿನುಗು ತಾರೆ ಕಲ್ಪನಾ ಕಂಡು ರಾಜ್ ಕೈ ಮುಗಿದಿದ್ದ್ಯಾಕೆ?

ತಮ್ಮ ಎರಡೂ ಕೈಗಳನ್ನ ಜೋಡಿಸಿ ಮನಸಾರೆ ಗೌರವದಿಂದಲೇ ಕೈಮುಗಿದರು. ಆ ಕ್ಷಣ ವಿಚಲಿತರಾದ ಕಲ್ಪನಾ, ದೊಡ್ಡವರು ಚಿಕ್ಕವರಿಗೆ ಕೈ ಮುಗಿಯಬಾರದು. ಚಿಕ್ಕವಳಾದ ನನಗೆ ಶ್ರೇಯಸ್ಸಲ್ಲ ಅಂತ ರಾಜ್​ ಕುಮಾರ್ ಅವರಿಗೆ ಹೇಳಿದರು.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಸಿನಿಮಾರಂಗದಲ್ಲಿ (Kalpana) ಮಿನುಗು ತಾರೆ ಕಲ್ಪನಾ ಬಗ್ಗೆ ಇರೋ ಗೌರವ ವಿಶೇಷವಾಗಿದೆ. ಕಲ್ಪನಾ ಅಭಿನಯದ (Sandalwood Kalpana) ವಿಷಯದಲ್ಲಿ ಎಲ್ಲರೂ ತಲೆ ಬಾಗಲೇಬೇಕು. ಶರಪಂಜರ ಸಿನಿಮಾ ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್. ಅದನ್ನೂ ಮೀರಿಸೋ ಇನ್ನೂ ಒಂದು ಸಿನಿಮಾ ಇದೆ. ಅದು ಎರಡು ಕನಸು (Eradu Kanasu) ಅಂತ ಹೇಳಬಹುದು. ಡಾಕ್ಟರ್ ರಾಜ್​ಕುಮಾರ್ ಮತ್ತು ಕಲ್ಪನಾ ಅವರ ಜೋಡಿಯ ಈ ಚಿತ್ರದಲ್ಲಿ ಮಂಜುಳಾ ಕೂಡ ಇದ್ದಾರೆ. ಆದರೆ ಕಲ್ಪನಾ ತಮ್ಮ ಅಭಿನಯದಿಂದಲೇ ಈ ಚಿತ್ರದಲ್ಲಿ ಜನಮನ ಗೆದ್ದು ಬಿಟ್ಟರು. ಎರಡು ಕನಸು ಅನ್ನೋದು (Kannada Super Hit Cinema) ಒಂದು ಅದ್ಭುತ ಸಿನಿಮಾ ಕೂಡ ಹೌದು. ಈ ಚಿತ್ರವನ್ನ ರೋಮ್ಯಾಂಟಿಕ್ ಹಿಟ್ ಸಿನಿಮಾ ಅಂತಲೂ ಕರೆಯುತ್ತಾರೆ.


ಎರಡು ಕನಸು ಎಂಬ ಕನ್ನಡದ ಅದ್ಭುತ ಚಿತ್ರಕೃತಿ
ಎರಡು ಕನಸು ಸಿನಿಮಾ ಎಂತಹ ನಿರ್ಭಾವುಕ ವ್ಯಕ್ತಿಯ ಮನಸು ಕನಲುವಂತೆ ಮಾಡುವ ಶಕ್ತಿಯನ್ನ ಹೊಂದಿದೆ. ದಾಂಪತ್ಯದಲ್ಲಿ ಹತ್ತು ಹಲವು ಸಮಸ್ಯೆ ಇದ್ದರೂ ಈ ಚಿತ್ರ ನೋಡಿದಾಗ, ಅದರಲ್ಲೂ ಕಲ್ಪನಾ ಅಭಿನಯ ನೋಡಿದಾಗ ಎಂತಹ ಕಲ್ಲು ಮನಸ್ಸು ಒಂದ್ ಅರೆಕ್ಷಣ ಕರಗಿ ಬಿಡುತ್ತದೆ.


Kannada Super Hit Eradu Kanasu movie Unknown facts Reveal
ಎರಡು ಕನಸು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಅದ್ಭುತ


ಎರಡು ಕನಸು ಚಿತ್ರದಲ್ಲಿ ಡೈರೆಕ್ಟರ ದೊರೆ-ಭಗವಾನ ತುಂಬಾ ಒಳ್ಳೆ ಕತೆಯನ್ನ ಆಯ್ದುಕೊಂಡಿದ್ದರು. ಬರಹಗಾರ್ತಿ ವಾಣಿ ಅವರ ಎರಡು ಕನಸು ಕಾದಂಬರಿಯನ್ನ ಇಲ್ಲಿ ಸಿನಿಮಾ ಮಾಡಿದ್ದರು.




ಹೃದಯದಲ್ಲಿ ಲತಾ-ಹೊರಗಡೆ ಗೌರಿ-ರಾಮು ಎರಡು ಕನಸು!
ಪ್ರೇಯಿಸಿಯನ್ನ ಮನದಲ್ಲಿಟ್ಟುಕೊಂಡು ಹೆಂಡತಿ ಜೊತೆಗೆ ಸಂಸಾರ ಮಾಡಲಾಗದೇ ತೊಳಲಾಡೋ ಪ್ರೊಫೆಸರ್ ಆಗಿ ಡಾಕ್ಟರ್ ರಾಜ್​ಕುಮಾರ್ ಎಂದೆಂದೂ ಅದ್ಬುತ ಬಿಡಿ. ರಾಜ್​ಕುಮಾರ್ ಅವರು ಈ ಒಂದು ಪಾತ್ರದಲ್ಲಿ ಜೀವಿಸಿದ್ದರು. ಅದನ್ನ ಅನುಭವಿಸಿ ಅಭಿನಯಿಸಿದ್ದರು.


ಡಾಕ್ಟರ್ ರಾಜ್ ಅವರ ವ್ಯಕ್ತಿತ್ವಕ್ಕೆ ತಕ್ಕನಾಗಿಯೇ ರಾಜ್​ಕುಮಾರ್ ಅವರ ಪಾತ್ರವನ್ನ ಈ ಚಿತ್ರದಲ್ಲಿ ಡಿಸೈನ್ ಮಾಡಲಾಗಿತ್ತು. ಅಂತಹ ಈ ಪಾತ್ರಕ್ಕೆ ಜೋಡಿಯಾಗಿ ಮಿನುಗು ತಾರೆ ಕಲ್ಪನಾ ಅಭಿನಯಿಸಿದ್ದರು.


ಎರಡು ಕನಸು ಚಿತ್ರದ ಗೌರಿ ಪಾತ್ರವನ್ನ ಮಿನುಗು ತಾರೆ ಜೀವಿಸಿದ್ದರು
ಕಲ್ಪನಾ ಅಭಿನಯಿಸಿದ್ದರು ಅನ್ನೋದಕ್ಕಿಂತಲೂ ಆ ಗೌರಿ ಅನ್ನುವ ಪಾತ್ರವನ್ನ ಜೀವಿಸಿದ್ದರು. ಎಂದೂ ಟಚ್ ಮಾಡದೇ ಇರೋ ಗಂಡನ ಪ್ರೀತಿಗಾಗಿಯೇ ಹಂಬಲಿಸೋ ಈ ಗೌರಿ ಪಾತ್ರ ಕನ್ನಡ ನಾಡಿನ ಜನರ ಮನದಲ್ಲಿ ಇನ್ನೂ ಇದೆ.


ಇಂತಹ ಪಾತ್ರದ ಕ್ಲೈಮ್ಯಾಕ್ಸ್ ಅದ್ಭುತವೇ ಬಿಡಿ. ಡಾಕ್ಟರ್ ರಾಜ್​ಕುಮಾರ್ ಮತ್ತು ಕಲ್ಪನಾ ಅವರ ಕೊನೆ ದೃಶ್ಯದಲ್ಲಿ ಕಲ್ಪನಾ ಅದ್ಭುತ ಮಾತುಗಳನ್ನ ಆಡ್ತಾನೇ ಹೋಗ್ತಾರೆ. ಇದನ್ನ ಕೇಳಿದ ಪ್ರತಿ ಪ್ರೇಕ್ಷಕ ಒಂದೊಮ್ಮೆ ತದೇಕ ಚಿತ್ತದಿಂದಲೇ ನೋಡುತ್ತಲೇ ಇರ್ತಾನೆ.


ಎರಡು ಕನಸು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಅದ್ಭುತ
ಎರಡು ಕನಸು ಚಿತ್ರದ ಈ ಕಟ್ಟ ಕಡೆಯ ದೃಶ್ಯ ಮುಗಿದ್ಮೇಲೆ ಸೆಟ್​ನಲ್ಲಿದ್ದವರೆಲ್ಲ ಚಪ್ಪಾಳೆ ಹೊಡೆದರು. ಅದ್ಭುತವಾಗಿಯೇ ದೃಶ್ಯ ಬಂದಿದೆ ಅಂತ ತಮ್ಮದೇ ರೀತಿಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.


ಆದರೆ ಡಾಕ್ಟರ್ ರಾಜ್​ಕುಮಾರ್ ಹಾಗೆ ಮಾಡಲಿಲ್ಲ, ತಮ್ಮ ಎರಡೂ ಕೈಗಳನ್ನ ಜೋಡಿಸಿ ಮನಸಾರೆ ಗೌರವದಿಂದಲೇ ಕೈಮುಗಿದರು. ಆ ಕ್ಷಣ ವಿಚಲಿತರಾದ ಕಲ್ಪನಾ, ದೊಡ್ಡವರು ಚಿಕ್ಕವರಿಗೆ ಕೈ ಮುಗಿಯಬಾರದು. ಚಿಕ್ಕವಳಾದ ನನಗೆ ಶ್ರೇಯಸ್ಸಲ್ಲ ಅಂತ ರಾಜ್​ ಕುಮಾರ್ ಅವರಿಗೆ ಹೇಳಿದರು.


ಕಲ್ಪನಾ ಕಂಡು ರಾಜ್ ಕೈ ಮುಗಿದೇ ಬಿಟ್ಟರು!
ಡಾಕ್ಟರ್ ರಾಜ್ ಕುಮಾರ್ ಆಗೊಂದು ಮಾತನ್ನ ಕಲ್ಪನಾ ಅವರಿಗೆ ಹೇಳುತ್ತಾರೆ. ನಾನು ಕೈ ಮುಗಿದಿರೋದು ಕಲ್ಪನಾಳಿಗಲ್ಲ. ಕಲ್ಪನಾಳ ಒಳಗೆ ಇರೋ ಆ ಸರಸ್ವತಿಗೆ ಎಂದು ಹೇಳಿದರು.


ಈ ಮಾತು ಕೇಳಿದ ಕಲ್ಪನಾ ಕಣ್ಣೀರಾದರು, ಭಾವುಕರಾಗಿ ಒಂದಷ್ಟು ಹೊತ್ತು ಕುಳಿತು ಬಿಟ್ಟರು. ಹೀಗೆ ಡಾಕ್ಟರ್ ರಾಜ್​ಕುಮಾರ್ ಕಲಾವಿದರಿಗೆ ಅವರ ಪ್ರತಿಭೆಗೆ ಗೌರವ ಕೊಡ್ತಾಯಿದ್ದರು.


Kannada Super Hit Eradu Kanasu movie Unknown facts Reveal
ಎರಡು ಕನಸು ಎಂಬ ಕನ್ನಡದ ಅದ್ಭುತ ಚಿತ್ರಕೃತಿ


ಎರಡು ಕನಸು ಚಿತ್ರದ ಆ ಕ್ಷಣಕ್ಕೆ ಎಲ್ಲರು ಸಾಕ್ಷಿ
ರಾಜ್​ ಕೊಟ್ಟ ಗೌರವವನ್ನ ಸ್ವೀಕರಿಸಿದ ಕಲ್ಪನಾ ಧನ್ಯರಾದರು. ಎರಡು ಕನಸು ಚಿತ್ರದ ಇಡೀ ತಂಡ ಈ ಒಂದು ಅದ್ಭುತ ಕ್ಷಣಕ್ಕೆ ಸಾಕ್ಷಿ ಆಗಿತ್ತು. ಎರಡು ಕನಸು ಸೂಪರ್ ಹಿಟ್ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿದೆ. ಮುಂದೇ ಇದೇ ಚಿತ್ರ ಬೇರೆ ಭಾಷೆಯಲ್ಲೂ ಬಂದು ಎಲ್ಲರ ಹೃದಯ ಕದ್ದಿದೆ.


ಇದನ್ನೂ ಓದಿ: Star Actors Sons: ಬ್ಯಾಕ್‍ಗ್ರೌಂಡ್ ಇದ್ದರೂ, ಸ್ಯಾಂಡಲ್​ವುಡ್​​ನಲ್ಲಿ ಕ್ಲಿಕ್ ಆಗದ ನಟರು ಇವರು!


ಒಂದೊಮ್ಮೆ ನೀವು ಈಗಲೂ ಈ ಚಿತ್ರ ನೋಡಿದ್ರೆ, ನಿಮಗೆ ಎರಡು ಕನಸು ಚಿತ್ರದ ಈ ಮೇಲಿನ ಮಾತು ಮತ್ತೆ ಮತ್ತೆ ಕಾಡಿದರು ಕಾಡಬಹುದು ಅಂತಲೇ ಹೇಳಬಹುದು.

First published: