ಕನ್ನಡ ಸಿನಿಮಾರಂಗಲ್ಲಿ ತಿಥಿ (Tithi Cinema) ಒಂದು ಅಸಲಿ ಸಿನಿಮಾ ಆಗಿತ್ತು. ಮಂಡ್ಯದ ಹಳ್ಳಿ ಸೊಗಡಿನ ಅಸಲಿ ಸತ್ಯವನ್ನೆ ಈ ಚಿತ್ರ ಕೊಟ್ಟಿತ್ತು. ಚಿತ್ರದಲ್ಲಿ ಇದ್ದ ಅಷ್ಟೂ ಪಾತ್ರಗಳು ಕ್ಲಿಕ್ ಆಗಿ ಬಿಟ್ಟವು. ಬಣ್ಣವನ್ನೆ ಹಚ್ಚಿಕೊಳ್ಳದೇ ನೈಜವಾಗಿಯೇ ಎಲ್ಲ ಪಾತ್ರಧಾರಿಗಳು (Actors) ಅಭಿನಯಿಸಿದ್ದರು. ಅಂತಹ ಅಸಲಿ ಕಥೆಯೊಂದು ಈ ಸಲ ಕನ್ನಡದಲ್ಲಿ ರೆಡಿ ಆಗಿದೆ. ಆದರೆ ಈ ಸಲದ ಈ ಸಿನಿಮಾ ಉತ್ತರ ಕರ್ನಾಟಕದ ಭಾಗದಲ್ಲಿಯೇ ಸಿದ್ದಗೊಂಡಿದೆ. ಇಡೀ ಸಿನಿಮಾ (Cinema) ಬಾಗಲಕೋಟೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಿತ್ರೀಕರಣ ಆಗಿದೆ. ವಿಶೇಷವೆಂದ್ರೆ ಈ ಚಿತ್ರದ ನಿರ್ದೇಶಕರು ದುನಿಯಾ (Duniya Suri) ಸೂರಿಯ ಶಿಷ್ಯ ಅನ್ನೋದ ಸ್ಪೆಷಲ್. ಸೋಮು ಸೌಂಡ್ ಇಂಜಿನಿಯರ್ ಅನ್ನೋ ಈ ಚಿತ್ರವನ್ನ ನೈಜವಾಗಿಯೇ ಚಿತ್ರಿಸಿದ್ದಾರೆ. ಆ ಕಥೆಯನ್ನ ಈಗ ಟೀಸರ್ ಹೇಳುತ್ತಿದೆ.
ಸೋಮು ಸೌಂಡ್ ಇಂಜಿನಿಯರ್ ಎಂಬ ಅಸಲಿ ಸಿನಿಮಾ
ಹೌದು, ಈ ಒಂದು ಮಾತು ಹೇಳಲೇಬೇಕು. ಚಿತ್ರದ ಟೀಸರ್ ಆ ಒಂದು ಸತ್ಯದ ಅನ್ನ ಇಲ್ಲಿ ಕೊಟ್ಟಿದೆ. ಪುಟ್ಟ ಟೀಸರ್ ನಲ್ಲಿ ಬರುವ ಪಾತ್ರಗಳಿಗೆ ಇಲ್ಲಿ ಬಣ್ಣವೇ ಇಲ್ಲ. ಹಂಗಂಗೇನೆ ಅಭಿನಯಿಸಿರೋದು ಇಲ್ಲಿ ತಿಳಿದು ಬಿಡುತ್ತೆ.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ, ಹುನಗುಂದ ತಾಲೂಕಿನ ಇಳಕಲ್ ಗಂಜಿಹಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ. ಕೂಡಲಸಂಗಮ ಭಾಗದಲ್ಲೂ ಈ ಸಿನಿಮಾ ಶೂಟ್ ಆಗಿದೆ.
ಸೋಮು ಸೌಂಡ್ ಇಂಜಿನಿಯರ್ ಎಂತಹ ಸಿನಿಮಾ?
ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ವಿಶೇಷ ಅನಿಸುತ್ತದೆ. ಚಿತ್ರದ ಟೀಸರ್ ನಲ್ಲಿ ಜಾತಿ-ಧರ್ಮಗಳ ನಡುವಿನ ಸಂಘರ್ಷವನ್ನೂ ಕಾಣಬಹುದು. ಚಿತ್ರದಲ್ಲಿ ಬರುವ ಪಾತ್ರಗಳ ಸಹಜ ವರ್ತನೆಯಲ್ಲಿ ಅದನ್ನ ನಾವು ಗೆಸ್ ಮಾಡಬಹುದು.
ಇದನ್ನೂ ಓದಿ: Rishab Shetty Real Story: ರಿಷಬ್ ಶೆಟ್ಟಿ ತುಗ್ಲಕ್ ಚಿತ್ರಕ್ಕಾಗಿ ತಲೆ ಬೋಳಿಸಿಕೊಂಡಿದ್ರಂತೆ!
ಸೋಮು ಸೌಂಡ್ ಇಂಜಿನಿಯರ್ ಟೀಸರ್ ನಿಜಕ್ಕೂ ವಿಶೇಷವಾಗಿಯೇ ಇದೆ. ನೈಜತೆಗೆ ತುಂಬಾ ಹತ್ತಿರವಾಗಿಯೇ ಇದೆ. ಇಲ್ಲಿ ಯಾರೂ ನಟಿಸಿಲ್ಲ. ಅದನ್ನ ಅನುಭವಿಸಿದ್ದಾರೆ ಅಂತಲೇ ಹೇಳಬಹುದು. ಅದು ಈ ಒಂದೇ ಒಂದು ಟೀಸರ್ ನೋಡಿ ಹೇಳಬಹುದು.
ಸೋಮು ಸೌಂಡ್ ಇಂಜಿನಿಯರ್ ಚಿತ್ರದಲ್ಲಿ ಜಾನಪದ ಗೀತೆ
ಸೋಮು ಸೌಂಡ್ ಇಂಜಿನಿಯರ್ ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಗದ ಸೊಗಡನ್ನ ಕಟ್ಟಿಕೊಡಲಾಗಿದೆ. ಸಂಬಂಧಗಳ ಮೌಲ್ಯವನ್ನ ಹೇಳುವ ಈ ಸಿನಿಮಾದಲ್ಲಿ ಭಜನೆ ಪದಗಳ ಮೂಲಕವೇ ಚಿತ್ರದ ಅಸಲಿ ವಿಷಯವನ್ನ ಹೇಳಿದಂತಿದೆ.
ಸೋಮು ಸೌಂಡ್ ಇಂಜಿನಿಯರ್ ಚಿತ್ರದಲ್ಲಿ ನಟ ಜಹಾಂಗೀರ್ ಕೂಡ ಅಭಿನಯಿಸಿದ್ದಾರೆ. ಯುವ ನಟ ಶ್ರೇಷ್ಠ ಹಾಗೂ ಯಶ್ ಶೆಟ್ಟಿ, ಅಪೂರ್ವ, ಆದರೆ ಇವರೂ ಕೂಡ ಇಲ್ಲಿಯ ಒಬ್ಬ ವ್ಯಕ್ತಿಯ ರೀತಿನೇ ಕಾಣುತ್ತಾರೆ. ಎಲ್ಲೂ ಕಲಾವಿದರ ರೀತಿ ಇಲ್ಲಿ ಕಂಡು ಬಂದಿಯೇ ಇಲ್ಲ.
ಸೋಮು ಸೌಂಡ್ ಇಂಜಿನಿಯರ್ ಚಿತ್ರದಲ್ಲಿ ನವ ಕಲಾವಿದರು
ನಿರ್ದೇಶಕ ಅಭಿನ ತಮ್ಮ ಈ ಮೊದಲ ಸಿನಿಮಾದಲ್ಲಿ ಹೊಸಬರಿಗೆ ಚಾನ್ಸ್ ಮಾಡಿಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದ ಕಲಾವಿದರೂ ಇಲ್ಲಿ ಅಭಿನಯಿಸಿರೋದು ವಿಶೇಷ. ಅದರಲ್ಲೂ ಈ ಚಿತ್ರದಲ್ಲಿ ಹಳ್ಳಿ ಸೊಗಡಗಿನ ಅಸಲಿ ಸತ್ಯಗಳು ಚಿತ್ರಣಗೊಂಡಿವೆ.
ಸೋಮು ಸೌಂಡ್ ಇಂಜಿನಿಯರ್ ಹಿಂದಿ ಒಳ್ಳೆ ಟೆಕ್ನಿಷನ್ಗಳ ತಂಡವೇ ಇದೆ. ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಮಾಸ್ತಿ ಡೈಲಾಗ್ ಬರೆದುಕೊಟ್ಟಿದ್ದಾರೆ. ದೀಪು ಎಸ್.ಕುಮಾರ್ ಸಂಕಲನ ಮಾಡಿದ್ದಾರೆ. ದುನಿಯಾ ಸೂರಿ ಶಿಷ್ಯ ಅಭಿ ಈ ಮೂಲಕ ಸ್ವತಂತ್ರ ನಿರ್ದೇಶಕರೂ ಆಗಿದ್ದಾರೆ.
ಇದನ್ನೂ ಓದಿ:Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್
ಚಿತ್ರದ ಬಹುತೇಕ ಕೆಲಸಗಳೆಲ್ಲ ಪೂರ್ಣಗೊಂಡಿವೆ. ಸಿನಿಮಾದ ಟೀಸರ್ ಈಗ ರಿಲೀಸ್ ಆಗಿದೆ. ಉಳಿದಂತೆ ಈಗಲೇ ಈ ಸಿನಿಮಾ ಕೂಡ ಒಂದು ಭರವಸೆ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ