Ravi Varma: ಮುಧೋಳ್ ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಾಗೆ ಪೆಟ್ಟು!

ಸಾಹಸ ನಿರ್ದೇಶಕ ರವಿವರ್ಮಾ ಅವರಿಗೆ ಗಂಭೀರ ಗಾಯ

ಸಾಹಸ ನಿರ್ದೇಶಕ ರವಿವರ್ಮಾ ಅವರಿಗೆ ಗಂಭೀರ ಗಾಯ

ವಿಕ್ರಮ್ ರವಿಚಂದ್ರನ್ ಅಭಿನಯದ ಮುಧೋಳ್ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಇದೇ ವೇಳೆ ಈಗೊಂದು (Ravi Varma Updates) ಯಡವಟ್ಟು ಹಾಗಿದೆ. ಅದರಿಂದ ರವಿವರ್ಮಾ ಅವರಿಗೆ ಪೆಟ್ಟಾಗಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ನಲ್ಲಿ ಸಾಹಸ ನಿರ್ದೇಶಕ ರವಿವರ್ಮಾ (Kannada Stunt Master Ravi Varma) ಅಂದ್ರೆ ವಿಭಿನ್-ರಿಸ್ಕಿ ಸ್ಟಂಟ್ಸ್‌ಗೆ ಹೆಸರು ವಾಸಿ ಆಗಿದ್ದಾರೆ. ಇವರ ಸಾಹಸ ನಿರ್ದೇಶನದಲ್ಲಿ ಸಾಕಷ್ಟು ಕನ್ನಡದ ಸ್ಟಾರ್‌ಗಳು (Mudhol Movie Shooting) ಸಖತ್ ಸ್ಟಂಟ್ಸ್ ಮಾಡಿ ಪ್ರೇಕ್ಷಕರ ಮತ್ತು ಅಭಿಮಾನಿಗಳ ದಿಲ್ ಕದ್ದಿದ್ದಾರೆ. ಅದೇ ರೀತಿ ರಿಯಲ್ ಸ್ಟಂಟ್ಸ್‌ಗಳನ್ನ ಪಕ್ಕ ಪ್ಲಾನ್ ಮಾಡಿಯೇ ರವಿವರ್ಮ ಸಾಹಸ ನಿರ್ದೇಶನ (Stunt Master Ravi Varma) ಮಾಡುತ್ತಾರೆ. ಹಾಗೇನೆ ಇದೀಗ ರವಿವರ್ಮ ತಮ್ಮ ವಿಕ್ರಮ್ ರವಿಚಂದ್ರನ್ ಅಭಿನಯದ ಮುಧೋಳ್ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಇದೇ ವೇಳೆ ಈಗೊಂದು (Ravi Varma Updates) ಯಡವಟ್ಟು ಹಾಗಿದೆ. ಅದರಿಂದ ರವಿವರ್ಮಾ ಅವರಿಗೆ ಪೆಟ್ಟಾಗಿದೆ.


ಸಾಹಸ ನಿರ್ದೇಶಕ ರವಿವರ್ಮಾ ಭುಜಕ್ಕೆ ಗಂಭೀರ ಗಾಯ


ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಮುಧೋಳ್ ಸಿನಿಮಾ ಶೂಟಿಂಗ್ ಶುರು ಆಗಿದೆ. ಈ ಚಿತ್ರದಲ್ಲಿ ಸಾಹಸಗಳೇ ಹೆಚ್ಚಿರೋದು, ಮೊನ್ನೆ ಬಿಟ್ಟ ಟೈಟಲ್ ಟೀಸರ್ ಆ ಒಂದು ಆ್ಯಕ್ಷನ್ ಪ್ಯಾಕ್ಡ್ ಕಥೆ ಹೇಳಿತ್ತು.


Kannada Stunt Master Ravi Varma got Injured at Mudhol Movie Shooting r
ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ ಸಿನಿಮಾ


ಅದೇ ರೀತಿ ಇಡೀ ಸಿನಿಮಾದಲ್ಲಿ ಭರ್ಜರಿ ಸಾಹಸಗಳೇ ಇರುತ್ತವೆ ಅನ್ನೋ ಭರಸೆ ಮೂಡಿಸಿದ್ದವು. ಹಾಗೇನೆ ಈಗ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮೂಧೋಳ್ ಚಿತ್ರದ ಆ್ಯಕ್ಷನ್ ಸೀನ್ ಶೂಟಿಂಗ್ ನಡೆಯುತ್ತಿವೆ. ಈ ಒಂದು ಜವಾಬ್ದಾರಿಯನ್ನ ಸಾಹಸ ನಿರ್ದೇಶಕ ರವಿವರ್ಮ ಹೊತ್ತಿದ್ದಾರೆ.




ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ ಸಿನಿಮಾ


ಹೌದು, ರವಿವರ್ಮ ಇದೀಗ ಮುಧೋಳ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿಯೆ ಈಗ ಸಿನಿಮಾದ ಶೂಟಿಂಗ್ ಅನ್ನ ಕಂಠೀರವ ಸ್ಟುಡಿಯೋದಲ್ಲಿ ಮಾಡುತ್ತಿದ್ದಾರೆ.




ಆದರೆ ಈ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ರವಿವರ್ಮ ಅವರಿಗೆ ಪೆಟ್ಟಾಗಿದೆ. ಸಾಮಾನ್ಯವಾಗಿ ಸಾಹಸ ಕಲಾವಿದರಿಗೆ ಪೆಟ್ಟಾಗುತ್ತದೆ. ಆದರೆ ಇಲ್ಲಿ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಪೆಟ್ಟಾಗಿದೆ.


ಸಾಹಸ ದೃಶ್ಯ ತೆಗೆಯೋವಾಗ ರೋಪ್ ಕಟ್


ಚಿತ್ರದ ಮಹತ್ವದ ಸಾಹಸ ದೃಶ್ಯವನ್ನ ತೆಗೆಯೋವಾಗ ರೋಪ್ ಬಳಸಲಾಗಿದೆ. ಈ ರೋಪ್ ಕಟ್ ಆಗಿ ರವಿವರ್ಮ ಅವರ ಬಲ ಭುಜಕ್ಕೆ ಏಟು ಬಿದ್ದಿದೆ. ಗಂಭೀರ ಗಾಯ ಕೂಡ ಆಗಿದೆ ಅನ್ನೋ ಮಾಹಿತಿ ಬರ್ತಿದೆ.


Kannada Stunt Master Ravi Varma got Injured at Mudhol Movie Shooting r
ಸಾಹಸ ನಿರ್ದೇಶಕ ರವಿವರ್ಮಾ ಭುಜಕ್ಕೆ ಗಂಭೀರ ಗಾಯ


ಈ ಬಗ್ಗೆ ಮುಧೋಳ್ ಚಿತ್ರದ ನಿರ್ದೇಶಕ ಕಾರ್ತಿಕ್ ರಾಜನ್ ನ್ಯೂಸ್-18 ಕನ್ನಡ ಜೊತೆಗೆ ಮಾತನಾಡಿದ್ದಾರೆ. ರವಿವರ್ಮ ಅವರಿದ್ದಾರೆ ಅಂದ್ಮೇಲೆ ಅಲ್ಲಿ ಸಾಹಸವೇ ಇರುತ್ತದೆ. ಸಣ್ಣ ಪೆಟ್ಟಾಗಿದೆ ಅಷ್ಟೇ, ಬೇರೆ ಏನೂ ತೊಂದರೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.


ಸಾಹಸ ನಿರ್ದೇಶಕ ರವಿವರ್ಮಾ ಅವರಿಗೆ ಗಂಭೀರ ಗಾಯ


ಸಾಮಾನ್ಯವಾಗಿ ರೋಪ್ ಬಳಸುವ ದೃಶ್ಯದಲ್ಲಿ ರೋಪ್ ಸರಿಯಾಗಿಯದ್ದರೇ ಒಳ್ಳೆಯದೇ, ಇಲ್ಲ ಅಂದ್ರೆ ರೋಪ್ ಹಿಡಿಯೋರು ಸಖತ್ ಸ್ಟ್ರಾಂಗ್ ಆಗಿರಬೇಕಾಗುತ್ತದೆ. ಆದರೆ ರವಿವರ್ಮಾ ಅವರ ಈ ಸಾಹಸ ನಿರ್ದೇಶನದಲ್ಲಿ ಎಕ್ಸಾಕ್ಟ್ಲಿ ಏನಾಗಿದೆ ಅನ್ನೋದು ಗೊತ್ತಿಲ್ಲ.


ಇದನ್ನೂ ಓದಿ: Dhruva Sarja: ಆ್ಯಕ್ಷನ್ ಪ್ರಿನ್ಸ್ ವರ್ಕೌಟ್ ನೋಡಿದ್ರೆ ಶಾಕ್ ಆಗ್ತೀರಿ! ಫಿಟ್ನೆಸ್​ ಥ್ರಿಲ್​ನಲ್ಲಿ ಧ್ರುವ ಸರ್ಜಾ


ಆದರೆ ರೋಪ್ ಕಟ್ ಆಗಿ ರವಿ ವರ್ಮ್ ಅವರಿಗೆ ಪೆಟ್ಟು ಬಿದ್ದಿದೆ ಅನ್ನುವ ಮಾಹಿತಿ ಬರ್ತಿದೆ. ಆದರೆ ಈ ಬಗ್ಗೆ ರವಿವರ್ಮಾ ಇನ್ನೂ ಎಲ್ಲೂ ಏನೂ ಹೇಳಿಕೊಂಡಿಲ್ಲ. ಉಳಿದಂತೆ ರವಿವರ್ಮಾ ಅವರಿಗೆ ಗಂಭೀರ ಗಾಯವಾಗಿದೆ ಅನ್ನೋ ಸುದ್ದಿ ಮಾತ್ರ ಬರ್ತಿದೆ.

top videos
    First published: