ಸ್ಯಾಂಡಲ್‌ವುಡ್‌ನಲ್ಲಿ ಚಾರ್ಲಿ ಸಿನಿಮಾ ಬಂದು ಒಂದು ವರ್ಷದ ಮೇಲೆ ಆಗಿದೆ. ಆದರೂ ದೊಡ್ಡವರು ಮತ್ತು ಮಕ್ಕಳಾದಿಯಾಗಿ ಎಲ್ಲರೂ ಈ ಚಿತ್ರವನ್ನ ಈಗಲೂ ನೆನಪಿಸಿಕೊಳ್ಳುತ್ತಾರೆ. ಚಿತ್ರದ ಪ್ರತಿ ಸೀನ್ ಅನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರೆ.
777 ಚಾರ್ಲಿ ಸಿನಿಮಾ ತಂಡವು ಈ ಚಿತ್ರದ ಪ್ರತಿ ಕ್ಷಣವನ್ನ ಎಂಜಾಯ್ ಮಾಡಿದ್ದಾರೆ. ಪ್ರತಿ ವಿಷಯವನ್ನು ನೆನಪಿನಲ್ಲಿಟ್ಟುಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಟ್ವಿಟರ್‌ನಲ್ಲಿರೋ ಚಾರ್ಲಿ ಪೇಜ್ ಅಲ್ಲಿ ಎಲ್ಲವೂ ಆಗಾಗ ಶೇರ್ ಆಗ್ತಾನೇ ಇರುತ್ತದೆ.
777 ಚಾರ್ಲಿ ಸಿನಿಮಾ ಕಳೆದ ವರ್ಷ ಜೂನ್-10 ರಂದು ರಿಲೀಸ್ ಆಗಿತ್ತು. ಸಿನಿಮಾ ಬರೋ ಮೊದಲೂ ಒಳ್ಳೆ ಟಾಕ್ ಕೂಡ ಇತ್ತು. ಅದರಂತೆ ತೆರೆಗೆ ಬಂದ್ಮೇಲೆ ಇಡೀ ಸಿನಿಮಾ ತಂಡಕ್ಕೆ ಚಾರ್ಲಿ ಸಕ್ಸಸ್ ರುಚಿ ಕೊಟ್ಟೇ ಬಿಟ್ಟಿತ್ತು. ಅಷ್ಟೇ ಕ್ರೇಜ್ ಅನ್ನು ಈ ಚಿತ್ರ ಹುಟ್ಟುಹಾಕಿತ್ತು.
ಚಾರ್ಲಿ ಸಿನಿಮಾ ಟೀಮ್ ರಿಲೀಸ್ ಮುಂಚೆ ಒಂದು ಪ್ರೆಸ್ ಮೀಟ್ ಮಾಡಿತ್ತು. ಈ ಸಮಯದಲ್ಲಿ ತಂಡದ ಎಲ್ಲ ಸದಸ್ಯರು ಇದ್ದರು. ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ದ ಚಾರ್ಲಿ ಕೂಡ ಇತ್ತು. ಆ್ಯಂಕರ್ ಅನುಶ್ರೀ ಇಲ್ಲಿ ಚಾರ್ಲಿಯನ್ನ ಮಾತನಾಡಿಸೋ ಕೆಲಸ ಕೂಡ ಮಾಡಿದ್ದರು.
ಚಾರ್ಲಿ ಚಿತ್ರದ ಈ ಒಂದು ಪ್ರೆಸ್ ಮೀಟ್ ಮೇ ತಿಂಗಳ 17-18 ರ ಆಸು-ಪಾಸು ನಡೆದಿತ್ತು. ಆ ಒಂದು ಲೆಕ್ಕದಲ್ಲಿ ಈಗ ಈ ಒಂದು ಪ್ರೆಸ್ ಮೀಟ್ ನಡೆದು ಒಂದು ವರ್ಷ ಆಗಿದೆ. ಸಿನಿಮಾ ತಂಡದ ಈ ಒಂದು ಕ್ಷಣದ ಫೋಟೋ ಈಗಲೂ ಶೇರ್ ಆಗ್ತಾನೇ ಇರುತ್ತವೆ.
ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಡೈರೆಕ್ಟರ್ ಕಿರಣ್ ರಾಜ್ ಕೂಡ ತಮ್ಮ ಈ ಸಿನಿಮಾ ಮೂಲಕ ಕನ್ನಡ ಜನತೆಗೆ ಹೊಸ ರೀತಿಯ ಸಿನಿಮಾದ ಅಭಿರುಚಿಯನ್ನ ಕೂಡ ಹಚ್ಚಿದ್ದಾರೆ.
ಸಂಗೀತಾ ಶೃಂಗೇರಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ನಟನೆಯ ಈ ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ ಕೊಟ್ಟಿದ್ದರು. ಅರವಿಂದ್ ಎಸ್. ಕಶ್ಯಪ್ ಕ್ಯಾಮೆರಾ ವರ್ಕ್ ಮಾಡಿದ್ದರು. ಇವರೆಲ್ಲರ ಈ ಸಿನಿಮಾ ಜನರ ಮನದಲ್ಲಿ ಶಾಶ್ವತ ಜಾಗ ಮಾಡಿಕೊಂಡಿದೆ.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ