Accident: ತಾರೆಯರ ಸಂಚಾರ ನಿಲ್ಲಿಸಿದ ವಿಧಿ ಸಾಧಿಸಿದ್ದು ಯಾವ ವಿಜಯ?

Sandalwood Stars: ಸ್ಯಾಂಡಲ್​ವುಡ್​ ಈಗಾಗಲೇ ಸಾಕಷ್ಟು ಪ್ರತಿಭೆಗಳನ್ನು ಕಳೆದುಕೊಂಡಿದೆ. ಹೌದು, ಚಿಕ್ಕವಯಸ್ಸಿನಲ್ಲೇ ಅಕಾಲಿಕವಾಗಿ ಸಾಕಷ್ಟು ಮಂದಿ ಅಗಲಿದ್ದಾರೆ. ಅದರಲ್ಲೂ ಅಪಘಾತದಿಂದಾಗಿ ಕನ್ನಡದ ಕಲಾವಿದರು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಕನ್ನಡದ ಕಲಾವಿದರು

ಅಪಘಾತದಲ್ಲಿ ಸಾವನ್ನಪ್ಪಿದ ಕನ್ನಡದ ಕಲಾವಿದರು

  • Share this:
ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡದ ನಟ ಸಂಚಾರಿ ವಿಜಯ್ ಅವರ ಅಗಲಿಕೆ ನಿಜಕ್ಕೂ ಸ್ಯಾಂಡಲ್​ವುಡ್​ ಮಂದಿಗೆ ಭರಿಸಲಾರದಷ್ಟು ನೋವು ನೀಡಿದೆ. ವಿಜಯ್​ ಇಲ್ಲ ಅನ್ನೋ ಸತ್ಯವನ್ನು ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. 38 ವರ್ಷಕ್ಕೇ ಬಾರದ ಲೋಕಕ್ಕೆ ಸಂಚಾರ ಬೆಳೆಸಿದ ವಿಜಯ್​ ಅವರ ಅಂತ್ಯ ಸಂಸ್ಕಾರ ಅವರ ಸ್ವಗ್ರಾಮದಲ್ಲೇ ನಡೆಯುತ್ತಿದೆ. ವಿಜಯ್​ ಅವರು ಸ್ನೇಹಿತನ ಜೊತೆ ಬೈಕ್​ನಲ್ಲಿ ಹೋಗುವಾದ ನಡೆದ ಅಪಘಾತದಿಂದಾಗಿ ಸಾವನ್ನಪ್ಪಿದ್ದಾರೆ. ಇನ್ನು ಸ್ಯಾಂಡಲ್​ವುಡ್​ನಲ್ಲಿ ಸಂಚಾರಿ ವಿಜಯ್​ ಅವರಂತೆಯೇ ಚಿಕ್ಕ ವಯಸ್ಸಿಗೆ ಅಪಘಾತದಲ್ಲಿ ಕೊನೆಯುಸಿರೆಳೆದ ಕನ್ನಡದ ಕಲಾವಿದರ ವಿವರ ಹೀಗಿದೆ. 

ಸ್ಯಾಂಡಲ್​ವುಡ್​ ಈಗಾಗಲೇ ಸಾಕಷ್ಟು ಪ್ರತಿಭೆಗಳನ್ನು ಕಳೆದುಕೊಂಡಿದೆ. ಹೌದು, ಚಿಕ್ಕವಯಸ್ಸಿನಲ್ಲೇ ಅಕಾಲಿಕವಾಗಿ ಸಾಕಷ್ಟು ಮಂದಿ ಅಗಲಿದ್ದಾರೆ. ಅದರಲ್ಲೂ ಅಪಘಾತದಿಂದಾಗಿ ಕನ್ನಡದ ಕಲಾವಿದರು ಸಾವನ್ನಪ್ಪಿದ್ದಾರೆ. ನಟ ಶಂಕರ್​ ನಾಗ್​, ಸುನೀಲ್​, ಸೌಂದರ್ಯ. ಚಿ, ರವಿಶಂಕರ್​ ಸಹ ಚಿಕ್ಕವಯಸ್ಸಿನಲ್ಲೇ ಇಹಲೋಕ ತ್ಯಜಿಸಿದವರು.

Actor Chi Ravishankar, Actor Sanchari Vijay, Sancharai Vijay death, List of Kannada Actors who died in Accident at Young age, Actress soundarya death, shankar nag death, Actor Sunil death, ನಟ ಸಂಚಾರಿ ವಿಜಯ್ ನಿಧನ, ಸಂಚಾರಿ ವಿಜಯ್ ಬ್ರೈನ್ ಡೆಡ್, ನಟಿ ಸೌಂದರ್ಯ ನಿಧನ, ಅಪಘಾತದಲ್ಲಿ ಮೃತಪಟ್ಟ ಶಂಕರ್ ನಾಗ್, ನಟ ಸುನಿಲ್ ನಿಧನ, ಅಪಘಾತದಲ್ಲಿ ಮೃತಪಟ್ಟ ಕನ್ನಡದ ಕಲಾವಿದರು . ಚೆನ್ನೈನಿಂದ ಬರುವಾಗ ಚಿ. ರವಿಶಂಕರ್​ ನಿಧನ, ಅಪಘಾತದಲ್ಲಿ ಚಿ ರವಿಶಂಕರ್ ನಿಧನ, Kannada stars who died in accident here is the details ae
ನಟ ಸಂಚಾರಿ ವಿಜಯ್​

ದಿವಂಗತ ನಟ ಚಿ. ರವಿಶಂಕರ್​

ಸುಧಾರಾಣಿ ಅವರ ಸಂಬಂಧಿ ಹಾಗೂ ಚಿ ಉದಯಶಂಕರ್​ ಅವರ ಮಗ ಚಿ. ರವಿಶಂಕರ್​ ಸಹ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು. ಶಿವಣ್ಣನ ಜೊತೆ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದ್ದ ನಟ ಚಿ. ರವಿಶಂಕರ್​ ಅವರು ಚೆನ್ನೈನಿಂದ ಬೆಂಗಳೂರಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬರುವಾಗ ಹೊಸಕೋಟೆ ಬಳಿ ನಡೆದ ಎಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು.

Actor Chi Ravishankar, Actor Sanchari Vijay, Sancharai Vijay death, List of Kannada Actors who died in Accident at Young age, Actress soundarya death, shankar nag death, Actor Sunil death, ನಟ ಸಂಚಾರಿ ವಿಜಯ್ ನಿಧನ, ಸಂಚಾರಿ ವಿಜಯ್ ಬ್ರೈನ್ ಡೆಡ್, ನಟಿ ಸೌಂದರ್ಯ ನಿಧನ, ಅಪಘಾತದಲ್ಲಿ ಮೃತಪಟ್ಟ ಶಂಕರ್ ನಾಗ್, ನಟ ಸುನಿಲ್ ನಿಧನ, ಅಪಘಾತದಲ್ಲಿ ಮೃತಪಟ್ಟ ಕನ್ನಡದ ಕಲಾವಿದರು . ಚೆನ್ನೈನಿಂದ ಬರುವಾಗ ಚಿ. ರವಿಶಂಕರ್​ ನಿಧನ, ಅಪಘಾತದಲ್ಲಿ ಚಿ ರವಿಶಂಕರ್ ನಿಧನ, Kannada stars who died in accident here is the details ae
ಚಿ. ಉದಯಶಂಕರ್​ ಅವರ ಕುಟುಂಬದ ಫೋಟೋ

ಕರಾಟೆ ಕಿಂಗ್​ ಶಂಕರ್​ ನಾಗ್​

12 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದ ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಜೊತೆಗೆ ಸಿನಿಮಾಗಳ ನಿರ್ದೇಶನ ಸಹ ಮಾಡಿದ್ದಾರೆ.  19190 ಸೆಪ್ಟೆಂಬರ್ 30 ಕನ್ನಡ ಸಿನಿರಂಗದ ಪಾಲಿಗೆ ಕರಾಳ ದಿನವಾಗಿತ್ತು. ಮುಂಜಾನೆ ಶಂಕರ್​ ನಾಗ್ ಅವರು ಇನ್ನಿಲ್ಲ ಅನ್ನೋ ಸುದ್ದಿ ಬರ ಸಿಡಿಲಿನಂತೆ ಬಡಿದಿತ್ತು. 35 ವರ್ಷದ ಯುವ ನಟನ ಮಿಂಚಿನ ಓಟಕ್ಕೆ ಬ್ರೇಕ್​ ಬಿದ್ದಿತ್ತು.

Actor Chi Ravishankar, Actor Sanchari Vijay, Sancharai Vijay death, List of Kannada Actors who died in Accident at Young age, Actress soundarya death, shankar nag death, Actor Sunil death, ನಟ ಸಂಚಾರಿ ವಿಜಯ್ ನಿಧನ, ಸಂಚಾರಿ ವಿಜಯ್ ಬ್ರೈನ್ ಡೆಡ್, ನಟಿ ಸೌಂದರ್ಯ ನಿಧನ, ಅಪಘಾತದಲ್ಲಿ ಮೃತಪಟ್ಟ ಶಂಕರ್ ನಾಗ್, ನಟ ಸುನಿಲ್ ನಿಧನ, ಅಪಘಾತದಲ್ಲಿ ಮೃತಪಟ್ಟ ಕನ್ನಡದ ಕಲಾವಿದರು . ಚೆನ್ನೈನಿಂದ ಬರುವಾಗ ಚಿ. ರವಿಶಂಕರ್​ ನಿಧನ, ಅಪಘಾತದಲ್ಲಿ ಚಿ ರವಿಶಂಕರ್ ನಿಧನ, Kannada stars who died in accident here is the details ae
ನಟ ಶಂಕರ್​ ನಾಗ್​

1990 ಅಕ್ಟೋಬರ್ 1ರಂದು ಜೋಕುಮಾರ ಸ್ವಾಮಿ ಚಿತ್ರದ ಮುಹೂರ್ತ ಫಿಕ್ಸ್ ಆಗಿತ್ತು. ಅದಕ್ಕೆಂದು ಅವರು ಸೆ. 30ರಂದು ದಾವಣಗೆರೆಗೆ ಹೊರಟ್ಟಿದ್ದರು. ವಿಧಿಯಾಟ ದಾವಣಗೆರೆ ಬಳಿಯ ಆನಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ 4.30ರ ಸುಮಾರಿಗೆ ನಡೆದ ಭೀಕರ ಕಾರು ಅಪಘಾತದಿಂದಾಗಿ ಶಂಕರ್​ ನಾಗ್ ಇಹಲೋಕ ತ್ಯಜಿಸಿದ್ದರು.

ದುರಂತ ಅಂತ್ಯ ಕಂಡ ನಟ ಸುನೀಲ್​

ಸುನೀಲ್​ ಹಾಗೂ ಮಾಲಾಶ್ರೀ ಒಂದು ಕಾಲದ ಹಿಟ್ ಜೋಡಿ. ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದ ಈ ಜೋಡಿ ಆಗಿನ ಕಾಲಕ್ಕೆ ಅಭಿಮಾನಿಗಳ ಹಾಟ್ ಫೆವರೀಟ್​ ಆಗಿದ್ದರು. 1994ರ ಜುಲೈ ತಿಂಗಳಿನಲ್ಲಿ ನಟಿ ಮಾಲಾಶ್ರೀ ಹಾಗೂ ನಟ ಸುನೀಲ್​ ಹಾಗೂ ಅವರ ಸಂಬಂಧಿ ಸಚಿನ್​ ಪ್ರಯಾಣಿಸುತ್ತಿದ್ದ ಕಾರು ಚಿತ್ರದುರ್ಗದ ಹತ್ತಿರವಿರುವ ಮಾದನಾಯಕನ ಹಳ್ಳಿಯಲ್ಲಿ ಅಪಘಾತಕ್ಕೀಡಾಗಿತ್ತು. ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸುನೀಲ್ ಕಾರು ಕಾರಿನ ಚಾಲಕ ನಿಧನ ಹೊಂದಿದ್ದರು. ಮಾಲಾಶ್ರೀ ಹಾಗೂ ಸುನೀಲ್​ ಅವರ ಸಂಬಂಧಿ ಸಚಿನ್​ ಪಾರಾಗಿದ್ದರು. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುನೀಲ್​ ಅವರ ಜೀವನದ ಪಯಣ ಅಲ್ಲಿಗೆ ಕೊನೆಗೊಂಡಿತ್ತು.

Actor Chi Ravishankar, Actor Sanchari Vijay, Sancharai Vijay death, List of Kannada Actors who died in Accident at Young age, Actress soundarya death, shankar nag death, Actor Sunil death, ನಟ ಸಂಚಾರಿ ವಿಜಯ್ ನಿಧನ, ಸಂಚಾರಿ ವಿಜಯ್ ಬ್ರೈನ್ ಡೆಡ್, ನಟಿ ಸೌಂದರ್ಯ ನಿಧನ, ಅಪಘಾತದಲ್ಲಿ ಮೃತಪಟ್ಟ ಶಂಕರ್ ನಾಗ್, ನಟ ಸುನಿಲ್ ನಿಧನ, ಅಪಘಾತದಲ್ಲಿ ಮೃತಪಟ್ಟ ಕನ್ನಡದ ಕಲಾವಿದರು . ಚೆನ್ನೈನಿಂದ ಬರುವಾಗ ಚಿ. ರವಿಶಂಕರ್​ ನಿಧನ, ಅಪಘಾತದಲ್ಲಿ ಚಿ ರವಿಶಂಕರ್ ನಿಧನ, Kannada stars who died in accident here is the details ae
ನಟ ಸುನೀಲ್​

ಸೌಂದರ್ಯ

ಬಹುಭಾಷಾ ತಾರೆ... ಚಂದನವನದ ಅಭಿನೇತ್ರಿ... ನಟಿ ಸೌಂದರ್ಯ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಅಭಿನಯದ ಸಿನಿಮಾಗಳ ಮೂಲಕ ಇನ್ನೂ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ. ಅಂದಿನ ಕಾಲಕ್ಕೆ ಸೌಂದರ್ಯ ಬೇಡಿಕೆಯ ನಟಿಯಾಗಿದ್ದರು. ಕನ್ನಡದಲ್ಲಿ ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ, ಆಪ್ತಮಿತ್ರ ಸೇರಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆನಂತರ ‘ರೈತು ಭಾರತಂ‘ ಸಿನಿಮಾದ ಮೂಲದ ಟಾಲಿವುಡ್​​ಗೆ ಪಾದಾರ್ಪಣೆ ಮಾಡಿದ್ದರು. ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಜೊತೆಗೆ ಕೂಡ ಅಭಿನಯಿಸಿದ್ದರು.

Actor Chi Ravishankar, Actor Sanchari Vijay, Sancharai Vijay death, List of Kannada Actors who died in Accident at Young age, Actress soundarya death, shankar nag death, Actor Sunil death, ನಟ ಸಂಚಾರಿ ವಿಜಯ್ ನಿಧನ, ಸಂಚಾರಿ ವಿಜಯ್ ಬ್ರೈನ್ ಡೆಡ್, ನಟಿ ಸೌಂದರ್ಯ ನಿಧನ, ಅಪಘಾತದಲ್ಲಿ ಮೃತಪಟ್ಟ ಶಂಕರ್ ನಾಗ್, ನಟ ಸುನಿಲ್ ನಿಧನ, ಅಪಘಾತದಲ್ಲಿ ಮೃತಪಟ್ಟ ಕನ್ನಡದ ಕಲಾವಿದರು . ಚೆನ್ನೈನಿಂದ ಬರುವಾಗ ಚಿ. ರವಿಶಂಕರ್​ ನಿಧನ, ಅಪಘಾತದಲ್ಲಿ ಚಿ ರವಿಶಂಕರ್ ನಿಧನ, Kannada stars who died in accident here is the details ae
ನಟಿ ಸೌಂದರ್ಯ

ನಟನೆ ಮಾತ್ರವಲ್ಲ ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದ ನಟಿ, ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರದ ಮೂಲಕ ನಿರ್ಮಾಪಕಿಯಾಗಿಗೂ ಗುರುತಿಸಿಕೊಂಡು. ಈ ಚಿತ್ರಕ್ಕೆ ಕೇಂದ್ರ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಲಭಿಸಿತ್ತು.

ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಇನ್ನೂ ಜೀವಂತ: ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ..!

ಸೌಂದರ್ಯ ಸಿನಮಾ ಕ್ಷೇತ್ರದಲ್ಲಿನ 16 ವರ್ಷದ ಪಯಣದಲ್ಲಿ 102 ಚಿತ್ರಗಳಲ್ಲಿ ನಟಿಸಿದ್ದರು. 2004ರಲ್ಲಿ ಭಾರತೀಯ ಜನತಾ ಪಕ್ಷ ಸೇರಿದ್ದ ಸೌಂದರ್ಯ, 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರಕ್ಕೆಂದು ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು. ಸೌಂದರ್ಯ ಅವರು ಸಾವಿಗೀಡಾಗುವ ಕೆಲ ತಿಂಗಳ ಹಿಂದಷ್ಟೇ ರಘು ಎಂಬುವವರನ್ನು ವಿವಾಹವಾಗಿದ್ದರು.
Published by:Anitha E
First published: