• Home
  • »
  • News
  • »
  • entertainment
  • »
  • Spooky College: ದೆವ್ವದ ಚಿತ್ರದಲ್ಲಿ ಸುಂದರಿಯರ ಅಟ್ಟಹಾಸ! ಆ ಕಾಲೇಜಿನಲ್ಲಿ ಕೇಳಿ ಬರ್ತಿದೆ ಮೆಲ್ಲುಸಿರೆ ಸವಿಗಾನ!

Spooky College: ದೆವ್ವದ ಚಿತ್ರದಲ್ಲಿ ಸುಂದರಿಯರ ಅಟ್ಟಹಾಸ! ಆ ಕಾಲೇಜಿನಲ್ಲಿ ಕೇಳಿ ಬರ್ತಿದೆ ಮೆಲ್ಲುಸಿರೆ ಸವಿಗಾನ!

ಆ ಕಾಲೇಜಿನಲ್ಲಿ ಕೇಳಿ ಬರ್ತಿದೆ ಮೆಲ್ಲುಸಿರೆ ಸವಿಗಾನ

ಆ ಕಾಲೇಜಿನಲ್ಲಿ ಕೇಳಿ ಬರ್ತಿದೆ ಮೆಲ್ಲುಸಿರೆ ಸವಿಗಾನ

ಹಳೆ ಕ್ಲಾಸಿಕ್ ಹಾಡಿಗೆ ರಾಣ ಸಿನಿಮಾದ ನಾಯಕಿ ರಿಷ್ಮಾ ನಾಣಯ್ಯ ನೃತ್ಯ ಮಾಡಿದ್ದಾರೆ. ಹಳೆ ಹಾಡು ಹೊಸ ಫೀಲು ಅನ್ನೋ ಹಾಗೆ ಸ್ಪೂಕಿ ಕಾಲೇಜಿಗೆ ಈ ಹಾಡು ವಿಶೇಷ ಗತ್ತು ತಂದುಕೊಟ್ಟಿದೆ. ಚುಟು ಚುಟು ಖ್ಯಾತಿಯ ನೃತ್ಯ ನಿರ್ದೇಶಕ ಭೂಷಣ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಒಂದು ಚಿತ್ರವನ್ನ (Dharwad) ಧಾರವಾಡದ 100 ವರ್ಷದ ಹಳೆ ಕಾಲೇಜಿನಲ್ಲಿ ಚಿತ್ರೀಕರಿಸಲಾಗಿದೆ. ಕಾಲೇಜ್ (Collage) ಅಂದ್ಮೆಲೆ ಅಲ್ಲಿ ಲವ್ (Love Story) ಸ್ಟೋರಿನೇ ಇರುತ್ತದೆ ಅನ್ನೊ ನಂಬಿಕೆ ಇದೆ. ಆದರೆ, ಈ ಕಾಲೇಜ್ ಚಿತ್ರದಲ್ಲಿ ಎಲ್ಲವೂ ಇದೆ. ಜೊತೆಗೆ ದೆವ್ವ ಕೂಡ ಇದೆ. ಅದಕ್ಕೆನೆ ಇದನ್ನ ಸ್ಪೂಕಿ ಕಾಲೇಜ್ ಅಂತಲೇ ಕರೆದಿದ್ದಾರೆ. ಆದರೆ ಇಲ್ಲಿ ಇನ್ನು ಹಲವು ವಿಶೇಷತೆಗಳೂ ಇವೆ. ಸಿನಿಮಾ ತಂಡ ಇದನ್ನ ಒಂದೊಂದಾಗಿಯೇ ಈಗ ರಿವೀಲ್ ಮಾಡುತ್ತಿದೆ. ಆ ಲೆಕ್ಕದಲ್ಲಿ ಕನ್ನಡದ ದಿಯಾ (Dia Film) ಚಿತ್ರದ ನಾಯಕಿ ಖುಷಿ ರವಿ ಈ ಚಿತ್ರದ ಸೆಂಟರ್​​ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಪ್ರಿಮಿಯರ್ ಪದ್ಮಿನಿ ಚಿತ್ರದ ವಿವೇಕ್ ಸಿಂಹ ಈ ಸಿನಿಮಾದ ನಾಯಕ ನಟ. ಈ ಚಿತ್ರದ ಮೂಲಕ ಹೀರೋ ಆಗಿಯೇ ಕನ್ನಡ ಇಂಡಸ್ಟ್ರೀಗೆ ಕಾಲಿಡುತ್ತಿದ್ದಾರೆ. 


ಈಗಾಗಲೇ ಈ ಸಿನಿಮಾದ ಒಂದಷ್ಟು ಮಾಹಿತಿಯನ್ನ ಸಿನಿಮಾ ಕೊಟ್ಟಿದೆ.  ಅದರ ಒಟ್ಟು ಚಿತ್ರಣ ಇಲ್ಲಿದೆ.


ಸ್ಪೂಕಿ ಕಾಲೇಜ್ ನಲ್ಲಿ ದೆವ್ವಗಳಿವೆ ಎಚ್ಚರ ಎಚ್ಚರ
ಸ್ಪೂಕಿ ಕಾಲೇಜ್ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಕನ್ನಡ ಸಿನಿಮಾರಂಗದಲ್ಲಿ ಇದು ಕೂಡ ಸ್ಪೆಷಲ್ ಸಿನಿಮಾ ಆಗುವ ಲಕ್ಷಣಗಳು ಈಗಲೇ ಗೋಚರಿಸುತ್ತಿದೆ. ಕನ್ನಡದಲ್ಲಿ ಇಲ್ಲಿವರೆಗೆ ಬಂದ ಹಾರರ್ ಚಿತ್ರದಲ್ಲಿ ಈ ಸಿನಿಮಾ ವಿಭಿನ್ನ ಫೀಲ್ ಕೊಡಲಿದೆ.


Kannada Spooky College Film New Updates
ಸ್ಪೂಕಿ ಕಾಲೇಜ್ ನಲ್ಲಿ ದೆವ್ವಗಳಿವೆ ಎಚ್ಚರ ಎಚ್ಚರ


ಸ್ಪೂಕಿ ಕಾಲೇಜಿನಲ್ಲಿ ಎಲ್ಲವೂ ಇದೆ. ಇಲ್ಲದೇ ಇರೋದು ಏನೂ? ಅಂತ ನೀವೂ ಕೇಳಿದ್ರು. ನೋ ವೇ ಚಾನ್ಸೆ ಇಲ್ಲ ಅಂತಲೇ ಹೇಳಬಹುದು. ಇಂತಹ ಈ ಚಿತ್ರದ ಹಿಂದೆ ಪ್ರತಿಭಾವಂತ ಟೀಮ್ ಇದೆ. ಇದರ ಮಧ್ಯೆ ಕಾಂತಾರ ಚಿತ್ರ ಖ್ಯಾತಿಯ ಅಜನೀಶ್ ಲೋಕನಾಥ್ ಈ ಚಿತ್ರಕ್ಕೂ ಸಂಗೀತ ಕೊಟ್ಟಿದ್ದಾರೆ.


ಅಜನೀಶ್ ಸಂಗೀತದಲ್ಲಿ ಮೆಲ್ಲುಸಿರೆ ಸವಿಗಾನ
ಅಜನೀಶ್ ಲೋಕನಾಥ್ ಸಂಗೀತದಲ್ಲಿ ಹಳೆ ಹಾಡಿಗೆ ಹೊಸ ಸ್ಪರ್ಶ ಬಂದಿದೆ. ಹೌದು, ರಾಜಕುಮಾರ್ ಅವರ ವೀರಕೇಸರಿ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡು ಇಲ್ಲಿ ಮರು ಬಳಕೆ ಆಗಿದೆ.


ಇದನ್ನೂ ಓದಿ: Niveditha Gowda: ನಿವೇದಿತಾ ಹೊಸ ಲುಕ್! ಹೈಹೀಲ್ಸ್ ಶಕುಂತಲೆ ಎಂದ ನೆಟ್ಟಿಗರು


ಮೆಲ್ಲುಸಿರೆ ಹಾಡಿಗೆ ರಾಣ ಚಿತ್ರದ ನಾಯಕಿಯ ನೃತ್ಯ
ಹಳೆ ಕ್ಲಾಸಿಕ್ ಹಾಡಿಗೆ ರಾಣ ಸಿನಿಮಾದ ನಾಯಕಿ ರಿಷ್ಮಾ ನಾಣಯ್ಯ ನೃತ್ಯ ಮಾಡಿದ್ದಾರೆ. ಹಳೆ ಹಾಡು ಹೊಸ ಫೀಲು ಅನ್ನೋ ಹಾಗೆ ಸ್ಪೂಕಿ ಕಾಲೇಜಿಗೆ ಈ ಹಾಡು ವಿಶೇಷ ಗತ್ತು ತಂದುಕೊಟ್ಟಿದೆ. ಚುಟು ಚುಟು ಖ್ಯಾತಿಯ ನೃತ್ಯ ನಿರ್ದೇಶಕ ಭೂಷಣ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.


Kannada Spooky College Film New Updates
ಸ್ಪೂಕಿ ಕಾಲೇಜಿನಲ್ಲಿ ವಿವೇಕ್ ಸಿಂಹ-ಖುಷಿ ರವಿ ಜೋಡಿ


ಸ್ಪೂಕಿ ಕಾಲೇಜಿನಲ್ಲಿ ವಿವೇಕ್ ಸಿಂಹ-ಖುಷಿ ರವಿ ಜೋಡಿ
ಸ್ಪೂಕಿ ಕಾಲೇಜ್ ಚಿತ್ರದ ಮೂಲಕ ಪ್ರಿಮಿಯರ್ ಪದ್ಮಿನಿ ಖ್ಯಾತಿಯ ನಟ ವಿವೇಕ್ ಸಿಂಹ ಹೀರೋ ಆಗಿದ್ದಾರೆ. ಈ ಬಗ್ಗೆ ಹೊಸ ಒಂದು ದೊಡ್ಡ ಭರವಸೆಯನ್ನೂ ಇಟ್ಟಿಕೊಂಡಿದ್ದಾರೆ. ದಿಯಾ ಚಿತ್ರದ ನಾಯಕಿ ಖುಷಿ ರವಿ ಈ ಚಿತ್ರದಲ್ಲಿ ವಿವೇಕ್​ ಸಿಂಹಗೆ ಜೋಡಿ ಆಗಿದ್ದಾರೆ.


ಸ್ಪೂಕಿ ಕಾಲೇಜ್ ಚಿತ್ರಕ್ಕೆ ಮನೋಹರ್ ಜೋಶಿ ಛಾಯಾಗ್ರಣ ಇದೆ. ನವ ನಿರ್ದೇಶಕ ಭರತ್ ಈ ಚಿತ್ರಕ್ಕೆ ಕಥೆ ಮಾಡಿದ್ದಾರೆ. ಚಿತ್ರಕಥೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ರಂಗಿತರಂಗ ಚಿತ್ರದ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಬಂಡವಾಳ ಹಾಕಿದ್ದಾರೆ.


ಇದನ್ನೂ ಓದಿ: Bhavana In Bollywood: ಬಾಲಿವುಡ್​ನಲ್ಲಿ ಗಾಳಿಪಟದ ಭಾವನಾ ರಾವ್!


ಇನ್ನು ಇದೇ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡು ಇದೇ ತಿಂಗಳು 14 ರಂದು ರಿಲೀಸ್ ಆಗುತ್ತಿದೆ. ಈ ಮೂಲಕ ಸಿನಿಮಾ ತಂಡ ತಮ್ಮ ಚಿತ್ರದ ಪ್ರಚಾರವನ್ನೂ ಈಗ ಶುರು ಮಾಡಿದಂತಿದೆ.

First published: